ಬಳ್ಳಾರಿ 

ಬಳ್ಳಾರಿ | ಬಾಲ್ಯ ವಿವಾಹ ಪ್ರಕರಣ : ಐವರ ಬಂಧನ

ಬಳ್ಳಾರಿ ನಗರದ ಓಣಿಯೊಂದರಲ್ಲಿ ಬಾಲ್ಯ ವಿವಾಹ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರ ಮೇಲೆ ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ. ಬಾಲಕಿಗೆ ವಿವಾಹ ಮಾಡಿಸಿರುವ ಕುರಿತು ಮಕ್ಕಳ ಸಹಾಯವಾಣಿಗೆ...

ಬಳ್ಳಾರಿ | ಶರಣ ಸಂಸ್ಕೃತಿಯಿಂದ ನಾಡು ಸಮೃದ್ಧವಾಗಿದೆ: ಕೆ ವಿ ನಾಗರಾಜ ಮೂರ್ತಿ

ಶರಣರ ವಿಚಾರ, ಶರಣ ಸಂಸ್ಕೃತಿಯಿಂದ ಈ ನಾಡು ಸಮೃದ್ಧವಾಗಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ ವಿ ನಾಗರಾಜ ಮೂರ್ತಿ ಹೇಳಿದರು. ಬಳ್ಳಾರಿ ನಗರದ ಹೀರದ ಸೂಗಮ್ಮ ಶಾಲೆಯ...

ಬಳ್ಳಾರಿ | ಸಂಜೀವನ ಕೋಟೆಯಲ್ಲಿ ಕರಡಿ ದಾಳಿ; ರೈತನಿಗೆ ಮಾರಣಾಂತಿಕ ಗಾಯ

ಬಳ್ಳಾರಿ ತಾಲೂಕಿನ ಸಂಜೀವನ ಕೋಟೆ ಗ್ರಾಮದಲ್ಲಿ ಜಾನುವಾರಿಗಳಿಗೆ ಹುಲ್ಲು ಕೊಯ್ಯಲು ಜಮೀನಿಗೆ ಹೊರಟಿದ್ದ ರೈತನ ಮೇಲೆ ಕರಡಿಗಳು ದಾಳಿ ನಡೆಸಿ ಮಾರಣಾಂತಿಕವಾಗಿ ಗಾಯಗೊಳಿಸಿವೆ. ರಾಜ (55) ಕರಡಿ ದಾಳಿಯಲ್ಲಿ ಗಾಯಗೊಂಡ ವ್ಯಕ್ತಿ. ಮುಂಜಾನೆ ಹೊಲದ...

ಬಳ್ಳಾರಿ | ಬಗರು ಹುಕುಂ ಭೂಮಿ ಅರ್ಜಿಗಳ ಶೀಘ್ರ ವಿಲೇವಾರಿ ಮಾಡಿ: ದಸಂಸ ಆಗ್ರಹ

'ಸರ್ಕಾರಿ ಜಮೀನು, ಗೋಮಾಳ ಸೇರಿದಂತೆ ತಲೆತಲಾಂತರದಿಂದ ಉಳಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಶೀಘ್ರ ಪಟ್ಟ ನೀಡಬೇಕು' ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬಳ್ಳಾರಿ ಜಿಲ್ಲಾ ಸಂಚಾಲಕ ಚಿಕ್ಕ...

ಬಳ್ಳಾರಿ | ಬಂಡಿಹಟ್ಟಿಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ; ಸಾರ್ವಜನಿಕರಿಂದ ತಕರಾರು

ಬಳ್ಳಾರಿ ನಗರದ ಬಂಡಿಹಟ್ಟಿ ಪ್ರದೇಶದ ಸಿದ್ದರಾಮೇಶ್ವರ ಕಾಲೋನಿ, 2ನೇ ಅಡ್ಡರಸ್ತೆ, 29ನೇ ವಾರ್ಡ್‌ ಪ್ರದೇಶದಲ್ಲಿ ಅತ್ಯಂತ ಸುಸಜ್ಜಿತವಾಗಿದ್ದ ಸಿಸಿ ರಸ್ತೆಯನ್ನು ಒಡೆದು ಹಾಕಿ ಅವೈಜ್ಞಾನಿಕವಾಗಿ ತೆರೆದ ಚರಂಡಿಯನ್ನು ನಿರ್ಮಿಸುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಓಡಾಡುವುದು...

ಬಳ್ಳಾರಿ | ಒಣಮೆಣಸಿನಕಾಯಿ ಮಾರಾಟ: ರೈತರು ನೋಂದಾಯಿಸಿಕೊಳ್ಳಲು ಆಹ್ವಾನ

ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿ ಒಣಮೆಣಸಿನಕಾಯಿ ಮಾರಾಟ ಮಾಡಲು ಜಿಲ್ಲೆಯ ರೈತರಿಂದ ನೋಂದಣಿಗೆ ಆಹ್ವಾನಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. 2024-25ನೇ ಸಾಲಿನಲ್ಲಿ ಮಾರುಕಟ್ಟೆ ಮಧ್ಯ...

ಬಳ್ಳಾರಿ | ಡಾ. ಸುಮನ್ ಸೋಮೇಶ್ವರ್ ಗಡ್ಡಿಗೆ ಐಎಂಎ ನ್ಯಾಷನಲ್ ಡಾಕ್ಟರ್ ಅಕಾಡೆಮಿಕ್ ಪ್ರಶಸ್ತಿ

ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಬಳ್ಳಾರಿ ನಗರದ ಹಿರಿಯ ವೈದ್ಯ ಡಾ. ಸುಮನ್ ಸೋಮೇಶ್ವರ್ ಗಡ್ಡಿಯವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ವೈದ್ಯರಿಗೆ ನೀಡುವ ಪ್ರತಿಷ್ಠಿತ ಐಎಂಎ ನ್ಯಾಷನಲ್ ಡಾಕ್ಟರ್ ಅಕಾಡೆಮಿಕ್...

ಬಳ್ಳಾರಿ | ನೂತನ ಸಂಶೋಧನೆಗಳಿಗೆ ಶ್ರಮಿಸುತ್ತಿದೆ ಐಯುಎಸಿ ಕೇಂದ್ರ: ಪ್ರೊ. ಎಂ ಟಿ ಲಗಾರೆ

'ಸುರಕ್ಷತೆ, ಭದ್ರತೆ ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಂಡು ಕೌಶಲ್ಯಗಳನ್ನು ಹೆಚ್ಚಿಸಲು ಅಂತರ್ ವಿಶ್ವವಿದ್ಯಾಲಯ ವೇಗವರ್ಧಕ ಕೇಂದ್ರ(ಐಯುಎಸಿ)ವು ನಿರಂತರವಾಗಿ ವಿನೂತನ ಸಂಶೋಧನಾ ಮಾರ್ಗಗಳಿಗೆ ಶ್ರಮಿಸುತ್ತಿದೆ' ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ...

ಚಿತ್ರದುರ್ಗ | ಜಿಲ್ಲೆಯ ಗಣಿಭಾದಿತ ಪ್ರದೇಶಗಳಿಗೆ ಕೆ ಆರ್ ಎಸ್ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಭೇಟಿ

ಕಬ್ಬಿಣ, ಮ್ಯಾಂಗನೀಸ್ ಅದಿರಿನ ಅಕ್ರಮ ಗಣಿಗಾರಿಕೆಯಿಂದ ಗಣಿಭಾದಿತವಾಗಿರುವ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಹೊಳಲ್ಕೆರೆ ಹಾಗು ಚಿತ್ರದುರ್ಗ ತಾಲೂಕಿನ ಪ್ರದೇಶಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ(ಕೆ ಆರ್ ಎಸ್)ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದ...

ಬಳ್ಳಾರಿ | ಗ್ರಾಮೀಣ ಭಾಗದಲ್ಲಿ ನಾಡಿನ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ: ಬಿ ವೀಣಾ ಕುಮಾರಿ

'ನಾಡಿನ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ' ಎಂದು ಹಿರಿಯ ರಂಗಭೂಮಿ ಕಲಾವಿದೆ ಬಿ. ವೀಣಾ ಕುಮಾರಿ ಅವರು ಹೇಳಿದರು. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ...

ಬಳ್ಳಾರಿ | ಫಲಿಸಿದ ವರ್ಷಗಳ ಹೋರಾಟ; ತೋರಣಗಲ್ಲಿನಲ್ಲಿ ನೂತನ ಪದವಿಪೂರ್ವ ಕಾಲೇಜು

ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ಸಂಘಟನೆಗಳ ಹಲವು ವರ್ಷಗಳ ಹೋರಾ ಫಲಿಸಿದೆ. ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದಲ್ಲಿ 2025-26ನೇ ಸಾಲಿಗೆ ಪ್ರಥಮ ಪಿಯುಸಿಗೆ ಕಲಾ ಮತ್ತು ವಾಣಿಜ್ಯ ವಿಭಾಗಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಸುತ್ತಮುತ್ತಲಿನ ಗ್ರಾಮೀಣ...

ಕರ್ಚೇಡ-ಸಿಂಧುವಾಳದ ನಡುವಿನ ಪವಿತ್ರ ನಂಟು; ಮೊಹರಂ ಹಿಂದಿನ ʼಪೀರ್ʼ ದೇವರ ಪರ್ವ

ಭಾವೈಕ್ಯತೆಯ ಮೂಲವನ್ನು ತಿಳಿಸುವಂತೆ ಕೆಲವು ಐತಿಹಾಸಿಕ ಕಥನಗಳು ಇಂದಿಗೂ ಗ್ರಾಮಾಂತರ ಹೃದಯದಲ್ಲಿ ಜೀವಂತವಾಗಿವೆ. ಅವುಗಳಲ್ಲಿ ಕರ್ಚೇಡ ಹಾಗೂ ಸಿಂಧುವಾಳ ಗ್ರಾಮಗಳ ನಡುವಿನ ಪೀರ್‌ ದೇವರ ಕಥೆಯೂ ಒಂದು. ಕಲ್ಯಾಣ ಕರ್ನಾಟಕದ ಹೃದಯಭಾಗವಾದ ಬಳ್ಳಾರಿ ಜಿಲ್ಲೆಯ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X