ದೇಶ

ಮಣಿಪುರಕ್ಕೆ ತೆರಳಲಿರುವ ರಾಹುಲ್ ಗಾಂಧಿ; ನಿರಾಶ್ರಿತರ ಕೇಂದ್ರಗಳಿಗೆ ಭೇಟಿ

ಮಣಿಪುರದಲ್ಲಿ ಜನಾಂಗೀಯ ಸಂಘರ್ಷಗಳ ಬಗ್ಗೆ ಸಂಸತ್ತಿನಲ್ಲಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಒಂದು ವಾರದ ನಂತರ, ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಣಿಪುರಕ್ಕೆ ಸೋಮವಾರ (ಜುಲೈ 8) ಭೇಟಿ...

ಹೊಸ ಕಾನೂನುಗಳ ವಿರುದ್ಧ ಚಿದಂಬರಂ ಟೀಕೆ; ನಾವು ಅರೆಕಾಲಿಕ ವ್ಯಕ್ತಿಗಳೇ ಎಂದ ಉಪರಾಷ್ಟ್ರಪತಿ

ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಟೀಕಿಸಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರ ಹೇಳಿಕೆಗೆ ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿದಂಬರಂ ಅವರು ‘ಹೊಸ ಕಾನೂನುಗಳನ್ನು...

ಅಸ್ಸಾಂ ಪ್ರವಾಹ | ಸಾವಿನ ಸಂಖ್ಯೆ 58ಕ್ಕೆ ಏರಿಕೆ; 23 ಲಕ್ಷ ಜನರ ಜೀವನ ಅತಂತ್ರ

ಅಸ್ಸಾಂನಲ್ಲಿ ಕಳೆದ ಒಂದು ತಿಂಗಳಿನಿಂದ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಪ್ರವಾಹದಿಂದಾಗಿ ರಾಜ್ಯದಾದ್ಯಂತ 58 ಜನರು ಸಾವನ್ನಪ್ಪಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ವರದಿ ಮಾಡಿದೆ. ಎಎಸ್‌ಡಿಎಂಎ ಪ್ರಕಾರ, ಶನಿವಾರ...

ಸೂರತ್ ಕಟ್ಟಡ ಕುಸಿತ; ಸಾವಿನ ಸಂಖ್ಯೆ ಏಳಕ್ಕೆ ಏರಿಕೆ

ಗುಜರಾತಿನ ಸೂರತ್‌ನಲ್ಲಿ ಶನಿವಾರ ಸಂಜೆ ಆರು ಅಂತಸ್ತಿನ ಕಟ್ಟಡ ಕುಸಿದಿದ್ದು, ಈವರೆಗೆ ಏಳು ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೂರತ್‌ನ ಪಾಲ್ ಪ್ರದೇಶದಲ್ಲಿರುವ ವಸತಿ ಕಟ್ಟಡ ಕುಸಿದಿದೆ. ಕಟ್ಟಡ ಕುಸಿದು ಬಿದ್ದ...

ರಾಹುಲ್ ಅಬ್ಬರ | ಮಣಿಪುರದ ಬಗ್ಗೆ ತುಟಿ ಬಿಚ್ಚಿದ ಮೋದಿ!

ಕಳೆದೊಂದು ವರ್ಷದಿಂದ ಜನಾಂಗೀಯ ಹಿಂಸಾಚಾರದಿಂದ ಮಣಿಪುರ ನಲುಗಿದೆ. 2023ರ ಮೇ 3ರಂದು ಮಣಿಪುರ ರಾಜ್ಯದಲ್ಲಿ ಆರಂಭವಾದ ಜನಾಂಗೀಯ ದಳ್ಳುರಿಗೆ ಭೌಗೋಳಿಕವಾಗಿ ಮತ್ತು ಮಾನಸಿಕವಾಗಿ ಇಡೀ ರಾಜ್ಯವೇ ತತ್ತರಿಸಿದೆ. ಒಂದು ಕಡೆ ಹಿಂಸಾಚಾರದಿಂದ ನೆಲೆ...

ಅಸ್ಸಾಂ ಪ್ರವಾಹ | ನೀರಿನಲ್ಲಿ ಕೊಚ್ಚಿಹೋದ ಬಾಲಕ; ಮಗನಿಗಾಗಿ ಮೂರು ದಿನಗಳಿಂದ ಮೋರಿಗಳಲ್ಲಿ ಹುಡುಕುತ್ತಿರುವ ತಂದೆ

ಅಸ್ಸಾಂನ ಅತಿದೊಡ್ಡ ನಗರ ಗುವಾಹಟಿಯ ಕೆಲವು ಭಾಗಗಳು ಪ್ರವಾಹಕ್ಕೆ ತುತ್ತಾಗಿವೆ. ವಸತಿ ಪ್ರದೇಶಗಳು ಜಲಾವೃತವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಹತಾಶೆಗೊಂಡಿರುವ ವ್ಯಕ್ತಿಯೊಬ್ಬರು ತನ್ನ ಎಂಟು ವರ್ಷದ ಮಗನಿಗಾಗಿ ನಗರದ ದೊಡ್ಡ ಮೋರಿಗಳನ್ನು ಮೂರು ದಿನಗಳಿಂದ...

ಈದಿನ ವಿಶೇಷ | ರಾಹುಲ್ ಗಾಂಧಿ ಎಂದರೆ ‘ಮ್ಯಾನ್ ಆಫ್ ದಿ ಪಾಲಿಟಿಕ್ಸ್’

ಗುಜರಾತ್ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿತ್ತು. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ತೆಲಂಗಾಣವನ್ನು ತಲುಪಿತ್ತು. ಅದೇ ಸಮಯದಲ್ಲಿ ಗುಜರಾತಿನ ಮೋರ್ಬಿಯಲ್ಲಿ ತೂಗು ಸೇತುವೆ ಕುಸಿದು ಬರೋಬ್ಬರಿ 141 ಜನ ಜೀವ ಕಳೆದುಕೊಂಡಿದ್ದರು. ಬ್ರಿಟಿಷ್...

ಕೇಂದ್ರ ಬಜೆಟ್ 2024-25 | ಜುಲೈ 23ರಂದು ಆಯವ್ಯಯ ಮಂಡನೆ

ಸಂಸತ್ತಿನ ಬಜೆಟ್ ಅಧಿವೇಶನ ಜುಲೈ 22ರಿಂದ ಆಗಸ್ಟ್ 12ರವರೆಗೆ ನಡೆಯಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರಂದು ಬಜೆಟ್ ಮಂಡಿಸಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ...

ಇಂಗ್ಲೆಂಡ್ ಚುನಾವಣೆ | ನಮ್ಮ ಜನ ರಾಜಕಾರಣಕ್ಕೆ ಪಾಠವಾಗಬಲ್ಲ ಕಾರ್ಬಿನ್ ಗೆಲುವು

ಫ್ರೆಂಚ್ ಲೇಖಕ André Gideನ 'ಹೇಳಬೇಕಾಗಿರುವುದನ್ನು ಎಲ್ಲಾ ಹೇಳಿಯಾಗಿದೆ, ಆದರೆ ಯಾರೂ ಆಲಿಸುತ್ತಿಲ್ಲವಾದ್ದರಿಂದ ಮತ್ತೊಮ್ಮೆ ಹೇಳಲೇಬೇಕಾಗಿದೆ' ಎಂಬ ಮಾತುಗಳು ತನ್ನ ಸಿದ್ಧಾಂತದ ಪರ ಅಂಟಿಕೊಂಡಿರುವ, ಛಲ ಬಿಡದ ಕಾರ್ಬಿನ್ ರಾಜಕೀಯಕ್ಕೆ ಅನ್ವಯಿಸುತ್ತದೆ. ಕಳೆದ...

ಅಯೋಧ್ಯೆಯಂತೆಯೇ ಗುಜರಾತ್‌ನಲ್ಲೂ ಬಿಜೆಪಿ ಸೋಲಲಿದೆ: ರಾಹುಲ್‌ ಗಾಂಧಿ

ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆಯೇ ಮುಂದಿನ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಬಿಜೆಪಿಯನ್ನು ಪಕ್ಷವು ಸೋಲಿಸಲಿದೆ ಎಂದು ಲೋಕಸಭಾ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಗುಜರಾತ್‌ನಲ್ಲಿರುವ ರಾಹುಲ್‌ ಗಾಂಧಿ ಅಹಮದಾಬಾದ್‌ನಲ್ಲಿ ನಡೆದ...

ಫರಿದಾಬಾದ್ ದುರಂತ | ಮನೆ ಛಾವಣಿ ಕುಸಿದು ಮೂವರು ಮಕ್ಕಳು ಸಾವು

ಹರಿಯಾಣದ ಫರಿದಾಬಾದ್ ಬಳಿಯ ಸಿಕ್ರಿ ಗ್ರಾಮದಲ್ಲಿ ಶನಿವಾರ ಮನೆಯ ಛಾವಣಿ ಕುಸಿದು ಮೂವರು ಸಹೋದರರು ಮೃತಪಟ್ಟಿದ್ದಾರೆ. ಮೃತರನ್ನು ಆಕಾಶ್ (10), ಮುಸ್ಕಾನ್ (8) ಹಾಗೂ ಆದಿಲ್ (6) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಸಾಮಾನ್ಯವಾಗಿ...

ಹಾಥರಸ್ ಕಾಲ್ತುಳಿತ | ದೆಹಲಿಗೆ ಪರಾರಿಯಾಗಿದ್ದ ಪ್ರಮುಖ ಆರೋಪಿ ಬಂಧನ

ಜುಲೈ 2ರಂದು ಹಾಥರಸ್‌ನಲ್ಲಿ ನಡೆದ ಕಾಲ್ತುಳಿತ ದುರಂತದ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮೂಲಗಳು ತಿಳಿಸಿವೆ. ಮಂಗಳವಾರ ನಡೆದ ದುರಂತ ಘಟನೆಯಲ್ಲಿ 121 ಜನರು ಸಾವನ್ನಪ್ಪಿದ್ದರು....

ಈ ಹೊತ್ತಿನ ಪ್ರಮುಖ ಸುದ್ದಿ