ಮೈಸೂರು

ಮೈಸೂರು | ಹುಲಿ ದಾಳಿ; ಬಾಲಕ ಬಲಿ

ಬಾಲಕನ ಮೇಲೆ ಹುಲಿ ದಾಳಿ ನಡೆಸಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಎಚ್‌.ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಮೇಟಿಕುಪ್ಪೆ ವನ್ಯಜೀವಿ ವಲಯದಲ್ಲಿ ಬಾಲಕನ ಮೇಲೆ ಹುಲಿ ದಾಳಿ ಮಾಡಿದೆ....

ಮೈಸೂರು | ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ರೈತ ಸಂಘ ಆಗ್ರಹ

ಕಾವೇರಿ ನೀರು ನಿರ್ವಹಣಾ ಸಮಿತಿಯ ತೀರ್ಮಾನವು ರಾಜ್ಯದ ರೈತ ವಿರೋಧಿಯಾಗಿದೆ. ಸರ್ಕಾರ ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸದೆ, ರಾಜ್ಯದ ರೈತರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ...

ಮೈಸೂರು | ನಾಡಹಬ್ಬ ದಸರಾಕ್ಕೆ ಹೊರಟ ಗಜ ಪಯಣಕ್ಕೆ ಸಚಿವ ಈಶ್ವರ್‌ ಖಂಡ್ರೆ ಚಾಲನೆ

ವಿಶ್ವ ವಿಖ್ಯಾತ ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳುವ ಗಜಪಯಣಕ್ಕೆ ಹುಣಸೂರು‌‌ ತಾಲೂಕಿನ ವೀರನಹೊಸಹಳ್ಳಿಯಲ್ಲಿ ಮೈಸೂರು ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮತ್ತು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಚಾಲನೆ ನೀಡಿದರು. ಅಭಿಮನ್ಯು,...

ಮೈಸೂರು | ಚಾಮುಂಡಿ ಬೆಟ್ಟದಲ್ಲಿ ತ್ಯಾಜ್ಯ ಬಿಸಾಡಿದರೆ ದಂಡ, ಹೊಸ ನಿಯಮ ಜಾರಿ

ಚಾಮುಂಡಿ ಬೆಟ್ಟವನ್ನು ಕಸ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡಲು ಮೈಸೂರು ಅರಣ್ಯ ಸಂರಕ್ಷಣಾಧಿಕಾರಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ದಂಡ ವಿಧಿಸುವುದರ ಜತೆಗೆ ಲೈಸೆನ್ಸ್‌ ರದ್ದು ಮಾಡಲಾಗುವುದು ಎಂದು ಸೂಚನೆ ನೀಡಿದ್ದಾರೆ. ರಾಜ್ಯ ಅಲ್ಲದೇ...

ಮೈಸೂರು | ಸ್ವಚ್ಛತಾ ಅಭಿಯಾನಕ್ಕೆ ಮಂಡ್ಯ ರಮೇಶ್ ರಾಯಭಾರಿ

ಮೈಸೂರು ನಗರವನ್ನು ಮತ್ತೆ ದೇಶದ ನಂ.1 ಸ್ವಚ್ಛತ ನಗರಿ ಮಾಡುವ ಸ್ವಚ್ಛತಾ ಅಭಿಯಾನಕ್ಕೆ ಮಂಡ್ಯ ರಮೇಶ್ ರಾಯಭಾರಿಯಾಗಿದ್ದಾರೆ. ರಾಯಭಾರಿಯಾಗುವಂತೆ ಮೈಸೂರು ಮಹಾನಗರ ಪಾಲಿಕೆ ನೀಡಿದ್ದ ಆಹ್ವಾನವನ್ನು ಮಂಡ್ಯ ರಮೇಶ್‌ ಒಪ್ಪಿಕೊಂಡಿದ್ದಾರೆ. 2015 ಮತ್ತು...

ಮೈಸೂರು | ಗ್ಯಾರಂಟಿ ಯೋಜನೆಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣ ಬಳಸದಂತೆ ಒತ್ತಾಯ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅನುದಾನವನ್ನು ದುರ್ಬಳಕೆ ಮಾಡುತ್ತಿರುವ ಸರ್ಕಾರದ ನಡೆ ಖಂಡನೀಯ. ಯಾವುದೇ ಕಾರಣಕ್ಕೂ ಎಸ್‌ಸಿ/ಎಸ್‌ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಬಾರದು ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ಆಗ್ರಹಿಸಿದೆ. ಮೈಸೂರಿನಲ್ಲಿ ಪ್ರತಿಭಟನೆ...

ಮೈಸೂರು | ರಾಜ್ಯದಲ್ಲಿ ಮಳೆಕೊರತೆ; ತಮಿಳುನಾಡಿಗೆ ನೀರು ಹರಿಸದಂತೆ ರೈತ ಸಂಘ ಒತ್ತಾಯ

ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಮೈಸೂರಿನ ದಕ್ಷಿಣ ನೀರಾವರಿ ವಲಯ ಮುಖ್ಯ ಅಭಿಯಂತರರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ...

ಕನ್ನಡ ಭಾಷೆಯ ಮೂಲಕ ದಕ್ಷಿಣ ಭಾರತವನ್ನು ಭದ್ರ ಪಡಿಸಿಕೊಳ್ಳಬೇಕು: ಹಂಸಲೇಖ

ಕನ್ನಡ ಭಾಷೆಯ ಮೂಲಕ ದಕ್ಷಿಣವನ್ನು ನಾವು ಭದ್ರಪಡಿಸಿಕೊಳ್ಳುವ ಕಾಲ ಬಂದಿದೆ. ತೆಂಕಣದಿಂದ ಉತ್ತರವನ್ನು ಕೂಡ ನಾವು ಪ್ರಶ್ನಿಸಬೇಕು. ಇದಕ್ಕೆಲ್ಲ ಬೇಕಾದ ಪ್ರಮುಖ ಅಂಶವೇ ಕನ್ನಡ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ. ದಸರಾ...

ಸಂಗೀತ ನಿರ್ದೇಶಕ ಹಂಸಲೇಖರಿಂದ ಈ ಬಾರಿ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಈ ಬಾರಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ...

ಕನ್ನಡ ಕಲಿಕೆ | ವಿದ್ಯಾರ್ಥಿಗಳಿಗಿಂತ ಅಧ್ಯಾಪಕ ಹೆಚ್ಚು ಕೆಲಸ ಮಾಡಬೇಕಾಗುತ್ತದೆ: ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ

ಬೇರೆ ಬೇರೆ ಕಾರಣಕ್ಕೆ ಕನ್ನಡೇತರರು ಕರ್ನಾಟಕಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕನ್ನಡ ಸಾಹಿತ್ಯ, ಭಾಷೆ ಮತ್ತು ಕರ್ನಾಟಕ ಸಂಸ್ಕೃತಿಯ ಬಗೆಗೂ ದೇಶವಿದೇಶಗಳಲ್ಲಿ ಆಸಕ್ತಿ ಹೆಚ್ಚುತ್ತಿದೆ. ಅಮೆರಿಕಾ ಮತ್ತು ಯುರೋಪಿನ ವಿದ್ವಾಂಸರು ಹಳಗನ್ನಡ ನಡುಗನ್ನಡ...

ಮೈಸೂರು | ವಾಹನ ತಪಾಸಣೆ ಹೆಸರಲ್ಲಿ ಹಗಲು ದರೋಡೆ; ಸ್ಥಳೀಯರ ಆರೋಪ

ಮೈಸೂರು ನಗರ ಪ್ರದೇಶಗಳಲ್ಲಿ ನಗರ ಸಂಚಾರ ಪೊಲೀಸರಿಂದ ವಾಹನ ತಪಾಸಣೆ ನಡೆಯುತ್ತಿದೆ. ನಗರ ಸಂಚಾರ ಪೊಲೀಸರು ತಪಾಸಣೆ ವೇಳೆ ಎಲ್ಲ ವಾಹನಗಳನ್ನು ತಡೆದು, ಗಂಟೆಗಟ್ಟಲೆ ನಿಲ್ಲಿಸಿಕೊಂಡು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು...

ಹೋರಾಟಗಾರ ಮಂಟೇ ಲಿಂಗಯ್ಯ ಇನ್ನಿಲ್ಲ

ಜನಪರ ಹೋರಾಟಗಾರ, ಅಂಬೇಡ್ಕರ್ ವಾದಿ ಮಂಟೇ ಲಿಂಗಯ್ಯ ಅವರು ಹೃದಯಾಘಾತದಿಂದ ಮೈಸೂರಿನಲ್ಲಿ ಸೋಮವಾರ ಸಂಜೆ ನಿಧನರಾಗಿದ್ದಾರೆ. ನಗರದ ಕೆಸರೆಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಮಂಗಳವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ....

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X