ಔರಾದ(ಬಿ) ತಾಲೂಕಿನ ಚಟ್ನಾಳ ಗ್ರಾಮದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯಸಾನಿಧ್ಯದಲ್ಲಿ ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರ ದಿವ್ಯಸಮ್ಮುಖದಲ್ಲಿ ಇಂದು (ಬುಧವಾರ) ಸಂಜೆ 6 ಗಂಟೆಗೆ ‘ಚಟ್ನಾಳ ಸಂಭ್ರಮ’ ಸಮಾರಂಭ ಜರುಗಲಿದೆ.
ಗ್ರಾಮದ ಹಿರಿಯ ಮುಖಂಡ ಚಂದ್ರಪ್ಪ ಕುಂಬಾರ ಅಧ್ಯಕ್ಷತೆ ವಹಿಸಿಲಿದ್ದಾರೆ . ಔರಾದ್ ತಾಲೂಕಾ ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಅವರಿಂದ ಬಸವಗುರು ಪೂಜೆ ನಡೆಯುವುದು. ಮುಖ್ಯ ಅತಿಥಿಗಳಾಗಿ ಶೆಂಬೆಳ್ಳಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗೇಶ ಮುಕರಂಬೆ ಆಗಮಿಸಲಿದ್ದಾರೆ. ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ.ಸಂಜೀವಕುಮಾರ ಜುಮ್ಮಾ ಅವರಿಂದ ಪ್ರಾರ್ಥನೆ ನಡೆಯುವುದು. ಗುಲಬರ್ಗಾ ವಿವಿ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಅನುಭವ ಮಂಟಪ ಗುರುಕುಲ ಪಬ್ಲಿಕ್ ಶಾಲೆ ಸಂತಪೂರ, ಜ್ಞಾನ ಭಾರತಿ ಗುರುಕುಲ ಸಂತಪೂರ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ಚಟ್ನಾಳ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಾಲ್ಕಿ ಹಿರೇಮಠದ ಹಾನಗಲ್ಲ ಕುಮಾರೇಶ್ವರ ಪ್ರಸಾದ ನಿಲಯದ ಮಕ್ಕಳಿಂದ ‘ಬಸವ ಆಸ್ತಿ’ ಕಿರುನಾಟಕ ಪ್ರದರ್ಶನಗೊಳ್ಳಲಿದೆ.
ಇದನ್ನೂ ಓದಿ : ಬೀದರ್ | ಸಂವಿಧಾನ ಮೌಲ್ಯಗಳಿಂದ ಸಾಮರಸ್ಯ ಸಮಾಜ ನಿರ್ಮಾಣ : ಸಚಿವ ಈಶ್ವರ ಖಂಡ್ರೆ
This video cannot be played in your browser. Open the video directly
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮದ ಸಾಧಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಗೌರವ ಸನ್ಮಾನ ಜರುಗುವುದು ಎಂದು ಸಮಾರಂಭದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





