ಮಂಗಳೂರು

ಮಂಗಳೂರು | ಅಪ್ರಾಪ್ತ ಬಾಲಕ ಸ್ಕೂಟರ್‌ ಚಾಲನೆ; ಪೋಷಕರಿಗೆ ದಂಡ ವಿಧಿಸಿದ ನ್ಯಾಯಾಲಯ

ಅಪ್ರಾಪ್ತ ಬಾಲಕ ಮತ್ತು ಆತನ ಸ್ನೇಹಿತರಿಬ್ಬರು ಸ್ಕೂಟರ್ ಚಲಾಯಿಸಿದ ಸಂಬಂಧ ನ್ಯಾಯಾಲಯವು ಸ್ಕೂಟರ್ ಮಾಲೀಕರಿಗೆ ರೂ.27,500 ದಂಡ ವಿಧಿಸಿದ ಘಟನೆ ಜರುಗಿದೆ. ಬಜಪೆ ಪೊಲೀಸ್ ಠಾಣೆಯ ಪಿಎಸ್‌ಐ ನೇತೃತ್ವದಲ್ಲಿ ಆಗಸ್ಟ್ 25 ರಂದು ಬಜಪೆ...

ಮಂಗಳೂರು | ಉದ್ಯೋಗದ ಹಕ್ಕಿಗಾಗಿ ಡಿವೈಎಫ್ಐ ಯುವಜನ ಜಾಥಾ: ಎರಡನೇ ದಿನದ ಮೆರವಣಿಗೆ

ಉದ್ಯೋಗದ ಹಕ್ಕಿಗಾಗಿ ಡಿವೈಎಫ್ಐ ಯುವಜನ ಜಾಥಾ ನಡೆಯುತ್ತಿದ್ದು, ಸೋಮವಾರ ವಾಂಮಜೂರು ಜಂಕ್ಷನ್‌ನಿಂದ ಎರಡನೇ ದಿನದ ಮೆರವಣಿಗೆ ಪ್ರಾರಂಭಗೊಂಡಿದೆ. ಖ್ಯಾತ ಯುವ ಕವಿ ವಿಲ್ಸನ್ ಕಟೀಲ್ ಎರಡನೇ ದಿನದ ಜಾಥಾಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ...

ಸುರತ್ಕಲ್‌ ಭಾಗದಲ್ಲಿ ಮುಂದುವರಿದ ಸರಣಿ ಕಳ್ಳತನ; ಆತಂಕಕ್ಕೆ ಒಳಾಗದ ಬಡಾವಣೆ ಜನರು

ಸುರತ್ಕಲ್‌ನ ಮುಂಚೂರು ಸಮೀಪದ ಮೋದಿನಗರ ಮತ್ತು ಪದ್ಮಶ್ರೀ ಲೇಔಟ್‌ನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳ್ಳರು ಬಡಾವಣೆಯ 4 ಮನೆಗಳ ಬಾಗಿಲು ಮುರಿದು ಮನೆಯಲ್ಲಿದ್ದ ಬೆಳ್ಳಿ ಸೇರಿದಂತೆ ರೂ.50 ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು...

ಮಂಗಳೂರು | ಎಸ್‌ಐಓದಿಂದ ‘ಮಾದರಿ ಶಿಕ್ಷಕ ಪೈಗಂಬರ್ ಮುಹಮ್ಮದ್ (ಸ)’ ಅಭಿಯಾನಕ್ಕೆ ಚಾಲನೆ

ಪ್ರವಾದಿ ಮುಹಮ್ಮದ್ (ಸ) ರ ಜನ್ಮ ತಿಂಗಳ ಪ್ರಯುಕ್ತ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್(ಎಸ್‌ಐಓ) ದಕ್ಷಿಣ ಕನ್ನಡ ಘಟಕದಿಂದ 'ಮಾದರಿ ಶಿಕ್ಷಕ ಪೈಗಂಬರ್ ಮುಹಮ್ಮದ್ (ಸ)' ಅಭಿಯಾನಕ್ಕೆ ಚಾಲನೆ ಮಂಗಳೂರು ನಗರದ ಬಂದರ್‌ನಲ್ಲಿರುವ ಹಿದಾಯತ್...

ಮಂಗಳೂರು | ಜಿಲ್ಲೆಯಲ್ಲಿ ಕೆಂಪು ಕಲ್ಲು ಶೀಘ್ರದಲ್ಲೇ ಆರಂಭ: ಸ್ಪೀಕರ್ ಯು.ಟಿ. ಖಾದರ್ ಭರವಸೆ

ಮಂಗಳೂರು ಸೇರಿದಂತೆ ಕರಾವಳಿ ಭಾಗದ ನಿರ್ಮಾಣ ಉದ್ಯಮವನ್ನು ಸ್ತಬ್ಧಗೊಳಿಸಿರುವ ಮತ್ತು ಸಾವಿರಾರು ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿರುವ ಕೆಂಪು ಕಲ್ಲು ಗಣಿಗಾರಿಕೆ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಿಡಲಾಗಿದೆ. ಈ ಗಂಭೀರ ಸಮಸ್ಯೆಯನ್ನು ಸರ್ಕಾರದ...

ದ.ಕ. | ಬಸವ ಸಂಸ್ಕೃತಿ ಅಭಿಯಾನ: ಪದವಿ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ವಚನ ಗಾಯನ ಸ್ಪರ್ಧೆ

ಕರ್ನಾಟಕ ರಾಜ್ಯ ಸರ್ಕಾರವು ʼಸಾಂಸ್ಕೃತಿಕ ನಾಯಕ ಬಸವಣ್ಣʼ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಜನಮನದಲ್ಲಿ ಬಿತ್ತುವ, ಜನರ ಮನಸ್ಸುಗಳನ್ನು ಕಟ್ಟುವ ಜೊತೆಗೆ ಪರಸ್ಪರ ಭಾಂದವ್ಯದ ಬೆಸುಗೆ ಹಾಕುವ ಸದುದ್ದೇಶದಿಂದ ಲಿಂಗಾಯತ...

ಮಂಗಳೂರು | ನ್ಯಾಯಬೆಲೆ ಅಂಗಡಿ ಬಗ್ಗೆ ತಪ್ಪು ಸಂದೇಶ; ಸರ್ಕಾರ ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ: ಕೇಶವಮೂರ್ತಿ

ಕಟೀಲು ಸಮೀಪದ ಕೊಂಡೆಮೂಲ ಎಂಬಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ'ಕ್ಕಾಗಿ ನಡೆದ ಜಗಳದ ಬಗ್ಗೆ ಸರ್ಕಾರವೇ ಸ್ವಷ್ಟನೇ ನೀಡಬೇಕಿತ್ತು. ಆದರೆ ಇಲ್ಲಿಯವರೆಗೂ ಆಹಾರ ಇಲಾಖೆಯ ಅಧಿಕಾರಿಗಳಾಗಲೀ ಅಥವಾ ಸರ್ಕಾರ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ....

ಮಂಗಳೂರು | ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್‌ನಿಂದ ಚಿನ್ನಾಭರಣ ಕಳವು: ಸಿಬ್ಬಂದಿ ಸಹಿತ ಐವರ ಬಂಧನ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ತೆರೆದು 4.5 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕಳ್ಳತನ ಪ್ರಕರಣದಲ್ಲಿ 4 ಮಂದಿ ಲಗೇಜ್ ಲೋಡಿಂಗ್ ಸಿಬ್ಬಂದಿ ಸೇರಿ ಐವರನ್ನು ಬಜಪೆ ಠಾಣಾ...

ಸ್ವಯಂ ಗಾಯ ಮಾಡಿಕೊಂಡು ಹಲ್ಲೆ ಎಂದು ಕತೆ ಕಟ್ಟಿದ ಆಟೋ ಚಾಲಕ; ತನಿಖೆಯಿಂದ ಬಯಲಾಯ್ತು ಸತ್ಯ!

ಆಟೋ ಚಾಲಕನೊಬ್ಬನ ಮೇಲೆ ರವಿವಾರ ರಾತ್ರಿ ಮಂಗಳೂರಿನ ಫಳ್ನೀರ್ ನಲ್ಲಿ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿದೆ ಎಂಬುದು ಸುಳ್ಳು. ಇದು ಆಟೋ ಚಾಲಕನೇ ಸೃಷ್ಟಿಸಿದ ಕಟ್ಟು ಕಥೆ ಎಂಬ ವಿಚಾರ ಪೊಲೀಸರು ನಡೆಸಿದ...

ಮಂಗಳೂರು | ಸಿಟಿ ಬಸ್ ಚಾಲಕನ ಸಮಯಪ್ರಜ್ಞೆ; ಉಳಿಯಿತು ಬೈಕ್ ಸವಾರನ‌ ಜೀವ!

ಮಂಗಳೂರಿನ ನಂತೂರು ಸಮೀಪ ನಿನ್ನೆ ಸಂಜೆ ನಡೆದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಪಿಟಿಯಿಂದ ನಂತೂರು ಕಡೆಗೆ ಸಾಗುತ್ತಿದ್ದ 15 ನಂಬರ್ ರಾಜಲಕ್ಷ್ಮಿ ಬಸ್ಸನ್ನು ಮುಂದೆ ಹೋಗುತ್ತಿದ್ದ ಬೈಕ್‌ ಸವಾರ ಓವರ್ ಟೇಕ್...

ದ.ಕ. | ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ; ಒಬ್ಬನ ಬಂಧನ

ಮಂಗಳೂರು ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪದಲ್ಲಿ ಮಂಗಳೂರಿನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವನನ್ನು ಬಂಧಿಸಿದ್ದಾರೆ. ಆರೋಪಿ ಮೂಲತ: ಕೇರಳದ ಎರ್ನಾಕುಲಂ ಮಟ್ಟಂಚೇರಿಯ ಹಾಗೂ ಇದೀಗ ದೇರಳಕಟ್ಟೆಯಲ್ಲಿ...

ತಲಪಾಡಿ ಅಪಘಾತ | ಬ್ಯಾರೀಸ್ ಸೆಂಟ್ರಲ್ ಕಮಿಟಿಯಿಂದ ಕೆಎಸ್‌ಆರ್‌ಟಿಸಿ ಎಂಡಿ ಭೇಟಿ; ಸೂಕ್ತ ಪರಿಹಾರಕ್ಕೆ ಮನವಿ

ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ತಲಪಾಡಿ ಟೋಲ್ ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆಟೋ ರಿಕ್ಷಾ ಒಂದರಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಐವರು ಸೇರಿದಂತೆ ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ....

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X