ದೇಶ

ಅಸ್ಸಾಂ ಸಿಎಂ ಶರ್ಮಾ ಅವರ ‘ಕಂಡಲ್ಲಿ ಗುಂಡಿಕ್ಕುವ’ ಆದೇಶ ಸಾಂವಿಧಾನಿಕವೇ?

"ನಮ್ಮ ದೇಗುಲಗಳನ್ನು ಹಾನಿಪಡಿಸುವ ಉದ್ದೇಶದಿಂದ ಕೆಲ ಗುಂಪುಗಳು ಸಕ್ರಿಯವಾಗಿವೆ" ಎಂಬ ಕಾರಣ ನೀಡಿ ಅಸ್ಸಾಂ ಅಸ್ಸಾಂ ಸಿಎಂ ಶರ್ಮಾ(ಹಿಮಾಂತ ಬಿಸ್ವಾ ಶರ್ಮಾ) ಶುಕ್ರವಾರ ಧುಬ್ರಿ ಜಿಲ್ಲೆಯಲ್ಲಿ ʼಕಂಡಲ್ಲಿ ಗುಂಡಿಕ್ಕುವʼ ಆದೇಶ ನೀಡಿದ್ದಾರೆ. ಗುಹಾವಟಿಯ ಧುಬ್ರಿ...

ಇಸ್ರೇಲ್-ಇರಾನ್ ಸಂಘರ್ಷ | ಇರಾನ್‌ನಲ್ಲಿರುವ ಭಾರತೀಯರಿಗೆ ತುರ್ತು ಸಂಪರ್ಕ ವಿವರ ಬಿಡುಗಡೆ ಮಾಡಿದ ರಾಯಭಾರ ಕಚೇರಿ

ಇಸ್ರೇಲ್-ಇರಾನ್ ಸಂಘರ್ಷ ಹೆಚ್ಚಾಗುತ್ತಿದ್ದಂತೆ ಇರಾನ್‌ನಲ್ಲಿರುವ ಭಾರತೀಯರಿಗೆ ಎಚ್ಚರದಿಂದಿರಲು ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇರಾನ್‌ನಲ್ಲಿರುವ ಭಾರತೀಯರು ಭಯಭೀತರಾಗಬೇಡಿ, ಸರಿಯಾದ ಎಚ್ಚರಿಕೆ ವಹಿಸಿ, ಟೆಹ್ರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯೊಂದಿಗೆ...

ಅಹಮದಾಬಾದ್ ವಿಮಾನ ದುರಂತ ಬೆನ್ನಲ್ಲೇ ಹೆಚ್ಚುತ್ತಿವೆ ‘ಏರ್‌ ಇಂಡಿಯಾ’ ವಿರುದ್ದದ ದೂರುಗಳು

ಜೂನ್‌ 12ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 245 ಮಂದಿ ಪ್ರಯಾಣಿಕರು ಮತ್ತು 8 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ದುರ್ಘಟನೆಗೆ ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಗಳೇ ಕಾರಣವೆಂದು ಹೇಳಲಾಗುತ್ತಿದೆ. ದುರ್ಘಟನೆಯಿಂದಾಗಿ, ಏರ್ ಇಂಡಿಯಾ...

ಪುಣೆ | ಇಂದ್ರಯಾಣಿ ನದಿ ಸೇತುವೆ ಕುಸಿತ; ಇಬ್ಬರ ಸಾವು, 20ಕ್ಕೂ ಅಧಿಕ ಪ್ರವಾಸಿಗರು ನಾಪತ್ತೆ

ಮಹಾರಾಷ್ಟ್ರದ ಪುಣೆಯಲ್ಲಿ ಇಂದ್ರಯಾಣಿ ನದಿ ಸೇತುವೆ ಕುಸಿದು ಸುಮಾರು 20ಕ್ಕೂ ಅಧಿಕ ಪ್ರವಾಸಿಗರು ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರ ಮೃತದೇಹ ಪತ್ತೆಯಾಗಿದೆ. ಮಳೆಗಾಲದಲ್ಲಿ ಹೆಚ್ಚಿನ ಜನಸಂದಣಿ ಕಂಡುಬರುವ ಜನಪ್ರಿಯ ಪ್ರವಾಸಿ ತಾಣವಾದ...

ಉತ್ತರ ಪ್ರದೇಶ | ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಅಪಘಾತ; ಐವರ ದಾರುಣ ಸಾವು

ಮೃತದೇಹ ಮತ್ತು ಅವರ ಕುಟುಂಬಸ್ಥರನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್, ಪಿಕ್ ಅಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಪುರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಭಾನುವಾರ ನಡೆದಿದೆ.ಆಂಬ್ಯುಲೆನ್ಸ್‌ನಲ್ಲಿ ಹರಿಯಾಣದಿಂದ ಬಿಹಾರಕ್ಕೆ ಮೃತದೇಹವನ್ನು...

ಮೋದಾನಿ ಫೈಲ್ಸ್‌ | ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಭಾರತದ ‘LIC’ ಹಣಕ್ಕೆ ಕುತ್ತು?

ಇಸ್ರೇಲ್-ಇರಾನ್ ನಡುವೆ ಸಂಘರ್ಷ ಉಲ್ಬಣಿಸಿದೆ. ಇಸ್ರೇಲ್‌ನ ಹೈಫಾ ಬಂದರನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್‌ನ (ಅದಾನಿ ಪೋರ್ಟ್‌) ಷೇರುಗಳ ಮೌಲ್ಯವು 3.2%ರಷ್ಟು ಕುಸಿತ ಕಂಡಿದೆ. ಹೈಫಾ ನಿರ್ವಹಣೆಗಾಗಿ ಅದಾನಿ ಪೋರ್ಟ್‌ನಲ್ಲಿ ಹೂಡಿಕೆ ಮಾಡಿರುವ ಎಲ್‌ಐಸಿಯ...

ವಿದೇಶ ಪ್ರವಾಸ ಹೊರಟ ಪ್ರಧಾನಿಗೆ ಮಣಿಪುರಕ್ಕೆ ಭೇಟಿ ನೀಡುವ ಸಹಾನುಭೂತಿಯೂ ಇಲ್ಲ: ಕಾಂಗ್ರೆಸ್ ಟೀಕೆ

ನಿರಂತರವಾಗಿ ವಿದೇಶ ಪ್ರವಾಸದಲ್ಲೇ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಟೀಕಿಸಿದೆ. ವಿದೇಶಕ್ಕೆ ಪ್ರವಾಸ ಹೋಗುವಷ್ಟು ಶಕ್ತಿಯಿರುವ ಪ್ರಧಾನಿಗೆ ಮಣಿಪುರಕ್ಕೆ ಭೇಟಿ ನೀಡುವ ಸಹಾನುಭೂತಿಯೂ ಇಲ್ಲ ಎಂದು ವಾಗ್ದಾಳಿ ನಡೆಸಿದೆ. ಈ ಬಗ್ಗೆ...

ಕಾಶಿ ದೇವಾಲಯದ ನಿರ್ಬಂಧಿತ ಸ್ಥಳದಲ್ಲಿ ಕಾಣಿಸಿಕೊಂಡ ಬಿಹಾರ ಮಾಜಿ ಸಚಿವ ತೇಜ್ ಪ್ರತಾಪ್: ತನಿಖೆಗೆ ಆದೇಶ

ಲಾಲು ಪ್ರಸಾದ್ ಯಾದವ್ ಅವರ ಪುತ್ರ ಮತ್ತು ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಅವರು ಕಾಶಿ ದೇವಾಲಯದ ನಿರ್ಬಂಧಿತ ಸ್ಥಳದಲ್ಲಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಕಾಶಿ ವಿಶ್ವನಾಥ ದೇವಾಲಯ...

ಅಹಮದಾಬಾದ್ ವಿಮಾನ ದುರಂತಕ್ಕೆ ಇದೇ ಮುಖ್ಯ ಕಾರಣ: ಕ್ಯಾಪ್ಟನ್ ಸ್ಟೀವ್ ವಿವರಣೆ

ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ತಾಂತ್ರಿಕ ದೋಷಗಳೇ ಪ್ರಮುಖ ಕಾರಣವೆಂದು ಈಗಾಗಲೇ ಚರ್ಚೆಯಾಗುತ್ತಿದೆ. ವಿಮಾನವು ಹಾರಾಟಕ್ಕೆ ಸಮರ್ಪಕವಾಗಿರಲಿಲ್ಲ ಎಂಬ ಅಂಶಗಳು ಗಮನ ಸೆಳೆಯುತ್ತಿವೆ. ಈ ನಡುವೆ, ವಿಮಾನಯಾನ ತಜ್ಞ ಮತ್ತು ಅನುಭವಿ ಪೈಲಟ್...

ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್​ ಪತನ; 6 ಮಂದಿ ದುರ್ಮರಣ

ಅಹಮದಾಬಾದ್​​ನಲ್ಲಿ ಸಂಭವಿಸಿದ ವಿಮಾನ ದುರಂತ ಘಟನೆಯ ಶೋಕದ ನಡುವೆಯೇ ಮತ್ತೊಂದು ಅಪಘಾತ ಸಂಭವಿಸಿದೆ. ಉತ್ತರಾಖಂಡದ ಡೆಹ್ರಾಡೂನ್‌ನಿಂದ ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದೆ. ಹೆಲಿಕಾಪ್ಟರ್‍‌ನಲ್ಲಿದ್ದ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಉತ್ತರಾಖಂಡದ ಗೌರಿಕುಂಡ್...

ಮಧ್ಯಪ್ರದೇಶ | ಮೂವರು ಮಹಿಳೆಯರು ಸೇರಿ ನಾಲ್ವರು ಮಾವೋವಾದಿಗಳ ಎನ್‌ಕೌಂಟರ್‌

ಮಧ್ಯಪ್ರದೇಶ ಬಾಲಾಘಾಟ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಹಾಕ್‌ಫೋರ್ಸ್, ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ(CRPF)...

ಗುಜರಾತ್ ವಿಮಾನ ದುರಂತ | ಡಿಎನ್‌ಎ ಹೊಂದಾಣಿಕೆ; ಮೊದಲ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

ಗುಜರಾತ್ ವಿಮಾನ ದುರಂತದಲ್ಲಿ ಮೃತಪಟ್ಟವರ ಪೈಕಿ ಒಂಬತ್ತು ಮಂದಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಪೈಕಿ ಡಿಎನ್‌ಎ ಹೊಂದಾಣಿಗೆ ಮಾಡಿ ಮೊದಲ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಶಿಷ್ಟಾಚಾರದ...

ಈ ಹೊತ್ತಿನ ಪ್ರಮುಖ ಸುದ್ದಿ