ದೀಪಾವಳಿ ಬೆಂಕಿ ಅವಾಂತರ: ಮುಂಬೈನಲ್ಲಿ ನ. 25ರವರೆಗೆ ರಾಕೆಟ್, ಆಕಾಶಕ್ಕೆ ಚಿಮ್ಮುವ ಪಟಾಕಿ ಬ್ಯಾನ್!

Date:

ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಸಂಭವಿಸಿದ ಸಾಲು ಸಾಲು ಬೆಂಕಿ ಅವಾಂತರಗಳ ಹಿನ್ನೆಲೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಮತ್ತು ಮುಂಬೈ ನಗರ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ನಗರಾದ್ಯಂತ ರಾಕೆಟ್ ಮತ್ತು ವೈಮಾನಿಕ (ಆಕಾಶಕ್ಕೆ ಚಿಮ್ಮುವ) ಪಟಾಕಿಗಳ ಬಳಕೆಯನ್ನು ನವೆಂಬರ್ 25ರವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿಷೇಧಿಸಿದೆ.

- Advertisement -

ದೀಪಾವಳಿಯ ಹಬ್ಬದ ಅವಧಿಯಲ್ಲಿ ಮುಂಬೈನಲ್ಲಿ ಒಟ್ಟು 142 ಬೆಂಕಿ ಅವಾಂತರದ ಕರೆಗಳು ದಾಖಲಾಗಿದ್ದು, ಅದರಲ್ಲಿ 137 ಪ್ರಕರಣಗಳು ಪಟಾಕಿಗಳಿಂದಲೇ ಸಂಭವಿಸಿವೆ ಎಂದು ಬಿಎಂಸಿ ಆಡಳಿತ ಸ್ಪಷ್ಟಪಡಿಸಿದೆ. ವಿಶೇಷವಾಗಿ, ಆಕಾಶಕ್ಕೆ ಹಾರಿಸುವ ರಾಕೆಟ್‌ಗಳು ನಿಯಂತ್ರಣ ತಪ್ಪಿ ಬಹುಮಹಡಿ ಕಟ್ಟಡಗಳ ಬಾಲ್ಕನಿ, ಟೆರೇಸ್, ಮತ್ತು ಜನನಿಬಿಡ ಝೋಪಡ್‌ಪಟ್ಟಿ (ಕೊಳೆಗೇರಿ) ಪ್ರದೇಶಗಳ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ...

ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಕೇವಲ ದೀಪಗಳ ಹಬ್ಬವೆಂದು ನೋಡದೆ, ಬೆಳಕಿನ ಸಂಭ್ರಮದ ಪ್ರತೀಕವಾಗಿಯೂ ಪರಿಗಣಿಸಲಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಹಬ್ಬ ಪ್ರತಿವರ್ಷವೂ 'ಉಸಿರುಗಟ್ಟಿಸುವ ನರಕಯಾತನೆ'ಯಾಗಿ ಬದಲಾಗುತ್ತಿರುವುದು ಕಟು ಸತ್ಯ....

NCPಯನ್ನು ಒಡೆದಿದ್ದ ಬಿಜೆಪಿಯೇ ಅದನ್ನು ಕೂಡಿಸಲು ಹೊರಟಿದೆ; ರಾಜಕೀಯ...

ವಿರೋಧ ಪಕ್ಷಗಳ ಸಾಲಿನಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಶರದ್ ಪವಾರ್ ನಡುವಿನ ಸೌಹಾರ್ದ ಸಂಬಂಧ ಮುಂದುವರಿದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವಾರ್ ಅವರ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ ಮತ್ತು ದೆಹಲಿಯಲ್ಲಿ...

ಇಸ್ರೇಲ್ ಚುಕ್ಕಾಣಿ ಹಿಡಿಯಲು ಮುಂದಾದ ‘ಗಾಡಿ ಐಸೆನ್‌ಕೋಟ್’; ಗಾಜಾ...

ಇಡೀ ಜಗತ್ತು ಕಾತರದಿಂದ ಕೇಳುತ್ತಿರುವ ಅತಿದೊಡ್ಡ ಪ್ರಶ್ನೆಯೆಂದರೆ, ಐಸೆನ್‌ಕೋಟ್‌ ಆಡಳಿತದಲ್ಲಿ ಗಾಜಾ ಬಿಕ್ಕಟ್ಟು ಶಾಶ್ವತವಾಗಿ ಪರಿಹಾರವಾಗುತ್ತದೆಯೇ ಎಂಬುದು. ಆದರೆ, ಇದು ವಾಸ್ತವಕ್ಕೆ ತೀರಾ ದೂರವಾದ ನಿರೀಕ್ಷೆಯಾಗಿದೆ. ಐಸೆನ್‌ಕೋಟ್‌ ಅವರು ವಾಸ್ತವಿಕವಾದಿ ನಾಯಕನೇ ಹೊರತು,...

ಇದನ್ನೂ ಓದಿ: ಮಾಲಿನ್ಯ ಮುಕ್ತ ದೀಪಾವಳಿ ಸಂದೇಶ: ಬಿಜೆಪಿ ಆಕ್ಷೇಪದ ಬೆನ್ನಲ್ಲೇ ನಟಿ ದಿಯಾ ಮಿರ್ಜಾ ವಿಡಿಯೊ ತೆಗೆದ ಬಿಎಂಸಿ

ವಿಪತ್ತು ನಿರ್ವಹಣಾ ಕಾಯ್ದೆಯಡಿ ಬಿಎಂಸಿ ಆಯುಕ್ತರು ಹೊರಡಿಸಿರುವ ಈ ಆದೇಶವು ಮುಂಬೈ ನಗರ ಮತ್ತು ಉಪನಗರಗಳ ಎಲ್ಲಾ ಭಾಗಗಳಿಗೂ ಅನ್ವಯಿಸುತ್ತದೆ. ವಸತಿ ಸಮುಚ್ಛಯಗಳು, ಅಪಾರ್ಟ್‌ಮೆಂಟ್ ಬಾಲ್ಕನಿಗಳು ಮತ್ತು ಟೆರೇಸ್‌ಗಳಿಂದ ರಾಕೆಟ್ ಹಾರಿಸುವುದನ್ನು ಸಂಪೂರ್ಣವಾಗಿ ತಡೆಯಲಾಗಿದೆ.

ಕೊಳೆಗೇರಿ ಪ್ರದೇಶಗಳು, ತೆರೆದ ಸಾರ್ವಜನಿಕ ಮೈದಾನಗಳು ಮತ್ತು ಪಾರ್ಕಿಂಗ್ ಸ್ಥಳಗಳಲ್ಲೂ ಈ ನಿಷೇಧ ಜಾರಿಯಲ್ಲಿರುತ್ತದೆ. ನಿಯಮ ಉಲ್ಲಂಘಿಸಿ ರಾಕೆಟ್ ಅಥವಾ ವೈಮಾನಿಕ ಪಟಾಕಿ ಹಾರಿಸುವವರ ವಿರುದ್ಧ ಕಾನೂನು ಕ್ರಮ ಮತ್ತು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಸದ್ಯ ರಾಕೆಟ್ ಮತ್ತು ವೈಮಾನಿಕ ಪಟಾಕಿಗಳನ್ನು ಹೊರತುಪಡಿಸಿ ಇತರ ಸಾಮಾನ್ಯ ಪಟಾಕಿಗಳ ಬಳಕೆಗೆ ಅನುಮತಿ ನೀಡಲಾಗಿದೆ. ಆದರೆ ಸಾರ್ವಜನಿಕರು ನ್ಯಾಯಾಲಯ ಮತ್ತು ಸಮಾಜದ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕರು ಯಾವುದೇ ತುರ್ತು ಬೆಂಕಿ ಅನಾಹುತದ ಸಂದರ್ಭದಲ್ಲಿ ಅಗ್ನಿಶಾಮಕ ದಳ 101 ಅಥವಾ ಬಿಎಂಸಿ ಸಹಾಯವಾಣಿ 1916ಗೆ ಸಂಪರ್ಕಿಸಲು ಕೋರಲಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಾಯು ಮಾಲಿನ್ಯ ವಿವಾದ: ಹರಿಯಾಣದ ಹೊಗೆ ಪಾಕಿಸ್ತಾನಕ್ಕೆ ಹೋಗುತ್ತದೆಯೇ? BJP ವಿರುದ್ಧ AAP ವಾಗ್ದಾಳಿ

ದೆಹಲಿಯಲ್ಲಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ವಾಯು ಮಾಲಿನ್ಯ ಮತ್ತು...

ತವರಿಗೆ ಮರಳಲು ಹೊಸ ಪಾಸ್‌ಪೋರ್ಟ್ ಕೋರಿದ ಶೇಖ್ ಹಸೀನಾ; ಮನವಿ ತಿರಸ್ಕರಿಸಿದ ಬಾಂಗ್ಲಾದೇಶ

ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ, ಸ್ವದೇಶಕ್ಕೆ...

ಇಸ್ರೇಲ್ ಚುಕ್ಕಾಣಿ ಹಿಡಿಯಲು ಮುಂದಾದ ‘ಗಾಡಿ ಐಸೆನ್‌ಕೋಟ್’; ಗಾಜಾ ಬಿಕ್ಕಟ್ಟಿಗೆ ಸಿಗಲಿದೆಯೇ ಶಾಶ್ವತ ಮುಕ್ತಿ?

ಇಡೀ ಜಗತ್ತು ಕಾತರದಿಂದ ಕೇಳುತ್ತಿರುವ ಅತಿದೊಡ್ಡ ಪ್ರಶ್ನೆಯೆಂದರೆ, ಐಸೆನ್‌ಕೋಟ್‌ ಆಡಳಿತದಲ್ಲಿ ಗಾಜಾ...

ವಿಜಯಪುರ | ಸ್ಥಳೀಯ ಸಂಸ್ಥೆಗಳ ಚುನಾವಣೆ ಗೊಂದಲಕ್ಕೆ ತೆರೆ ಎಳೆಯಿರಿ: ಗ್ರಾಮ ಸ್ವರಾಜ್ಯ ಕರ್ನಾಟಕ ಆಗ್ರಹ

ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳ ದಿನಾಂಕ ಮತ್ತು ಮತದಾರರ...