ಬಡವರ ನಿವೇಶನಗಳ ಮೇಲೆ ಕೆಎಐಡಿಬಿ ಕರಿ ನೆರಳು: ಸೂರು ಕಳೆದುಕೊಳ್ಳುವ ಭೀತಿಯಲ್ಲಿ ಬಡ ಕುಟುಂಬಗಳು!

Date:

ಮಂಗಳೂರಿನ ಪ್ರವಾಸೋದ್ಯಮಕ್ಕೆ ಹೊಸ ಮೆರುಗನ್ನು ನೀಡಿರುವುದೇ ತಣ್ಣೀರುಬಾವಿ ಸಮುದ್ರ ತೀರ. ಈ ಸಮುದ್ರ ತೀರ ಇತ್ತೀಚಿನ ದಿನಗಳಲ್ಲಿ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ವಿಭಿನ್ನ ಶೈಲಿಯ ಮನರಂಜನೆಗೆ ಹೆಸರುವಾಸಿಯಾಗಿರುವ ತಣ್ಣೀರುಬಾವಿ ಬೀಚ್ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮದ ವೈಭವವನ್ನೂ ಹೆಚ್ಚಿಸಿವೆ. ಆದರೆ, ಇದೀಗ ತಣ್ಣೀರುಬಾವಿ ಸಮುದ್ರ ತೀರದ ಆಸುಪಾಸು ಬಡಕುಟುಂಬಗಳ ಅಳಲಿನಿಂದ ಚರ್ಚೆಗೆ ಗ್ರಾಸವಾತ್ತಿರುವುದು ವಿಪರ್ಯಾಸ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಟ್ಟ ಕಡಲ ಕಿನಾರೆಯಾದ ತಣ್ಣೀರುಬಾವಿ ಪ್ರದೇಶವು ಸುಂದರವಾದ ಪ್ರವಾಸಿ ತಾಣವಾಗಿದೆ. ಈ ಸಮುದ್ರ ತೀರದಲ್ಲಿ ನೂರಾರು ಕುಟುಂಬಗಳು ವರ್ಷಗಳಿಂದೀಚೆಗೆ ವಾಸಿಸುತ್ತಿದೆ. ಇದರಲ್ಲಿ ಬಹುತೇಕರು ದಿನಗೂಲಿ ಕಾರ್ಮಿಕರು, ಮೀನುಗಾರರು ಹಾಗೂ ಇತರೆ ಕೂಲಿ ಕಾರ್ಮಿಕರೇ ಆಗಿರುತ್ತಾರೆ. ಅದರಲ್ಲೂ ಬಹುಪಾಲು ಜನರು ಮೀನುಗಾರರೇ ಆಗಿರುತ್ತಾರೆ.

ಕಳೆದ ಎಪ್ಪತ್ತು ಎಂಬತ್ತು ವರ್ಷಗಳಿಂದೀಚೆಗೆ ಈ ಕುಟುಂಬಗಳು ತಲತಲಾಂದರದಿಂದ ಇದೇ ಸಮುದ್ರ ಕಿನಾರೆಯಲ್ಲಿ ವಾಸಿಸುತ್ತಾ ಬಂದಿದೆ. ಬದುಕು ಸುಂದರವಾಗಿಲ್ಲವಾಗಿದ್ದರೂ ಅಲ್ಪ ಮಟ್ಟಿಗಾದರೂ ನೆಮ್ಮದಿಯ ಜೀವನವನ್ನು ಕಂಡುಕೊಂಡವರೇ ಇಲ್ಲಿನವರು. ಆದರೆ ಇತ್ತೀಚಿನ ದಿನಗಳಿಂದ ಇಲ್ಲೇ ಹತ್ತಾರು ವರ್ಷಗಳಿಂದ ಮೀನುಗಾರಿಕೆಯನ್ನು ನಂಬಿ ವಾಸಿಸಿಕೊಂಡು ಬಂದಿರುವ ಇಲ್ಲಿನ ಜನರ ಜೀವನ ಬಹಳ ಕಷ್ಟಕರವಾಗಿದೆ. ಅಭದ್ರತೆ ಮತ್ತು ಆತಂಕದಿಂದಲೇ ಬದುಕು ಕಳೆಯುವಂತಾಗಿದೆ.

- Advertisement -

ಇಲ್ಲಿನ ಬಹುತೇಕ ಜನರು ತಮ್ಮದೆ ಆದ ಸ್ವಂತ ಮನೆಯನ್ನು ಹೊಂದಿದ್ದರೂ ಇವುಗಳಿಗೆ ಹಕ್ಕು ಪತ್ರವಾಗಲೀ, ಮನೆ ನಂಬ್ರವಾಗಲೀ ಇಲ್ಲ ತನಕ ಲಭ್ಯವಾಗದಿರುವುದು ಇದೀಗ ಈ ಪ್ರದೇಶದ ಜನರಿಗೆ ಆತಂಕವನ್ನು ತಂದೊಡ್ಡಿದೆ. ಯಾವುದೇ ಕ್ಷಣದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (KIADB), ಬಂದರು ಇಲಾಖೆ ಮತ್ತು ಜಿಲ್ಲಾಡಳಿತಗಳ ದಾಳಿಯಿಂದ ತಮ್ಮ ಮನೆ, ಗುಡಿಸಲುಗಳು ನೆಲಸಮವಾಗುವ ಆತಂಕ ಇಲ್ಲಿನ ಜನರನ್ನು ಸದಾ ಕಾಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Quockerwodger’: ಶಶಿ ತರೂರ್ ಸೂಚಿಸಿದ ಹೊಸ ರಾಜಕೀಯ ಪದ!

ಇದು 19ನೇ ಶತಮಾನದ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಪರೂಪದ ಪದ. ಮೂಲತಃ ದಾರಗಳ ಮೂಲಕ ನಿಯಂತ್ರಿಸಲ್ಪಡುವ ಮರದ ಗೊಂಬೆಯನ್ನು ಸೂಚಿಸುತ್ತಿತ್ತು. ಗೊಂಬೆಯಾಟದಲ್ಲಿ ಸೂತ್ರಧಾರ ದಾರ ಎಳೆದಂತೆ ಗೊಂಬೆ ಕೈಕಾಲು ಆಡಿಸುತ್ತದೆ. ಗೊಂಬೆ ಚಲಿಸುತ್ತದೆಯೇ...

ರಾಷ್ಟ್ರೀಯವಾದ ಹೊಟ್ಟೆ ತುಂಬಿಸುವುದಿಲ್ಲ; ಟ್ರಂಪ್‌ಗೆ ಅಮೆರಿಕನ್ನರು ಕಲಿಸಿದ ಪಾಠ...

ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ...

ಕ್ಯಾಂಪಸ್ ರಾಜಕಾರಣದ ಹರಣ: ಎಎಂಯು, ಜಾಮಿಯಾದಲ್ಲಿ ಸೊಲ್ಲಡಗಿದ್ದರ ಆಂತರ್ಯವೇನು?

ಸ್ವಾತಂತ್ರ್ಯ ಸಂಗ್ರಾಮದ ಗರಡಿಯಾಗಿ, ದೇಶಕ್ಕೆ ಕ್ರಾಂತಿಕಾರಿ ನಾಯಕರನ್ನು ನೀಡಿದ್ದ ಅಲೀಗಢ ಮತ್ತು ಜಾಮಿಯಾ ಅಂಗಳಗಳು ಇಂದು ಮೌನಕ್ಕೆ ಜಾರಿವೆ. 2006ರ ನಿರ್ಬಂಧಗಳಿಂದ ಹಿಡಿದು ಮೋದಿ ಸರ್ಕಾರದ ಅವಧಿಯ ತನಿಖೆಗಳವರೆಗೆ - ಮುಸ್ಲಿಂ ವಿಶ್ವವಿದ್ಯಾಲಯಗಳ...
24987788 8bb7 4180 80ce edf0bcbb1180



ಇಲ್ಲಿ ವಾಸಿಸುತ್ತಿರುವ ಸುಮಾರು 300ಕ್ಕೂ ಹೆಚ್ಚಿನ ಕುಟುಂಬಗಳು ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದು, ಹೆಚ್ಚಿನವರು ದಲಿತರು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೂ ಆಗಿರುತ್ತಾರೆ. ಇವರು ಜೀವನೋಪಾಯಕ್ಕಾಗಿ ಸಮುದ್ರವನ್ನೇ ನಂಬಿ ಮೀನುಗಾರಿಕೆ ತೊಡಗಿಸಿಕೊಂಡಿದ್ದು, ಕೆಲವೇ ಕೆಲವು ಕುಟುಂಬಗಳು ಕಟ್ಟಡ ಕಾರ್ಮಿಕರಾಗಿ ಕೂಲಿ ಕೆಲಸವನ್ನು ಮಾಡಿಕೊಂಡಿರುತ್ತಾರೆ.

ಮನೆ ನಂಬ್ರ, ಹಕ್ಕುಪತ್ರ, ಇಲ್ಲದೆ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸಹಜವಾಗಿಯೇ ಸರಕಾರದ ಜನಕಲ್ಯಾಣ ಕಾರ್ಯಕ್ರಮಗಳಾದ ವಿವಿಧ ರೀತಿಯ ಪೆನ್ನನ್‌ಗಳು, ಸ್ವ-ಉದ್ಯೋಗ ಯೋಜನೆ, ಶುಲ್ಕ ವಿನಾಯಿತಿ, ಸಾಲ ಸೌಲಭ್ಯಗಳು‌ ಸೇರಿದಂತೆ ಎಲ್ಲಾ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಇವೆಲ್ಲವುಗಳಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲೇ ಮನೆ ನಂಬ್ರ, ಹಕ್ಕುಪತ್ರ ನೀಡಲು ಆಗ್ರಹಿಸಿ ಈಗಾಗಲೇ ಆನೇಕ ಬಾರಿ ಎಡಪಕ್ಷಗಳ ನೇತೃತ್ವದಲ್ಲಿ ಚಳುವಳಿ ನಡೆಸಲಾಗಿದೆ. ಮಹಾನಗರ ಪಾಲಿಕೆ, ಕಂದಾಯ ಇಲಾಖೆಗೂ, ಕಂದಾಯ ಇಲಾಖೆ ಮಹಾನಗರ ಪಾಲಿಕಗೂ ಸಿಆ‌ರ್‌ಝೆಡ್‌ ಇಲಾಖೆಗೂ ಬೆರಳು ತೋರಿಸಿ ತಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬುದು ಹೋರಾಟಗಾರರ ಆರೋಪ. ಸ್ಥಳೀಯ ಶಾಸಕರು, ಕಾರ್ಪೊರೇಟರ್‌ಗಳು, ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ತಮ್ಮ ಬೇಡಿಕೆಗೆ ಸ್ಪಂಧಿಸಲು ಸಿದ್ಧರಿಲ್ಲದಿರುವುದಾಗಿ ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಯಾವುದೇ ಒಂದು ಸೌಭಾಗ್ಯದ ಬಗ್ಗೆ ವಿಚಾರಿಸಲು ಮಹಾನಗರ ಪಾಲಿಕೆಗೆ ಹೋದರೆ ಮನೆ ನಂಬ್ರ ತನ್ನಿ, ಹಕ್ಕುಪತ್ರ ತನ್ನಿ ಎಂದು ಹೇಳಿ ವಾಪಾಸು ಕಳುಹಿಸುತ್ತಾರೆ ಎಂಬುದು ಸ್ಥಳಿಯರ ಅಳಲು.

ಈತನ್ಮಧ್ಯೆ, ಕೆಲವು ಕಂಪೆನಿಗಳು ಬಂದು ಇದು ನಮ್ಮ ಜಾಗ ನಾವು ತೆಗೆದುಕೊಂಡಿದ್ದೇವೆ. ನಮಗೆ ಆಯಿಲ್ ಜಟ್ಟಿ ಮಾಡಬೇಕಾಗಿದೆ ಎಂದು ಇಲ್ಲಿ ವಾಸಿಸುತ್ತಿರುವ ಜನರಿಗೆ ಹೇಳಿ ಹೋಗುತ್ತಾರೆ. ಪ್ರಸ್ತುತ ಮೖಸೂರು ಮರ್ಕಂಟೖಲ್ ಸಂಸ್ಥೆ ಮತ್ತು ಕೆಎಐಡಿಬಿಯು ನಿರಂತರವಾಗಿ ಒಕ್ಕಲೆಬ್ಬಿಸಲು ಪ್ರಯತ್ನಿಸಿ ಈ ಪ್ರದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿ ಇಲ್ಲಿನ ನಿವಾಸಿಗಳನ್ನು ಬದುಕುವ ಹಕ್ಕಿನಿಂದ ವಂಚಿಸಲು ಮುಂದಾಗಿದೆ ಎಂದು ಇಲ್ಲಿನ ಜನರ ನಿವೇಶನದ ಹೋರಾಟವನ್ನು ಕೈಗೆತ್ತಿಕೊಂಡರುವ ಡಿವೈಎಫ್ಐ ಸಂಘಟನೆಯ ಆರೋಪ.

09290e45 0a15 4adc 918a 0dbf6f618403

ಈ ಹಿಂದೆ ತಣ್ಣೀರುಬಾವಿ ಹತ್ತಿರದ ಜನವಾಸ ಇರುವ ಸ್ಥಳದಲ್ಲಿ ಗಾಲ್ಫ್ ಕೋರ್ಟ್ ನಿರ್ಮಿಸಲು ಕೆಐಡಿಬಿಯು ಸ್ಥಳ ಗುರುತಿಸಿ ಒತ್ತುವರಿಗೆ ಮುಂದಾಗಿತ್ತು ಮತ್ತು ಕಾಂಗ್ರೆಸ್ ನೇತೃತ್ವದ ಸರಕಾರ ಗಾಲ್ಫ್ ಕ್ರೀಡಾಂಹಣ ನಿರ್ಮಿಸಲು ಹೊರಟಿತ್ತು. ಈ ಸಂದರ್ಭದಲ್ಲಿ ನಿರಂತರ ಸ್ಥಳೀಯರ ಹಾಗೂ ಎಡ ಸಂಘಟನೆಗಳ ಹೋರಾಟದಿಂದ ಒತ್ತಡಕ್ಕೊಳಗಾದ ಸರಕಾರ ಈ ಯೋಜನೆಯನ್ನು ಕೈ ಬಿಟ್ಟಿತ್ತು‌.

ಇದೇ ರೀತಿ ಹಲವಾರು ಸಂದರ್ಭಗಳಲ್ಲಿ ವಿವಿಧ ಕಂಪೆನಿಗಳಿಗಾಗಿ ವಿವಿಧ ರೀತಿಯ ಯೋಜನೆಗಳ ಮೂಲಕ ಆಳುವ ಸರಕಾರಗಳು ಇಲ್ಲಿನ ಬಡ ಮದ್ಯಮ ವರ್ಗದ ಜನರ ಮೇಲೆ ಕತ್ತಿ ಪ್ರಹಾರ ಮಾಡುತ್ತಲೇ ಬಂದಿದೆ. ಕಡಲ ಕಿನಾರೆಯ ಪ್ರದೇಶಗಳು CRZ (ಕೋಸ್ಟಲ್ ರಿಸರ್ವ್ಡ್ ಝೋನ್) ಪ್ರದೇಶವಾಗಿದ್ದು, ಇಲ್ಲಿ ಯಾವುದೇ ಶಾಶ್ವತ ಕಟ್ಟಡಗಳ ನಿರ್ಮಾಣಕ್ಕೆ ಸಾಕಷ್ಟು ನಿಯಮಾವಳಿಗಳು ಹಾಗೂ ಮಾನದಂಡಗಳು ಇದ್ದರೂ ಎಲ್ಲವನ್ನೂ ಗಾಳಿಗೆ ತೂರಿ ಸರಕಾರಗಳು ಹಾಗೂ ಅಧಿಕಾರಿಗಳು ಖಾಸಗಿ ಪ್ರವಾಸೋದ್ಯಮದ ಹೆಸರಿನಲ್ಲಿ ಕಂಪೆನಿಗಳಿಗಾಗಿ ಕಾರ್ಯನಿರ್ವಹಿಸುತ್ತಿದೆ. ಆದದರಿಂದಲೇ ಹಲವಾರು ವರ್ಷಗಳಿಂದ ಸಮುದ್ರ ಕಿನಾರೆಯಲ್ಲಿ ಸೂರನ್ನು ಕಟ್ಟಿಕೊಂಡಿರುವ ಕುಟುಂಬಗಳು ಆತಂಕದಲ್ಲೇ ಜೀವನ ಸಾಗಿಸುವಂತಾಗಿದೆ.

19678e87 e355 4692 850c bca419a6267b

ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಸ್ಥಳೀಯರಾದ ಕೃಷ್ಣ ತಣ್ಣೀರುಬಾವಿ, “2002ರಲ್ಲಿ KIADB ಯು ಸುಮಾರು ಒಂದೂವರೆ ಎಕರೆಯಷ್ಟು ಭೂಮಿಯನ್ನು ಮರ್ಕಂಟೈಲ್ ಎಂಬ ಕಂಪೆನಿಗೆ ಹಸ್ತಾಂತರಿಸಿದೆ. ಈ ಕಂಪೆನಿಯವರು ನಮ್ಮ ಭೂಮಿಯನ್ನು ನೆಲಸಮ ಮಾಡುವ ಪ್ರಯತ್ನ ಮಾಡಿದ್ದರು. ಆದ್ರೆ ನಮ್ಮ ತೀವ್ರ ವಿರೋಧದಿಂದ ಅದು ನಿಂತುಹೋಗಿತ್ತು. ನಂತರ ವಿವಿಧ ಇಲಾಖೆಗಳಿಗೆ ಮನವಿ ನೀಡಿದ್ದರೂ ಸರಿಯಾದ ಸ್ಪಂದನೆ ಸಿಗಲಿಲ್ಲ. ಬದಲಾಗಿ ಜಿಲ್ಲಾಧಿಕಾರಿಗಳಿಂದ ನಮಗೇ ನೋಟೀಸ್ ಜಾರಿಗೊಳಿಸಲಾಗಿತ್ತು. ಜಿಲ್ಲಾಧಿಕಾರಿ ಕಛೇರಿಯಲ್ಲಿ ಹಲವು ಸಭೆಗಳಲ್ಲಿ ಭಾಗವಹಿಸಿ ನಮ್ಮ ಅಳಲು ತೋಡಿಕೊಂಡಿದ್ದೇವೆ. ಈ ಮಧ್ಯೆ 2011ರಲ್ಲಿ ಅಂದಿನ ಜಿಲ್ಲಾಧಿಕಾರಿ ಚೆನ್ನಪ್ಪ ಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಕೂಡಲೇ ಹಕ್ಕು ಪತ್ರ ನೀಡುವಂತೆ ಮಹಾನಗರ ಪಾಲಿಕೆಗೆ ಆದೇಶಿಸಿದ್ದರು. ಆದರೂ ನಗರಪಾಲಿಕೆಯಿಂದ ಯಾವುದೇ ಹಕ್ಕು ಪತ್ರ ಲಭಿಸಿರುವುದಿಲ್ಲ. ಇದೀಗ ಹಲವು ಬಾರಿ ನೊಟೀಸ್ ಜಾರಿಗೊಳಿಸಲಾಗಿದೆ. ನಾವು ತಲತಲಾಂತರದಿಂದ ಬದುಕಿ ಬಂದಿರುವ ನಮ್ಮ ನೆಲವನ್ನು ಯಾವುದೇ ಕಾರಣಕ್ಕೂ ಬಿಟ್ಟು ನಾವು ಕದಲುವುದಿಲ್ಲ” ಎಂದು ಹೇಳಿದ್ದಾರೆ.

ಈ ಬಗ್ಗೆ ಈದಿನ.ಕಾಮ್‌ಗೆ ಪ್ರತಿಕ್ರಯಿಸಿದ ಸಿಪಿಐಎಂ ಜಿಲ್ಲಾ ನಾಯಕರಾದ ಬಿ.ಕೆ. ಇಮ್ತಿಯಾಝ್ “ಮಂಗಳೂರಿನಲ್ಲಿ ಬೀಚ್ ಅಭಿವೃದ್ಧಿ ಮತ್ತು ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರವು ಸಮುದ್ರ ತೀರ ಹಾಗೂ ನದಿ ತೀರದ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ. ಕಳೆದ ಸುಮಾರು 100 ವರ್ಷಗಳಿಂದ ಜನರು ವಾಸಿಸುತ್ತಿರುವ ಜನವಸತಿ ಪ್ರದೇಶದ ಭೂಮಿಯನ್ನು ಮರ್ಕಂಡೈಲ್ ಸಂಸ್ಥೆಗೆ ನೀಡಲು KIADB ಮುಂದಾಗಿರುವುದು ಖಂಡನೀಯ. ಹಲವು ವರ್ಷಗಳಿಂದ ಇಲ್ಲಿ ಬದುಕು ಕಟ್ಟಿಕೊಂಡಿರುವ ಬಡ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ನೀಡಬೇಕಾದ ಸರ್ಕಾರ, ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ಜನರ ವಸತಿ ಪ್ರದೇಶ ಹಾಗೂ ಆಟದ ಮೈದಾನವನ್ನು ಕಸಿದುಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಗ್ರಾಮಸ್ಥರು ಹೋರಾಟಕ್ಕೆ ಮುಂದಾದಾಗ ಅದನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿವೆ. ದಾಖಲೆಗಳಿಲ್ಲ ಎಂಬ ನೆಪವೊಡ್ಡಿ ಜನರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಇಲ್ಲಿನ ಮನೆಗಳಿಗೆ ಹಾಗೂ ಆಟದ ಮೈದಾನಕ್ಕೆ ತೊಂದರೆಯಾಗುವಂತಹ ಯೋಜನೆಗಳನ್ನು ಜಾರಿಗೊಳಿಸಬಾರದು” ಎಂದು ಆಗ್ರಹಿಸಿದರು.

ಈದಿನ.ಕಾಮ್ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯನ್ನು ವಿಚಾರಿಸಲು ಸಂಪರ್ಕಿಸಿದರೆ ಅಧಿಕಾರಿಗಳು ಸಂಪರ್ಕಕ್ಕೆ ಲಭ್ಯವಾಗದರಿವುದು ವಿಪರ್ಯಾಸ. ಒಟ್ಟಾರೆಯಾಗಿ ಹಲವಾರು ವರ್ಷಗಳಿಂದ ತಲಾಂತರದಿಂದ ಬದುಕು ಕಟ್ಟಿಕೊಂಡು ಬಂದಿರುವ ಬಡ ಮದ್ಯಮ ವರ್ಗದ ಕುಟುಂಬಗಳು‌ ನಿವೇಶನ ರಹಿತರಾಗಿ ಬೀದಿ ಪಾಲಾಗದಂತೆ ಸರಕಾರ ನೋಡಿಕೊಳ್ಳಬೇಕಿದೆ. ಬೀಚ್ ಹಾಗೂ ಕೈಗಾರಿಕಾ ಸಂಸ್ಥೆಗಳ ಹೆಸರಿನಲ್ಲಿ ಮೀನುಗಾರರ, ದಲಿತರ, ಹಾಗೂ ದಿನಗೂಲಿ ಕಾರ್ಮಿಕರ ಮನೆಗಳು ಕೆಡವಿ ಕಂಪೆನಿಗಳನ್ನು ಕಟ್ಟುವ ಮೊದಲು ಸ್ಥಳೀಯ ನಿವಾಸಿಗಳ ಬದುಕಿನ ಅಳಲನ್ನು ಆಲಿಸುವಂತ ಕಾರ್ಯ ಸರಕಾರದಿಂದ ನಡೆಯಬೇಕಿದೆ. ನಾಡಿನ ಮೀನುಗಾರರ, ಬಡ ಮಧ್ಯಮ ವರ್ಗದ ಬದುಕನ್ನು ಕಸಿದು, ನಿವೇಶನಗಳನ್ನು ಕೆಡವಿ ಅವುಗಳ ಗೋರಿಯ ಮೇಲೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಮುಂಚೆ ಸರಕಾರಗಳು ಮತ್ತು ಅಧಿಕಾರಿಗಳು ನೂರು ಬಾರಿ ಯೋಚಿಸುವಂತಾಗಬೇಕಿದೆ.

IMG 20261105 WA0002
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ನವೆಂಬರ್ 11ರಂದು ಜಿಲ್ಲೆಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ

"ಜಿಲ್ಲಾಡಳಿತದ ವತಿಯಿಂದ ನವೆಂಬರ್ 11 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಾಂಕೇತಿಕವಾಗಿ...

ಸಹ-ಆರೋಪಿಗಳು ಖುಲಾಸೆಯಾದಾಗ ಪ್ರತ್ಯೇಕ ಆರೋಪವಿಲ್ಲದೆ ಕೊಲೆ ಪ್ರಕರಣದಲ್ಲಿ ಶಿಕ್ಷೆ ನೀಡಲಾಗದು: ಸುಪ್ರೀಂ ಕೋರ್ಟ್

ಇತರೆ ಸಹ-ಆರೋಪಿಗಳನ್ನು ದೋಷಮುಕ್ತಗೊಳಿಸಿದ ಸಂದರ್ಭದಲ್ಲಿ, ಯಾವುದೇ ಪ್ರತ್ಯೇಕ ಅಥವಾ ಸ್ವತಂತ್ರ ಆರೋಪವಿಲ್ಲದೆ...

ಗದಗ | ಎಸ್ಐಆರ್ ಮೂಲಕ ಮತ ಕಳವು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

'ಬಿಜೆಪಿಯು ಎಸ್‌ಐಆರ್ ಮೂಲಕ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳನ್ನು ಕಳವು ಮಾಡುತ್ತಿದೆ. ಈಗಾಗಲೇ...

ಕಾಂಕ್ರೀಟ್ ಗೋಡೆ ಮೀರಿದ ನೈಸರ್ಗಿಕ ತಡೆಗೋಡೆ: ಪ್ರವಾಹ ಗೆದ್ದ ಫಿಲಿಪ್ಪೀನ್ಸ್‌ನ ‘ಪಮರವಾನ್’ ಗ್ರಾಮ

ಫಿಲಿಪ್ಪೀನ್ಸ್‌ನ ಮನಿಲಾ ಕೊಲ್ಲಿಯ ಅಂಚಿನಲ್ಲಿರುವ 'ಪಮರವಾನ್' ಎಂಬ ಸಣ್ಣ ಮೀನುಗಾರಿಕಾ ಗ್ರಾಮವು...