ʼದಿ ವೈರ್‌ʼ ಸಂವಾದ ಕಾರ್ಯಕ್ರಮದಲ್ಲಿ ಪ್ರಕಾಶ್‌ ರಾಜ್‌ ಭಾಗಿ

Date:

Advertisements

ದಿ ವೈರ್‌ ಮಾಧ್ಯಮ ಸಂಸ್ಥೆಯ ವತಿಯಿಂದ ʼಕಾರ್ನಿವಲ್‌ ಆಫ್‌ ಫ್ರೀ ವೀಲಿಂಗ್‌ ಎಕ್ಸ್‌ಪ್ರೆಷನ್‌ʼ ಹೆಸರಿನ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ ಆಗಸ್ಟ್‌ 6 ರಂದು ಸಂಜೆ 6ರಿಂದ 8ರವರೆಗೆ ಕೋರಮಂಗಲದ ಸೇಂಟ್‌ ಜಾನ್ಸ್‌ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ʼಸಾಂವಿಧಾನದ ಆದರ್ಶ ತತ್ವವಾದ ಭ್ರಾತೃತ್ವದ ಕಲ್ಪನೆಯನ್ನು ಭಾರತವು ಯಾಕೆ ಎಂದಿಗಿಂತಲೂ ಹೆಚ್ಚಾಗಿ ಅರ್ಥ ಮಾಡಿಕೊಳ್ಳಬೇಕು ಮತ್ತು ಅಳವಡಿಸಿಕೊಳ್ಳಬೇಕುʼ ಎಂಬುದು ಸಂವಾದದ ವಿಷಯ. ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರೊಂದಿಗೆ ಸಂವಾದವನ್ನು ದಿ ವೈರ್‌ನ ಸಂಪಾದಕರಾದ ಸೀಮಾ ಚಿಸ್ತಿ ನಡೆಸಿಕೊಡುವರು.

ಸಂವಾದದ ನಂತರ ಪ್ರಕಾಶ್‌ ರಾಜ್‌ ಅವರೊಂದಿಗೆ, ದಿ ವೈರ್‌ನ ಸಂಸ್ಥಾಪಕ ಸಂಪಾದಕರಾದ ಸಿದ್ದಾರ್ಥ್‌ ವರದರಾಜನ್‌ ಮತ್ತು ಎಂ ಕೆ ವೇಣು ಅವರ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದೆ. 8 ಗಂಟೆಯಿಂದ ಖ್ಯಾತ ನಟಿ, ಗಾಯಕಿ ಶಬನಮ್‌ ವಿರ್ಮಾನಿ ಅವರು ಕಬೀರ್‌ ಸಂಯೋಜನೆಯ ಹಾಡುಗಳನ್ನು ಹಾಡಲಿದ್ದಾರೆ.

ಇದು ಪ್ರಾಯೋಜಿತ ಕಾರ್ಯಕ್ರಮ. ಟಿಕೆಟ್‌ ಇದೆ ಎಂದು ಸಂಯೋಜಕರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ – https://insider.in/the-wire-dialogues-aug6-2023/event

Advertisements

ವಿಳಾಸ : ಸೇಂಟ್‌ ಜಾನ್ಸ್‌ ಅಡಿಟೋರಿಯಂ, 18ನೇ ಮುಖ್ಯರಸ್ತೆ, ಜಾನ್‌ ನಗರ, ಕೋರಮಂಗಲ, ಬೆಂಗಳೂರು 560034

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

ಬೆಂಗಳೂರು ಮೆಟ್ರೋ: ನಾಳೆ ಹಳದಿ ಮಾರ್ಗದಲ್ಲಿ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಹಳದಿ ಮಾರ್ಗದಲ್ಲಿ ಸೋಮವಾರ...

Download Eedina App Android / iOS

X