- ಮನೆಕೆಲಸ ಮಾಡುವವರು, ಕಾರ್ಮಿಕರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಬಾರದು
- ನಿಗದಿ ಮಾಡಿದ ಸ್ಥಳದಲ್ಲಿ ಮಾತ್ರ ವಿರಾಮ ಮಾಡಲು ಮತ್ತು ಊಟ ಮಾಡಲು ಬಳಸಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್ವೊಂದು ಸಾಬೀತು ಮಾಡಿದೆ. ಮನೆಕೆಲಸ ಮಾಡುವವರು, ಕಾರ್ಮಿಕರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಬಾರದು ಹಾಗೂ ಪಾರ್ಕ್ ಆಂಪಿಥಿಯೇಟರ್, ಗೆಜೆಬೋಸ್ ಪ್ರದೇಶಗಳನ್ನು ಬಳಸಬಾರದು ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೆಂಗಳೂರಿನ ರೆಸಿಡೆನ್ಶಿಯಲ್ ಸೊಸೈಟಿಯೊಂದು ಬರೆದಿರುವ ಪೋಸ್ಟರ್ವೊಂದನ್ನು ಟ್ವೀಟರ್ನಲ್ಲಿ ವಿಬಿನ್ ಬಾಬುರಾಜನ್ ಎಂಬುವವರು ಹಂಚಿಕೊಂಡಿದ್ದಾರೆ.
ಪೋಸ್ಟರ್ನಲ್ಲಿ ಏನಿದೆ?
ನಗರದಲ್ಲಿ ಮನೆಕೆಲಸ ಮಾಡುವವರು, ಕಾರ್ಮಿಕರು ನಾವು ಬಳಸುವ ಅಂದರೆ ಉದ್ಯಾನವನ, ಆಂಪಿಥಿಯೇಟರ್, ಗೆಜೆಬೋಸ್ನಲ್ಲಿ ಓಡಾಡುವುದನ್ನು ನೋಡುವುದು ಕಷ್ಟವಾಗಿದೆ. ನಾವು ಬಳಸುವ ಪ್ರದೇಶವನ್ನು ಬಳಸಬೇಡಿ ಬದಲಾಗಿ ನಿಮಗೆ ನಿಗದಿ ಮಾಡಿರುವ ಸ್ಥಳಗಳನ್ನು ನೀವು ವಿರಾಮ ಮಾಡಲು ಮತ್ತು ಊಟ ಮಾಡಲು ಬಳಸಿ ಎಂದು ಬರೆಯಲಾಗಿದೆ.
ಎಲ್ಲ ಕಟ್ಟಡಗಳಲ್ಲಿ ಕಾಯುವ ಪ್ರದೇಶಗಳನ್ನು ಮನೆಗೆಲಸ ಮಾಡುವವರು ಮತ್ತು ಕಾರ್ಮಿಕರು ಬಳಸಬಹುದು. ನಾವು ನಡೆದಾಡುವ ಪ್ರತಿ ಸ್ಥಳಗಳಲ್ಲಿ ಕಾರ್ಮಿಕರು ಸುತ್ತುವರೆದಿರುವುದನ್ನು ನೋಡಲು ಕಷ್ಟವಾಗುತ್ತದೆ. ನಮ್ಮ ಸಂಪ್ರದಾಯಗಳಿಗೆ ಅಪಚಾರವಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅಪಾರ್ಟ್ಮೆಂಟ್ನ 10ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು
ನಗರದೆಲ್ಲೆಡೆ ಇಂತಹ ಜನರು ಇರುವಾಗ ನಮ್ಮಂತಹ ನಿವಾಸಿಗಳು ಅನಾನುಕೂಲತೆಯನ್ನು ಅನುಭವಿಸುತ್ತೇವೆ. ನಮ್ಮ ಸುರಕ್ಷತೆಯು ಸಾಮಾನ್ಯ ಪ್ರದೇಶಗಳಲ್ಲಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುವುದಿಲ್ಲ. ಅಡುಗೆಯವರು, ಬಡಗಿಗಳು, ಕೊಳಾಯಿ ಕೆಲಸಗಾರರು ಕಟ್ಟಡದ ಪ್ರವೇಶ ದ್ವಾರದ ಸೋಫಾಗಳಲ್ಲಿ ಕುಳಿತುಕೊಳ್ಳುತ್ತಾರೆ. ಇದರಿಂದ ನಮ್ಮ ಸಮಾಜದವರು ಅಥವಾ ಸಂಪ್ರದಾಯಸ್ಥರು ಈಗ ಈ ಆಸನಗಳ ಮೇಲೆ ಕುಳಿತುಕೊಳ್ಳುವುದನ್ನು ನಿಲ್ಲಿಸಿದ್ದಾರೆ ಎಂದು ಬರೆಯಲಾಗಿದೆ.