ಬಿಹಾರ | ಪರಿಹಾರವಿಲ್ಲದೆ ಬರಿಗೈ ಸ್ಥಳಾಂತರ? ಅದಾನಿ ಯೋಜನೆ ವಿರುದ್ಧ ಆದಿವಾಸಿಗಳ ಪ್ರತಿರೋಧ!

Date:

 ಬಿಹಾರದ ಭಾಗಲ್ಪುರ ಜಿಲ್ಲೆಯ ಪಿರ್‌ಪೈಂತಿ ಪ್ರದೇಶದಲ್ಲಿ ಅದಾನಿ ಪವರ್ ಲಿಮಿಟೆಡ್‌ನಿಂದ ನಿರ್ಮಿಸಲಾಗುತ್ತಿರುವ 2,400 ಮೆಗಾವ್ಯಾಟ್ ಸಾಮರ್ಥ್ಯದ ಬೃಹತ್ ಉಷ್ಣ ವಿದ್ಯುತ್ ಸ್ಥಾವರವು ಸ್ಥಳೀಯ ಬುಡಕಟ್ಟು ಜನಾಂಗದವರ ಬದುಕನ್ನು ಸಂಕಷ್ಟಕ್ಕೊಡ್ಡಿದೆ. 30,000 ಕೋಟಿ ರೂ. ವೆಚ್ಚದ ಈ ಯೋಜನೆಯು ಕಾನೂನು ಉಲ್ಲಂಘನೆ, ವಿವಾದಿತ ಭೂಸ್ವಾಧೀನ ಮತ್ತು ಸ್ಥಳೀಯರ ಪ್ರತಿರೋಧದ ನಡುವೆ ಮುನ್ನಡೆಯುತ್ತಿದ್ದು, ಇದರ ಕರಾಳ ಮುಖಗಳು ಒಂದೊಂದಾಗಿ ಹೊರಬರುತ್ತಿವೆ. ಯೋಜನಾ ಸ್ಥಳದೊಳಗೆ ನೆಲೆಸಿರುವ ಎರಡು ಆದಿವಾಸಿ ಹಳ್ಳಿಗಳ ಅಸ್ತಿತ್ವವನ್ನೇ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಈ ವಿವಾದದ ಕೇಂದ್ರಬಿಂದುವಾಗಿದೆ.

- Advertisement -

ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯ ಒಳಭಾಗದಲ್ಲಿ ಪಹಾರಿಯಾ ಟೋಲಾ ಮತ್ತು ಸಂಥಾಲಿ ಟೋಲಾ ಎಂಬ ಎರಡು ಆದಿವಾಸಿ ವಾಸಸ್ಥಾನಗಳು ಅಸ್ತಿತ್ವದಲ್ಲಿವೆ. ಆದರೆ, ಪರಿಸರ ಪ್ರಭಾವ ಮೌಲ್ಯಮಾಪನ (EIA) ವರದಿ ಸೇರಿದಂತೆ ಯೋಜನೆಯ ಅಧಿಕೃತ ದಾಖಲೆಗಳಲ್ಲಿ ಈ ಹಳ್ಳಿಗಳ ಹೆಸರೇ ಇಲ್ಲ. ಈ ಭಾಗದಲ್ಲಿ ಸುಮಾರು 50 ರಿಂದ 60 ಆದಿವಾಸಿ ಕುಟುಂಬಗಳು ತಲೆಮಾರುಗಳಿಂದ ವಾಸಿಸುತ್ತಿದ್ದರೂ, ಸರ್ಕಾರಿ ದಾಖಲೆಗಳಲ್ಲಿ ಇವುಗಳನ್ನು “ಅಸ್ತಿತ್ವದಲ್ಲಿಲ್ಲ” ಎಂದು ಬಿಂಬಿಸಲಾಗಿದೆ. ಪರಿಣಾಮವಾಗಿ, ಕಾನೂನುಬದ್ಧವಾಗಿ ತಮಗೆ ಸಿಗಬೇಕಾದ ಪರಿಹಾರ ಮತ್ತು ಪುನರ್ವಸತಿ ಸೌಲಭ್ಯಗಳಿಗಾಗಿ ಈ ಬಡ ಕುಟುಂಬಗಳು ನಿರಂತರ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು ತನ್ನ ನಿಷ್ಪಕ್ಷಪಾತತೆಯನ್ನೇ ಜನ ಪರೀಕ್ಷೆಗೆ ಒಡ್ಡಿಕೊಂಡಿದೆ. ಆಯೋಗದ ನಿರ್ಣಯಗಳನ್ನು ಅನುಮಾನಿಸಿ ಬೀದಿ ಹೋರಾಟಗಳು, ಹರತಾಳಗಳು ಭುಗಿಲೆದ್ದಿವೆ. ಇಷ್ಟಕ್ಕೆ, ನಿಲ್ಲದೆ ಮುಖ್ಯ...

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ...

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ ಒಲವಿನ ಬದಲಾವಣೆಯನ್ನು ದೃಢಪಡಿಸಿವೆ. ಡೆಮಾಕ್ರಟರು ಸಾಧಿಸಿದ 255 ಹೌಸ್ ಮತ್ತು 54 ಸೆನೆಟ್ ಸ್ಥಾನಗಳ ಜಯ, ಹಾಗೂ ಬ್ರೆಜಿಲ್‌ನಲ್ಲಿನ ಅಧಿಕಾರ...

ಹೆಣ್ಣು-ಹಣ-ಚಾರಣ ಹಗರಣ: ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ...

ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ ಜಾಲ ಮತ್ತು ಭದ್ರತಾ ಆರೋಪಗಳು ಜಾಗತಿಕ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲಗೊಳಿಸಿವೆ. ತಂತ್ರಜ್ಞಾನ ದೈತ್ಯರ ಒಳಸುಳಿಗಳೇನು? ಭಾರತದ ಡಿಜಿಟಲ್ ಹಾಗೂ ಸೆಮಿಕಂಡಕ್ಟರ್...

ಕೇಂದ್ರ ಪರಿಸರ ಸಚಿವಾಲಯದ ಪರಿಸರ ಪ್ರಭಾವ ಮೌಲ್ಯಮಾಪನ  ಸಮಿತಿಯು ಅದಾನಿ ಪವರ್‌ಗೆ ನೀಡಿರುವ ‘ಅನುಮೋದನೆಯ ನಿಯಮಗಳು’ ದಾಖಲೆಯ ಪ್ರಕಾರ, ಈ ಯೋಜನಾ ಪ್ರದೇಶದಲ್ಲಿ ಯಾವುದೇ ಪುನರ್ವಸತಿ ಸಮಸ್ಯೆ ಇಲ್ಲ ಎಂದು ಉಲ್ಲೇಖಿಸಲಾಗಿದೆ. ಬಿಹಾರ ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿಯು ಈ ಭೂಮಿಯನ್ನು ನೀಡಿದ್ದರಿಂದ, ಕಂಪನಿಗೆ ಯಾವುದೇ ಪುನರ್ವಸತಿ ಜವಾಬ್ದಾರಿ ಇಲ್ಲ ಎಂಬುದು ಅದಾನಿ ಪವರ್‌ನ ನಿಲುುವಾಗಿದೆ.

ಆದರೆ ವಾಸ್ತವಿಕ ಸ್ಥಿತಿ ಭಿನ್ನವಾಗಿದೆ. ಹರಿಂಖೋಲ್ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ 1958ರಿಂದಲೂ ‘ಪಹಾರಿಯಾ ಟೋಲಾ ಪ್ರಾಥಮಿಕ ವಿದ್ಯಾಲಯ’ ಎಂಬ ಸರ್ಕಾರಿ ಶಾಲೆ ಕಾರ್ಯನಿರ್ವಹಿಸುತ್ತಿದೆ. ಹಾಗೆಯೇ ಸಂಥಾಲಿ ಟೋಲಾಗೆ ದಾರಿ ತೋರಿಸುವ ನಾಮಫಲಕವೂ ವರ್ಷಗಳಿಂದ ಅಲ್ಲಿದೆ. ಆದರೂ, ಇಲ್ಲಿನ ನಿವಾಸಿಗಳಿಗೆ ಭೂ ಒಡೆತನದ ದಾಖಲೆಗಳು ಅಥವಾ ಕಂದಾಯ ರಸೀದಿಗಳಿಲ್ಲದಿರುವುದು ಅವರಿಗೆ ದೊಡ್ಡ ಶಾಾಪವಾಗಿ ಪರಿಣಮಿಸಿದೆ. ಸುತ್ತಮುತ್ತಲಿನ ಮಾವಿನ ತೋಪುಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇವರಿಗೆ, ಭೂಮಿ ತಮ್ಮ ಹೆಸರಿನಲ್ಲಿಲ್ಲದ ಕಾರಣ ಪರಿಹಾರವೂ ಸಿಗುತ್ತಿಲ್ಲ ಹಾಗೂ ಇರುವ ಸೂರು ಕೂಡ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಅದಾನಿ ಕಂಪನಿ ನಿರ್ಮಿಸಿರುವ ಬೃಹತ್ ಭದ್ರತಾ ಗೋಡೆಯು ಈ ಹಳ್ಳಿಗಳ ಸುತ್ತ ಆವರಿಸಿಕೊಂಡಿದ್ದು, ಸಂಥಾಲಿ ಟೋಲಾಗೆ ತೆರಳುತ್ತಿದ್ದ ರಸ್ತೆಯನ್ನು ಬಂದ್ ಮಾಡಲಾಗಿದೆ. ಸ್ಥಳೀಯರ ನಿರಂತರ ಪ್ರತಿರೋಧದ ಬಳಿಕವಷ್ಟೇ ಕಂಪನಿಯು ಗೋಡೆಗೆ ಒಂದು ಸಣ್ಣ ಗೇಟ್ ನಿರ್ಮಿಸಿ ದಾರಿ ಮಾಡಿಕೊಟ್ಟಿದೆ.

ಇಲ್ಲಿನ ನಿವಾಸಿಗಳು ಪ್ರಕೃತಿಯೊಂದಿಗೆ ನಿಕಟ ನಂಟು ಹೊಂದಿದ್ದಾರೆ. ಸುನೀಲ್ ಸೊರೇನ್ ಮತ್ತು ಹೇಮಲಾಲ್ ಸೊರೇನ್ ಅವರಂತಹ ಸ್ಥಳೀಯರು ತಮ್ಮ ಐದು ಹಸುಗಳು, 25 ಆಡುಗಳು ಮತ್ತು ಕೋಳಿಗಳೊಂದಿಗೆ ಕಾಡಿನ ಉತ್ಪನ್ನಗಳನ್ನು ನಂಬಿ ಬದುಕು ನಡೆಸುತ್ತಿದ್ದಾರೆ. ಆದರೆ ಬೃಹತ್ ಯಂತ್ರಗಳು ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ತಲೆಮಾರುಗಳ ಹಳೆಯ ಮಾವಿನ ತೋಪುಗಳನ್ನು ಧ್ವಂಸಗೊಳಿಸಿವೆ.

ಪಹಾರಿಯಾ ಬುಡಕಟ್ಟು ಜನಾಂಗದವರ ಪಾಡಂತೂ ಇನ್ನಷ್ಟು ಶೋಚನೀಯವಾಗಿದೆ. ಅದಾನಿ ಕಂಪನಿಯ ಗೋಡೆಯು ಈ ಹಳ್ಳಿಯನ್ನು ಅರ್ಧಕ್ಕೆ ಕತ್ತರಿಸಿದೆ. ಅರ್ಧ ಭಾಗ ಹೊರಗಿದ್ದರೆ, ಮತ್ತರ್ಧ ಭಾಗ ಯೋಜನಾ ವಲಯದ ಒಳಗಿದೆ. ಇದಕ್ಕಿಂತಲೂ ಮುಖ್ಯವಾಗಿ, ಪಹಾರಿಯಾ ಜನಾಂಗದವರು ತಮ್ಮ ಪೂರ್ವಿಕರನ್ನು ಸಮಾಧಿ ಮಾಡುವ ಸ್ಮಶಾನವು ಯೋಜನಾ ಭೂಮಿಯ ಒಳಭಾಗದಲ್ಲೇ ಬರುತ್ತದೆ. “ನಮ್ಮ ಪೂರ್ವಿಕರ ಮೂಳೆಗಳ ಮೇಲೆ ಬುಲ್ಡೋಜರ್‌ಗಳು ಹಾಯ್ದುಹೋಗುವುದನ್ನು ನೋಡಲು ನಾವು ಸಿದ್ಧರಿಲ್ಲ, ಬೇಕಾದರೆ ನಮ್ಮನ್ನು ಕೊಂದುಹಾಕಿ” ಎಂದು ಧರ್ಮ ಪಹಾರಿಯಾ ಹಾಗೂ ಬದ್ರಾ ಪಹಾರಿಯಾ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಭಗಲ್‌ಪುರ ಜಿಲ್ಲಾ ಆಡಳಿತವು ಈ ಜನರಿಗೆ ಸ್ಥಳದಿಂದ ಐದು ಕಿಲೋಮೀಟರ್ ದೂರದ ಕಮಲ್‌ಪುರ್ ಎಂಬಲ್ಲಿ ಸಣ್ಣ ಮನೆಗಳನ್ನು ನಿರ್ಮಿಸಿಕೊಟ್ಟು, ಅಲ್ಲಿಗೆ ಸ್ಥಳಾಂತರಿಸಲು ಮುಂದಾಗಿದೆ. ಆದರೆ, “ಆ ಮನೆಗಳು ತುಂಬಾ ಚಿಕ್ಕದಾಗಿವೆ, ನಮ್ಮ ಜಾನುವಾರುಗಳಿಗೆ ಮೇವು ಒದಗಿಸಲು ಅಥವಾ ಮುಕ್ತವಾಗಿ ಬದುಕಲು ಅಲ್ಲಿ ಅವಕಾಶವಿಲ್ಲ” ಎಂದು ಗ್ರಾಮಸ್ಥರು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ.

ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸ್ಥೆಯಲ್ಲಿ ನ್ಯಾಯಯುತ ಪರಿಹರಿಸುವಿಕೆ ಮತ್ತು ಪಾರದರ್ಶಕತೆ ಕಾಯ್ದೆ-2013ರ (LARR Act) ಸೆಕ್ಷನ್ 41ರ ಪ್ರಕಾರ, ಅಭಿವೃದ್ಧಿ ಯೋಜನೆಗಳಿಂದ ಸ್ಥಳಾಂತರಗೊಳ್ಳುವ ಪರಿಶಿಷ್ಟ ಪಂಗಡದ (ST) ಕುಟುಂಬಗಳಿಗೆ ಪ್ರತ್ಯೇಕ ಅಭಿವೃದ್ಧಿ ಯೋಜನೆ ರೂಪಿಸಬೇಕು ಮತ್ತು ಮುಂಚಿತವಾಗಿ ಮೂರರಷ್ಟು ಪರಿಹಾರ ನೀಡಬೇಕು. ಆದರೆ ಇಲ್ಲಿ ಯಾವುದೇ ಕಾನೂನುಬದ್ಧ ಪ್ರಕ್ರಿಯೆಯನ್ನು ಪಾಲಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಎಲ್ಲ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಅದಾನಿ ಪವರ್‌ನ ಅಧಿಕೃತ ವಕ್ತಾರರು, “ಅದಾನಿ ಪವರ್ ಎಲ್ಲಾ ಕಾನೂನುಗಳು, ನಿಯಮಗಳು ಮತ್ತು ಶಾಸನಬದ್ಧ ಅನುಮೋದನೆಗಳಿಗೆ ಬದ್ಧವಾಗಿ ಪಿರ್‌ಪೈಂತಿ ಯೋಜನೆಯನ್ನು ಮುನ್ನಡೆಸುತ್ತಿದೆ. ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಹಾಗೂ ಜವಾಬ್ದಾರಿಯುತ ಮತ್ತು ಪಾರದರ್ಶಕ ರೀತಿಯಲ್ಲಿ ಯೋಜನೆ ಕೈಗೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಕಾಗದಪತ್ರಗಳಲ್ಲಿ ಗುರುತಿಸಲ್ಪಡದ ಕಾರಣಕ್ಕೆ ತಮ್ಮ ನೆಲ, ಮೂಲ ನೆಲೆ ಮತ್ತು ಸಾಂಸ್ಕೃತಿಕ ಗುರುತನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಈ ನತದೃಷ್ಟ ಆದಿವಾಸಿಗಳು, ನ್ಯಾಯಯುತ ಪರಿಹಾರ ಹಾಗೂ ಹಕ್ಕುಗಳಿಗಾಗಿ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.

ಮೂಲ : ನ್ಯೂಸ್‌ ಲಾಂಡ್ರಿ

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗೆ ‘ಸಂಜೆ ನ್ಯಾಯಾಲಯ’: ದೆಹಲಿ, ಬಿಹಾರ, ಆಂಧ್ರದಲ್ಲಿ ಪ್ರಾಯೋಗಿಕ ಜಾರಿ

ನ್ಯಾಯಾಲಯಗಳಲ್ಲಿ ವರ್ಷಾನುಗಟ್ಟಲೆಯಿಂದ ಬಾಕಿ ಉಳಿದಿರುವ ಲಕ್ಷಾಂತರ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಕೇಂದ್ರ...

2027ರಲ್ಲಿ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ: ಸಿಎಂ ಡಿ ಕೆ ಶಿವಕುಮಾರ್

ಕನ್ನಡಿಗರನ್ನು ವಿಶ್ವಮಟ್ಟದಲ್ಲಿ ಒಗ್ಗೂಡಿಸುವ ನಿಟ್ಟಿನಲ್ಲಿ ಮುಂದಿನ 2027ರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ...

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ ರಾಜಕೀಯ?

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ...

ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದುಗೊಳಿಸಿದ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ರಾಜ್ಯ ಸರ್ಕಾರ

ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇಕಡ 15ರಿಂದ 17ಕ್ಕೆ, ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು...