ಕಲಬುರಗಿ

ಕಲಬುರಗಿ | ಬಾಣಂತಿಯರ ಸರಣಿ ಸಾವು ಖಂಡಿಸಿ ಆರೋಗ್ಯ ಹಕ್ಕಿನ ಜಾಥಾ

ರಾಜ್ಯದಲ್ಲಿ ನಡೆಯುತ್ತಿರುವ ಬಾಣಂತಿಯರ ಸರಣಿ ಸಾವನ್ನು ಖಂಡಿಸಿ, ಡ್ರಗ್ ಆಕ್ಷನ್ ಫೋರಂ ಹಾಗೂ ಸಾರ್ವತ್ರಿಕ ಆರೋಗ್ಯ ಆಂದೋಲನ ವತಿಯಿಂದ ಕಲಬುರಗಿಯಲ್ಲಿ ʼಆರೋಗ್ಯ ಹಕ್ಕಿನ ಜಾಥಾʼ ಕೈಗೊಳ್ಳಲಾಗಿತ್ತು. ನಗರದ ಜಗತ್ತಿ ವೃತ್ತದಿಂದ ಕಾಲ್ನಡಿಗೆ ಜಾಥಾ ಮೂಲಕ...

ಕಲಬುರಗಿ | ಬಿಡುಗಡೆಯಾದರೂ 2 ವರ್ಷ ಜೈಲಿನಲ್ಲೇ ಇದ್ದ ಕೈದಿ; ಕಾರಣವಿದು!

ಸನ್ನಡತೆ ಆಧಾರದ ಮೇಲೆ 2023ರಲ್ಲಿಯೇ ಬಿಡುಗಡೆಯಾಗಿದ್ದ ಕೈದಿಯೊಬ್ಬರು, ನ್ಯಾಯಾಲಯ ವಿಧಿಸಿದ್ದ ದಂಡ ಪಾವತಿಸಲಾಗದ ಕಾರಣ ಜೈಲಿನಲ್ಲಿಯೇ ಇದ್ದರು. ಇದೀಗ, ಅವರಿಗೆ ಜೈಲು ಅಧಿಕಾರಿಗಳು ಸಹಾಯ ಮಾಡಿದ್ದು, ಜೈಲಿನಿಂದ ಹೊರಬಂದಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು...

ಕಲಬುರಗಿ | ಮುಂದುವರೆದ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಅಹೋರಾತ್ರಿ ಧರಣಿ

ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು 12 ದಿನಗಳಿಂದ...

ಯುವಕರ ಕೈಗೆ ಬಂದೂಕು ಕೊಟ್ಟು, ಅವರನ್ನು ಹಾದಿ ತಪ್ಪಿಸಿದವರೇ ನಕ್ಸಲರು: ದತ್ತಾತ್ರೇಯ ಹೊಸಬಾಳೆ

ಸಮಾಜದೊಳಗಿನ ಬಡತನ, ಅನ್ಯಾಯ ಹಾಗೂ ಶೋಷಣೆ ಹೋಗಲಾಡಿಸಲು ಕ್ರಾಂತಿಯಿಂದಲೇ ಸಾಧ್ಯ ಎಂದು ಯುವಕರ ತಲೆಯಲ್ಲಿ ತುಂಬಿ, ಅವರ ಕೈಗೆ ಬಂದೂಕು ಕೊಟ್ಟು‌ ನಕ್ಸಲರು ಹಾದಿ ತಪ್ಪಿಸಿದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ...

ಕಲಬುರಗಿ | ಬಂಗಾರದ ಬಳೆ ಮಾರಿ ಹಸಿದ ಮಕ್ಕಳಿಗೆ ಅನ್ನ ಹಾಕಿದ ಮಹಾನ್ ತ್ಯಾಗಮಯಿ ರಮಾಬಾಯಿ ಅಂಬೇಡ್ಕರ್:‌ ಅಶ್ವಿನಿ ಮದನಕರ್

ರಮಾಬಾಯಿ ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದದ್ದು. ರಮಾಬಾಯಿ ಅಂಬೇಡ್ಕರ್ ಅವರು ತಮ್ಮ ಅನಾರೋಗ್ಯದ ನಿಮಿತ್ತ ಕರ್ನಾಟಕಕ್ಕೆ ಬಂದಿದ್ದು, ಧಾರವಾಡದ ಹಾಸ್ಟೆಲ್‌ನಲ್ಲಿ ನೆಲೆಸಿದ್ದರು. ಆ ಸಂದರ್ಭದಲ್ಲಿ ಯಾವುದೇ ಭೇದಭಾವವಿಲ್ಲದೆ ತನ್ನ...

ಕಲಬುರಗಿ | ಸರ್ಕಾರಿ ಶಾಲೆ ಮುಚ್ಚಲು ಮುಂದಾಗಿರುವ ಕಾಂಗ್ರೆಸ್‌ ನಡೆ ಖಂಡಿಸಿ ಎಐಡಿಎಸ್ಒ ಪ್ರತಿಭಟನೆ

ಹಬ್ ಹ್ಯಾಂಡ್ ಸ್ಪೋಕ್‌ ಹೆಸರಿನಲ್ಲಿ ಅತಿ ಕಡಿಮೆ ದಾಖಲಾತಿ ಹೊಂದಿರುವ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ಈಗಿನ ರಾಜ್ಯ ಕಾಂಗ್ರೆಸ್‌ ಸರ್ಕಾರದ ನಡೆಯನ್ನು ಖಂಡಿಸಿ ಎಐಡಿಎಸ್ಒ ಚಿತ್ರಾಪುರ...

ಕಲಬುರಗಿ | ಸಂವಿಧಾನ ಕುರಿತು ಅವಹೇಳನಾಕಾರಿ ಹೇಳಿಕೆ; ರಾಷ್ಟ್ರದ್ರೋಹ ಕೇಸ್ ದಾಖಲಿಸಲು ದಸಂಸ ಪ್ರತಿಭಟನೆ

ಪ್ರಜಾಪ್ರಭುತ್ವದ ಪಿತಾಮಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಹಾಗೂ ಸಂವಿಧಾನ ಕುರಿತು ಅವಹೇಳನ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ...

ಕಲಬುರಗಿ | ಭಾರತೀಯ ಸಂಸ್ಕೃತಿ ಉತ್ಸವ ವಿರೋಧಿಸಿ ದಲಿತ ಸಂಘಟನೆಗಳ ಬೃಹತ್‌ ಪ್ರತಿಭಟನೆ

ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ನಡೆಯಲಿರುವ 'ಭಾರತೀಯ ಸಂಸ್ಕೃತಿ ಉತ್ಸವ 'ವಿರೋಧಿಸಿ ʼಕಲ್ಯಾಣ ಕರ್ನಾಟಕದಲ್ಲಿ ನಾಗಪೂರದ ನಾಝಿ ವಿಷ ಸರ್ಪಗಳು ಬರುತ್ತಿವೆ ಎಚ್ಚರ' ಎಂಬ ಘೋಷಣೆದೊಂದಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ)...

ಕಲಬುರಗಿ | ನೈತಿಕವಾಗಿ ಮತಾಧಿಕಾರ ಚಲಾಯಿಸಿ: ಡಾ ಎಚ್ ಎಸ್ ಹೊಸಮನಿ

ನೈತಿಕವಾಗಿ, ನಿರ್ಭಯವಾಗಿ ಮತದಾನದ ಅಧಿಕಾರವನ್ನು ಚಲಾಯಿಸಿದಾಗ ಮಾತ್ರ ಉತ್ತಮ ಸರ್ಕಾರ ರಚಿಸಿ ಸದೃಢ ದೇಶ ಕಟ್ಟಲು ಸಾಧ್ಯ ಎಂದು ಕಲಬುರಗಿಯ ಎ ವಿ ಪಾಟೀಲ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಚ್ ಎಸ್‌...

ಕಲಬುರಗಿ| ಬಸವಣ್ಣನವರ ಭಾವಚಿತ್ರ ಹರಿದ ಕಿಡಿಗೇಡಿಗಳು : ಸ್ಥಳೀಯರಿಂದ ಪ್ರತಿಭಟನೆ

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ವಿಶ್ವಗುರು ಬಸವಣ್ಣನವರ ಭಾವಚಿತ್ರ ಹರಿದು ಅವಮಾನ ಮಾಡಿದ್ದಾರೆ. ಕಿಡಿಗೇಡಿಗಳ ಕೃತ್ಯ ಖಂಡಿಸಿ ಸ್ಥಳೀಯ ಬಸವ ಅನುಯಾಯಿಗಳು ಶನಿವಾರ ಬೆಳಿಗ್ಗೆ ಬಸ್‌ ನಿಲ್ದಾಣ...

ಕಲಬುರಗಿ | ʼಭಾರತೀಯ ಸಂಸ್ಕೃತಿ ಉತ್ಸವʼಕ್ಕೆ ವಿದ್ಯಾರ್ಥಿಗಳನ್ನು ನಿಯೋಜಿಸದಂತೆ ಎಸ್‌ಎಫ್‌ಐ ಆಗ್ರಹ

ಕಲಬುರಗಿ ಜಿಲ್ಲೆಯಲ್ಲಿ ನಡೆಯುವ “ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಸಂಸ್ಕೃತಿ ಉತ್ಸವ'ಕ್ಕೆ ರೋವರ್ ಮತ್ತು ರೇಂಜರ್ಸ್‌ ವಿದ್ಯಾರ್ಥಿಗಳನ್ನು ನಿಯೋಜಿಸದಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ...

ಕಲಬುರಗಿ | ಪರಿಸರ ಸಂರಕ್ಷಣೆ ಎಲ್ಲರ ಹೊಣೆ; ಸಂಜಯ ಪಾಟೀಲ

ಭವಿಷ್ಯದಲ್ಲಿ ಜೀವ ಸಂಕುಲದ ಉಳಿವು, ಬೆಳವಣಿಗೆಗಾಗಿ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ಕಲಬುರಗಿ ಜಿಲ್ಲೆಯ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಸಂಜಯ ಪಾಟೀಲ ಅಭಿಪ್ರಾಯಪಟ್ಟರು. ಆಳಂದ ಪಟ್ಟಣದ ಆದರ್ಶ ಶಾಲೆಯಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X