ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
45 ವರ್ಷದ ರಾಮಕೃಷ್ಣ ಎಂಬುವವರು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.
ರಾಮಕೃಷ್ಣ ಅವರಿಗೆ ತುಮಕೂರಿನ ಮಧುಗಿರಿ ನಿವಾಸಿ ರಮೇಶ್ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧಯಿದೆ ಎಂದು ಶಂಕಿಸಿ ಈ ಕೊಲೆಯನ್ನು ಮಾಡಲಾಗಿದೆ.

ಇದನ್ನು ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಆನೇಕಲ್ ಪುರಸಭಾ ಸದಸ್ಯನ ಬರ್ಬರ ಹತ್ಯೆ
ರಾಮಕೃಷ್ಣ ವಿಮಾನ ನಿಲ್ದಾಣದಲ್ಲಿ ಟ್ರಾಲಿ ಎಳೆಯುವ ಕೆಲಸ ಮಾಡುತ್ತಿದ್ದರು. ಬುಧವಾರ ತಡರಾತ್ರಿ ಬಿಎಂಟಿಸಿ ಬಸ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಬಂದ ರಮೇಶ್, ರಾಮಕೃಷ್ಣ ಜೊತೆ ಜಗಳ ಮಾಡಿದ್ದು, ಬಳಿಕ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ರಾಮಕೃಷ್ಣ ಸಾವನ್ನಪ್ಪಿದ್ದಾರೆ.
ಪೊಲೀಸರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿ ರಮೇಶ್‌ನನ್ನು ವಶಕ್ಕೆ ಪಡೆದಿದ್ದಾರೆ.
Murder inside Bengaluru airport!!
— Nabila Jamal (@nabilajamal_) August 28, 2024
Trolley operater Ramakrishna hacked to death by accused Ramesh cuz he suspected he was having an affair with his wife. Ramesh reportedly came all the way from his village looking for Ramakrishna. He found him near the washroom at arrival parking… pic.twitter.com/qXOA3Fdjk5
