- ಸಿಬ್ಬಂದಿಯ ನಿರ್ಲಕ್ಷ್ಯದಿಂದ ವಿಮಾನ ತಪ್ಪಿಸಿಕೊಂಡ ರಾಜ್ಯಪಾಲರು
- ಒಂದು ಗಂಟೆ ತಡವಾಗಿ ಹೈದರಾಬಾದ್ಗೆ ತೆರಳಿದ ರಾಜ್ಯಪಾಲರು
ಹೈದರಾಬಾದ್ಗೆ ತೆರಳಬೇಕಿದ್ದ ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಬಿಟ್ಟು ವಿಮಾನ ಹಾರಿದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಜುಲೈ 28ರಂದು ರಾಜ್ಯಪಾಲರು ಹೈದರಾಬಾದ್ಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2 ಗಂಟೆಯ ವಿಮಾನದಲ್ಲಿ ಹೋಗಲು ನಿಲ್ದಾಣಕ್ಕೆ 1:30ಕ್ಕೆ ಆಗಮಿಸಿದ್ದರು. ಏರ್ ಏಷ್ಯಾ ವಿಮಾನ ಹೊರಡಲು ಇನ್ನೂ ಸಮಯವಿದೆ ಎಂದು ಸಿಬ್ಬಂದಿ ರಾಜ್ಯಪಾಲರನ್ನು ವಿಐಪಿ ಲಾಂಜ್ನಲ್ಲಿ ಕೂರಿಸಿ, ವಿಮಾನದಲ್ಲಿ ಲಗೇಜ್ ಇಟ್ಟು ಬಂದಿದ್ದರು.
ತುಂಬಾ ಹೊತ್ತು ಕಾದು ಕುಳಿತ ರಾಜ್ಯಪಾಲರು ಫ್ಲೈಟ್ ಸಮಯವಾಗಿರುವುದು ಗಮನಕ್ಕೆ ಬಂದ ಕೂಡಲೇ ವಿಮಾನ ಹತ್ತಲು ಹೋಗಿದ್ದಾರೆ. ಆದರೆ, ಇತ್ತ ಕಡೆ ಸಮಯ ಆದ್ದರಿಂದ ವಿಮಾನ ಟೇಕಾಫ್ ಆಗಿ ಹೈದರಾಬಾದ್ಗೆ ಹಾರಿದೆ.
ಸಿಬ್ಬಂದಿಯ ನಿರ್ಲಕ್ಷ್ಯದಿಂದ ರಾಜ್ಯಪಾಲರು ವಿಮಾನವನ್ನು ತಪ್ಪಿಸಿಕೊಂಡಿದ್ದು, ಬಳಿಕ ಅಧಿಕಾರಿಗಳು ಮತ್ತೊಂದು ವಿಮಾನದ ಮೂಲಕ ಅವರನ್ನು ಹೈದರಾಬಾದ್ಗೆ ಕಳುಹಿಸಿಕೊಟ್ಟಿದ್ದಾರೆ.
ಸಿಬ್ಬಂದಿಯ ನಿರ್ಲಕ್ಷ್ಯದಿಂದ ರಾಜ್ಯಪಾಲರು ಒಂದು ಗಂಟೆ ತಡವಾಗಿ ಹೈದರಾಬಾದ್ಗೆ ತೆರಳಬೇಕಾಯಿತು. ಸಿಬ್ಬಂದಿಯ ಈ ನಿರ್ಲಕ್ಷ್ಯವನ್ನು ರಾಜ್ಯಪಾಲರು ಹಾಗೂ ಹಿರಿಯ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಂಕಿತ ಉಗ್ರರಿಗೆ ಪಿಸ್ತೂಲ್ ಸರಬರಾಜು ಮಾಡಿದ್ದವನ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು
ಕರ್ನಾಟಕ ರಾಜ್ಯಪಾಲರಿಗೆ ವಿಮಾನ ತಪ್ಪಿ ಅವರು ಒಂದು ಗಂಟೆ ತಡವಾಗಿ ಮತ್ತೊಂದು ಫ್ಲೈಟ್ ಮುಖಾಂತರ ಹೈದರಾಬಾದ್ಗೆ ತೆರಳುವಂತಾಯಿತು. ಈ ಹಿನ್ನೆಲೆ, ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಏರ್ ಏಷ್ಯಾ ಏರ್ಲೈನ್ಸ್ ವಿರುದ್ಧ ದೂರು ನೀಡಿದ್ದಾರೆ.
ವಿಮಾನ ಮಿಸ್ ಆಗಲು ಕಾರಣ ತಿಳಿಸುವ ಜತೆಗೆ ಅದರ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಈ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.