ಪರೀಕ್ಷೆ ಬರೆಯಲಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಿವಿಮಾತು

Date:

ಇಂದಿನಿಂದ (ಮಾರ್ಚ್‌ 21) ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಆರಂಭಗೊಳ್ಳುತ್ತಿವೆ. ಇದು ನಿಮ್ಮ ಬದುಕಿನ ಮೊದಲ ಅಥವಾ ಕೊನೆಯ ಪರೀಕ್ಷೆಯಲ್ಲ. ನರ್ಸರಿ/ಅಂಗನವಾಡಿಯಿಂದ ಆರಂಭಗೊಂಡು ಇಲ್ಲಿಯ ತನಕ ಸುಮಾರು 12 ವರ್ಷಗಳ ಕಾಲ ಅನೇಕ ಪರೀಕ್ಷೆಗಳನ್ನು ಎದುರಿಸಿ, ತೇರ್ಗಡೆಗೊಂಡು ಈ ಹಂತಕ್ಕೆ ತಲಪಿದ್ದೀರಿ.

- Advertisement -

ತಿಳಿದಿರಲಿ, ಶಾಲಾ ಕಾಲೇಜುಗಳ ಪರೀಕ್ಷೆಗಳಲ್ಲಿ ಪಾಸಾಗುವುದಕ್ಕಿಂತ ಬದುಕಿನ ಪರೀಕ್ಷೆಯಲ್ಲಿ ಪಾಸಾಗುವುದು ಬಹಳ ಮುಖ್ಯ. ಭಯಪಡಬೇಡಿ. ಒತ್ತಡಗಳಿಗೆ ಒಳಗಾಗಬೇಡಿ. ನಿಮಗೆ ತಿಳಿದಿರುವ, ಗೊತ್ತಿರುವ, ಓದಿರುವ ವಿಷಯಗಳನ್ನು ಚೆನ್ನಾಗಿ ಬರೆಯಿರಿ. ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದೆಹಲಿಯ ಬಂಧನಗಳು ಮತ್ತು ಮಹಾತ್ಮ ಗಾಂಧಿ

ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು ಹೊಸ ನಿಯಂತ್ರಣ ವ್ಯವಸ್ಥೆಯಾಗಿ ನಿಲ್ಲುತ್ತಿವೆ ಎಂದೆನಿಸುತ್ತದೆ. ಜನರಿಗೆ ಮತದಾನದ ಹಕ್ಕನ್ನು ಮತ್ತೆ ದೊರಕಿಸಿಕೊಡುವುದಕ್ಕೂ ಇಂತಹ ಹೋರಾಟಗಳತ್ತ ಮುಖ ಮಾಡಬೇಕಾಗಿದೆ. ಸಾರ್ವಜನಿಕರು...

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಪ್ರತಿಯೊಂದು ಪರೀಕ್ಷೆಗೂ ಮುನ್ನಾ ದಿನ ರಾತ್ರಿ ಪ್ರವೇಶ ಪತ್ರ ಒಳಗೊಂಡಂತೆ, ಪರೀಕ್ಷೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಸಿದ್ಧಪಡಿಸಿಟ್ಟುಕೊಂಡು, ಬೇಗ ನಿದ್ದೆ ಮಾಡಿರಿ. ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ತಿಂಡಿ ತಿಂದು, ಒಂದು ಲೀಟರ್ ಶುದ್ದವಾದ ಕುಡಿಯುವ ನೀರನ್ನು ತೆಗೆದುಕೊಂಡು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ನಿಮ್ಕ ಪರೀಕ್ಷಾ ಕೇಂದ್ರ ತಲಪಿರಿ.

ಪರೀಕ್ಷೆ ಬರೆಯುವಾಗ ಸಮಯ ಪಾಲನೆ ಮಾಡುವುದು ಮುಖ್ಯ ಎಂಬುದು ತಮಗೆ ಗೊತ್ತು. ಪ್ರಶ್ನೆ ಪತ್ರಿಕೆ ಕೈಸೇರಿದಾಗ ಎಲ್ಲ ಪ್ರಶ್ನೆಗಳನ್ನು ಒಮ್ಮೆ ಓದಿರಿ. ಮೊದಲಿಗೆ ತಮಗೆ ಗೊತ್ತಿರುವ, ಸುಲಭದ ಪ್ರಶ್ನೆಗಳಿಗೆ ಉತ್ತರ ಬರೆಯಲು ಆರಂಭಿಸಿರಿ. ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರ ನೆನಪಿಸಿಕೊಳ್ಳುತ್ತಾ ಕಾಲ ಹರಣ ಮಾಡಬೇಡಿ. ಗೊಂದಲಗಳಿರುವ ಅಥವಾ ಕಠಿಣ ಎನಿಸುವ ಪ್ರಶ್ನೆಗಳಿಗೆ ನಂತರ ಉತ್ತರ ಬರೆಯಿರಿ.

ಪ್ರತಿಯೊಂದು ಪರೀಕ್ಷೆ ಮುಗಿದು, ಪರೀಕ್ಷಾ ಕೇಂದ್ರದಿಂದ ಹೊರಗಡೆ ಬಂದ ನಂತರ, ಬರೆದಿರುವ ಉತ್ತರಗಳ ಸರಿ/ತಪ್ಪುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಮುಂದಿನ ಪರೀಕ್ಷೆಗೆ ಓದಿ, ತಯಾರಿ ನಡೆಸುತ್ತಿರಿ. ಬದುಕಿನಲ್ಲಿ ಸೋಲು, ಗೆಲುವು ಇದ್ದಿದ್ದೇ. ಎಲ್ಲ ರೀತಿಯ ಸವಾಲುಗಳನ್ನು ಎದುರಿಸುವ ಎದೆಗಾರಿಕೆ ನಿಮಗಿರಲಿ.

ಎಲ್ಲ ಪರೀಕ್ಷೆಗಳು ನಿಮಗೆ ಸುಲಭವಾಗಲಿ. ಗೆದ್ದು ಬನ್ನಿ, ಆಲ್‌ ದಿ ಬೆಸ್ಟ್.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉರ್ದು, ಮರಾಠಿ ಶಿಕ್ಷಕರ ಪೂರ್ಣ ನೇಮಕಾತಿಗೆ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ ಆಗ್ರಹ

ಉರ್ದು ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಮಾಧ್ಯಮದ ಅಭ್ಯರ್ಥಿಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ನೀಡಿದ್ದ...

ಸ್ವಂತ ಸೂರಿಗಾಗಿ ಕಾಯುತ್ತಿರುವ ಅಂಗನವಾಡಿಗಳು: ಇನ್ನೆಷ್ಟು ದಿನ ಬಾಡಿಗೆ ಕಟ್ಟಡದಲ್ಲಿರಬೇಕು?

ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕಾದ ಅಂಗನವಾಡಿ ಕೇಂದ್ರಗಳೇ ಸ್ವಂತ ಸೂರಿಲ್ಲದೆ...

ಅನುಮೋದನೆ ಇಲ್ಲದೆ 8 ಸ್ನಾತಕೋತ್ತರ ಪದವಿ ಕೋರ್ಸ್‌ ಆರಂಭ: ಜಾನಪದ ವಿವಿಗೆ ಉನ್ನತ ಶಿಕ್ಷಣ ಇಲಾಖೆ ನೋಟಿಸ್‌

ಪ್ರಸ್ತುತ ಬ್ಯಾಚ್‌ಗಳ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸುವುದು, ಪರೀಕ್ಷೆ ಬರೆಯುವುದು ಹಾಗೂ ಪದವಿ...