ಕೊಡಗು

ಕೊಡಗು | ಸದ್ಯದಲ್ಲೇ ಕಂದಾಯ ನಿಗದಿ ಸಮಸ್ಯೆಗೆ ಮುಕ್ತಿ; ಜಿಲ್ಲಾಡಳಿತದಿಂದ ದಿಟ್ಟ ಹೆಜ್ಜೆ

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಂದಾಯ ನಿಗದಿ ಆಗದೇ ಇರುವ ಎಲ್ಲ ಬಾಣೆ ಜಮೀನುಗಳಿಗೆ ಕಂದಾಯ ನಿಗದಿಪಡಿಸುವ ಕುರಿತು ಪ್ರಾಯೋಗಿಕವಾಗಿ ಗ್ರಾಮವಾರು ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. "ಕೊಡಗಿನಲ್ಲಿ ಎಲ್ಲ ಬಾಣೆ ಜಾಗಗಳಿಗೆ ಕಂದಾಯ...

ಮೈಸೂರು | ಮಡಿಕೇರಿ ಜನೋತ್ಸವಕ್ಕೆ ಸಚಿವ ಶಿವರಾಜ್ ತಂಗಡಗಿಗೆ ಆಹ್ವಾನ

'ಕರ್ನಾಟಕ' ಎಂಬ ಹೆಸರನ್ನು ನಾಮಕರಣ ಮಾಡಿ 50 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಮೈಸೂರು ಭಾಗದ ಸಾಹಿತಿ ಮತ್ತು ಕಲಾವಿದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಮೈಸೂರಿನಲ್ಲಿ ಸಭೆ ನಡೆಸಿದ್ದಾರೆ....

ಕೊಡಗು | ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ; ಅರಣ್ಯ ಸಿಬ್ಬಂದಿ ಸಾವು

ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭದಲ್ಲಿ ಆನೆ ಕಾರ್ಯಪಡೆ ಸಿಬ್ಬಂದಿಯೊಬ್ಬರು ಕಾಡಾನೆ ತುಳಿತಕ್ಕೆ ಬಲಿಯಾಗಿರುವ ಘಟನೆ ಮಡಿಕೇರಿ ಬಳಿಯ ಕೆದಕಲ್‌ನಲ್ಲಿ ನಡೆದಿದೆ. ಸಿಬ್ಬಂದಿ ಗಿರೀಶ್ (35) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಮತ್ತೊಂದು ಘಟನೆಯಲ್ಲಿ ಸುಂಟಿಕೊಪ್ಪದ...

ಕೊಡಗು | ಕಾರು ಅಪಘಾತ; ಆಟೋ ಗ್ಯಾರೇಜ್ ಮಾಲೀಕ ಸಾವು

ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಅಪಘಾತಕ್ಕೀಡಾಗಿದ್ದು,. ಆಟೋ ಗ್ಯಾರೇಜ್ ಮಾಲೀಕರೊಬ್ಬರು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಬಳಿ ನಡೆದಿದೆ. ರಾಣಿಪೇಟೆಯಿಂದ ಮಡಿಕೇರಿಗೆ ಬರುತ್ತಿದ್ದ ಕಾರು ಅಪಘಾತಕ್ಕೀಡಾಗಿದೆದೆ. ಆಟೊ ಗ್ಯಾರೇಜ್...

ಕೊಡಗು | ಗುಂಡು ಹಾರಿಸಿ ಕೊಲೆ ಯತ್ನ; ನಾಯಿಗೆ ಹೊಕ್ಕ ಗುಂಡು

ಉದ್ಯಮಿ ಅನೀಶ್ ಮಾದಪ್ಪ ಅವರ ಮನೆ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ನಡೆದಿದೆ. ಅನೀಶ್‌ ಅವರ ಪುತ್ರ ಆಯುಷ್ ಮನೆಯ ಹೊರಗೆ ಸೈಕಲಿಂಗ್ ಮಾಡುವಾಗ...

ಕೊಡಗು | ಅಪ್ರಾಪ್ತೆಯ ಫೋಟೋ ಬಳಕೆ; ಪತ್ರಕರ್ತರಿಗೆ ಒಂದು ವರ್ಷ ಜೈಲು, ದಂಡ

2019ರಲ್ಲಿ ನಡೆದ ಅಪ್ರಾಪ್ತೆಯ ಅತ್ಯಾಚಾರ ಮತ್ತು ಕೊಲೆ ಪ್ರಕಣದಲ್ಲಿ ಕಾನೂನುಬಾಹಿರವಾಗಿ ಬಾಲಕಿಯ ಫೋಟೋ ಬಳಸಿ ಸುದ್ದಿಮಾಡಿದ್ದ ಪತ್ರಕರ್ತ ಮತ್ತು ಕಾವೇರಿ ಟೈಮ್ಸ್ ಸಂಪಾದಕರಿಗೆ ಒಂದು ವರ್ಷ ಜೈಲು ಹಾಗೂ ₹25,000 ದಂಡ ವಿಧಿಸಿ...

ಕೊಡಗು | ಮಾದಕ ವಸ್ತು ಮಾರಾಟ ಪ್ರಕರಣ; 9 ಮಂದಿ ಬಂಧನ

ಕೊಡಗು ಜಿಲ್ಲೆಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪದ ಮೇಲೆ ಪ್ರತ್ಯೇಕ ಪ್ರಕರಣಗಳಲ್ಲಿ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾಪೋಕ್ಲು ಪೋಲಿಸ್ ಠಾಣೆ ವ್ಯಾಪ್ತಿಯ ನರಿಯಂಡ ಗ್ರಾಮದ ಪ್ರೌಢ ಶಾಲೆಯ...

ಕೊಡಗು | ಕವಿತೆಗೂ ಸಮಾಜವನ್ನು ತಿದ್ದುವ ಶಕ್ತಿ ಇದೆ: ಮಾಜಿ ಸ್ಪೀಕರ್ ಬೋಪಯ್ಯ

ಕವಿತೆಗೂ ಸಮಾಜವನ್ನು ತಿದ್ದುವ ಶಕ್ತಿ ಇದೆ. ಪತ್ರಕರ್ತರು ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಜಿ ಬೋಪಯ್ಯ ಹೇಳಿದ್ದಾರೆ. ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ಕೊಡಗು ಪ್ರೆಸ್‌ಕ್ಲಬ್ ಮತ್ತು...

ಕೊಡಗು | ಚಿನ್ನದ ಬ್ರೇಸ್ಲೆಟ್ಅನ್ನು ಕಳೆದುಕೊಂಡಿದ್ದವರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್‌ ಸಿಬ್ಬಂದಿ

ಪ್ರಯಾಣಿಕರೋರ್ವರು ಕಳೆದುಕೊಂಡಿದ್ದ ಚಿನ್ನದ ಬ್ರೇಸ್ಲೆಟ್‌ಅನ್ನು ವಾರಸುದಾರರಿಗೆ ತಲುಪಿಸಿ ಮಡಿಕೇರಿ ನಗರ ಠಾಣೆಯ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ. ಪತ್ರಕರ್ತ ತೇಲಪಂಡ ಕವನ್ ಕಾರ್ಯಪ್ಪ ಅವರು ಆಗಸ್ಟ್ 29ರಂದು ಕುಶಾಲನಗರದಿಂದ ಮಡಿಕೇರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತೆರಳುತ್ತಿದ್ದಾಗ ಬ್ರೇಸ್ಲೆಟ್...

ಕೊಡಗು | ದೇಹದಾಡ್ಯ ಸ್ಪರ್ಧೆಯಲ್ಲಿ ಮಡಿಕೇರಿ ಯುವಕ ಸಾಧನೆ

ಬೆಂಗಳೂರಿನಲ್ಲಿ ನಡೆದ 'ವಲ್ಡ್ ಫಿಟ್ನೆಸ್ ಫೆಡರೇಷನ್ ರಾಯಲ್ ಕ್ಲಾಸಿಕ್ -2023' ದೇಹದಾಡ್ಯ ಸ್ಪರ್ಧೆಯ 55 ಕೆ.ಜಿ ವಿಭಾಗದಲ್ಲಿ ಮಡಿಕೇರಿಯ ಗಣೇಶ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕೊಡಗು ಜಿಲ್ಲೆಗೆ ಹಿರಿಮೆ ತಂದಿದ್ದಾರೆ. ಮಡಿಕೇರಿಯ ರೆಸ್ಟೋರೆಂಟ್‌ವೊಂದರಲ್ಲಿ...

ಕೊಡಗು | ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕಿ ವರ್ಗಾವಣೆ

ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪವನ್ನು ನಿರಂತರವಾಗಿ ಎದುರಿಸುತ್ತಿದ್ದ ಮಡಿಕೇರಿ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕಿ ಗೀತಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಮಡಿಕೇರಿ ಡಿಪೋದಿಂದ ಅವರನ್ನು ಹಾಸನ ಜಿಲ್ಲೆಯ ರಾಮನಾಥಪುರ ಡಿಪೋಗೆ ವರ್ಗಾವಣೆ ಮಾಡಿ...

ಕೊಡಗು | ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿ ಆತ್ಮಹತ್ಯೆ

ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ಮೂಲತಃ ಮಂಡ್ಯದವರಾದ ರಶ್ಮಿ (27) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಅವರು ಮಡಿಕೇರಿಯಲ್ಲಿರುವ ಅರಣ್ಯ ಇಲಾಖೆಯ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X