ದೀಪಾವಳಿ ಹಬ್ಬದ ಸಂಭ್ರಮಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹಬ್ಬದ ಸಂದರ್ಭದಲ್ಲಿ ಪಟಾಕಿ ಹಚ್ಚುವುದರಲ್ಲಿ ಮಕ್ಕಳು ಮತ್ತು ನಾಗರಿಕರು ಎಚ್ಚರಿಕೆ ವಹಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ನಗರದಲ್ಲಿ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಹೇಳಿದರು.
ಈ ಬಗ್ಗೆ ನ.10 ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, “ಜನರು ಪರಿಸರ ಸ್ನೇಹಿ ದೀಪಾವಳಿ ಆಚರಣೆ ಮಾಡಬೇಕು. ಹಸಿರು ಪಟಾಕಿಯನ್ನು ಮಾತ್ರ ಬಳಕೆ ಮಾಡಬೇಕು. ನಗರದಕ್ಕೆ ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ತರದಂತೆ ಚೆಕ್ಪೋಸ್ಟ್ನಲ್ಲಿ ಪರಿಶೀಲನೆ ಮಾಡುತ್ತೇವೆ” ಎಂದರು.
“ಹಸಿರು ಪಟಾಕಿಗಳ ಮೇಲೆ ಕ್ಯೂ ಆರ್ ಕೋಡ್ ಇರತ್ತೆ ಅದನ್ನು ಸ್ಲ್ಯಾನ್ ಮಾಡುವ ಮೂಲಕ ಸಾರ್ವಜನಿಕರು ಹಸಿರು ಪಟಾಕಿಯನ್ನು ಪತ್ತೆ ಮಾಡಿ ಬಳಸಬೇಕು. ನಗರದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆವರೆಗೂ ಮಾತ್ರ ಪಟಾಕಿ ಸಿಡಿಸಬೇಕು. ಅನಧಿಕೃತವಾಗಿ ಪಟಾಕಿ ಮಾರಾಟ ಮಾಡಿದರೇ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅನಧಿಕೃತವಾಗಿ ಪಟಾಕಿ ಮಾರಾಟ ಮಾಡುವವರನ್ನು ಪತ್ತೆ ಹಚ್ಚಲು ಪೊಲೀಸ್, ಅಗ್ನಿಶಾಮಕ, ಬಿಬಿಎಂಪಿ ಸಹಯೋಗದಲ್ಲಿ ಟಾಸ್ಕ್ಫೋರ್ಸ್ ರಚಿಸಲಾಗಿದೆ” ಎಂದು ತಿಳಿಸಿದರು.
“ಇನ್ನು ಅಗ್ನಿಶಾಮಕ ಇಲಾಖೆ ಮೂಲಕ ಮಾಹಿತಿ ಪಡೆದು ಪಟಾಕಿ ಮಾರಾಟಕ್ಕೆ ಲೈಸೆನ್ಸ್ ನೀಡಲಾಗಿದೆ. ಬಿಬಿಎಂಪಿ ನಗರದಲ್ಲಿ ಎಲ್ಲೆಲ್ಲಿ ಪಟಾಕಿ ಮಳಿಗೆ ನಿರ್ಮಾಣ ಮಾಡಬೇಕು ಎಂದು ಬಿಬಿಎಂಪಿ ನಿರ್ಧರಿಸಲಿದೆ. ಮಳಿಗೆಗಳನ್ನು ಹಾಕಲು ಅನುಮತಿ ನೀಡಲಿದೆ. ಈಗಾಗಲೇ ಬೆಂಗಳೂರಿನ 62 ಮೈದಾನದಲ್ಲಿ ಮಳಿಗೆ ಹಾಕಲು ಅನುಮತಿ ನೀಡಲಾಗಿದೆ. 964 ಜನರು ಪಟಾಕಿ ಮಾರಾಟದ ಲೈಸೆನ್ಸ್ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 320 ಪಟಾಕಿ ಅಂಗಡಿಗಳನ್ನು ಹಾಕಲು ಪರವಾನಿಗೆ ನೀಡಲಾಗಿದೆ. ಈ ಪೈಕಿ 263 ಜನರಿಗೆ ಲಾಟರಿ ಮೂಲಕ ಲೈಸೆನ್ಸ್ ನೀಡಲಾಗಿದೆ” ಎಂದರು.
ಟ್ವೀಟ್ ಮೂಲಕ ಪಟಾಕಿ ಸಲಹೆ ನೀಡುತ್ತಿರುವ ಪೊಲೀಸ್ ಇಲಾಖೆ
ನಮ್ಮ ದೀಪಾವಳಿ ಪಟಾಕಿ ಸುರಕ್ಷತಾ ಅಭಿಯಾನಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಇಲಾಖೆ ತನ್ನ ಎಕ್ಸ್‌ನಲ್ಲಿ ದಿನಕ್ಕೊಂದು ಸುರಕ್ಷತಾ ಸಲಹೆಗಳನ್ನು ನೀಡುತ್ತಿದೆ. ಅವು ಇಲ್ಲಿವೆ.
- ದೀಪಾವಳಿಯನ್ನು ಬಾಳಿಗೆ ಬೆಳಕಾಗುವಂತೆ ಆಚರಿಸಿ, ಬಾಳನ್ನು ಆರಿಸುವ ಬೆಂಕಿಯಂತೆ ಅಲ್ಲ! ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ತಯಾರಿಸಿದ ಪಟಾಕಿಗಳನ್ನು ಆಯ್ಕೆಮಾಡಿ. ಜವಾಬ್ದಾರಿಯುತವಾಗಿ ಹಬ್ಬಗಳನ್ನು ಆಚರಿಸೋಣ!
- ಯಾವುದೇ ತೊಂದರೆಗಳಿಗೆ ಒಳಗಾಗದೆ ಪಟಾಕಿಯನ್ನು ಸಿಡಿಸಲು, ಪಟಾಕಿಯ ಪ್ಯಾಕೆಟ್‌ಗಳ ಮೇಲೆ ನಮೂದಿಸಿರುವ ಸೂಚನೆಗಳನ್ನು ಪಾಲಿಸಿ. ಯಾವುದೇ ವಿಷಯದ ಕುರಿತ ಸ್ಪಷ್ಟವಾದ ಜ್ಞಾನವು ನಿಮ್ಮ ರಕ್ಷಣೆಗೆ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ.
ಪಟಾಕಿ ಸುರಕ್ಷತಾ ಸಲಹೆ #4: ಪಟಾಕಿಗಳನ್ನು ಹಚ್ಚಲು ಯಾವಾಗಲೂ ಕ್ಯಾಂಡಲ್ ಅಥವಾ ಅಗರಬತ್ತಿಗಳನ್ನು ಬಳಸಿ. ಈ ಸರಳ ಮುನ್ನೆಚ್ಚರಿಕೆಯ ಕ್ರಮವು ಸಂಭವಿಸಬಹುದಾದ ಅಪಘಾತಗಳನ್ನು ತಡೆಯುತ್ತದೆ ಅಲ್ಲದೇ ನಿಮ್ಮ ಸಂಭ್ರಮಾಚರಣೆಗಳನ್ನು ಸುರಕ್ಷಿತವಾಗಿಡುತ್ತದೆ. ದೀಪಾವಳಿ ಹಬ್ಬವನ್ನು ಜವಾಬ್ದಾರಿಯಿಂದ ಆಚರಿಸುತ್ತಾ ಸಂತಸವನ್ನು ಸವಿಯೋಣ.#Diwali2023… pic.twitter.com/byJ4rla5AH
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) November 9, 2023
- ಬೆಳಕಿನ ಹಬ್ಬ ದೀಪಾವಳಿಯಲ್ಲಿ ಸುರಕ್ಷಿತವಾಗಿ ಬೆಳಕನ್ನು ಬೆಳಗಿಸೋಣ!, ಪಟಾಕಿ ಸಿಡಿಸುವ ಸಮಯದಲ್ಲಿ, ಪೋಷಕರ ಗಮನ ಮಕ್ಕಳ ಮೇಲೆ ಸದಾ ಇರಲಿ.
- ಪಟಾಕಿಗಳನ್ನು ಹಚ್ಚಲು ಯಾವಾಗಲೂ ಕ್ಯಾಂಡಲ್ ಅಥವಾ ಅಗರಬತ್ತಿಗಳನ್ನು ಬಳಸಿ. ಈ ಸರಳ ಮುನ್ನೆಚ್ಚರಿಕೆಯ ಕ್ರಮವು ಸಂಭವಿಸಬಹುದಾದ ಅಪಘಾತಗಳನ್ನು ತಡೆಯುತ್ತದೆ ಅಲ್ಲದೇ ನಿಮ್ಮ ಸಂಭ್ರಮಾಚರಣೆಗಳನ್ನು ಸುರಕ್ಷಿತವಾಗಿಡುತ್ತದೆ. ದೀಪಾವಳಿ ಹಬ್ಬವನ್ನು ಜವಾಬ್ದಾರಿಯಿಂದ ಆಚರಿಸುತ್ತಾ ಸಂತಸವನ್ನು ಸವಿಯೋಣ.