ಬೆಂಗಳೂರು | ಸತೀಶ್‌ ಜಾರಕಿಹೊಳಿಗೆ ಕೈತಪ್ಪಲಿದೆ ಟಿಕೆಟ್‌: ಬಿಜೆಪಿ ಶಾಸಕ ಮುನಿರತ್ನ

Date:

Advertisements

ಸಚಿವ ಸತೀಶ್ ಜಾರಕಿಹೊಳಿ ತಮ್ಮ ಭದ್ರಕೋಟೆ ಎಂದುಕೊಂಡಿರುವ ಬೆಳಗಾವಿ ಅವರ ಕೈತಪ್ಪಿಹೋಗುತ್ತಿದೆ. ಈ ಬಾರಿ ಅವರ ಕುಟುಂಬಕ್ಕೆ ಲೋಕಸಭಾ ಟಿಕೆಟ್‌ ಸಿಗುವುದು ಅನುಮಾನ ಎಂದು ಮಾಜಿ ಸಚಿವ ಮುನಿರತ್ನ ಭವಿಷ್ಯ ನುಡಿದಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ವಾದ ಮತ್ತೆ ಮುನ್ನಲೆಗೆ ಬಂದಿದೆ. ಮೊದಲು ರಮೇಶ್ ಜಾರಕಿಹೊಳಿನಾ, ಹೆಬ್ಬಾಳ್ಕರ್​ನಾ ಅನ್ನುವಂತಿತ್ತು. ಈಗ ನಾನಾ, ನೀನಾ (ಸತೀಶ್-ಲಕ್ಷ್ಮಿ ಹೆಬ್ಬಾಳ್ಕರ್) ಅಂತ ಆಗಿದೆ. ಅವರುಗಳ ಹಕ್ಕು ಚಲಾಯಿಸುವ ಹೋರಾಟ ಎಲ್ಲಿಗೆ ಹೋಗಿ ನಿಲ್ಲಲಿದೆ ನೋಡೋಣ. ನಾವು ಮೌನವಾಗಿದ್ದೇವೆ. 135 ಜನ ಗೆದ್ದಿದ್ದಾರೆ, ರಾಜ್ಯದ ಜನ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಒಳ್ಳೆಯ ಆಡಳಿತ ಕೊಡಲಿ ಅಂತ ಬಯಸುತ್ತೇವೆ. ಅದನ್ನ ಬಿಟ್ಟು ಬೇರೇನು ಆಲೋಚನೆ ಇಲ್ಲ” ಎಂದರು.

ನಾನು ನೋಡುತ್ತಿರೋ ಹಾಗೆ, ಲಕ್ಷ್ಮೀ ಹೆಬಾಳ್ಕರ್ ಮಗನಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇದನ್ನು ನಾನು ಹೇಳ್ತಿಲ್ಲ, ಜನರೇ ಹೇಳುತ್ತಿದ್ದಾರೆ. ಅವರೆಲ್ಲಾ 135 ಜನ ಒಂದೇ ಪಕ್ಷದಲ್ಲಿದ್ದಾರೆ, ಒಗ್ಗಟ್ಟಾಗಿದ್ದಾರೆ. ಮೈಸೂರಿಗೆ ಶಾಸಕರು ಒಟ್ಟಿಗೆ ಹೋಗಬೇಕು ಅಂದರೆ ಎಷ್ಟು ಒಗ್ಗಟ್ಟಿದೆ. ರಸ್ತೆಯಲ್ಲಿ ಹೋಗಬೇಕಾದರೆ ಏನೂ ಆಗಲ್ಲ. ಆದರೆ, ದೋಣಿಯಲ್ಲಿ ಹೋಗುತ್ತಿದ್ದಾರೆ. ನೋಡೋಣ ದೋಣಿಯನ್ನು ಯಾರು ತೂತು ಮಾಡುತ್ತಾರೋ ಎಂದು ಕಾಂಗ್ರೆಸ್ ಒಗ್ಗಟ್ಟಿನ ಕುರಿತು ಮುನಿರತ್ನ ವ್ಯಂಗ್ಯಮಾಡಿದರು.

Advertisements

ವಿದ್ಯುತ್ ಅಭಾವಕ್ಕೆ ಕಾರಣ ಕಾಂಗ್ರೆಸ್ ಎಂದಿರುವ ಮಾಜಿ ಸಿಎಂ ಎಚ್​. ಡಿ. ಕುಮಾರಸ್ವಾಮಿಯವರ ಮಾತು ನಿಜ. ನಮ್ಮ ಸರ್ಕಾರ ಇದ್ದಾಗ ಪವರ್ ಮಿನಿಸ್ಟರ್ ಸುನಿಲ್ ಕುಮಾರ್ ಇದ್ದರು. ಎಲ್ಲಾದರೂ ಒಂದು ದಿನ ವಿದ್ಯುತ್‌ ಖರೀದಿ ಬಗ್ಗೆ ಮಾತನಾಡಿದ್ದೇವಾ? ಈಗ ಏಕಾಏಕಿ ವಿದ್ಯುತ್ ಖರೀದಿ ಬಗ್ಗೆ ಮಾತನಾಡ್ತಿದ್ದಾರೆ. ಏನು ಅವಶ್ಯಕತೆ ಇತ್ತು? ಸೋಲಾರ್ ಪ್ಲಾಂಟ್ ಹಾಕಿದ್ದಾರೆ, ಎಲ್ಲಾ ಮಾಡಿದ್ದಾರೆ. ಆದರೂ, ವಿದ್ಯುತ್ ಖರೀದಿಗೆ ಹೊರಟಿದ್ದಾರೆ ಎಂದು ಎಚ್‌ಡಿಕೆಯವರನ್ನು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಒಂದೇ ಒಂದು ಸಣ್ಣ ಅಭಿವೃದ್ಧಿ ಆಗಿಲ್ಲ. ಏನೂ ಇಲ್ಲ, ಗ್ಯಾರಂಟಿ ಹೆಸರಲ್ಲಿ ರಾಜ್ಯವನ್ನು ಕತ್ತಲಿಗೆ ತಳ್ಳುತ್ತಿದ್ದಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಗೊತ್ತಿಲ್ಲ. ಇವರು ಎರಡು ಸಾವಿರ ಕೊಟ್ಟು, ವಾಪಸ್ ಕಿತ್ತುಕೊಳ್ತಿದ್ದಾರೆ. ಜನ ಅದನ್ನು ವಿರೋಧಿಸೋದನ್ನು ಕಾಯಬೇಕು. ಕೋಡೋದು ಎರಡು ಸಾವಿರ, ಕಿತ್ತುಕೊಳ್ಳೋದು ನಾಲ್ಕು ಸಾವಿರ. ಎರಡು ಸಾವಿರ ಒಂದು ಕುಟುಂಬ ಪಡೆಯುತ್ತಿದ್ರೆ, ನಾಲ್ಕು ಸಾವಿರ ಮತ್ತೊಂದು ಕುಟುಂಬ ಕಟ್ಟುವಂತಾಗಿದೆ. ಕರೆಂಟ್ ಬಿಲ್ ಎರಡು ಸಾವಿರ ಕಟ್ಟುತ್ತಿದ್ದಾರೆ. ಎಲ್ಲದರ ಬೆಲೆ ಹೆಚ್ಚಳವಾಗಿದೆ. ನಮ್ಮ ಕ್ಷೇತ್ರದ ಅನುದಾನ ಇವರು ಬಳಸಿಕೊಳ್ತಿದ್ದಾರೆ. ಇವರ ಬಳಿ ಹಣ ಇಲ್ಲ. ಹೇಗೆ ಆಡಳಿತ ಮಾಡ್ತಿದ್ದಾರೆ ಗೊತ್ತಾಗ್ತಿದೆ ಎಂದು ಟೀಕಿಸಿದರು.

ತಾಜ್ ವೆಸ್ಟೆಂಡ್‌ನಲ್ಲಿ ಕುಳಿತು ಆಡಳಿತ ಮಾಡ್ತಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿ, ತಾಜ್ ವೆಸ್ಟೆಂಡ್‌ನಲ್ಲಿ ಕುಳಿತಿದ್ರೋ, ಇಲ್ಲವೋ ಸೆಕೆಂಡರಿ. ನೀವು ಈಗ ವಿಧಾನಸೌಧದಲ್ಲಿ ಕುಳಿತಿದ್ದೀರಿ. ಒಳ್ಳೆಯ ಆಡಳಿತ ಕೊಡಿ. ನೋಡೋಣ ಹೇಗೆ ಕೊಡ್ತೀರಿ ಎಂದು ಸಿಎಂ ಸಿದ್ದರಾಮಯ್ಯಗೆ ಮುನಿರತ್ನ ಸವಾಲು ನೀಡಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಪುನರಾರಂಭ; ಸೀಮಿತ ಆ್ಯಪ್‌ಗಳಲ್ಲಿ ಮಾತ್ರ ಲಭ್ಯ

ಬೆಂಗಳೂರಿನಲ್ಲಿ ಗುರುವಾರದಿಂದ (ಆಗಸ್ಟ್‌ 21) ಮತ್ತೆ ಬೈಕ್‌ ಟ್ಯಾಕ್ಸಿ ಸೇವೆಗಳು ಪುನಾರಂಭವಾಗಿವೆ....

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X