ಶಿಕ್ಷಣ

ಪರೀಕ್ಷೆ | ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ ‘ಡಿ’ ಗ್ರೂಪ್‌ ನೌಕರ; ಪ್ರಾಂಶುಪಾಲ ಅಮಾನತು

ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದ ಉತ್ತರ ಪತ್ರಿಕೆಗಳನ್ನು 'ಡಿ' ಗ್ರೂಪ್‌ ನೌಕರನಿಂದ ಮೌಲ್ಯಮಾಪನ ಮಾಡಿದ್ದಾರೆ ಎಂಬ ಆರೋಪ ಮಧ್ಯಪ್ರದೇಶದ ಸರಕಾರಿ ಕಾಲೇಜೊಂದರಲ್ಲಿ ಕೇಳಿಬಂದಿದೆ. 'ಡಿ' ಗ್ರೂಪ್‌ ಮೌಲ್ಯಮಾಪನ ಮಾಡುತ್ತಿರುವ ಘಟನೆಯ ವಿಡಿಯೋ ವೈರಲ್ ಆಗಿದ್ದು,...

ಚಿತ್ರದುರ್ಗ | ಪಿಯುಸಿಯಲ್ಲಿ ಅನುತ್ತೀರ್ಣ, ದಾವಣಗೆರೆ ಖಾಸಗಿ ಕಾಲೇಜು ವಿಧ್ಯಾರ್ಥಿನಿ ಆತ್ಮಹತ್ಯೆ.‌

ಮಂಗಳವಾರ ರಾಜ್ಯಾದ್ಯಂತ ಪದವಿಪೂರ್ವ ಶಿಕ್ಷಣದ (ಪಿಯುಸಿ) ಫಲಿತಾಂಶ ಪ್ರಕಟವಾಗಿದ್ದು, ವಿಧ್ಯಾರ್ಥಿಗಳು ಫಲಿತಾಂಶದ ಸಂಭ್ರಮದಲ್ಲಿದ್ದರೆ, ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿದ್ದಕ್ಕೆ ಬೇಸತ್ತು ದಾವಣಗೆರೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕು...

ಆಘಾತಕಾರಿ ಸಂಗತಿ | ದ್ವಿತೀಯ ಪಿಯುಸಿಯಲ್ಲಿ ಫೇಲ್‌; ಐವರು ವಿದ್ಯಾರ್ಥಿಗಳು ಆತ್ಮಹತ್ಯೆ

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ರಾಜ್ಯದಲ್ಲಿ ಒಟ್ಟು 73.45% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಮತ್ತು ಫಲಿತಾಂಶದಿಂದ ತೃಪ್ತಿ ಇಲ್ಲದವರು ಇನ್ನೂ ಎರಡು ಬಾರಿ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ...

ಇಂದು ಪಿಯುಸಿ ಫಲಿತಾಂಶ: ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು (ಏಪ್ರಿಲ್ 8ರ ಮಂಗಳವಾರ) ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. ಪರೀಕ್ಷೆಯ ಫಲಿತಾಂಶವು ಇಂದು ಮಧ್ಯಾಹ್ನ ಪ್ರಕಟವಾಗಲಿದೆ. ಮಧ್ಯಾಹ್ನ 12:30ಕ್ಕೆ...

ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗರಿಗೆದರಿದೆ ಖಾಸಗಿ ಶಾಲೆ ಶುಲ್ಕ ಮಾಫಿಯಾ?; ಸಿಬಿಐ ತನಿಖೆಗೆ ಆಗ್ರಹ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಖಾಸಗಿ, ಅನುದಾನರಹಿತ ಶಾಲೆಗಳು ವಿದ್ಯಾರ್ಥಿಗಳ ದಾಖಲಾತಿ ಶುಲ್ಕವನ್ನು ಹೆಗ್ಗಿಲ್ಲದೆ ಏರಿಕೆ ಮಾಡುತ್ತಿವೆ. ದೆಹಲಿಯ ‘ಮದರ್ ಡಿವೈನ್’ ಖಾಸಗಿ ಶಾಲೆ ಶುಲ್ಕವನ್ನು ಬಹುತೇಕ ದ್ವಿಗುಣಗೊಳಿಸಲಾಗಿದೆ. ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ...

ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಿಗೆ 123 ದಿನ ರಜೆ

2025-26ನೇ ಸಾಲಿನ ಶೈಕ್ಷಣಿಕ ವರ್ಷವು ಮೇ 29ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿನ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳ ಕುರಿತು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ....

ದಾವಣಗೆರೆ | ಕಲ್ಯಾಣ ಕರ್ನಾಟಕ ಸೇರಿ 16 ಸಾವಿರ ಶಿಕ್ಷಕರ ನೇಮಕಕ್ಕೆ ಹಣಕಾಸು ಇಲಾಖೆ ಒಪ್ಪಿಗೆ

"ಕಲ್ಯಾಣ ಕರ್ನಾಟಕಕ್ಕೆ 5.5 ಸಾವಿರ ಶಿಕ್ಷಕರು, 2020ನೇ ಸಾಲಿನವರೆಗೆ ಅನುದಾನಿತ ಶಾಲೆಗಳಿಗೆ 6ಸಾವಿರ ಶಿಕ್ಷಕರು,  ಇನ್ನುಳಿದ ಭಾಗಕ್ಕೆ 5.5 ಸಾವಿರ ಶಿಕ್ಷಕರನ್ನು ಭರ್ತಿ ಮಾಡಲು ಈಗಾಗಲೇ ಹಣಕಾಸು ಇಲಾಖೆಯಿಂದ ಒಪ್ಪಿಗೆ ಸಿಕ್ಕಿದ್ದು ಸದ್ಯದಲ್ಲಿಯೇ...

ಪರೀಕ್ಷೆ ಬರೆಯಲಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಿವಿಮಾತು

ಇಂದಿನಿಂದ (ಮಾರ್ಚ್‌ 21) ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಆರಂಭಗೊಳ್ಳುತ್ತಿವೆ. ಇದು ನಿಮ್ಮ ಬದುಕಿನ ಮೊದಲ ಅಥವಾ ಕೊನೆಯ ಪರೀಕ್ಷೆಯಲ್ಲ. ನರ್ಸರಿ/ಅಂಗನವಾಡಿಯಿಂದ ಆರಂಭಗೊಂಡು ಇಲ್ಲಿಯ ತನಕ ಸುಮಾರು 12 ವರ್ಷಗಳ ಕಾಲ ಅನೇಕ ಪರೀಕ್ಷೆಗಳನ್ನು...

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್‌ 21ರಿಂದ ಆರಂಭ; ಈ ನಿಯಮಗಳ ಬಗ್ಗೆ ಎಚ್ಚರಿಕೆ ಇರಲಿ!

ರಾಜ್ಯದಲ್ಲಿ ಮಾರ್ಚ್‌ 21ರಿಂದ (ಶುಕ್ರವಾರ) ಎಸ್‌ಎಸ್‌ಎಸ್‌ ಪರೀಕ್ಷೆಗಳು ಆರಂಭವಾಗಲಿವೆ. ಸುಮಾರು 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗುವುದಕ್ಕೂ ಮುನ್ನ ಮತ್ತು ಪರೀಕ್ಷಾ ಕೊಠಡಿಯಲ್ಲಿ ಪಾಲಿಸಬೇಕಾದ ಕೆಲವು...

20,375 ಸರ್ಕಾರಿ ಶಾಲೆಗಳಲ್ಲಿ 35ಕ್ಕೂ ಕಡಿಮೆ ಮಕ್ಕಳು: ಅರವಿಂದ ಬೆಲ್ಲದ್

ಕರ್ನಾಟಕದಲ್ಲಿ ಒಟ್ಟು 57,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ಅವುಗಳಲ್ಲಿ 20,375 ಶಾಲೆಗಳಲ್ಲಿ 35ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಗಮನ ಸೆಳೆದಿದ್ದಾರೆ. ರಾಜ್ಯ ಬಜೆಟ್‌ ಅಧಿವೇಶನದಲ್ಲಿ ಅವರು...

ಈ ಶಾಲೆ ಮಕ್ಕಳಿಗೆ ಗಣಿತ ಅಂದ್ರೆ ಬಲು ಇಷ್ಟ! ಯಾಕೆ ಗೊತ್ತಾ?

ಕಳೆದ 15 ವರ್ಷಗಳಿಂದ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ರಶ್ಮಿ ಎಲ್ ಈ ‘ಗಣಿತ ಲೋಕ’ ರೂಪಿಸಿದವರು. ಆ ಮೂಲಕ ಮಕ್ಕಳು ಗಣಿತವನ್ನೂ ಪ್ರೀತಿಯಿಂದ ಕಲಿಯುವ ಅಗಣಿತ ಸಾಧ್ಯತೆಗಳನ್ನು ಅವರು ತೆರೆದಿಟ್ಟಿದ್ದಾರೆ.

ಗುಡ್‌ ಫ್ರೈಡೆ | ಏಪ್ರಿಲ್ 18ಕ್ಕೆ ನಿಗದಿಯಾಗಿದ್ದ ‘ಸಿಇಟಿ’ ವೇಳಾಪಟ್ಟಿ ಬದಲಾವಣೆ

ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ನಡೆಸಲಾಗುವ 'ಸಾಮಾನ್ಯ ಪ್ರವೇಶ ಪರೀಕ್ಷೆ'ಯ (ಸಿಇಟಿ) ಕನ್ನಡ ಭಾಷಾ ಪರೀಕ್ಷೆಯನ್ನು ಏಪ್ರಿಲ್ 18ಕ್ಕೆ ನಿಗದಿ ಮಾಡಲಾಗಿತ್ತು. ಅಂದು ಗುಡ್ ಫ್ರೈಡೆ ಆಗಿರುವ ಹಿನ್ನೆಲೆಯಲ್ಲಿ ಪರೀಕ್ಷೆಯ ದಿನಾಂಕವನ್ನು ಬದಲಿಸಲಾಗಿದೆ....

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X