ರಾಜ್ಯದಲ್ಲಿ ತರಕಾರಿ ಬೆಲೆಯು ಗಗನಕ್ಕೇರುತ್ತಿದೆ. ಜನರು ದಿನನಿತ್ಯ ಅಡುಗೆಗೆ ಬಳಸುವಂತಹ ಟೊಮೆಟೊ, ಈರುಳ್ಳಿ, ಆಲೂಗಡ್ಡೆ ದರವು ಹೆಚ್ಚಾಗುತ್ತಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ಟೊಮೆಟೊ, ಈರುಳ್ಳಿ ಬೆಲೆಯು ಇನ್ನೂ ಏರುಗತಿಯಲ್ಲಿದೆ.
ಹಿಂಗಾರು ಮಳೆ ಆರ್ಭಟ, ವಾಯುಭಾರ ಕುಸಿತದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಬೆಳೆಗಳು ನಾಶವಾಗುತ್ತಿದ್ದು, ಇದರ ಪರಿಣಾಮ ತರಕಾರಿಗಳ ಬೆಲೆಯೂ ಹೆಚ್ಚಾಗುತ್ತಿದೆ ಎಂದು ವರದಿಗಳು ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಕೃಷಿ ಕಸುಬು | ಬಯಲು ಸೀಮೆಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ, ಕಾರಣವೇನು?
ಟೊಮೆಟೊ, ಈರುಳ್ಳಿ, ಆಲೂಗಡ್ಡೆ ದರವು ಪ್ರತಿ ಕೆಜಿಗೆ 50 ರೂಪಾಯಿಯಿಂದ 80 ರೂಪಾಯಿಯ ಆಸುಪಾಸಿನಲ್ಲಿದೆ. ಇನ್ನು ಬೆಳ್ಳುಳ್ಳಿ ದರವು ಪ್ರತಿ ಕೆಜಿಗೆ 300-430 ರೂಪಾಯಿ ಆಸುಪಾಸಿನಲ್ಲಿದೆ. ನಿಂಬೆ ಹಣ್ಣಿನ ಬೆಲೆಯೂ ಹೆಚ್ಚಾಗಿದ್ದು, ಪ್ರತಿ ಕೆಜಿಗೆ 90ರಿಂದ 130 ರೂ. ಬೆಲೆಯಿದೆ.
ಲೋಕಲ್ ಸರ್ಕಲ್ ವರದಿಯೊಂದರ ಪ್ರಕಾರ ರಾಜ್ಯದಲ್ಲಿ ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ಈ ತಿಂಗಳಲ್ಲಿ ತರಕಾರಿ ಹಣದುಬ್ಬರ ಶೇ. 9.24ಕ್ಕೆ ಏರಿಕೆಯಾಗಿದೆ. ಈ ನಡುವೆ ಭಾರತದಲ್ಲಿ ರಿಟೇಲ್ ಹಣದುಬ್ಬರವು ಅಕ್ಟೋಬರ್ ತಿಂಗಳಿನಲ್ಲಿ ಶೇಕಡ 4.62ಕ್ಕೆ ಏರಿಕೆಯಾಗಿದೆ. ಕಳೆದ 15 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಬೆಲೆ ಹೆಚ್ಚಾಗಿದೆ.
ಇದನ್ನು ಓದಿದ್ದೀರಾ? ಕೇರಳ ಅಧಿವೇಶನ | ಮೀನು, ತರಕಾರಿ ಬೆಲೆ ಏರಿಕೆಗೆ ಖಂಡನೆ; ಪ್ರತಿಪಕ್ಷಗಳಿಂದ ಸಭಾತ್ಯಾಗ
2019ರ ಸೆಪ್ಟೆಂಬರ್‌ನಲ್ಲಿ ಆಹಾರೋತ್ಪನ್ನಗಳ ಬೆಲೆ ಏರಿಕೆ ಶೇ.5.11ರಷ್ಟಿದ್ದು, ಅಕ್ಟೋಬರ್‌ನಲ್ಲಿ ಶೇ.7.89ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶದಿಂದ ತಿಳಿದು ಬಂದಿದೆ.
