ಜಿಲ್ಲೆಗಳು

ದಕ್ಷಿಣ ಕನ್ನಡ | ಭೀಕರ ರಸ್ತೆ ಅಪಘಾತ; ನಾಲ್ವರು ಸ್ಥಳದಲ್ಲಿಯೇ ಸಾವು

ಆಲ್ಟೋ ಕಾರು ಮತ್ತು ತೂಫಾನ್ ವಾಹನದ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಹಲವರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಟ್ಟಣದ...

ತುಮಕೂರಿನಲ್ಲೂ ಬಿಜೆಪಿಗೆ ಬಂಡಾಯದ ಬಿಸಿ : ಸ್ವತಂತ್ರ ಅಭ್ಯರ್ಥಿಯಾದ ಸೊಗಡು ಶಿವಣ್ಣ

ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸೊಗಡು ಶಿವಣ್ಣ ತುಮಕೂರಿನಲ್ಲೂ ಬಿಜೆಪಿಗೆ ತಟ್ಟಿದ ಬಂಡಾಯದ ಬಿಸಿ ಆಡಳಿತ ಪಕ್ಷ ಬಿಜೆಪಿಗೆ ಬಂಡಾಯದ ಏಟು ಬಲವಾಗಿಯೇ ಬೀಳುತ್ತಿದೆ. ಒಂದು ಕಡೆ ಪಕ್ಷ ಬಿಡುವವರ ಒಳಪೆಟ್ಟು, ಮತ್ತೊಂದು ಕಡೆ ಬಂಡಾಯವೆದ್ದು ನಿಲ್ಲುವವರ...

ಕೊಪ್ಪಳ | ಬಿಜೆಪಿಯ ತತ್ವ, ಸಿದ್ಧಾಂತಗಳ ಮಾತು ಕೇಳಿದರೆ ವಾಂತಿ ಬರುತ್ತದೆ: ಜನಾರ್ದನ ರೆಡ್ಡಿ

ಹಿರಿಯ ನಾಯಕ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಬಿಜೆಪಿಯಿಂದ ಹೊರಬಂದಿದ್ದಾರೆ. ಯಡಿಯೂರಪ್ಪನವರು ಮಗನ ಸಲುವಾಗಿ ಅಲ್ಲಿಯೇ ಉಳಿದುಕೊಂಡಿದ್ದಾರೆ. ಬಿಜೆಪಿಯ ತತ್ವ, ಸಿದ್ಧಾಂತಗಳ ಮಾತು ಕೇಳಿದರೆ ವಾಂತಿ ಬರುತ್ತದೆ ಎಂದು ಕಲ್ಯಾಣ ರಾಜ್ಯ...

ಚಾಮರಾಜನಗರ | ಚುನಾವಣಾ ತರಬೇತಿ ವೇಳೆ ಹೃದಯಾಘಾತದಿಂದ ಸಿಬ್ಬಂದಿಯೋರ್ವ ಸಾವು

ವಿಧಾನಸಭಾ ಚುನಾವಣೆ ನಿಮಿತ್ತ ತರಬೇತಿಗೆ ಆಗಮಿಸಿದ್ದ ಜಗದೀಶ್ (40) ಎಂಬುವವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ನಡೆದಿದೆ. ಜಗದೀಶ್ ಅವರು ಹನೂರು ಉಪಖಜಾನಾಧಿಕಾರಿಗಳ ಕಾರ್ಯಾಲಯದಲ್ಲಿ 'ಡಿ' ದರ್ಜೆ ನೌಕರರಾಗಿದ್ದರು. ಹನೂರು ಪಟ್ಟಣದ...

ಚುನಾವಣೆ 2023 | ಜನಾರ್ದನ ರೆಡ್ಡಿ ಪತ್ನಿಯ ಘೋಷಿತ ಆಸ್ತಿ ₹250 ಕೋಟಿ

ಬಳ್ಳಾರಿ ನಗರದ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಜಿ ಲಕ್ಷ್ಮಿಅರುಣಾ ಕಣಕ್ಕಿಳಿದಿದ್ದಾರೆ. ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ತಮ್ಮ ಬಳಿಯಿರುವ ಆಸ್ತಿಯನ್ನು...

ಬೆಂಗಳೂರು | 45 ರೌಡಿಶೀಟರ್‌ಗಳ ಗಡಿಪಾರಿಗೆ ಮುಂದಾದ ಪೊಲೀಸ್‌ ಇಲಾಖೆ

ಶಾಂತಿ ಸುವ್ಯವಸ್ಥೆ ಕಾಪಾಡಲು ಸುಮಾರು 45 ಪ್ರಮುಖ ರೌಡಿಶೀಟರ್‌ಗಳ ಗಡಿಪಾರು 33 ರೌಡಿಗಳ ಗಡಿಪಾರಿಗೆ ಸಿದ್ಧತೆ ನಡೆಯುತ್ತಿದ್ದು, ಕೌನ್ಸಿಲಿಂಗ್ ಆಗುತ್ತಿದೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ವೇಳೆ, ನಗರದಲ್ಲಿ ಶಾಂತಿ...

ಗದಗ | ರಾಜಕಾರಣದಲ್ಲಿ ಮೂಲ ಅಸ್ಪೃಷ್ಯರು ತುಳಿತಕ್ಕೆ ಒಳಗಾಗಿದ್ದಾರೆ: ರಾಮಣ್ಣ ಗಡದ

'ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದು ಸ್ವಾಗತಾರ್ಹ' 'ಸದಾಶಿವ ಆಯೋಗದ ವರದಿ ಜಾರಿ ಹೋರಾಟಕ್ಕೆ ಶ್ರಮಿಸಿದವರಿಗೆ ಅಭಿನಂದನೆ' ಶತ-ಶತಮಾನಗಳಿಂದ ಅಸ್ಪ್ರಶ್ಯತೆಯಲ್ಲಿ ಬೆಂದ ಅತ್ಯಂತ ಶೋಷಿತ ಸಮುದಾಯಗಳಾದ ಮಾದಿಗ, ಛಲವಾದಿ, ಸಮಗಾರ, ಡೋಹರ ಮತ್ತು ಮೋಚಿಗಾರ...

ಬಿಡಬ್ಲೂಎಸ್‌ಎಸ್‌ಬಿ ಗುಂಡಿಗೆ ಎರಡೂವರೆ ವರ್ಷದ ಮಗು ಬಿದ್ದು ಸಾವು

ಬಿಡಬ್ಲೂಎಸ್‌ಎಸ್‌ಬಿ ಕಾಮಗಾರಿ ಹೆಸರಿನಲ್ಲಿ ಗುಂಡಿ ತೆಗೆದು ತಿಂಗಳು ಕಳೆದಿದೆ ಬೆಂಗಳೂರಿನ ಗೊಲ್ಲರಹಟ್ಟಿ ಪೈಪ್‌ಲೇನ್ ಬಳಿ ಈ ಘಟನೆ ನಡೆದಿದೆ ರಾಜ್ಯ ರಾಜಧಾನಿಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ (ಬಿಡಬ್ಲ್ಯೂಎಸ್ಎಸ್‌ಬಿ) ಗುಂಡಿಗೆ ಎರಡೂವರೆ ವರ್ಷದ ಮಗು...

ಕೋಲಾರ | ಹಸು ಹೊಟ್ಟೆಯಿಂದ 15 ಕೆಜಿ ಪ್ಲಾಸ್ಟಿಕ್‌ ಹೊರತೆಗೆದ ವೈದ್ಯರು!

ಮೇವು ತಿನ್ನುವುದು ನಿಲ್ಲಿಸಿ ಹಾಲು ಇಳುವರಿ ಕಡಿಮೆ ಮಾಡಿದ್ದ ಹಸು ಹಸುಗಳನ್ನು ಮೇಯಲು ಬಿಡುವಾಗ ಎಚ್ಚರಿಕೆ ವಹಿಸುವಂತೆ ಸಲಹೆ 15 ಕೆಜಿ ಪ್ಲಾಸ್ಟಿಕ್‌ ತಿಂದು ಹೊಟ್ಟೆಯಲ್ಲಿಟ್ಟುಕೊಂಡು ಬಳಲುತಿದ್ದ ಹಸುವಿಗೆ ಪಶು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಪ್ಲಾಸ್ಟಿಕ್‌...

ಬೆಂಗಳೂರು | ಮತದಾನದ ದಿನ ಕಾರ್ಮಿಕರಿಗೆ ಸಂಬಳ ಸಹಿತ ರಜೆ

ಪ್ರತಿ ಗಾರ್ಮೆಂಟ್ಸ್​​​ಗೆ ಭೇಟಿ ನೀಡಿ ಕಾರ್ಮಿಕರಿಗೆ ಮತದಾನ ಮಾಡಲು ಮನವಿ ಮತದಾನ ಮಾಡದವರಿಗೆ ಸಂಬಳ ಸಹಿತ ರಜೆ ಪಡೆಯುವ ಹಕ್ಕು ಇಲ್ಲ ಜನತಂತ್ರಗಳ ಚುನಾವಣೆಗಳಲ್ಲಿ ಮತದಾನ ಪ್ರಮುಖ ಅಂಗ. ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು...

ಚಿಕ್ಕಮಗಳೂರು | ತಪ್ಪಿದ ಕೈ ಟಿಕೆಟ್‌; ಬಂಡಾಯ ಅಭ್ಯರ್ಥಿಯಾಗಿ ಗೋಪಿಕೃಷ್ಣ ಕಣಕ್ಕೆ

ಟಿಕೆಟ್‌ ತಪ್ಪಲು ಸಿದ್ದರಾಮಯ್ಯ ಕಾರಣ; ಗೋಪಿಕೃಷ್ಣ ಆರೋಪ ಮಡಿವಾಳ ಸಮುದಾಯಕ್ಕೆ ಟಿಕೆಟ್ ನೀಡುವುದಾಗಿ ಹೇಳಿದ್ದರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡ ಎಚ್.ಐ ಗೋಪಿಕೃಷ್ಣ ಬಂಡಾಯವೆದ್ದಿದ್ದು, ಕೈ...

ಚುನಾವಣೆ 2023 | ಬಿಎಸ್‌ವೈ ಪುತ್ರ ವಿಜಯೇಂದ್ರ ಘೋಷಿತ ಆಸ್ತಿ ಮೌಲ್ಯ ₹126 ಕೋಟಿ

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಶಿವಮೊಗ್ಗದ ಶಿಕಾರಿಪುರ ಕ್ಷೇತ್ರದಿಂದ ಕಣಕ್ಕಿಳಿದಿರುವ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ,...

ಈ ಹೊತ್ತಿನ ಪ್ರಮುಖ ಸುದ್ದಿ