ದೇಶ

ಲಂಡನ್‌ ಹೋಟೆಲ್‌ನಲ್ಲಿ ಏರ್ ಇಂಡಿಯಾ ಮಹಿಳಾ ಉದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ

ಲಂಡನ್‌ ಹೋಟೆಲ್ ಕೊಠಡಿಗೆ ನುಗ್ಗಿದ ದುಷ್ಕರ್ಮಿಯೊಬ್ಬ ಏರ್ ಇಂಡಿಯಾ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿ ಬಳಿಕ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ದೂರು ದಾಖಲಾಗಿದೆ. ಏರ್ ಇಂಡಿಯಾ ಸಿಬ್ಬಂದಿ ತಂಗಿದ್ದ ಲಂಡನ್‌ನ ರಾಡಿಸನ್ ರೆಡ್...

ಮಹಾರಾಷ್ಟ್ರ ಚುನಾವಣೆ | ಆರ್‌ಎಸ್‌ಎಸ್‌ ವಿರೋಧ ಇದ್ದರೂ ಅಜಿತ್ ಜೊತೆ ಬಿಜೆಪಿ ಮೈತ್ರಿ

ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಕ್ಕೆ ಆರ್‌ಎಸ್‌ಎಸ್‌ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ತಿಳಿದುಬಂದಿದೆ. ಆದರೂ, ಅಜಿತ್ ಅವರ ಎನ್‌ಸಿಪಿ ಜೊತೆ ಮೈತ್ರಿಗೆ...

ಇಬ್ಬರು ಶಾಸಕರನ್ನು 6 ವರ್ಷಗಳ ಕಾಲ ಅಮಾನತು ಮಾಡಿದ ಕಾಂಗ್ರೆಸ್

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇಲೆ ತನ್ನ ಇಬ್ಬರು ಶಾಸಕರನ್ನು ಆರು ವರ್ಷಗಳ ಕಾಲ ಮೇಘಾಲಯ ಕಾಂಗ್ರೆಸ್‌ ಅಮಾನತುಗೊಳಿಸಿದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಶಾಸಕರಾಗಿ ಆಯ್ಕೆಯಾಗಿದ್ದ ಚಾರ್ಲ್ಸ್ ಮಾರ್ಂಗಾರ್ (ಮಾವಾಟಿ ಕ್ಷೇತ್ರ)...

ಹಾಡು ಹಾಡಿ ಸಂಚಾರ ನಿಯಮಗಳ ಜಾಗೃತಿ ಮೂಡಿಸುವ 10ರ ಬಾಲಕ!

ಮಧ್ಯಪ್ರದೇಶದ ಇಂದೋರ್‌ನಲ್ಲಿ ಆದಿತ್ಯ ತಿವಾರಿ ಎಂಬ 10 ವರ್ಷದ ಬಾಲಕ ತಾನೇ ಹಾಡು ಸಂಯೋಜನೆ ಮಾಡಿ ಆ ಹಾಡುಗಳನ್ನು ಹಾಡುವ ಮೂಲಕ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾನೆ. ಟ್ರಾಫಿಕ್ ಸಿಗ್ನಲ್‌ನಲ್ಲಿಯೇ...

ಸಿವಿಲ್ ಕೋಡ್ | ‘ಏಕರೂಪ’ದಿಂದ ‘ಜಾತ್ಯತೀತ’ಕ್ಕೆ ಬದಲಾದ ಬಿಜೆಪಿ; ಸಮಾಲೋಚನೆಗೆ ಎನ್‌ಡಿಎ ಕರೆ

‘ಏಕರೂಪ ನಾಗರಿಕ ಸಂಹಿತೆ’ಯನ್ನು ಜಾರಿಗೊಳಿಸುವುದಾಗಿ ಧೀರ್ಘಾವಧಿಯಿಂದ ಹೇಳುತ್ತಲೇ ಇದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೀವ್ರ ವಿರೋಧಕ್ಕೆ ಗುರಿಯಾಗಿತ್ತು.  ಇದೀಗ, ‘ಏಕರೂಪ ನಾಗರಿಕ ಸಂಹಿತೆ’ಯನ್ನು ‘ಜಾತ್ಯತೀತ ನಾಗರಿಕ ಸಂಹಿತೆ’ ಎಂದು ಬದಲಿಸಿದೆ. ಹೆಸರು...

ಸಿಎಂ ವಿರುದ್ಧ ಅನುಮತಿಸಲಾದ ‘ಪ್ರಾಸಿಕ್ಯೂಷನ್’ ಅಂದ್ರೆ ಏನು? ಮುಂದೇನಾಗಲಿದೆ?

ಕರ್ನಾಟಕದ ರಾಜಕಾರಣಿಗಳಲ್ಲಿ ಇಲ್ಲಿವರೆಗೂ ತಮ್ಮ ಸಂಪೂರ್ಣ ರಾಜಕೀಯ ಜೀವನದಲ್ಲಿ ಕಳಂಕ ರಹಿತವಾಗಿಯೇ ಇದ್ದವರು ಮುಖ್ಯಮಂತ್ರಿ ಸಿದ್ಧರಾಮಯ್ಯ. ಬಡವರು, ಹಿಂದುಳಿದ ವರ್ಗದವರಿಗಾಗೇ ಹೆಚ್ಚು ಶ್ರಮಿಸಿದ್ದಾರೆ ಎಂಬ ಹೆಗ್ಗಳಿಕೆಯನ್ನು ಸಿದ್ದರಾಮಯ್ಯ ಗಳಿಸಿದ್ದಾರೆ. ಹಾಗೆಯೇ, ಎರಡನೇ ಬಾರಿಗೆ...

ವಿದ್ಯಾರ್ಥಿನಿ ಮೇಲೆ ಕಾಮುಕ ಶಿಕ್ಷಕನಿಂದ ಅತ್ಯಾಚಾರ; 20 ದಿನ ಚಿಕಿತ್ಸೆ ಪಡೆದರೂ ಬದುಕಲಿಲ್ಲ ಬಾಲಕಿ

ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ದುಷ್ಕೃತ್ಯವು ದೇಶದ ಆಕ್ರೋಶಕ್ಕೆ ಕಾರಣವಾಗಿದೆ. ಆಕ್ರೋಶ ಮಡುಗಟ್ಟಿರುವ ಸಮಯದಲ್ಲಿಯೇ, ಉತ್ತರ ಪ್ರದೇಶದಲ್ಲಿ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾಗಿದ್ದ 14 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಆರೋಪಿ ಶಿಕ್ಷಕ...

ಹರಿಯಾಣ | ಗುರುಗ್ರಾಮದ ಎಲ್ಲಾ ಮಾಲ್‌ಗಳಿಗೆ ಬಾಂಬ್ ಬೆದರಿಕೆ!

ಹರಿಯಾಣದ ಗುರುಗ್ರಾಮದ ಎಲ್ಲಾ ಮಾಲ್‌ಗಳಿಗೆ ಬಾಂಬ್ ಬೆದರಿಕೆ ಇಮೇಲ್ ಮಾಡಲಾಗಿದ್ದು, ಮಾಲ್‌ಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ. ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಲವಾರು ಮಾಲ್‌ಗಳಿಗೆ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ...

ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ; ಗಂಗಾ ನದಿ ಮೇಲೆ ನಿರ್ಮಾಣವಾಗುತ್ತಿದ್ದ ಬ್ರಿಡ್ಜ್‌

ಬಿಹಾರದಲ್ಲಿ ಗಂಗಾ ನದಿಯ ಮೇಲೆ ನಿರ್ಮಿಸಲಾಗುತ್ತಿದ್ದ ಸೇತುವೆಯ ಒಂದು ಭಾಗವು ಶನಿವಾರ ಕುಸಿದು ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗುವಾನಿ-ಸುಲ್ತಂಗಂಜ್ ನಡುವೆ ಸಂಪರ್ಕ ಒದಗಿಸುವ ಉದ್ದೇಶದಿಂದ ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿತ್ತು. ಸೇತುವೆಯ ಸ್ಲ್ಯಾಬ್ ಬೆಳಿಗ್ಗೆ...

ಅಟಲ್ ಸೇತುವೆಯಿಂದ ಸಮುದ್ರಕ್ಕೆ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಟ್ಯಾಕ್ಸಿ ಚಾಲಕ, ಟ್ರಾಫಿಕ್ ಪೊಲೀಸರು; ವಿಡಿಯೋ ವೈರಲ್

ಮುಂಬೈನ ಅಟಲ್ ಸೇತುವಿನಿಂದ ಅರಬ್ಬಿ ಸಮುದ್ರಕ್ಕೆ ಬೀಳುತ್ತಿದ್ದ 56 ವರ್ಷದ ಮಹಿಳೆಯನ್ನು ಟ್ಯಾಕ್ಸಿ ಚಾಲಕ ಮತ್ತು ನಾಲ್ವರು ಟ್ರಾಫಿಕ್ ಪೊಲೀಸರು ಚಾಣಾಕ್ಷತೆಯಿಂದ ರಕ್ಷಿಸಿದ್ದಾರೆ. ಮಹಿಳೆಯನ್ನು ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ....

ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್‌ನ 20 ಬೋಗಿಗಳು; ವಿಧ್ವಂಸಕ ಕೃತ್ಯ ಎಂದ ರೈಲ್ವೇ ಸಚಿವ

ಶನಿವಾರ ಮುಂಜಾನೆ, ಉತ್ತರ ಪ್ರದೇಶದ ಕಾನ್ಪುರದ ಗೋವಿಂದಪುರಿ ನಿಲ್ದಾಣದ ಬಳಿ ಸಬರಮತಿ ಎಕ್ಸ್‌ಪ್ರೆಸ್ (19168) ಪ್ಯಾಸೆಂಜರ್ ರೈಲಿನ 20 ಬೋಗಿಗಳು ಹಳಿತಪ್ಪಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ರೈಲು ಅಧಿಕಾರಿಗಳು ತಿಳಿಸಿದ್ದಾರೆ. ರೈಲು...

ರಾಹುಲ್ ಗಾಂಧಿ ಪೌರತ್ವ ಸ್ಥಿತಿ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸುಬ್ರಮಣಿಯನ್ ಸ್ವಾಮಿ ಅರ್ಜಿ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರ ಪೌರತ್ವ ಸ್ಥಿತಿಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ, ರಾಹುಲ್‌ ಗಾಂಧಿ ವಿರುದ್ಧದ ಸುದೀರ್ಘ ದೂರಿನ ಸ್ಥಿತಿಗತಿ ಕುರಿತ ವರದಿ...

ಈ ಹೊತ್ತಿನ ಪ್ರಮುಖ ಸುದ್ದಿ