2017ರಿಂದ 1,500ಕ್ಕೂ ಹೆಚ್ಚು ಫಾರ್ಮಸಿ ಹುದ್ದೆಗಳು ಖಾಲಿ : ಡಾ. ಬಿ.ಎಸ್. ದೇಸಾಯಿ

Date:

Advertisements

“ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 2017ರಿಂದ ಫಾರ್ಮಸಿ ಹುದ್ದೆಗಳಿಗೆ ಭರ್ತಿ ಮಾಡಿಲ್ಲ. 1,500ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಈ ಖಾಲಿ ಇರುವ ಹುದ್ದೆಗಳಲ್ಲಿ ಫಾರ್ಮಸಿ ಕಾಯ್ದೆಗೆ ವಿರುದ್ಧವಾಗಿ ಇತರರು ಔಷಧಿಗಳನ್ನ ಸಂಗ್ರಹಿಸುವುದು, ವಿತರಣೆ ಮಾಡುವುದು ಮಾಡುತ್ತಿದ್ದಾರೆ. ಇದು ಫಾರ್ಮಸಿ ಕಾಯ್ದೆಗೆ ವಿರುದ್ಧವಾಗಿದೆ. ಇದರಿಂದ ಸಾರ್ವಜನಿಕರ ಆರೋಗ್ಯಕ್ಕೂ ಕೂಡ ತೊಂದರೆ ಉಂಟಾಗುತ್ತದೆ” ಎಂದು ಅಖಿಲ ಭಾರತ ಫಾರ್ಮಸಿ ಅಧಿಕಾರಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ಬಿ.ಎಸ್. ದೇಸಾಯಿ ತಿಳಿಸಿದರು.

ಸಾರ್ವಜನಿಕರಲ್ಲಿ ಫಾರ್ಮಸಿ ಅಧಿಕಾರಿಗಳ ಪಾತ್ರದ ಕುರಿತು ಜಾಗೃತಿ ಮೂಡಿಸಲು ಫೆಬ್ರುವರಿ 22ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಖಿಲ ಭಾರತ ಫಾರ್ಮಸಿ ಅಧಿಕಾರಿಗಳ ಸಂಘ ಶಾಂತಿಯುತ ಸಭೆ ನಡೆಸಿತು.

ಈ ವೇಳೆ ಮಾತನಾಡಿದ ಅವರು, “ಅಖಿಲ ಭಾರತ ಫಾರ್ಮಸಿ ಅಧಿಕಾರಿಗಳ ಸಂಘದ ರಾಷ್ಟ್ರ ಸಂಘ 2024ರ ಡಿಸೆಂಬರ್ 8ರಂದು ಕೇರಳದ ತಿರುವನಂತಪುರಂನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ನಿರ್ಣಯದಂತೆ ಎಲ್ಲ ರಾಜ್ಯಗಳ ರಾಜಧಾನಿಯಲ್ಲಿ ನೆಡೆಯುವಂತೆ ಕರ್ನಾಟಕದ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರ ನೀಡಿರುವ ಪರವಾನಗಿಯಂತೆ ಫಾರ್ಮಸಿ ಅಧಿಕಾರಿಗಳು, ಪಿ.ಯು.ಸಿ(ಸೈನ್ಸ್) ವಿದ್ಯಾಭ್ಯಾಸದ ನಂತರ ಔಷಧಿ ವಿಜ್ಞಾನದಲ್ಲಿ ಡಿಪ್ಲೋಮಾ, ಪದವಿ, ಸ್ನಾತಕೋತ್ತರ, ಪಿ.ಹೆಚ್.ಡಿ, ಡಾಕ್ಟರ್ ಆಫ್ ಫಾರ್ಮಸಿ ಪಡೆದು ದೇಶ ಮತ್ತು ರಾಜ್ಯದಲ್ಲಿ ಔಷಧಗಳನ್ನು ಕಂಡುಹಿಡಿಯುವ, ಉತ್ಪಾದಿಸುವ, ಸಿದ್ಧಪಡಿಸುವ, ವಿತರಿಸುವ, ಸಂಗ್ರಹಿಸುವ, ಪರಿಶೀಲಿಸುವ, ವಿಚಾರಣೆ ಮಾಡುವ ಜ್ಞಾನವನ್ನು ಬೆಳೆಸಿಕೊಂಡಿದ್ದಾರೆ. ಇವರು ಆರೋಗ್ಯ ವಿಜ್ಞಾನಗಳನ್ನು ಔಷಧಿ ವಿಜ್ಞಾನಗಳ ನೈಸರ್ಗಿಕ ವಿಜ್ಞಾನಗಳೊಂದಿಗೆ ಸಂಪರ್ಕಿಸಿರುವುದರಿಂದ ಇದು ವಿವಿಧ ವಿಜ್ಞಾನವಾಗುತ್ತದೆ. ಸದ್ಯ ಹೆಚ್ಚಿನ ಔಷಧಿಗಳನ್ನು ಕೈಗಾರಿಕೆಗಳು ಉತ್ಪಾದನೆ ಮಾಡುತ್ತಿರುವುದರಿಂದ ವೃತ್ತಿಪರ ಅಭ್ಯಾಸವು ಹೆಚ್ಚು ವೈದ್ಯಕೀಯ ಆಧಾರವಾಗಿದೆ” ಎಂದು ತಿಳಿಸಿದರು.

Advertisements

“ಫಾರ್ಮಸಿ ಅಧಿಕಾರಿಗಳನ್ನು ಔಷಧ ವಿಜ್ಞಾನದ ವೈದ್ಯರು ಎಂದು ಕರೆಯುತ್ತಾರೆ. ಔಷಧಿಯು ರೋಗವನ್ನು ಪತ್ತೆಹಚ್ಚಲು, ಗುಣಪಡಿಸಲು, ಚಿಕಿತ್ಸೆ ನೀಡಲು ಬಳಸುವುದಾಗಿದೆ. ಫಾರ್ಮಸಿ ಅಭ್ಯಾಸದ ವ್ಯಾಪ್ತಿಯು ಔಷಧಿಗಳ ಸಂಯೋಜನೆ ಮತ್ತು ವಿತರಣೆಯಂತಹ ಹೆಚ್ಚು ಪರಿಣಾಮಕಾರಿ ತತ್ವಕ್ಕಾಗಿ ಔಷಧಿಗಳನ್ನು ಪರಿಶೀಲಿಸುವುದು ಮತ್ತು ರೋಗಿಗೆ ಸಮಾಲೋಚನೆ ಮಾಡುವುದು ಸೇರಿದಂತೆ ಆರೋಗ್ಯ ರಕ್ಷಣೆಗೆ ಹೆಚ್ಚು ಆಧುನಿಕ ಸೇವೆಗಳನ್ನು ಹೊಂದಿದೆ. ಫಾರ್ಮಸಿ ಅಧಿಕಾರಿಗಳು ರೋಗಿಗಳಿಗೆ ಔಷಧಿಗಳನ್ನು ಅತ್ಯುತ್ತಮವಾಗಿ ಬಳಸಲು ಆರೋಗ್ಯ ವೃತ್ತಿಪರರಾಗಿರುತ್ತಾರೆ” ಎಂದು ವಿವರಿಸಿದರು.

“ವೈದ್ಯರು ಗುರುತಿಸುವ ರೋಗಗಳಿಗೆ ವೈದ್ಯರು ಮತ್ತು ಫಾರ್ಮಸಿ ಅಧಿಕಾರಿಗಳು ನೀಡುವ ನಿರ್ದಿಷ್ಟ ಸಲಹೆಗಳಂತೆ ಔಷಧಿ ಸೇವನೆ ಮಾಡಬೇಕು. ನೇರವಾಗಿ ಔಷಧಿಗಳು ಸ್ವೀಕರಿಸಿದರೆ ರೋಗಿಗಳ ಮೂಳೆ ದುರ್ಬಲವಾಗುತ್ತದೆ. ಮೂತ್ರಪಿಂಡದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಕೆಲವು ಆಸ್ಪತ್ರೆಗಳಲ್ಲಿ ಇದಕ್ಕಾಗಿ ಫಾರ್ಮಸಿ ಪರಿಷತ್ ಈ ಹಿಂದೆ ಔಷಧಿ ಮಾಹಿತಿ ಕೇಂದ್ರಗಳನ್ನ ಸ್ಥಾಪಿಸಲಾಗಿತ್ತು. ಆಮದು ರೀತಿಯಿಂದ 80 ಸಾವಿರಕ್ಕಿಂತ ಹೆಚ್ಚು ಔಷಧಿಗಳು ಮಾರಾಟಕ್ಕಿದೆ. ಈ ಮೊದಲು 2016 ಔಷಧಿಗಳಿಂದ ಗುಣ ಪಡಿಸಬಹುದಾಗಿತ್ತು. ಕರ್ನಾಟಕ ರಾಜ್ಯ ಔಷಧಿ ನಿಯಂತ್ರಣ ಇಲಾಖೆ ನಕಲಿ ಔಷಧಿಯು ನಿಯಂತ್ರಣಕ್ಕೆ ಕೆಲಸ ಮಾಡುತ್ತಿದೆ” ಎಂದರು.

“ಈ ಹಿಂದೆ ಮಾರುಕಟ್ಟೆಗೆ ನಕಲಿ ಔಷಧಿಗಳು ಪ್ರವೇಶ ಮಾಡುವುದನ್ನ ತಡೆಯಲು ತ್ವರಿತವಾಗಿ ಆ ಔಷಧಿಯ ಗುಣಮಟ್ಟ ಕುರಿತು ಪ್ರಾಥಮಿಕ ವರದಿಯನ್ನ ಪಡೆಯುವ ಸಲುವಾಗಿ ಔಷಧಿಗಳ ಪರೀಕ್ಷೆಯನ್ನು ಖಾಸಗಿ ಪ್ರಯೋಗಾಲಯದಲ್ಲಿ ನಡೆಸಲು ನಿರ್ಧಾರ ಮಾಡಲಾಗಿತ್ತು. ವಿದೇಶಗಳಲ್ಲಿ ನಿಷೇಧಿಸಿರುವ ಕೆಲ ಔಷಧಿಗಳನ್ನು ನಮ್ಮ ಮಾರುಕಟ್ಟೆಯಲ್ಲಿ ಇಲ್ಲಿನ ಜನರ ಆರೋಗ್ಯಕ್ಕೆ ಸರಿ ಹೊಂದುತ್ತಿರುವ ಕಾರಣ ಕೇಂದ್ರ ತಾಂತ್ರಿಕ ಔಷಧಿ ಪರಿಶೀಲನಾ ಮಂಡಳಿ ದಿಢೀರನೇ ನಿಷೇಧಿಸಿಲ್ಲ. ನಂತರದಲ್ಲಿ ಪರಿಶೀಲನೆ ಮಾಡಿ ನಿಷೇಧಿಸಿದ್ದಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ಗೋದಾವರಿ-ಕೃಷ್ಣಾ-ಕಾವೇರಿ ನದಿಗಳ ಜೋಡಣೆ, ರಾಜ್ಯಕ್ಕೆ 25 ಟಿಎಂಸಿ ನೀರು ಮೀಸಲಿಡಿ: ದೇವೇಗೌಡ

 “ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನ ಸೂತ್ರಗಳನ್ವಯ ರಾಜ್ಯ ಮತ್ತು ಕೇಂದ್ರ ಸರ್ಕಾರ ಉತ್ತಮ ಗುಣಮಟ್ಟದ ಔಷಧಿಗಳನ್ನು ಮಾರಾಟ ಮಾಡಲು ಔಷಧ ನಿಯಂತ್ರಣ ಇಲಾಖೆಗೆ ಜವಾಬ್ದಾರಿಯನ್ನು ವಹಿಸಿದೆ. ಸ್ವ ಇಚ್ಛೆಯ ಔಷಧಿಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ವೈದ್ಯರ ಸಲಹೆ, ಫಾರ್ಮಸಿ ಅಧಿಕಾರಿಗಳ ಸಲಹೆಯ ಬಳಿಕ ಔಷಧಿ ಸೇವನೆ ಮಾಡಬೇಕು” ಎಂದು ತಿಳಿಸಿದರು.

“ಈ ಎಲ್ಲವನ್ನೂ ಹಿತದೃಷ್ಟಿಯಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ 1948ರ ಫಾರ್ಮಸಿ ಕಾಯ್ದೆಯಂತೆ ಕಡ್ಡಾಯವಾಗಿ ಫಾರ್ಮಸಿಯಲ್ಲಿ ತಾಂತ್ರಿಕ ವಿದ್ಯಾರ್ಹತೆ ಹೊಂದಿರುವರು ಫಾರ್ಮಸಿ ಕೆಲಸ ನಿರ್ವಹಿಸುವುದನ್ನು ಕಡ್ಡಾಯಗೊಳಿಸಲಾಯಿತು. 1948ರ 32(2) ಹಾಗೂ 42ಬಿ ಪ್ರಕಾರ ವಿದ್ಯಾರ್ಹತೆ ಹೊಂದದೇ ಇರುವ ಇತರರು ಫಾರ್ಮಸಿ ಕೆಲಸ ನಿರ್ವಹಿಸುವುದು ಅಪರಾಧವಾಗಿದೆ. ಒಂದು ವೇಳೆ ಕಾರ್ಯ ನಿರ್ವಹಿಸಿದರೆ ಶಿಕ್ಷಾರ್ಹ ಅದು ಅಪರಾಧವಾಗುತ್ತದೆ. ಸದ್ಯ ಫಾರ್ಮಸಿಯಲ್ಲಿ 1,500ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಸಾರ್ವಜನಿಕರಿಗೆ ಈ ಬಗ್ಗೆ ತಿಳಿಹೇಳಬೇಕು ಎನ್ನುವ ದೃಷ್ಟಿಯಿಂದ ಈ ಶಾಂತಿ ಸಭೆಯನ್ನ ನಡೆಸಲಾಗಿದೆ” ಎಂದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಕಳಂಕಿತ ನೈಸ್ ಕಂಪನಿಗೆ ಯಾವುದೇ ಕಾಮಗಾರಿ ನೀಡದಂತೆ ಸರ್ಕಾರಕ್ಕೆ ನೈಸ್ ಭೂ ಸಂತ್ರಸ್ತ ರೈತರ ಆಗ್ರಹ

ಬಿಎಂಐಸಿ-ನೈಸ್ ಕಂಪನಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸಲಹಾ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X