ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಸಂವಹನ ಉಸ್ತುವಾರಿ, ಪದಾಧಿಕಾರಿ ಮತ್ತು ಉದ್ಯಮಿ ವಿಜಯ್ ನಾಯರ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಸುಮಾರು 23 ತಿಂಗಳುಗಳಿಂದ ನಾಯರ್ ಜೈಲಿನಲ್ಲಿದ್ದು, ನ್ಯಾಯಾಲಯವು ಈ ದೀರ್ಘಾವಧಿಯ ಸೆರೆವಾಸ ಮತ್ತು ವಿಚಾರಣೆಯನ್ನು ಪ್ರಸ್ತಾಪಿಸಿದೆ.
ಆರ್ಟಿಕಲ್ 21 ರ ಅಡಿಯಲ್ಲಿ ಸ್ವಾತಂತ್ರ್ಯದ ಹಕ್ಕು ಒಂದು ಪವಿತ್ರ ಹಕ್ಕಾಗಿದ್ದು, ವಿಶೇಷ ಕಾನೂನುಗಳ ಅಡಿಯಲ್ಲಿ ಕಟ್ಟುನಿಟ್ಟಾದ ನಿಬಂಧನೆಗಳನ್ನು ಜಾರಿಗೊಳಿಸುವ ಸಂದರ್ಭಗಳಲ್ಲಿಯೂ ಸಹ ಅದನ್ನು ಗೌರವಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಇದನ್ನು ಓದಿದ್ದೀರಾ? ಅಬಕಾರಿ ನೀತಿ ಪ್ರಕರಣ | ಬಿಆರ್‌ಎಸ್ ನಾಯಕಿ ಕವಿತಾಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್
‘ಜಾಮೀನು ನಿಯಮ ಮತ್ತು ಜೈಲು ವಿನಾಯಿತಿ’ ಎಂಬ ತತ್ವವನ್ನು ಪುನರುಚ್ಚರಿಸಿದ ನ್ಯಾಯಾಲಯವು ವಿಚಾರಣೆ ಪ್ರಾರಂಭವಾಗದೆ ನಾಯರ್ ಅವರನ್ನು ವಿಚಾರಣಾಧೀನ ಕೈದಿಯಾಗಿ ಇರಿಸಿಕೊಳ್ಳುವುದು ಸಮರ್ಥಿಸಲಾಗದ ಕಾರ್ಯ ಎಂದು ಒತ್ತಿ ಹೇಳಿದೆ.
ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಬಿಆರ್‌ಎಸ್ ನಾಯಕಿ ಕೆ ಕವಿತಾ ಸೇರಿದಂತೆ ಪ್ರಕರಣದ ಇತರ ಪ್ರಮುಖ ಆರೋಪಿಗಳಿಗೆ ಈಗಾಗಲೇ ಜಾಮೀನು ಲಭಿಸಿದೆ. ಆದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇನ್ನೂ ಬಂಧಿತರಾಗಿದ್ದಾರೆ.
Supreme Court grants bail to AAP's Vijay Nair in Delhi excise policy case#SupremeCourtOfIndia #AamAadmiParty @AamAadmiParty
— Bar and Bench (@barandbench) September 2, 2024
Read story here: https://t.co/G3yYlOMjFQ pic.twitter.com/vFP1OcNMqq
