ಸ್ನೇಹಿತನ ಜತೆಗೆ ರಾತ್ರಿ ಕಳೆಯಲು ಹಿಂಸೆ ನೀಡುತ್ತಿದ್ದ ಪತಿರಾಯನ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸವನಗುಡಿ ನಿವಾಸಿ ಪೂರ್ಣಚಂದ್ರ ಎಂಬುವವರ ಜತೆಗೆ ಕಳೆದ ಒಂದು ವರ್ಷದ ಹಿಂದೆ ನಗರದ ಕಾಮಕ್ಷಿಪಾಳ್ಯದ ಸ್ವಯಂಪ್ರಭಾ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿತ್ತು. ಮದುವೆಯಾದ ದಿನದಿಂದಲೂ ಮಹಿಳೆಗೆ ಪತಿ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದಾನೆ.
ಪತಿ ಮದುವೆಗಾಗಿ ಮಾಡಿದ ಸಾಲ ತೀರಿಸಲು ₹10 ಲಕ್ಷ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದನು. ಇದಕ್ಕೆ ಮಹಿಳೆ ಒಪ್ಪದೇ ಇದ್ದಾಗ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದನು. ಬಳಿಕ ಮಹಿಳೆಯ ಅಣ್ಣ ₹2 ಲಕ್ಷ ಹಣ ನೀಡಿದ್ದನು. ಆದರೂ ಇನ್ನು ಬಾಕಿ ₹8 ಲಕ್ಷ ನೀಡುವಂತೆ ಗಲಾಟೆಗಳು ನಡೆಯುತ್ತಿದ್ದವು. ಜತೆಗೆ, ಮಹಿಳೆಗೆ ಅಶ್ಲೀಲ ವಿಡಿಯೋ ತೋರಿಸಿ ತನ್ನ ಸ್ನೇಹಿತನ ಜತೆಗೆ ರಾತ್ರಿ ಕಳೆಯುವಂತೆ ಪತ್ನಿಯನ್ನು ಪೀಡಿಸುತ್ತಿದ್ದನು. ಇದಕ್ಕೆ ಮಹಿಳೆ ಒಪ್ಪದಿದ್ದಾಗ ಆಕೆಗೆ ಕಿರುಕುಳ ನೀಡುತ್ತಿದ್ದನು. ಚಿತ್ರಹಿಂಸೆ ನೀಡಿ ಹಲ್ಲೆ ಮಾಡಿದ್ದಾನೆ ಎಂದು ಪತಿ ವಿರುದ್ಧ ಪತ್ನಿ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈರುಳ್ಳಿ, ಟೊಮೆಟೊ ಬಳಿಕ ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ
ಸದ್ಯ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ಪೂರ್ಣಚಂದ್ರ ಹಾಗೂ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಾಗಿದೆ.