ಜು.25 ರಂದು ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ “ದಿ ಗೌರಿ ಫೈಲ್ಸ್” ಸಂವಾದ ಕಾರ್ಯಕ್ರಮ

Date:

Advertisements

ಬೆಂಗಳೂರಿನ ದೊಮ್ಮಲೂರಿನಲ್ಲಿರುವ ‘ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌’ ಕೇಂದ್ರದಲ್ಲಿ ಜುಲೈ 25, 2025ರಂದು ಸಂಜೆ 6.30 ರಿಂದ 8.00 ಗಂಟೆಯವರೆಗೆ “ದಿ ಗೌರಿ ಫೈಲ್ಸ್: ಒಬ್ಬ ಪತ್ರಕರ್ತೆಯ ಹತ್ಯೆ ಮತ್ತು ಅದರ ಪರಿಣಾಮಗಳು” ಎಂಬ ಸಂವಾದ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಪತ್ರಕರ್ತ ಮತ್ತು ಲೇಖಕ ರೊಲೊ ರೊಮಿಗ್ ಅವರ ಇತ್ತೀಚಿನ ಪುಸ್ತಕ “ಐ ಆಮ್ ಆನ್ ದಿ ಹಿಟ್ ಲಿಸ್ಟ್: ಮರ್ಡರ್ ಆಂಡ್ ಮಿಥ್-ಮೇಕಿಂಗ್ ಇನ್ ಸೌತ್ ಇಂಡಿಯಾ” ಕುರಿತಾದ ಚರ್ಚೆ ನಡೆಯಲಿದೆ. 2017ರಲ್ಲಿ ತಮ್ಮ ಬೆಂಗಳೂರು ಮನೆಯ ಮುಂದೆ ಗುಂಡಿಕ್ಕಿ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಜೀವನ ಮತ್ತು ಕೊಲೆಯ ಬಗ್ಗೆ ಈ ಪುಸ್ತಕ ಆಳವಾದ ಒಳನೋಟಗಳನ್ನು ನೀಡಲಿದೆ. ರೊಲೊ ರೊಮಿಗ್ ಅವರು ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತ ಶಿವಸುಂದರ್, ಲೇಖಕಿ ಹಾಗೂ ಕಲಾವಿದೆ ಪುಷ್ಪಮಾಲಾ ಎನ್ ಮತ್ತು ಅವರೊಂದಿಗೆ ಸಂವಾದ ನಡೆಸಲಿದ್ದಾರೆ.

2017ರಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ದೇಶಾದ್ಯಂತ ಆಘಾತವನ್ನುಂಟು ಮಾಡಿತ್ತು. ಆದರೆ ಈ ಘಟನೆ ಅಲ್ಲಿಗೇ ಕೊನೆಗೊಂಡಿಲ್ಲ. ರೊಮಿಗ್ ಅವರು ತಮ್ಮ ಹಲವು ವರ್ಷಗಳ ಕಾಲದ ತನಿಖಾ ಪತ್ರಿಕೋದ್ಯಮದ ಮೂಲಕ ಗೌರಿ ಲಂಕೆಶ್‌ ಅವರು ಬದುಕಿದ್ದ ಪರಿಸರವನ್ನು ಆಳವಾಗಿ ಅನ್ವೇಷಿಸಿದ್ದಾರೆ. ಇದರ ಜೊತೆ ದೇಶದಲ್ಲಿ ನಡೆಯುತ್ತಿರುವ ದ್ವೇಷ ಮತ್ತು ಕೋಮುವಾದದ ಏರಿಕೆಯನ್ನು ಬೆಳಕಿಗೆ ತರುವ ಮೂಲಕ ಭಾರತದ ಪ್ರಜಾಪ್ರಭುತ್ವದಲ್ಲಿ ಬದಲಾಗುತ್ತಿರುವ ಸ್ವರೂಪವನ್ನು ಚಿತ್ರಿಸಿದ್ದಾರೆ. ಈ ಸಂವಾದವು ಗೌರಿಯ ಜೀವನ, ಅವರ ಹತ್ಯೆ ಹಿಂದಿನ ರಾಜಕೀಯ ಒಳಸಂಚುಗಳು ಮತ್ತು ದೇಶದ ಸಾಮಾಜಿಕ ವಾಸ್ತವತೆಯನ್ನು ಚರ್ಚಿಸುವ ವೇದಿಕೆಯಾಗಲಿದೆ.

Advertisements

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ: ಪೊಲೀಸ್ ಇಲಾಖೆಯ ಮಾದರಿ ಹೆಜ್ಜೆ

ಪತ್ರಕರ್ತ ಮತ್ತು ಲೇಖಕ ರೊಲೊ ರೊಮಿಗ್ ಅವರು ಅಮೆರಿಕದ ಡೆಟ್ರಾಯ್ಟ್‌ನಲ್ಲಿ ಜನಿಸಿ ಬೆಳೆದವರು. 2013ರಿಂದ ದಕ್ಷಿಣ ಭಾರತದ ಬಗ್ಗೆ, ವಿಶೇಷವಾಗಿ ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಗಾಗಿ ವರದಿಗಾರಿಕೆ ಮಾಡುತ್ತಿದ್ದಾರೆ. 2025ರಲ್ಲಿ ರೊಮಿಗ್ ಅವರ ಈ ಪುಸ್ತಕವು ಪುಲಿಟ್ಜರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಪ್ರವೇಶಿಸಿತ್ತು.

ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಮೊದಲು ಬಂದವರಿಗೆ ಮೊದಲು ಆದ್ಯತೆ ಆಧಾರದ ಮೇಲೆ ಆಸನ ಲಭ್ಯವಿರುತ್ತದೆ. ಆಸಕ್ತರು RSVP ವೆಬ್‌ಲಿಂಕ್‌ನ ಮೂಲಕ ಸ್ಥಳವನ್ನು ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ bic@bangaloreinternationalcentre.org ಗೆ ಸಂಪರ್ಕಿಸಬಹುದು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಕಳಂಕಿತ ನೈಸ್ ಕಂಪನಿಗೆ ಯಾವುದೇ ಕಾಮಗಾರಿ ನೀಡದಂತೆ ಸರ್ಕಾರಕ್ಕೆ ನೈಸ್ ಭೂ ಸಂತ್ರಸ್ತ ರೈತರ ಆಗ್ರಹ

ಬಿಎಂಐಸಿ-ನೈಸ್ ಕಂಪನಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸಲಹಾ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X