ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್‌ನ ಪ್ಯಾರಾ-ಅಥ್ಲೆಟಿಕ್ಸ್ ಪುರುಷರ ಡಿಸ್ಕಸ್ ಎಫ್ 56 ಫೈನಲ್‌ನಲ್ಲಿ ಭಾರತಕ್ಕೆ ಯೋಗೇಶ್ ಕಥುನಿಯಾ ಬೆಳ್ಳಿ ಪದಕ ಗೆದ್ದಿದ್ದಾರೆ.
27 ವರ್ಷ ವಯಸ್ಸಿನ ಯೋಗೇಶ್ 42.22 ಮೀಟರ್ ಎಸೆತದೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಇದು ಈ ಸೀಸನ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಇದನ್ನು ಓದಿದ್ದೀರಾ? ಪ್ಯಾರಾಲಿಂಪಿಕ್ಸ್ | ಹೈಜಂಪ್; ಭಾರತಕ್ಕೆ ಬೆಳ್ಳಿ ಗೆದ್ದುಕೊಟ್ಟ ನಿಶಾದ್ ಕುಮಾರ್
ಬ್ರೆಜಿಲ್‌ನ ಕ್ಲೌಡಿನಿ ಬಟಿಸ್ಟಾ 46.86 ಮೀ ಎಸೆತದೊಂದಿಗೆ ಚಿನ್ನವನ್ನು ಗೆದಿದ್ದಾರೆ.
ಭಾರತಕ್ಕೆ ಎಂಟು ಪದಕ
2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು ಎಂಟು ಪದಕಗಳನ್ನು ಪಡೆದುಕೊಂಡಿದೆ. ಒಂದು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚು ಭಾರತದ ಪಾಲಾಗಿದೆ.
ಆಗಸ್ಟ್ 30 ರಂದು (ಶುಕ್ರವಾರ), ಹಾಲಿ ಪ್ಯಾರಾಲಿಂಪಿಕ್ ಚಾಂಪಿಯನ್ ಅವನಿ ಲೆಖರಾ ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್‌ನಲ್ಲಿ ಚಿನ್ನ ಗೆದ್ದರು. ಇದೇ ಸ್ಪರ್ಧೆಯಲ್ಲಿ ಶೂಟರ್ ಮೋನಾ ಅಗರ್ವಾಲ್ ಕಂಚಿನ ಪದಕವನ್ನು ಪಡೆದರು.
ಆಗಸ್ಟ್ 30 ರಂದು ನಡೆದ ಪುರುಷರ ಪಿ1 10 ಮೀ ಏರ್ ಪಿಸ್ತೂಲ್ ಎಸ್‌ಎಚ್ 1 ಸ್ಪರ್ಧೆಯಲ್ಲಿ ಮನೀಷ್ ನರ್ವಾಲ್ ಎರಡನೇ ಸ್ಥಾನ ಪಡೆದು ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟರು.
100ಮೀ ಮತ್ತು 200ಮೀ ಟಿ35 ವಿಭಾಗಗಳಲ್ಲಿ ಪ್ರೀತಿ ಪಾಲ್ ಎರಡು ಕಂಚಿನ ಪದಕಗಳನ್ನು ಗೆದಿದ್ದಾರೆ. ಆಗಸ್ಟ್ 31ರಂದು, ರುಬಿನಾ ಫ್ರಾನ್ಸಿಸ್ ಪಿ2 ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಎಸ್‌ಎಚ್-1 ಫೈನಲ್‌ನಲ್ಲಿ ಕಂಚಿನ ಪದಕವನ್ನು ಗೆದ್ದರು.
ಸೆಪ್ಟೆಂಬರ್ 2ರಂದು ನಡೆದ ಪುರುಷರ ಹೈಜಂಪ್ – ಟಿ47 ವಿಭಾಗದ ಫೈನಲ್‌ನಲ್ಲಿ ಟೀಮ್ ಇಂಡಿಯಾ ಅಥ್ಲೀಟ್ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದಿದ್ದಾರೆ. ಅದಾದ ಬಳಿಕ ಯೋಗೇಶ್ ಕಥುನಿಯಾ ಬೆಳ್ಳಿ ಗೆದ್ದಿದ್ದು, ಭಾರತಕ್ಕೆ ಒಟ್ಟು 8 ಪದಕ ಲಭಿಸಿದೆ.
What a Champion's Moment!
— Dr Mansukh Mandaviya (@mansukhmandviya) September 2, 2024
With sheer grit and determination @YogeshKathuniya , has cliched a Silver medal in the Men's Discus Throw F56 at the Paralympics 2024!
From overcoming challenges to standing tall on the global stage, his achievement is not just a win for him but an… pic.twitter.com/dAO2Pmr8P0
