ದೇಶ

ಚಲಿಸುತ್ತಿದ್ದ ಕಾರಿನಲ್ಲಿ ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರ; ರಸ್ತೆಗೆ ತಳ್ಳಿದ್ದರಿಂದ ಸಂತ್ರಸ್ತೆಯ ಸ್ನೇಹಿತೆ ಸಾವು

ಚಲಿಸುತ್ತಿದ್ದ ಕಾರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದು, ಈ ವೇಳೆ ಆಕೆಯ ಸ್ನೇಹಿತೆಯನ್ನು ಕಾರಿನಿಂದ ಕೆಳಕ್ಕೆ ತಳ್ಳಿದ್ದರಿಂದ, ಆಕೆ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ನಂತರ, ಕಾರಿನಿಂದ ತಪ್ಪಿಸಿಕೊಂಡಿರುವ ಸಂತ್ರಸ್ತ...

ಪ್ರಧಾನಿ ಭಾಗವಹಿಸದಿದ್ದರೆ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಬೇಡಿ: ರಾಜಕೀಯ ಪಕ್ಷಗಳಿಗೆ ಕಪಿಲ್ ಸಿಬಲ್ ಮನವಿ

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ ಎಂಬ ಘೋಷಣೆಯ ಬೆನ್ನಿಗೇ, ಸರ್ವಪಕ್ಷ ಸಭೆಯನ್ನು ಕರೆಯಬೇಕು ಎಂದು ಆಗ್ರಹಿಸಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ...

ಪಾಕಿಸ್ತಾನಿ ಸೇನೆಯ ಪ್ರಧಾನ ಕಚೇರಿವರೆಗೂ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮುಟ್ಟಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಆಪರೇಷನ್ ಸಿಂಧೂರ ಕಾರ್ಯಾಚರಣೆ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ. ಬದಲಾಗಿ ಭಾರತದ ರಾಜಕೀಯ, ಸಾಮಾಜಿಕ ಹಾಗೂ ಮಿಲಿಟರಿ ಇಚ್ಛಾಶಕ್ತಿಯ ಸಂಕೇತ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಲಕ್ನೋದಲ್ಲಿ ಭಾನುವಾರ ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಷನ್...

ಜಮ್ಮು ಕಾಶ್ಮೀರ ಸಮಸ್ಯೆಯ ‘ಅಂತಾರಾಷ್ಟ್ರೀಕರಣ’ ಸರಿಯಲ್ಲ, ಪಿಒಕೆ ಭಾರತದ ಅವಿಭಾಜ್ಯ ಅಂಗ: ಕಾಂಗ್ರೆಸ್

ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು(ಪಿಒಕೆ) ತೆರವುಗೊಳಿಸುವಂತೆ 1994 ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾದ ನಿರ್ಣಯವನ್ನು ಕಾಂಗ್ರೆಸ್ ಭಾನುವಾರ ಪುನರುಚ್ಚರಿಸಿದೆ. ಜಮ್ಮು ಕಾಶ್ಮೀರ ಸಮಸ್ಯೆಯನ್ನು 'ಅಂತಾರಾಷ್ಟ್ರೀಕರಣ' ಮಾಡುವುದು ಸರಿಯಲ್ಲ. ಪಿಒಕೆ ಭಾರತದ ಅವಿಭಾಜ್ಯ...

ಪಾಕಿಸ್ತಾನಿ ಫೇಕ್‌ ಅಕೌಂಟ್‌ಗಳ ಬಣ್ಣ ಬಯಲು ಮಾಡಿದ ‘ಮೊಹಮ್ಮದ್ ಝುಬೇರ್’

ನಕಲಿ ಫೋಟೋ ಮತ್ತು ವಿಡಿಯೊಗಳ ಬೃಹತ್ ಜಾಲವೇ ಹಬ್ಬುತ್ತಿದ್ದಾಗ ಒನ್‌ ಮ್ಯಾನ್ ಆರ್ಮಿಯಂತೆ ಸಕ್ರಿಯರಾದ ಮೊಹಮ್ಮದ್ ಝುಬೇರ್, ಸರಣಿ ಸತ್ಯಗಳನ್ನು ಬಯಲಿಗೆಳೆದಿದ್ದಾರೆ ಭಾರತ ಮತ್ತು ಪಾಕಿಸ್ತಾನ ನಡುವೆ ಏರ್ಪಟ್ಟಿದ್ದ ಸಂಘರ್ಷವು ಕದನ ವಿರಾಮದಿಂದಾಗಿ ತಿಳಿಯಾಗುವ...

ಭಾರತದ ಪ್ರತೀಕಾರಕ್ಕೆ ತಡೆ ಯಾಕೆ, ಅಮೆರಿಕದ ದ್ವಂದ್ವ ನೀತಿ ವಿರುದ್ಧ ನಟ ಪ್ರಕಾಶ್ ರಾಜ್ ಕಿಡಿ

ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಬಗ್ಗೆ ಬಹು ಭಾಷಾ ನಟ ಪ್ರಕಾಶ್ ರಾಜ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೆರಿಕದ ದ್ವಂದ್ವ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ. ಈ ಕುರಿತು ಎಕ್ಸ್‌ ತಾಣದಲ್ಲಿ...

ಪಟನಾ ವಿಮಾನ ನಿಲ್ದಾಣದ ನಿರ್ಮಾಣ ಹಂತದಲ್ಲಿರುವ ಟರ್ಮಿನಲ್ ಕಟ್ಟಡದ ಪೈಪ್ ಒಳಗೆ ಮಹಿಳೆಯ ಶವ ಪತ್ತೆ

ಪಟನಾ ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಹಂತದಲ್ಲಿರುವ ಟರ್ಮಿನಲ್ ಕಟ್ಟಡದಲ್ಲಿ ನೀರು ತುಂಬಿದ ಪೈಪ್‌ನಲ್ಲಿ ಶನಿವಾರ ತಡರಾತ್ರಿ 30ರಿಂದ 40 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಹೊಸದಾಗಿ ಅಳವಡಿಸಲಾದ...

ಆಪರೇಷನ್ ಸಿಂಧೂರ್ ಮುಂದುವರೆಯಲಿದೆ: ಭಾರತೀಯ ವಾಯುಪಡೆ ಮಾಹಿತಿ

ಆಪರೇಷನ್ ಸಿಂಧೂರ್ ಮುಂದುವರೆದಿದೆ, ಸರಿಯಾದ ಸಮಯದಲ್ಲಿ ಸೂಕ್ತ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು ಎಂದು ಭಾರತೀಯ ವಾಯುಪಡೆ(ಐಎಎಫ್​) ಮಾಹಿತಿ ನೀಡಿದೆ. ಭಾರತೀಯ ವಾಯುಪಡೆ ಆಪರೇಷನ್ ಸಿಂಧೂರ್ ಅಡಿಯಲ್ಲಿ ನಿಯೋಜಿಸಲಾದ ಕಾರ್ಯಗಳನ್ನು ಅತ್ಯಂತ ನಿಖರತೆ ಮತ್ತು ವೃತ್ತಿಪರತೆಯಿಂದ ಯಶಸ್ವಿಯಾಗಿ...

ಮಣಿಪುರ | ಸುಲಿಗೆ ಮಾಡಿದ 11 ಮಂದಿಯ ಬಂಧನ; ಶಸ್ತ್ರಾಸ್ತ್ರ, ಮದ್ದುಗುಂಡು ವಶಕ್ಕೆ

ಸ್ಥಳೀಯರನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಮಣಿಪುರದ ವಿವಿಧ ಭಾಗಗಳಿಂದ ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ. ಅವರಿಂದ ಶಸ್ತ್ರಾಸ್ತ್ರ, ಮದ್ದುಗುಂಡು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಶನಿವಾರ ಇಂಫಾಲ್ ಪಶ್ಚಿಮ, ಕಾಕ್ಚಿಂಗ್, ಬಿಷ್ಣುಪುರ...

ಮೌನ ಮುರಿದ ಅಮಿತಾಬ್ ಬಚ್ಚನ್ ಮತ್ತೆ ಎಕ್ಸ್‌ನಲ್ಲಿ ಪೋಸ್ಟ್‌; ಆಪರೇಷನ್ ಸಿಂಧೂರಕ್ಕೆ ಶ್ಲಾಘನೆ

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಬಗ್ಗೆ ಮೌನ ಮುರಿದಿದ್ದಾರೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ಭಾನುವಾರ ಮುಂಜಾನೆ ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಏಪ್ರಿಲ್ 22ರಿಂದ ಬರೀ...

ಡುಮ್ಮ ಎಂದು ಅಪಹಾಸ್ಯ; 20 ಕಿ.ಮೀ ಹಿಂಬಾಲಿಸಿ ಗುಂಡು ಹಾರಿಸಿದ!

ತನ್ನನ್ನು ಡುಮ್ಮ, ದಪ್ಪಗಿದ್ದೀಯ ಎಂದು ಅಪಹಾಸ್ಯ ಮಾಡಿದ ಕಾರಣಕ್ಕಾಗಿ ಕೋಪಗೊಂಡ ಯುವಕ, ಇಬ್ಬರು ಅತಿಥಿಗಳ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಘಟನೆ ನಡೆದ ಮರುದಿನ...

ಕದನ ವಿರಾಮ | ಇಂದಿರಾ ಗಾಂಧಿಯನ್ನು ನೆನೆದ ವಿಪಕ್ಷಗಳು; ಸರ್ವಪಕ್ಷ ಸಭೆ, ತುರ್ತು ಅಧಿವೇಶನ ನಡೆಸಲು ಆಗ್ರಹ

ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಬಳಿಕ ಎಲ್ಲಾ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಧಾನಿ ಮೋದಿ ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಬೇಕು ಎಂದು ಕಾಂಗ್ರೆಸ್ ಶನಿವಾರ ಒತ್ತಾಯಿಸಿದೆ. ವಿಪಕ್ಷ ನಾಯಕರುಗಳು...

ಈ ಹೊತ್ತಿನ ಪ್ರಮುಖ ಸುದ್ದಿ