‘ಒಕ್ಕೂಟ ಉಳಿಸಿ ಆಂದೋಲನ’ ಚಾಲನಾ ಸಭೆ: ಹಲವು ನಿರ್ಣಯಗಳ ಅಂಗೀಕಾರ

Date:

Advertisements

ರಾಜ್ಯಗಳ ಮೇಲಿನ ದಾಳಿಗೆ ಜನಪ್ರತಿರೋಧವಾಗಿ ಸೆಪ್ಟೆಂಬರ್ 14ರಂದು ಬೆಂಗಳೂರಿನ ಕೆ.ಆರ್ ವೃತ್ತದ ಬಳಿಯ ಯುವಿಸಿಇ ಅಲುಮ್ನಿ ಹಾಲ್‌ನಲ್ಲಿ ‘ಒಕ್ಕೂಟ ಉಳಿಸಿ ಆಂದೋಲನ – ರಾಷ್ಟ್ರೀಯ ಆಂದೋಲನ ಚಾಲನಾ ಸಭೆ’ಯನ್ನು ನಡೆಸಲಾಯಿತು.

ಈ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಭಾಷೆ ಮತ್ತು ಸಂಸ್ಕೃತಿಗಳನ್ನು ಮೂಲೆಗುಂಪು ಮಾಡುತ್ತಿರುವುದರ ವಿರುದ್ಧವಾಗಿ ನಿರ್ಣಾಯಕವಾದ ಆಂದೋಲನ ರೂಪಿಸುವುದು, ಜಿಎಸ್‌ ಟಿ ಮೂಲಕ ರಾಜ್ಯಗಳ ಸಂಪನ್ಮೂಲಗಳನ್ನೆಲ್ಲಾ ತಾನೇ ಬಾಚಿಕೊಂಡು ರಾಜ್ಯಗಳಿಗೆ ಕನಿಷ್ಟ ಅರ್ಧಪಾಲನ್ನೂ ಸಹ ನೀಡದಿರುವುದರ ವಿರುದ್ಧ, ಸಿಬಿಐ, ಇಡಿ ಸೇರಿ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳನ್ನೂ ಒಕ್ಕೂಟ ಸರ್ಕಾರವು ತನ್ನ ಖಾಸಗಿ ಏಜೆನ್ಸಿಗಳಂತೆ ಬಳಸಿಕೊಳ್ಳುವುದು ಮೊದಲಾದವುಗಳ ವಿರುದ್ಧವಾಗಿ ನಿರ್ಣಯವನ್ನು ಕೈಗೊಳ್ಳಲಾಯಿತು.

ವಿದ್ಯಾರ್ಥಿ ನಾಯಕ ಉಮರ್‌ ಖಾಲೀದ್‌ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುವ ವಿಶೇಷ ನಿರ್ಣಯವನ್ನು ಕೂಡಾ ಇದೇ ಸಂದರ್ಭದಲ್ಲಿ ಕೈಗೊಳ್ಳಲಾಗಿದೆ. ನಿರ್ಣಯಗಳ ಸಂಪೂರ್ಣ ವಿವರ ಈ ಕೆಳಗಿದೆ:

Advertisements

ವಿಶೇಷ ನಿರ್ಣಯ:

ವಿದ್ಯಾರ್ಥಿ ನಾಯಕ ಖಾಲೀದ್‌ ಅವರನ್ನು ದೆಹಲಿ ದಂಗೆಗಳಿಗೆ ಕಾರಣ ಎಂಬ ಆಧಾರ ರಹಿತ ಸುಳ್ಳು ಆರೋಪದ ಮೇಲೆ ಬಂಧಿಸಿ ಇಂದಿಗೆ 4 ವರ್ಷಗಳಾಗುತ್ತಿವೆ. ವಿನಾಕಾರಣ ಬೇಲ್‌ ಸಹ ನೀಡದೆ ಕೊಳೆಸುತ್ತಿರುವುದಲ್ಲದೆ, ಕನಿಷ್ಟ ವಿಚಾರಣೆಯನ್ನೂ ಪ್ರಾರಂಭಿಸದೆ ಅವರ ಪ್ರಜಾತಾಂತ್ರಿಕ ಹಕ್ಕನ್ನು ದಮನ ಮಾಡಲಾಗುತ್ತಿದೆ. ಈ ಸಂಚಿನಲ್ಲಿ ಒಕ್ಕೂಟ ಸರ್ಕಾರದ ಗೃಹ ಮಂತ್ರಾಲಯವು ನೇರವಾಗಿ ಭಾಗಿಯಾಗಿದೆ. ಅನ್ಯಾಯಗಳ ವಿರುದ್ಧ ದನಿ ಎತ್ತಿದವರನ್ನು ಈ ರೀತಿ ದಮನ ಮಾಡುವುದನ್ನು ಈ ಸಭೆ ತೀವ್ರವಾಗಿ ಖಂಡಿಸುತ್ತದೆ. ಉಮರ್‌ ಖಾಲೀದ್‌ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲು ನಿರ್ಣಯ.

ಇದನ್ನು ಓದಿದ್ದೀರಾ? ಹಿಂದೂ ರಾಷ್ಟ್ರದ ಉದ್ದೇಶ ಸಾಕಾರಗೊಳಿಸಲು ಸ್ಥಳೀಯ ಸಂಸ್ಕೃತಿ ನಾಶ ಮಾಡಲು ಹೊರಟಿದ್ದಾರೆ: ಎ ನಾರಾಯಣ

ಒಕ್ಕೂಟ ಉಳಿಸಿ ಆಂದೋಲನದ ನಿರ್ಣಯಗಳು

  1. ಭಾರತದ ಒಕ್ಕೂಟ ಸರ್ಕಾರವು ಎಲ್ಲಾ ರಾಜ್ಯಗಳ ಹಕ್ಕುಗಳು ಮತ್ತು ಅಸ್ಮಿತೆಯ ಮೇಲೆ ಬಹುಮುಖಿ ದಾಳಿಯನ್ನು ನಡೆಸುತ್ತಿರುವುದನ್ನು, ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ಸಂಪನ್ಮೂಲಗಳನ್ನು ಬಸಿಯುತ್ತಿರುವುದನ್ನು, ರಾಜ್ಯಗಳ ಪಾಲನ್ನು ಕೊಡದೆ ವಂಚಿಸುತ್ತಿರುವುದನ್ನು, ರಾಜ್ಯ ಸರ್ಕಾರಗಳನ್ನು ಅಭದ್ರಗೊಳಿಸುವ ಪ್ರಯತ್ನಗಳಲ್ಲಿ ತೊಡಗಿರುವುದನ್ನು, ನಮ್ಮ ಭಾಷೆ ಮತ್ತು ಸಂಸ್ಕೃತಿಗಳನ್ನು ಮೂಲೆಗೊತ್ತುತ್ತಿರುವುದನ್ನು ಈ ಸಭೆಯು ಮನಗಂಡಿದೆ ಮತ್ತು ಅದರ ವಿರುದ್ಧ ನಿರ್ಣಾಯಕವಾದ ಆಂದೋಲನವನ್ನು ರೂಪಿಸಲು ನಿರ್ಣಯ.
  2. ರಾಜ್ಯಪಟ್ಟಿಯಲ್ಲಿರುವ ವಿಷಯಗಳ ಕುರಿತು ಒಕ್ಕೂಟ ಸರ್ಕಾರವೇ ಜನ ವಿರೋಧಿ ರೀತಿಯಲ್ಲಿ ಶಾಸನಗಳನ್ನು ರೂಪಿಸುವುದು, ಅವನ್ನು ಜಾರಿಗೊಳಿಸಲೇಬೇಕು ಎಂದು ಒತ್ತಡ ಹಾಕುವುದು, ಇಲ್ಲವಾದರೆ ಅನುದಾನ ನೀಡುವುದಿಲ್ಲ ಎಂದು ಬೆದರಿಕೆ ಹಾಕುವುದು ಮೊದಲಾದ ಅಸಂವಿಧನಾತ್ಮಕ ನಡತೆಯನ್ನು ಒಕ್ಕೂಟ ಸರ್ಕಾರ ಪ್ರದರ್ಶಿಸುತ್ತಿದೆ. ಇದು ಒಕ್ಕೂಟ ತತ್ವದ ಮೇಲೆ ನಡೆಸುತ್ತಿರುವ ಅಪಚಾರವಾಗಿದೆ. ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಕಡಿಮೆ ಅನುದಾನ ನೀಡುವುದು, ಜಿಎಸ್‌ಟಿ ಮೂಲಕ ರಾಜ್ಯಗಳ ಸಂಪನ್ಮೂಲಗಳನ್ನೆಲ್ಲಾ ತಾನೇ ಬಾಚಿಕೊಂಡು ರಾಜ್ಯಗಳಿಗೆ ಕನಿಷ್ಟ ಅರ್ಧಪಾಲನ್ನೂ ಸಹ ನೀಡದಿರುವುದು, ಬೆಲೆ ಏರಿಕೆಗೆ ಕಾರಣವಾಗುವ ರೀತಿಯಲ್ಲಿ ಸೆಸ್‌ ಮತ್ತು ಸರ್‌ ಚಾರ್ಜ್‌ ಹೆಚ್ಚಿಸುತ್ತಾ, ಅದರಲ್ಲಿ ರಾಜ್ಯಗಳಿಗೆ ಎಳ್ಳಷ್ಟು ಪಾಲನ್ನೂ ನೀಡದೆ ತಾನೇ ಕಬಳಿಸುವುದು, ಇವೆಲ್ಲವೂ ವಿತ್ತೀಯ ಕೇಂದ್ರೀಕರಣದ ಅಕ್ರಮ ಮಾರ್ಗಗಳಾಗಿವೆ. ಇಂತಹ ವಿವಿಧ ಕ್ರಮಗಳಿಗೆ ನಮ್ಮ ಪ್ರತಿರೋಧ ಒಡ್ಡಲು ನಿರ್ಣಯ.
  3. 200 ವರ್ಷಗಳ ವೀರೋಚಿತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನರ ಬಲಿದಾನದ ಮುಖಾಂತರ ವಸಾಹತುಶಾಹಿಗಳ ವಿರುದ್ಧದ ಆಂದೋಲನದಲ್ಲಿ ಒಂದುಗೂಡಿದ ಈ ದೇಶದ ಶಕ್ತಿ ಇದರ ವೈವಿಧ್ಯತೆಯಾಗಿದೆ. ಇಂತಹ ವಿಶಿಷ್ಟ ದೇಶ ಈ ಪ್ರಪಂಚದಲ್ಲಿ ಇನ್ನೊಂದಿಲ್ಲ. ಈ ವಿಶಿಷ್ಟತೆಯನ್ನು ನಾಶ ಮಾಡಿ ಇದನ್ನು ದುರ್ಬಲಗೊಳಿಸುವ ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮ, ಒಂದು ರಾಜಕೀಯ ಪಕ್ಷ, ಒಬ್ಬ ನಾಯಕ, ಒಂದು ಚಿಂತನೆ ಎಂಬ ಸಿದ್ಧಾಂತವನ್ನು ನಾವು ವಿರೋಧಿಸುತ್ತೇವೆ. ಅದೇ ರೀತಿ, ಒಂದು ತೆರಿಗೆ, ಒಂದು ಮಾರುಕಟ್ಟೆ, ಒಮ್ಮೆಗೇ ಚುನಾವಣೆಯಂತಹ ಕ್ರಮಗಳೂ ಸಹಾ ದುರುದ್ದೇಶದಿಂದ ಕೂಡಿದೆ. ಈ ನಿಟ್ಟಿನಲ್ಲಿ ಇದುವರೆಗೆ ತೆಗೆದುಕೊಳ್ಳಲಾಗಿರುವ ಕ್ರಮಗಳನ್ನು ಹಿಂತೆಗೆದುಕೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಅಂತಹ ಕ್ರಮಗಳನ್ನು ತೆಗೆದುಕೊಂಡರೆ ಯಾವುದೇ ಬೆಲೆ ತೆತ್ತಾದರೂ ಅದನ್ನು ತಡೆಯಲು ನಿರ್ಣಯ.
  4. ಕೇಂದ್ರೀಯ ಏಜೆನ್ಸಿಗಳಾದ ಸಿಬಿಐ, ಐಟಿ, ಇಡಿ ಇತ್ಯಾದಿಗಳನ್ನೂ, ರಾಜ್ಯಪಾಲರ ಕಚೇರಿಯೂ ಸೇರಿದಂತೆ ವಿವಿಧ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳನ್ನೂ ಒಕ್ಕೂಟ ಸರ್ಕಾರವು ತನ್ನ ಖಾಸಗಿ ಏಜೆನ್ಸಿಗಳಂತೆ ಬಳಸಿಕೊಳ್ಳುತ್ತಿದೆ. ತನ್ನ ವಿರೋಧಿಗಳನ್ನು ಅಕ್ರಮವಾಗಿ ಬಗ್ಗುಬಡಿಯಲು, ತನ್ನ ಜೊತೆಗಿರುವವರನ್ನು ರಕ್ಷಿಸಲು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹುನ್ನಾರವು ದೇಶದ ಜನರಿಗೆ ಸ್ಪಷ್ಟವಾಗಿ ಕಂಡಿದ್ದು, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಕಾಪಾಡಲು ಮತ್ತು ದೇಶದಲ್ಲಿ ಭ್ರಷ್ಟಾಚಾರ ಹಾಗೂ ವಿವಿಧ ಅಕ್ರಮಗಳ ನಿಷ್ಪಕ್ಷಪಾತ ತನಿಖೆ ನಡೆಯುವಂತಾಗಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಲು ನಿರ್ಣಯ.
  5. ಕೇಂದ್ರೀಕರಣದ ಪ್ರಯತ್ನಗಳನ್ನು ಹಿಂದೆ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಆಡಳಿತದ ಸಂದರ್ಭದಲ್ಲಿ ಮಾಡಲಾಗಿದೆ. ಅವೆಲ್ಲವನ್ನೂ ನಾವು ನೆನಪಿನಲ್ಲಿಟ್ಟಿದ್ದೇವೆ. ಆದರೆ, 2014ರಿಂದ ಈಚೆಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷವು ಕೇಂದ್ರೀಕರಣವನ್ನು ತೀವ್ರಗೊಳಿಸಿದ್ದಲ್ಲದೇ ಎಲ್ಲಾ ಮೇರೆಗಳನ್ನು ದಾಟಿ ನಿರ್ಲಜ್ಜವಾಗಿ ಮುಂದುವರೆದಿದೆ. ಇದನ್ನು ಎದುರಿಸಿ ನಿಲ್ಲಲು, ದೇಶದ ಎಲ್ಲಾ ರಾಜ್ಯಗಳ ಪ್ರಜಾತಂತ್ರವಾದಿ ಜನತೆ, ರಾಜಕೀಯ ಪಕ್ಷಗಳು, ವಿಶೇಷವಾಗಿ ವಿದ್ಯಾರ್ಥಿ ಯುವಜನರನ್ನು ಒಳಗೊಂಡು ರಾಷ್ಟ್ರೀಯ ಅಭಿಯಾನವನ್ನು ರೂಪಿಸಲು ಈ ಸಭೆ ನಿರ್ಣಯಿಸುತ್ತಿದೆ.
  6. ‘ಒಕ್ಕೂಟ’ ಸರ್ಕಾರದ ಒಕ್ಕೂಟ ತತ್ವ ವಿರೋಧಿ ನೀತಿಯ ಕುರಿತು, ಅದರ ಪರಿಣಾಮಗಳ ಕುರಿತು ಅರಿವು ಮೂಡಿಸಲು ಮುಂದಿನ ಒಂದು ತಿಂಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಜಾಗೃತಿ ಸಭೆಗಳನ್ನು ನಡೆಸಲು ನಿರ್ಣಯ.
  7. ನವೆಂಬರ್‌ ತಿಂಗಳಿನಲ್ಲಿ ಈ ವಿಚಾರವನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು ಬೃಹತ್‌ ಸಮಾವೇಶವನ್ನು ಸಂಘಟಿಸಲು ನಿರ್ಣಯ.
  8. ವಿವಿಧ ರಾಜ್ಯಗಳ ಸಮಾನ ಮನಸ್ಕರನ್ನು ಸಂಪರ್ಕಿಸಿ ದೇಶ ಮಟ್ಟದಲ್ಲಿ ಕೇಂದ್ರದ ರಾಜ್ಯ ವಿರೋಧಿ ಧೋರಣೆ ವಿರುದ್ಧ ದನಿ ಎತ್ತಲು ದೆಹಲಿಯಲ್ಲಿ ಅಖಿಲ ಭಾರತ ಮಟ್ಟದ ಪ್ರತಿಭಟನಾ ಸಭೆಯೊಂದನ್ನು ಆಯೋಜಿಸಲು ನಿರ್ಣಯ
  9. ರಾಜ್ಯದ ಅಸ್ಮಿತೆ, ಹಕ್ಕು ಹಾಗೂ ಪಾಲಿನ ರಕ್ಷಣೆಗಾಗಿ ರಾಜ್ಯ ಸರ್ಕಾರವೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ರಾಜ್ಯವ್ಯಾಪಿಯಾಗಿ ಹಕ್ಕೊತ್ತಾಯ ಸಲ್ಲಿಸಲು ನಿರ್ಣಯ.
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

ಬೆಂಗಳೂರು ಮೆಟ್ರೋ: ನಾಳೆ ಹಳದಿ ಮಾರ್ಗದಲ್ಲಿ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಹಳದಿ ಮಾರ್ಗದಲ್ಲಿ ಸೋಮವಾರ...

Download Eedina App Android / iOS

X