ವಾಯು ಮಾಲಿನ್ಯ ವಿವಾದ: ಹರಿಯಾಣದ ಹೊಗೆ ಪಾಕಿಸ್ತಾನಕ್ಕೆ ಹೋಗುತ್ತದೆಯೇ? BJP ವಿರುದ್ಧ AAP ವಾಗ್ದಾಳಿ

Date:

ದೆಹಲಿಯಲ್ಲಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ವಾಯು ಮಾಲಿನ್ಯ ಮತ್ತು ಹೊಗೆಯ ಬಿಕ್ಕಟ್ಟು ಎಎಪಿ ಮತ್ತು ಬಿಜೆಪಿ ನಡುವಿನ ರಾಜಕೀಯ ವಾಗ್ದಾಳಿಗೆ ಕಾರಣವಾಗಿದೆ. ದೆಹಲಿಯ ಹವಾಮಾನ ವೈಪರೀತ್ಯ ಮತ್ತು ಮಾಲಿನ್ಯಕ್ಕೆ ಪಂಜಾಬ್‌ನ ರೈತರು ಭತ್ತದ ಕಸವನ್ನು ಸುಡುವುದೇ ಕಾರಣವೆಂದು ಬಿಜೆಪಿ ನಾಯಕರು ನಿರಂತರ ಆರೋಪ ಮಾಡುತ್ತಿದ್ದಾರೆ. ಈ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಂಜಾಬ್‌ನ ಆಡಳಿತಾರೂಢ ಎಎಪಿ, “ದೆಹಲಿಯ ಪಕ್ಕದಲ್ಲೇ ಇರುವ, ಬಿಜೆಪಿ ಆಡಳಿತ ನಡೆಸುತ್ತಿರುವ ಹರಿಯಾಣದ ಹೊಗೆ ಪಾಕಿಸ್ತಾನಕ್ಕೆ ಹೋಗುತ್ತದೆಯೇ? ಪಂಜಾಬ್‌ನ ಹೊಗೆ ಮಾತ್ರ, ಹರಿಯಾಣವನ್ನು ದಾಟಿ ದೆಹಲಿಗೆ ಬರುತ್ತದೆಯೇ?” ಎಂದು ಕಿಡಿಕಾರಿದೆ.

- Advertisement -

ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸೇರಿದಂತೆ ಹಲವು ಬಿಜೆಪಿ ನಾಯಕರ ಆರೋಪಗಳನ್ನು ಟೀಕಿಸಿರುವ ಎಎಪಿ ನಾಯಕ, ಪಂಜಾಬ್ ಹಣಕಾಸು ಸಚಿವ ಹರ್‌ಪಾಲ್ ಸಿಂಗ್ ಚೀಮಾ, “ಬಿಜೆಪಿ ಪಂಜಾಬ್ ವಿರೋಧಿ ಮತ್ತು ರೈತ ವಿರೋಧಿ ಪಕ್ಷವಾಗಿದೆ. ಬಿಜೆಪಿ ನಾಯಕರು ಕೇವಲ ಪಂಜಾಬ್‌ನ ರೈತರನ್ನು ನಿಂದಿಸಲು ಮತ್ತು ರಾಜ್ಯಕ್ಕೆ ಮಸಿ ಬಳೆಯಲು ನೆಪಗಳನ್ನು ಹುಡುಕುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇಸ್ರೇಲ್ ಚುಕ್ಕಾಣಿ ಹಿಡಿಯಲು ಮುಂದಾದ ‘ಗಾಡಿ ಐಸೆನ್‌ಕೋಟ್’; ಗಾಜಾ...

ಇಡೀ ಜಗತ್ತು ಕಾತರದಿಂದ ಕೇಳುತ್ತಿರುವ ಅತಿದೊಡ್ಡ ಪ್ರಶ್ನೆಯೆಂದರೆ, ಐಸೆನ್‌ಕೋಟ್‌ ಆಡಳಿತದಲ್ಲಿ ಗಾಜಾ ಬಿಕ್ಕಟ್ಟು ಶಾಶ್ವತವಾಗಿ ಪರಿಹಾರವಾಗುತ್ತದೆಯೇ ಎಂಬುದು. ಆದರೆ, ಇದು ವಾಸ್ತವಕ್ಕೆ ತೀರಾ ದೂರವಾದ ನಿರೀಕ್ಷೆಯಾಗಿದೆ. ಐಸೆನ್‌ಕೋಟ್‌ ಅವರು ವಾಸ್ತವಿಕವಾದಿ ನಾಯಕನೇ ಹೊರತು,...

50ನೇ ವರ್ಷಕ್ಕೆ ದಾಪುಗಾಲು | ಜನಮಾನಸ ಗೆದ್ದ ‘ಜನತಾ...

ಹಾಸನದ ಸಮಾನಾಸಕ್ತ ಗೆಳೆಯರು 1977ರಲ್ಲಿ ಹುಟ್ಟುಹಾಕಿದ ಜನತಾ ಮಾಧ್ಯಮ ಪತ್ರಿಕೆ, ತನ್ನ ನಿಲುವಿನಲ್ಲಿ ಎಂದೂ ರಾಜಿ ಮಾಡಿಕೊಳ್ಳದೆ, ಜನಪರ ಧೋರಣೆಯನ್ನು ಉಳಿಸಿಕೊಂಡು ಬಂದಿದೆ. ಸಾರ್ಥಕ 49 ವರ್ಷಗಳನ್ನು ಪೂರೈಸಿ, ಈಗ 50ನೇ ವರ್ಷಕ್ಕೆ...

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ರಾಜ್ಯಾದ್ಯಂತ ಏಕರೂಪ ಬೆಲೆಗೆ...

ಕರುನಾಡಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರೈತರ ಬಹು ದೊಡ್ಡ ಹೋರಾಟ ಇದಾಗಿದೆ,ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಧಾರವಾಡ, ಹುಬ್ಬಳ್ಳಿ, ಮಂಡ್ಯ, ಮೈಸೂರು ಸೇರಿದಂತೆ 10 ರಿಂದ 15 ಜಿಲ್ಲೆಗಳಲ್ಲಿ...

“ಪಂಜಾಬ್ ಮತ್ತು ದೆಹಲಿಯ ನಡುವೆ ಬರೋಬ್ಬರಿ 300 ಕಿಲೋಮೀಟರ್ ದೂರವಿವೆ. ಮಧ್ಯದಲ್ಲಿ ಹರಿಯಾಣ ರಾಜ್ಯವಿದೆ. ಪಂಜಾಬ್‌ನಿಂದ ಹೊರಡುವ ಹೊಗೆ ವಾಹನಗಳಲ್ಲಿ ಕುಳಿತು ದೆಹಲಿಗೆ ಹೋಗುತ್ತದೆಯೇ ಅಥವಾ ಚೀಲಗಳಲ್ಲಿ ತುಂಬಿ ದೆಹಲಿಗೆ ಕಳುಹಿಸಲಾಗುತ್ತದೆಯೇ?” ಎಂದು ವ್ಯಂಗ್ಯವಾಡಿದ್ದಾರೆ.

ಅಲ್ಲದೆ, “ಪಂಜಾಬ್‌ನ ಹೊಗೆ ದೆಹಲಿಗೆ ತಲುಪುತ್ತದೆ ಎಂದು ಆರೋಪಿಸುವ ಬಿಜೆಪಿ, ಮಧ್ಯದಲ್ಲಿರುವ ಹರಿಯಾಣದ ಮಾಲಿನ್ಯದ ಬಗ್ಗೆ ಏಕೆ ಮೌನವಾಗಿದೆ. ಬಿಜೆಪಿಯ ತರ್ಕದ ಪ್ರಕಾರ ಹರಿಯಾಣದ ಹೊಗೆ ಬಹುಶಃ ನೆರೆಯ ಪಾಕಿಸ್ತಾನದ ಕಡೆಗೆ ಹೋಗುತ್ತಿರಬೇಕು” ಎಂದು ಲೇವಡಿ ಮಾಡಿದ್ದಾರೆ.

ಎಎಪಿ ಹಿರಿಯ ನಾಯಕ ಬಲ್ತೇಜ್ ಸಿಂಗ್ ಪನ್ನು ಅವರು ಸಹ ಬಿಜೆಪಿ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. “ಭತ್ತದ ಕೊಯ್ಲು ಋತು ಆರಂಭವಾಗುವ ಮುನ್ನವೇ ಬಿಜೆಪಿ ನಾಯಕರು ಪಂಜಾಬ್‌ನ ಕೃಷಿ ಹೊಗೆಯ ಬಗ್ಗೆ ಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದ್ದರು. ಪಂಜಾಬ್‌ನ ರೈತರನ್ನೇ ಈ ಮಾಲಿನ್ಯ ಬಿಕ್ಕಟ್ಟಿಗೆ ಹೊಣೆಗಾರರನ್ನಾಗಿ ಮಾಡಲು ಬಿಜೆಪಿ ಮೊದಲೇ ಯೋಜನೆ ರೂಪಿಸಿಕೊಂಡಂತಿದೆ” ಎಂದು ಆರೋಪಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಟ್ರಂಪ್‌ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ ರಾಜಕೀಯ ನಿಲುವು ಯಾವ ದಿಕ್ಕಿಗೆ?

“ಪಂಜಾಬ್‌ನಲ್ಲಿ ಕಸ ಸುಡುವ ಪ್ರಕರಣಗಳು ಹಿಂದಿನ ವರ್ಷಗಳಿಗೆ ಹೋಲಿಸಿದರೆ 90%ರಷ್ಟು ಕಡಿಮೆಯಾಗಿವೆ. ಇಷ್ಟಾಗಿಯೂ ಬಿಜೆಪಿ ನಾಯಕರು ನಿರಂತರವಾಗಿ ಪಂಜಾಬ್ ರೈತರನ್ನೇ ಅಪರಾಧಿಗಳನ್ನಾಗಿ ಬಿಂಬಿಸುತ್ತಿರುವುದು ಖಂಡನೀಯ” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಕೃಷಿ ಕಾಯ್ದೆಗಳ ವಿರುದ್ಧ ನಡೆದ ಬೃಹತ್ ಹೋರಾಟವನ್ನು ನೆನಪಿಸಿದ ಪನ್ನು, “ದೆಹಲಿ ಗಡಿಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾಗ ಜೀವ ಕಳೆದುಕೊಂಡ 750ಕ್ಕೂ ಹೆಚ್ಚು ರೈತರ ಕುಟುಂಬಗಳಿಗೆ ಬಿಜೆಪಿ ಸರ್ಕಾರ ಏನು ಮಾಡಿದೆ” ಎಂದು ನೇರ ಪ್ರಶ್ನೆ ಎಸೆದಿದ್ದಾರೆ.

“ಪಂಜಾಬ್‌ನಲ್ಲಿ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರವು ಕೃಷಿ ತ್ಯಾಜ್ಯ ನಿರ್ವಹಣೆಗಾಗಿ ಕಳೆದ ಐದು ವರ್ಷಗಳಲ್ಲಿ ರೈತರಿಗೆ ಭಾರೀ ಪ್ರಮಾಣದ ಯಂತ್ರೋಪಕರಣಗಳನ್ನು ವಿತರಿಸಿದೆ. ಈ ಯಂತ್ರಗಳ ಸಹಾಯದಿಂದ ರೈತರು ಬೆಳೆ ತ್ಯಾಜ್ಯವನ್ನು ಸುಡದೆ ಭೂಮಿಯಲ್ಲೇ ಸಂಸ್ಕರಿಸುತ್ತಿದ್ದು, ಇದರಿಂದಾಗಿ ಪಂಜಾಬ್‌ನಲ್ಲಿ ಕಸ ಸುಡುವ ಪ್ರಕರಣಗಳು ಗಣನೀಯವಾಗಿ ಕುಸಿದಿವೆ. ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಕೇಂದ್ರ ಹಾಗೂ ದೆಹಲಿ ಬಿಜೆಪಿ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಪಂಜಾಬ್ ಅನ್ನು ಬಲಿಪಶು ಮಾಡುತ್ತಿದ್ದಾರೆ” ಎಂದು ಎಎಪಿ ನಾಯಕರು ಪ್ರತಿಪಾದಿಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ರಾಜ್ಯಾದ್ಯಂತ ಏಕರೂಪ ಬೆಲೆಗೆ ಆಗ್ರಹ

ಕರುನಾಡಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರೈತರ ಬಹು ದೊಡ್ಡ ಹೋರಾಟ...

ನಾನೊಬ್ಬ ಧಾರ್ಮಿಕ ವ್ಯಕ್ತಿ , ಸತ್ತ ಮೇಲೆ ನಾನು ಸ್ವರ್ಗ ಸೇರುತ್ತೇನೆ: ಟ್ರಂಪ್

ತಮ್ಮ ವಿರುದ್ಧ ಸಾಲು ಸಾಲು ಆರೋಪಗಳು, ವಿವಾದಾತ್ಮಕ ನಿರ್ಧಾರಗಳು ಹಾಗೂ ಗಂಭೀರ...

ಫ್ರಾನ್ಸ್‌ ಚುನಾವಣೆ | ಗೆದ್ದು ಅಧ್ಯಕ್ಷರಾಗುವರೇ ಬಲಪಂಥೀಯ ವಿರೋಧಿ ಕದನದ ನಾಯಕ ಮೆಲೆನ್‌ಶೋನ್?

ಫ್ರಾನ್ಸ್‌ನ ರಾಜಕೀಯ ಇತಿಹಾಸದಲ್ಲೇ ಅತ್ಯಂತ ರೋಚಕ ಮತ್ತು ನಿರ್ಣಾಯಕ ಅಧ್ಯಕ್ಷೀಯ ಚುನಾವಣೆಗೆ...