ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಬಿಹಾರ ಮೂಲದ ಮಹಿಳೆ ಹಾಗೂ ಆಕೆಯ ಪತಿ ಆಟೋ ಚಾಲಕರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.
ಇತ್ತೀಚೆಗೆ ಬೆಳ್ಳಂದೂರಿನಲ್ಲಿ ಆಟೋ ತಮ್ಮ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ದೂರಿ ಆಟೋ ಚಾಲಕನ ಬಳಿ ಮಹಿಳೆ ಗಲಾಟೆ ಮಾಡಿದ್ದರು. ಬಳಿಕ ಚಪ್ಪಲಿಯಿಂದ ಥಳಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನು ಓದಿದ್ದೀರಾ? ಮೈಸೂರು | ಚಪ್ಪಲಿಯಿಂದ ಹೊಡೆದುಕೊಂಡ ಪಿಡಿಒ
ಈ ಸಂಬಂಧ ಆಟೋ ಚಾಲಕ ಲೋಕೇಶ್ ಅವರು ನೀಡಿದ ದೂರಿನ ಆಧಾರದಲ್ಲಿ ಆರೋಪಿತ ಮಹಿಳೆ ಫಂಕೂರಿ ಮಿಶ್ರಾ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಮಹಿಳೆಗೆ ನೋಟಿಸ್ ನೀಡಿದ್ದ ಪೊಲೀಸರು ಭಾನುವಾರ ಠಾಣೆಗೆ ಬಂದ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಬಳಿಕ ಜಾಮೀನು ಲಭಿಸಿದೆ.
ಇದಾದ ಬೆನ್ನಲ್ಲೇ ಆಟೋ ಚಾಲಕರ ಬಳಿ ಕ್ಷಮೆಯಾಚಿಸಿದ ದಂಪತಿ, “ಎಲ್ಲಾ ಕನ್ನಡಿಗರು ನಮ್ಮನ್ನು ಕ್ಷಮಿಸಿ. ನಾವು ಬೆಂಗಳೂರನ್ನು ಪ್ರೀತಿಸುತ್ತೇವೆ. ಆಟೋ ಚಾಲಕರ ಬಗ್ಗೆ ಗೌರವವಿದೆ” ಎಂದಿದ್ದಾರೆ.
ಕನ್ನಡಗನ ಸಾರ್ವಜನಿಕವಾಗಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ದುರಹಂಕಾರಿ ಕೈಮುಗಿದು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾಳೆ..!✊💛❤️
— ಚೇತನ್ ಸೂರ್ಯ ಎಸ್ – Chethan Surya S (@Chethan_Surya_S) June 1, 2025
ಈಕೆಯ ಮೇಲೆ ಈಗಾಗಲೇ FIR ಆಗಿದ್ದು ಕಾನೂನು ಪ್ರಕ್ರಿಯೆ ಎದುರಿಸಲೇ ಬೇಕಾಗುತ್ತೆ.
ಈಕೆ ಈಗ ಹೇಳುವ ಪ್ರಕಾರ ಈಕೆ ಗರ್ಭಿಣಿ ಅನ್ನೋ ಕಾರಣಕ್ಕೆ ನಾವು ಕ್ಷಮಿಸಿ ಬಿಟ್ಟರೂ ಮಾಡಿದ ಕರ್ಮ ಕಾನೂನು ಸುಮ್ನೆ ಬಿಡುತ್ತ? pic.twitter.com/O93bnomghd
“ಬೇಕು ಬೇಕೆಂದು ಈ ರೀತಿ ಮಾಡಿಲ್ಲ. ನಾನು ಗರ್ಭಿಣಿ. ಗರ್ಭಪಾತ ಆಗುವ ಭಯದಲ್ಲಿ ಹೀಗೆ ಮಾತನಾಡಿದೆ. ಸಿಟ್ಟಲ್ಲಿ ಈ ರೀತಿ ಮಾಡಿದೆ. ಬೆಂಗಳೂರು, ಬೆಂಗಳೂರು ಸಂಸ್ಕೃತಿಯನ್ನು ತುಂಬಾ ಗೌರವಿಸುತ್ತೇವೆ ಹಾಗೂ ಪ್ರೀತಿಸುತ್ತೇವೆ” ಎಂದು ಮಹಿಳೆ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
