ಬ್ರೇಕಿಂಗ್ ನ್ಯೂಸ್

ನಟಿ ರಾಣಿ ಮುಖರ್ಜಿ, ನಟರಾದ ಶಾರುಖ್ ಖಾನ್, ವಿಕ್ರಾಂತ್ ಮ್ಯಾಸ್ಸೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಶುಕ್ರವಾರ ಘೋಷಣೆಯಾಗಿದ್ದು, ಬಾಲಿವುಡ್ ನಟ ಶಾರುಖ್ ಖಾನ್, ವಿಕ್ರಾಂತ್ ಮ್ಯಾಸ್ಸೆ ಅವರಿಗೆ ಜಂಟಿ ಅತ್ಯುತ್ತಮ ನಟ ಮತ್ತು ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ...

71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟ: ಕನ್ನಡದ ‘ಸನ್‌ಫ್ಲವರ್ಸ್ ವರ್‌ ದಿ ಫಸ್ಟ್ ಒನ್ ಟು ನೋ’ ಕಿರುಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ

71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟಿಸಲಾಗಿದ್ದು, ಚಿದಾನಂದ್‌ ಎಸ್‌ ನಾಯಕ್‌ ನಿರ್ದೇಶನದ ಕನ್ನಡದ 'ಸನ್‌ಫ್ಲವರ್ಸ್ ವರ್‌ ದಿ ಫಸ್ಟ್ ಒನ್ ಟು ನೋ' ಕಿರುಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ನೀಡಲಾಗಿದೆ. ನವದೆಹಲಿಯ ರಾಷ್ಟ್ರೀಯ ಮಾಧ್ಯಮ...

IND – ENG 5TH TEST | ಆಂಗ್ಲರ ಬೌಲಿಂಗ್‌ ದಾಳಿಗೆ ಟೀಂ ಇಂಡಿಯಾ 224 ರನ್‌ಗಳಿಗೆ ಆಲೌಟ್

ಲಂಡನ್‌ನ ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನದ ಮೊದಲ ಸೆಷನ್‌ನಲ್ಲಿ ಭಾರತದ ಮೊದಲ ಇನಿಂಗ್ಸ್‌ನಲ್ಲಿ 224 ರನ್‌ಗಳಿಗೆ ಆಲೌಟ್ ಆಗಿದೆ. ಇಂಗ್ಲೆಂಡ್‌ನ ಬಿಗುವಿನ ಬೌಲಿಂಗ್ ಮತ್ತು...

BREAKING NEWS | ಮಹಿಳೆ ಮೇಲೆ ಅತ್ಯಾಚಾರ: ಪ್ರಜ್ವಲ್ ರೇವಣ್ಣ ದೋಷಿ, ಶಿಕ್ಷೆ ನಾಳೆ ಪ್ರಕಟ

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿನ ಫಾರ್ಮ್‌ಹೌಸ್‌ ಮತ್ತು ಬೆಂಗಳೂರಿನ ನಿವಾಸದಲ್ಲಿ ಮನೆಗೆಲಸದ ಮಹಿಳೆಯ ಮೇಲೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಎಸಗಿದ ಪ್ರಕರಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಪ್ರಕಟಿಸಿದೆ. ಪ್ರಜ್ವಲ್‌...

BREAKING NEWS | ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ, ಆ.7ರಿಂದ ನಾಮಪತ್ರ ಸಲ್ಲಿಕೆ

ದೇಶದ ಮುಂದಿನ ಉಪ ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆಯು ಸೆಪ್ಟೆಂಬರ್ 9ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಆಗಸ್ಟ್ 1 ರಂದು ತಿಳಿಸಿದೆ. ಆಗಸ್ಟ್ 7ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು 21ರವರೆಗೆ ಅವಕಾಶವಿದೆ ಎಂದು ಚುನಾವಣಾ...

ಡಾ. ರಾಜ್‌ಕುಮಾರ್ ಸಹೋದರಿ ನಾಗಮ್ಮ ನಿಧನ

ವರನಟ ಡಾ. ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡಿನ ಗಾಜನೂರಿನ ಮನೆಯಲ್ಲೇ ನಾಗಮ್ಮ ಅವರು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ...

ಧರ್ಮಸ್ಥಳ ಪ್ರಕರಣ | ಮೂಳೆಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಸೀಲು ಮಾಡಿ ಕೊಂಡೊಯ್ದ ಎಸ್‌ಐಟಿ

ಧರ್ಮಸ್ಥಳದಲ್ಲಿ ಅನಧಿಕೃತ ಶವ ಹೂತ ಪ್ರಕರಣದಲ್ಲಿ 3ನೇ ದಿನದ ಕಳೇಬರ ಪತ್ತೆ ಕಾರ್ಯದಲ್ಲಿ, ದೂರುದಾರ ಹೇಳಿದ 6ನೇ ಪಾಯಿಂಟ್‌ನಲ್ಲಿ ಭೂಮಿ ಅಗೆದಾಗ ಅಸ್ಥಿಪಂಜರದ ಕುರುಹು ಸಿಕ್ಕಿರುವುದು ದೃಢವಾಗಿದೆ. ಸ್ಪಾಟ್ 6ರಲ್ಲಿ ಸಿಕ್ಕ ಮೂಳೆಗಳನ್ನು ಎಸ್‌ಐಟಿ...

IND – ENG 5TH TEST | ಟಾಸ್‌ ಗೆದ್ದ ಇಂಗ್ಲೆಂಡ್‌; ಟೀಮ್ ಇಂಡಿಯಾದಲ್ಲಿ ಹಲವು ಬದಲಾವಣೆ

ಓವಲ್‌ನಲ್ಲಿ ನಡೆಯುತ್ತಿರುವ ತೆಂಡೂಲ್ಕರ್ - ಆಂಡರ್‌ಸನ್‌ ಟ್ರೋಫಿಯ ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಬೌಲಿಂಗ್‌ ಆಯ್ದುಕೊಂಡಿದ್ದು, ಟೀಂ ಇಂಡಿಯಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಕೊನೆಯ...

BREAKING NEWS | ಧರ್ಮಸ್ಥಳ ಪ್ರಕರಣ: ಪಾಯಿಂಟ್ ನಂ 6ರಲ್ಲಿ ಮೂಳೆ ಪತ್ತೆ

ಧರ್ಮಸ್ಥಳದ ನೇತ್ರಾವತಿ ನದಿ ಪರಿಸರದಲ್ಲಿ ಅಕ್ರಮವಾಗಿ ಮಾನವ ದೇಹಗಳನ್ನು ಹೂಳಲಾಗಿದೆ ಎಂಬ ದೂರು ಆಧರಿಸಿ ತನಿಖೆ ಶುರು ಮಾಡಿರುವ ಎಸ್‌ಐಟಿ, ಎರಡು ದಿನಗಳಿಂದ ಗುರುತು ಮಾಡಿದ ಜಾಗಗಳಲ್ಲಿ ಮಣ್ಣು ಅಗೆದು ಅಸ್ತಿಪಂಜರಕ್ಕಾಗಿ ಹುಡುಕಾಟ...

ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಸಿಂಗ್ ಠಾಕೂರ್, ಕರ್ನಲ್ ಪುರೋಹಿತ್ ಸೇರಿ ಎಲ್ಲ ಆರೋಪಿಗಳು ಖುಲಾಸೆ

2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎಲ್ಲ 7 ಆರೋಪಿಗಳನ್ನು ಎನ್ಐಎ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ 17 ವರ್ಷಗಳ ನಂತರ ಮುಂಬೈನ ವಿಶೇಷ ಎನ್ಐಎ ನ್ಯಾಯಾಲಯವು...

ಕೆಆರ್‌ಡಿಐಎಲ್‌ ಹೊರಗುತ್ತಿಗೆ ಮಾಜಿ ನೌಕರನ ಮನೆ ಮೇಲೆ ಲೋಕಾಯುಕ್ತ ದಾಳಿ; ಅಪಾರ ಆಸ್ತಿ ಪತ್ತೆ

ಕೊಪ್ಪಳದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದ ಮಾಜಿ ಹೊರಗುತ್ತಿಗೆ ನೌಕರ ಕಳಕಪ್ಪ ಅವರ ನಗರದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇಲ್ಲಿನ ಪ್ರಗತಿ...

ಧರ್ಮಸ್ಥಳ ಪ್ರಕರಣ | ಅಸ್ಥಿಪಂಜರ ಪತ್ತೆಗಾಗಿ ನಾಲ್ಕನೇ ಜಾಗದಲ್ಲಿ ಮುಂದುವರೆದ ಕಾರ್ಯಾಚರಣೆ

ಹಲವು ಮೃತದೇಹ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಇಂದು(ಜುಲೈ 30) ಮೂರನೇ ಸ್ಥಳವನ್ನು ಅಗೆಯಲಾಗಿದೆ. ಆದರೆ ಯಾವುದೇ ಅಸ್ಥಿಪಂಜರ ದೊರಕಿಲ್ಲ. ನೇತ್ರಾವತಿ ಸ್ನಾನಗುಡ್ಡದ ಪಕ್ಕದ ಬಂಗ್ಲೆ ಗುಡ್ಡದಲ್ಲಿನ ಕಾಡಿನೊಳಗೆ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X