ಬಿಎಂಐಸಿ-ನೈಸ್ ಕಂಪನಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸಲಹಾ ಸಮಿತಿ ನೇಮಕದ ಹಿನ್ನೆಲೆಯಲ್ಲಿ ಕಳಂಕಿತ ನೈಸ್ ಕಂಪನಿಗೆ ಯಾವುದೇ ರೀತಿಯ ಕಾಮಗಾರಿ ನಡೆಸದಂತೆ ನಿರ್ಬಂಧ ವಿಧಿಸಲು ಆಗ್ರಹಿಸಿ, ನೈಸ್ ಆಕ್ರಮ -ಹಗರಣ ಕುರಿತ ಟಿ ಬಿ ಜಯಚಂದ್ರ ನೇತೃತ್ವದ ಸದನ ಸಮಿತಿ ಶಿಪಾರಸ್ಸುಗಳನ್ನು ಜಾರಿಗೊಳಿಸಲು ಒತ್ತಾಯ ಸೇರಿದಂತೆ ಹಲವಾರು ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಇಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ನೈಸ್ ಭೂ ಸಂತ್ರಸ್ತ ನೂರಾರು ರೈತರ ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘ (ಕೆಆರ್‌ಪಿಎಸ್)ಹಾಗೂ ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ಸಂಘಟಿಸಿದ್ದ ಈ ಪ್ರತಿಭಟನೆಗೆ ಆಗಮಿಸಿದ್ದ ಲೋಕೋಪಯೋಗಿ ಸಚಿವರ ಪರವಾಗಿ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಮಂಜಪ್ಪ ಅವರು ಮನವಿ ಸ್ವೀಕರಿಸಿ ಮಾನ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು ರೈತರ ಆಹವಾಲುಗಳನ್ನು ಪರಿಹರಿಸಲಾಗುವುದು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸದನದ ಘನತೆಯನ್ನು ಮಣ್ಣುಪಾಲು ಮಾಡಿದ ಮಹನೀಯರು
ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಆರ್‌ಪಿಎಸ್) ರಾಜ್ಯಾಧ್ಯಕ್ಷ ಯು ಬಸವರಾಜ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ರಾಜ್ಯ ಸಹ ಕಾರ್ಯದರ್ಶಿ ಎನ್ ಪ್ರಭಾ ಬೆಳವಂಗಲ, ರಾಜ್ಯ ಸಮಿತಿ ಸದಸ್ಯೆ ಗಾಯಿತ್ರಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಮಂಜುನಾಥ್, ಮಹಾಂತೇಶ್, ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎನ್ ವೆಂಕಟಾಚಲಯ್ಯ ಮಾತಾನಾಡಿದರು.
ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿಯ ಮುಖಂಡರುಗಳಾದ ವೆಂಕಟಾಚಲಪ್ಪ, ಚಂದ್ರಶೇಖರ್, ಸಣ್ಣರಂಗಯ್ಯ, ಗೋಪಾಲ ರೆಡ್ಡಿ, ಹನುಮಂತಪ್ಪ, ಕೃಷ್ಣಪ್ಪ, ಹನುಮಯ್ಯ, ಸುಜಾತ, ರಾಮಯ್ಯ, ಬೆಟ್ಟಪ್ಪ, ನಾರಾಯಣಪ್ಪ, ರಂಗಸ್ವಾಮಿ, ವೆಂಕಟೇಶಪ್ಪ, ಪವನ್, ಅರುಣಮ್ಮ, ಚಂದ್ರಶೇಖರ್, ಕುಂಟೀರಪ್ಪ, ಸತ್ಯನಾರಾಯಣ ಮುಂತಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
