ಕೊಡಗು | ಚಿನ್ನದ ಬ್ರೇಸ್ಲೆಟ್ಅನ್ನು ಕಳೆದುಕೊಂಡಿದ್ದವರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್‌ ಸಿಬ್ಬಂದಿ

Date:

ಪ್ರಯಾಣಿಕರೋರ್ವರು ಕಳೆದುಕೊಂಡಿದ್ದ ಚಿನ್ನದ ಬ್ರೇಸ್ಲೆಟ್‌ಅನ್ನು ವಾರಸುದಾರರಿಗೆ ತಲುಪಿಸಿ ಮಡಿಕೇರಿ ನಗರ ಠಾಣೆಯ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಪತ್ರಕರ್ತ ತೇಲಪಂಡ ಕವನ್ ಕಾರ್ಯಪ್ಪ ಅವರು ಆಗಸ್ಟ್ 29ರಂದು ಕುಶಾಲನಗರದಿಂದ ಮಡಿಕೇರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತೆರಳುತ್ತಿದ್ದಾಗ ಬ್ರೇಸ್ಲೆಟ್ ಕಳೆದುಕೊಂಡಿದ್ದರು. ಇದೇ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರೋರ್ವರು ಬ್ರೇಸ್ಲೆಟನ್ನು ಚಾಲಕರಿಗೆ ನೀಡಿದ್ದು, ಮಡಿಕೇರಿ ಬಸ್ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೋಲೀಸ್ ಸಿಬ್ಬಂದಿ ಪ್ರೀತಿ ಘಾಟಗೆ ಅವರಿಗೆ ಮಾಹಿತಿ ನೀಡಿದ್ದರು.

ಮಹಿಳಾ ಪೊಲೀಸ್ ಸಿಬ್ಬಂದಿ ಪ್ರೀತಿ ಘಾಟಗೆ ಅವರು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬುಧವಾರದಂದು ನಗರ ಠಾಣೆಯಲ್ಲಿ ಕವನ್ ಕಾರ್ಯಪ್ಪ ಅವರು ಪ್ರೀತಿ ಘಾಟಗೆ ಅವರಿಂದ ಬ್ರೇಸ್ಲೆಟ್‌ ಪಡೆದುಕೊಂಡರು. ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿಗಳು, ಸಿಬ್ಬಂದಿಗಳು ಪ್ರೀತಿ ಅವರ ಪ್ರಾಮಾಣಿಕತೆಗೆ ಪ್ರಶಂಶೆ ವ್ಯಕ್ತ ಪಡೆಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಕೊಡಗು | ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕಿ ವರ್ಗಾವಣೆ

ಪ್ರಯಾಣಿಕರೋರ್ವರು ಕಳೆದುಕೊಂಡಿದ್ದ ಚಿನ್ನದ ಬ್ರೇಸ್ಲೆಟನ್ನು ವಾರಸುದಾರರಿಗೆ ತಲುಪಿಸಿದ ಗೌರವಕ್ಕೆ ಮಡಿಕೇರಿ ನಗರ ಠಾಣೆಯ ಸಿಬ್ಬಂದಿ ಪ್ರೀತಿ ಘಾಟಗೆ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಡಗು | ಮಸೀದಿಯಲ್ಲಿ ನಮಾಜ್ ಮಾಡಿದ್ದ ಮಹಿಳೆ; ಕುಟುಂಬಕ್ಕೆ 25 ವರ್ಷಗಳಿಂದ ಬಹಿಷ್ಕಾರ

ಮುಸ್ಲಿಂ ಮಹಿಳೆಯೊಬ್ಬರು ಮಸೀದಿಯಲ್ಲಿ ನಮಾಜ್ ಮಾಡಿದ್ದಕ್ಕೆ, ಅವರ ಕುಟುಂಬಕ್ಕೆ ಗ್ರಾಮದಲ್ಲಿ ಬಹಿಷ್ಕಾರ...

ಕೊಡಗು | ಬಾಳುಗೋಡು ಆದಿವಾಸಿಗಳ ನೀರಿನ ದಾಹಕ್ಕೆ ಕೊನೆಗೂ ಮುಕ್ತಿ: ಕೊಳವೆಬಾವಿ ಕೊರೆಸಿದ ಗ್ರಾಮ ಪಂಚಾಯತಿ

ಕುಡಿಯುವ ನೀರಿನ ಸಮಸ್ಯೆಯನ್ನು ಅನುಭವಿಸುತ್ತಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳುಗೋಡಿನ...

ರಾಜ್ಯದಲ್ಲಿ 5,000 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ: ಈಶ್ವರ ಖಂಡ್ರೆ

ರಾಜ್ಯದಲ್ಲಿ ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ ಸುಮಾರು 5,000 ಎಕರೆ...