ದಕ್ಷಿಣ ಕನ್ನಡ

ಕಡಬ | ಕೋವಿಯಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ

ಕೋವಿಯಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ರಾಮಕುಂಜದ ವಸಂತ್ ಅಮೀನ್ ಪುತ್ರ ಮೋಕ್ಷ(17) ಗುರುತಿಸಲಾಗಿದೆ....

ಬಂಟ್ವಾಳ | ನೇರಳಕಟ್ಟೆ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲುಗಳ ಪ್ರಾಯೋಗಿಕ ನಿಲುಗಡೆಗೆ ನಿರ್ಧಾರ

ಜನವರಿ 26, 2026ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 56627/56628 ಮಂಗಳೂರು ಸೆಂಟ್ರಲ್ - ಸುಬ್ರಹ್ಮಣ್ಯ ರೋಡ್ - ಮಂಗಳೂರು ಸೆಂಟ್ರಲ್ ಡೈಲಿ ಪ್ಯಾಸೆಂಜರ್ ರೈಲಿಗೆ ನೇರಳಕಟ್ಟೆ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಒಂದು ನಿಮಿಷದ...

ಬೆಳ್ತಂಗಡಿ | ಬೈಕ್ ಕಳ್ಳತನ ಆರೋಪ: ಇಬ್ಬರನ್ನು ಅರೆಬೆತ್ತಲೆಗೊಳಿಸಿ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಗುಂಪು

ಬೈಕ್ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ವ್ಯಕ್ತಿಗಳನ್ನು ಗುಂಪೊಂದು ಮರಕ್ಕೆ ಕಟ್ಟಿ‌ ಮನಬಂದಂತೆ ಥಳಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಹಲ್ಲೆಗೈದ ಘಟನೆಯು ವೇಣೂರು ಪೊಲೀಸ್...

ಮಂಗಳೂರು | ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪಾಸಿಂಗ್ ಪ್ಯಾಕೇಜ್ ತರಬೇತಿ

ಮಂಗಳೂರಿನ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಕೇಂದ್ರ ಸಮಿತಿ ವತಿಯಿಂದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೌಲಾನ ಆಜಾದ್ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್ ತರಬೇತಿಯನ್ನು ಐಡಿಸ್ ವಿದ್ಯಾ...

ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಆರೋಪ: ಪ್ರಭಾಕರ ಭಟ್ಟ ವಿರುದ್ಧ ದೂರು

ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಮಧ್ಯೆ ಮೈಮನಸ್ಸು ಉಂಟಾಗುವ ರೀತಿಯಲ್ಲಿ ದ್ವೇಷ ಭಾಷಣ ಮಾಡಿರುವ ಆರೋಪದ ಮೇಲೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮತ್ತು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ...

ಬಂಟ್ವಾಳ | ಪ್ರತಿದಿನವೂ ರಕ್ತದ ಅವಶ್ಯಕತೆ ಹೆಚ್ಚಾಗುತ್ತಿದೆ: ಡಾ. ಮಂಜುಶ್ರೀ

ದಿನೇ ದಿನೇ ರಕ್ತದ ಅವಶ್ಯಕತೆ ಹೆಚ್ಚಾಗುತ್ತಿದೆ. ಹೀಗಾಗಿ, ಅತ್ಯಾಧುನಿಕ ಕಾಲದಲ್ಲೂ ರಕ್ತ ನೀಡುವ ಬಗ್ಗೆ ಜನಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದು ದೇರಳಕಟ್ಟೆಯ ಕ್ಷೇಮ ಅಕಾಡೆಮಿಯ ಪೆಥೋಲಜಿ ವಿಭಾಗದ ವೈದ್ಯರಾದ ಡಾ. ಮಂಜುಶ್ರೀ...

ಸುಳ್ಯ | ಮುಂದುವರೆದ ಮಾನವ-ಪ್ರಾಣಿ ಸಂಘರ್ಷ; ಇಲಾಖೆ ಎಚ್ಚೆತ್ತುಕೊಳ್ಳುವುದೆಂತು?

ಕಾಡುಗಳಲ್ಲಿ ಆಹಾರ ಮತ್ತು ನೆಮ್ಮದಿ ಕಳೆದುಕೊಂಡ ವನ್ಯಜೀವಿಗಳು ನಾಡಿನತ್ತ ಮುಖ ಮಾಡುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸುಳ್ಯದಲ್ಲಿ ಕಾಡಾನೆಗಳ ಹಾವಳಿ, ಬೆಳ್ತಂಗಡಿಯಲ್ಲಿ ಚಿರತೆ ಹಾಗೂ...

ಕರ್ನಾಟಕ ಕ್ರೀಡಾಕೂಟ | ನೆಟ್ ಬಾಲ್ ; ಹಾಸನ, ದಕ್ಷಿಣ ಕನ್ನಡ ತಂಡಗಳು ಚಾಂಪಿಯನ್ : ಸೈಕ್ಲಿಂಗ್ ನಲ್ಲಿ ನೀಲ್, ಪಾಯಲ್ ಗೆ ಸ್ವರ್ಣ

 ಹಾಸನ ಮತ್ತು ದಕ್ಷಿಣ ಕನ್ನಡ ತಂಡಗಳು ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ 2025-26 ರ ನೆಟ್ ಬಾಲ್ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿವೆ.  ನೆಟ್ ಬಾಲ್, ಸೈಕ್ಲಿಂಗ್...

ಎಸ್‌ಐಆರ್ ಬಿಜೆಪಿ ಪಟ್ಟ ಉಳಿಸಿಕೊಳ್ಳುವ ತಂತ್ರ: ಶಿವಸುಂದರ್

ಎಸ್ ಐ ಆರ್ (ವಿಶೇಷ ತೀವ್ರ ಪರಿಷ್ಕರಣೆ) ಎಂಬುದು ಬಿಜೆಪಿ ತನ್ನ ಅಧಿಕಾರ ಉಳಿಸಿಕೊಳ್ಳಲು, ತನ್ನದೇ ಮತಗಳನ್ನು ಹೆಚ್ಚಿಸಲು ಹೂಡಿರುವ ತಂತ್ರವಾಗಿದೆ. ಈ ಮೂಲಕ ತನ್ನ ವಿರೋಧಿಗಳನ್ನು ಮತದಾನ ಪ್ರಕ್ರಿಯೆಯಿಂದ ದೂರ ಇಟ್ಟು...

ಮಂಗಳೂರು | ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ: ಬಿ ಕೆ ಇಮ್ತಿಯಾಜ್ ಆಗ್ರಹ

ಮನೆ, ಕಾರು, ಚಿನ್ನದ ಆಮಿಷವೊಡ್ಡಿ ಜನರಿಂದ ಹಣ ಪಡೆದು ಸಾವಿರಾರು ಮಂದಿಗೆ ಪಂಗನಾಮ ಹಾಕುತ್ತಿರುವ ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್...

ಬಂಟ್ವಾಳ | ಅನುಗ್ರಹ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಂದ ಪೊಲೀಸ್ ಠಾಣಾ ಭೇಟಿ

ಬಂಟ್ವಾಳ ಸಮೀಪದ ಕಲ್ಲಡ್ಕದ ಗೋಳ್ತಮಜಲು ಎಂಬಲ್ಲಿರುವ, ಬಾಲಕಿಯರ ವಿದ್ಯಾಸಂಸ್ಥೆ ಅನುಗ್ರಹ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಂದ ಇತ್ತೀಚೆಗೆ ಪೊಲೀಸ್ ಠಾಣಾ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ, ಇಲ್ಲಿನ, ಪ್ರಥಮ ಪಿಯುಸಿ ವಾಣಿಜ್ಯ ಮತ್ತು ಕಲಾ...

ಮಂಗಳೂರಿನಿಂದ ಜಗತ್ತಿಗೆ ಪರಿಚಯವಾಯ್ತು ‘ಸೌಲ್ಟ್’: ಇದು ವಿಶ್ವದ ಮೊದಲ ‘ಡಿಜಿಟಲ್ ಲೈಫ್ ವಾಲ್ಟ್’

ಡಿಜಿಟಲ್ ಯುಗದಲ್ಲಿ ಮನುಷ್ಯನ ಬದುಕು ಸಂಕೀರ್ಣವಾಗುತ್ತಿದ್ದಂತೆ, ಆತನ ನಂತರದ 'ಲೆಗಸಿ' ಅಥವಾ ಪರಂಪರೆಯನ್ನು ನಿರ್ವಹಿಸುವುದು ಒಂದು ಜಾಗತಿಕ ಸವಾಲಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ಪರಿಹಾರವಾಗಿ, ಮಂಗಳೂರು ಮೂಲದ ನವೋದ್ಯಮವೊಂದು ಅಭಿವೃದ್ಧಿಪಡಿಸಿದ ವಿಶ್ವದ ಮೊದಲ...

ಈ ಹೊತ್ತಿನ ಪ್ರಮುಖ ಸುದ್ದಿ