ಬೆಂಗಳೂರು | ಈ ರಸ್ತೆಗಳಲ್ಲಿ ಆಗಸ್ಟ್ 29ರಂದು ಸಂಚಾರ ನಿರ್ಬಂಧ, ಬದಲಿ ಮಾರ್ಗ ವಿವರ ಇಲ್ಲಿದೆ

Date:

Advertisements

ಬೆಂಗಳೂರು ನಗರದ ಕೆಲವು ರಸ್ತೆಗಳಲ್ಲಿ ಆಗಸ್ಟ್ 29ರಂದು (ನಾಳೆ) ಸಂಚಾರವನ್ನು ನಿರ್ಬಂಧಿಸಲಾಗಿದೆ. ಜೊತೆಗೆ ವಾಹನ ನಿಲುಗಡೆಯನ್ನು ಕೂಡಾ ನಿಷೇಧಿಸಲಾಗಿದೆ.

ಆಗಸ್ಟ್ 29ರಂದು ಆರೋಗ್ಯ ಮಾತೆಯ ಧ್ವಜಾರೋಹಣ ಕಾರ್ಯಕ್ರಮ ಕಾರಣ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವಾಹನ ಸಂಚಾರ ಬಂದ್​ ಮಾಡಲಾಗಿದೆ. ಬದಲಿ ಮಾರ್ಗವನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸ್​ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವೆಲ್ಲ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ?

Advertisements

ಬಾಳೇ ಕುಂದ್ರಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದ ಕಡೆಗೆ ಸಾಗುವ ಬಿಎಂಟಿಸಿ ಬಸ್‌ಗಳು ಸೇರಿದಂತೆ ಎಲ್ಲ ಮಾದರಿಯ ವಾಹನಗಳನ್ನು ನಿರ್ಬಂಧಿಸಲಾಗಿದೆ.
ಬಿ.ಆರ್.ವಿ ಜಂಕ್ಷನ್​ನಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಸಾಗುವ ಬಿಎಂಟಿಸಿ ಬಸ್‌ಗಳು ಸೇರಿದಂತೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಬ್ರಾಡ್‌ ವೇ ರಸ್ತೆಯಲ್ಲಿ ರಸಲ್ ಮಾರ್ಕೆಟ್​ ಕಡೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಧರ್ಮರಾಜ ಕೋಯಿಲ್ ಸ್ಪೀಟ್ – ಓ. ಪಿ. ಹೆಚ್. ರಸ್ತೆ ವರೆಗೆ ರಸಲ್ ಮಾರ್ಕೆಟ್​ ಕಡೆಗೆ ಚಲಿಸುವ ವಾಹನ ಸಂಚಾರವನ್ನು ತಾಜ್ ವೃತ್ತದಲ್ಲಿ ನಿರ್ಬಂಧಿಸಲಾಗಿದೆ.
ಜ್ಯೋತಿಕೆಫೆ ವೃತ್ತದಿಂದ ರಸಲ್ ಮಾರ್ಕೆಟ್​ವರೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗ ವಿವರ ತಿಳಿಯಿರಿ

ದ್ವಿಚಕ್ರ ಹಾಗೂ ಲಘು ಮೋಟಾರ್ ವಾಹನಗಳು ಬಿ.ಆರ್.ವಿ-ಸೆಂಟ್ರಲ್ ಸ್ಟ್ರೀಟ್ – ಸೆಲೆಕ್ಟ್ ಜಂಕ್ಷನ್ ಎಡ ತಿರುವು ರಮಡಾ ಹೋಟೆಲ್-ವಿ.ಎಸ್.ಎನ್ ರಸ್ತೆ ಮೂಲಕ ಸಂಚರಿಸಬಹುದು.
ದ್ವಿಚಕ್ರ ಹಾಗೂ ಲಘು ಮೋಟಾರ್ ವಾಹನಗಳು ಬಿ.ಆರ್.ವಿ ಸೆಂಟ್ರಲ್ ಸ್ಟ್ರೀಟ್ – ಬಲ ತಿರುವು – ಸಫೀನಾ ಪ್ಲಾಜಾ -ಕಮರ್ಷಿಯಲ್ ಸ್ಟ್ರೀಟ್- ಕಾಮರಾಜ ರಸ್ತೆ ಮೂಲಕ ಸಂಚರಿಸಬಹುದು.
ಅನಿಲ್ ಕುಂಬ್ಳೆ ಜಂಕ್ಷನ್ ಕಡೆಯಿಂದ ಬರುವ ಬಿಎಂಟಿಸಿ ಬಸ್‌ಗಳು ಬಿ. ಆರ್. ವಿ ಜಂಕ್ಷನ್‌ನಲ್ಲಿ ಎಡತಿರುವು ಪಡೆದು- ಸಿ.ಟಿ.ಓ- ಕ್ಲೀನ್ಸ್ ಸರ್ಕಲ್- ಎಂ.ಜಿ ರಸ್ತೆ ಮೂಲಕ ಸಂಚರಿಸಬಹುದು.

ಇದನ್ನು ಓದಿದ್ದೀರಾ? ಬೆಂಗಳೂರು | ಸಂಚಾರ ದಟ್ಟಣೆ ನಿರ್ವಹಣೆಗೆ ಒಆರ್‌ಆರ್‌ಸಿಎ ಸಲಹೆಗಳಿವು

ಈ ಸ್ಥಳಗಳಲ್ಲಿ ವಾಹನ ನಿಲುಗಡೆ ನಿರ್ಬಂಧ

ರಸಲ್ ಮಾರ್ಕೆಟ್ ಸುತ್ತಮುತ್ತ, ಬ್ರಾಡ್‌ವೇರಸ್ತೆ, ಮೀನಾಕ್ಷಿಕೋಯಿಲ್ ಸ್ಟ್ರೀಟ್, ಸೆಂಟ್ರಲ್ ಸ್ಟ್ರೀಟ್ ಶಿವಾಜಿ ರಸ್ತೆ, ಬಾಳೇ ಕುಂದ್ರಿ ವೃತ್ತದಿಂದ ಚಂದ್ರಿಕಾ ಹೋಟೆಲ್‌ವರೆಗೂ (ಕನ್ನಿಂಗ್ ಹ್ಯಾಮ್ ರಸ್ತೆ) ಯೂನಿಯನ್ ಸ್ಟ್ರೀಟ್ ಇನ್ ಫೆಂಟ್ರಿರಸ್ತೆ ಸ್ಪೀಟ್- ಎಂ.ಜಿ ರಸ್ತೆ, ಕಬ್ಬನ್‌ ರಸ್ತೆ, ಲೇಡಿಕರ್ಜನ್‌ ರಸ್ತೆ, ವಿ.ಎಸ್.ಎನ್‌ ರಸ್ತೆ, ಪ್ಲೇನ್ ಸ್ಟ್ರೀಟ್​- ಎಂ.ಜಿ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಬದಲಿ ವಾಹನ ನಿಲುಗಡೆ ಸ್ಥಳ

ಕಾಮರಾಜರಸ್ತೆ ಪಾರ್ಕಿಂಗ್ ಸ್ಥಳದಲ್ಲಿ (ಸರ್ವೀಸ್ ರಸ್ತೆ ಆರ್ಮಿ ಸ್ಕೂಲ್ ಮುಂಭಾಗ), ಸಫೀನಾ ಪ್ಲಾಜಾ ಮುಂಭಾಗ ( ಮೈನ್ ಗಾರ್ಡನ್ ರಸ್ತೆ), ಜೆಸ್ಮಾ ಭವನ ರಸ್ತೆ, ಆರ್. ಬಿ. ಎ. ಎನ್. ಎಮ್. ಎಸ್ ಮೈದಾನ ( ಗಂಗಾಧರ ಚೆಟ್ಟಿ ರಸ್ತೆ), ಮುಸ್ಲಿಂ ರ್ಆಫೆನೇಜ್ ಡಿಕನ್ಸನ್ ರಸ್ತೆ ( ಹಸನತ್ ಕಾಲೇಜ್ ಹತ್ತಿರ), ರಮಡಾ ಹೊಟೇಲ್ (ಓಲ್ಡ್ ಕಾಂಗ್ರೇಸ್ ಕಛೇರಿ) ಪ್ಲೇನ್ ಸ್ಟ್ರೀಟ್​ನಲ್ಲಿ ವಾಹನ ನಿಲ್ಲಿಸಬಹುದಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

ಬೆಂಗಳೂರು ಮೆಟ್ರೋ: ನಾಳೆ ಹಳದಿ ಮಾರ್ಗದಲ್ಲಿ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಹಳದಿ ಮಾರ್ಗದಲ್ಲಿ ಸೋಮವಾರ...

Download Eedina App Android / iOS

X