ದೇಶ

ರಾಜಸ್ಥಾನ | ಮಕ್ಕಳು ತನ್ನವಲ್ಲವೆಂದು ಶಂಕಿಸಿ ಕೊಲೆ; ವಿಕೃತ ತಂದೆಯ ಬಂಧನ

ಮಕ್ಕಳು ತನ್ನವಲ್ಲ ಎಂದು ಶಂಕಿಸಿದ ತಂದೆಯೊಬ್ಬ ಇಬ್ಬರು ಮಕ್ಕಳನ್ನು ಹಾಗೂ ತನ್ನ ಅಜ್ಜಿಯನ್ನು ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ವರದಿಯಾಗಿದೆ. ಆರೋಪಿ ವಿಕೃತ ತಂದೆಯನ್ನು ಬಂಧಿಸಿರುವುದಾಗಿ ಮಂಗಳವಾರ ಪೊಲೀಸರು ತಿಳಿಸಿದ್ದಾರೆ. "ಬಂಧಿತ...

ಅಬಕಾರಿ ಹಗರಣದಲ್ಲಿ ಹಣ ಎಲ್ಲಿಂದ ಬಂತು ಎಂಬುದನ್ನು ಕೇಜ್ರಿವಾಲ್‌ರಿಂದ ನಾಳೆ ಬಹಿರಂಗ: ಪತ್ನಿ ಸುನಿತಾ

ದೆಹಲಿ ಹೈಕೋರ್ಟ್ ಮುಂದೆ ನಾಳೆ (ಮಾ.28ರಂದು) ಅರವಿಂದ್ ಕೇಜ್ರಿವಾಲ್ ಅವರು ಹಾಜರಾಗಲಿದ್ದು, ಅಬಕಾರಿ ಹಗರಣ ಎಂದು ಕರೆಯಲಾಗುವ ಸತ್ಯದ ಬಗ್ಗೆ ಬಹಿರಂಗಪಡಿಸಲಿದ್ದಾರೆ ಎಂದು ಕೇಜ್ರಿವಾಲ್‌ ಅವರ ಪತ್ನಿ ಸುನಿತಾ ಅವರು ತಿಳಿಸಿದ್ದಾರೆ. ಹಗರಣದ ಹಣ...

ದೆಹಲಿ | ಕೇಜ್ರಿವಾಲ್ ಬಂಧನಕ್ಕೆ ವಕೀಲರ ಖಂಡನೆ; ಪ್ರತಿಭಟನೆ ನಡೆಸದಂತೆ ಹೈಕೋರ್ಟ್ ಎಚ್ಚರಿಕೆ

ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ನ್ಯಾಯಾಲಯದ ಆವರಣದಲ್ಲಿ ವಕೀಲರು ಪ್ರತಿಭಟನೆ ನಡೆಸದಂತೆ ದೆಹಲಿ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಬುಧವಾರ ಎಚ್ಚರಿಕೆ...

ಚುನಾವಣಾ ಬಾಂಡ್ | ವಿಶ್ವದಲ್ಲೇ ಅತೀ ದೊಡ್ಡ ಹಗರಣ ಎಂದ ನಿರ್ಮಲಾ ಸೀತಾರಾಮನ್ ಪತಿ!

ನಿರಂತರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ, ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಅವರು "ಚುನಾವಣಾ ಬಾಂಡ್ ದೇಶದ ಅತೀ ದೊಡ್ಡ ಹಗರಣವಲ್ಲ, ವಿಶ್ವದಲ್ಲೇ ಅತೀ...

ಲೆಕ್ಕಪತ್ರವಿಲ್ಲದ 524 ಕೋಟಿ ರೂ. ವಹಿವಾಟು ಆರೋಪ; ಕಾಂಗ್ರೆಸ್‌ಗೆ ಮತ್ತೆ ಆದಾಯ ತೆರಿಗೆ ನೋಟಿಸ್!

ಲೋಕಸಭೆ ಚುನಾವಣೆಗೆ ಇನ್ನು ಮೂರು ವಾರಗಳಷ್ಟೇ ಬಾಕಿ ಇರುವಾಗ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ಗೆ ಮತ್ತೊಂದು ನೋಟಿಸ್ ನೀಡಿದೆ. ಈಗಾಗಲೇ ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಸೀಝ್ ಮಾಡಲಾಗಿದ್ದು, ಸುಮಾರು 135 ಕೋಟಿ ರೂಪಾಯಿಯನ್ನು...

ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ನಿಧನ, ಪ್ರಧಾನಿ ಸೇರಿ ಗಣ್ಯರ ಸಂತಾಪ

ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಅವರು ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಸ್ಮರಣಾನಂದ ಅವರಿಗೆ ಮೂತ್ರನಾಳ ಸೋಂಕು ಕಾಣಿಸಿಕೊಂಡ ಕಾರಣ ಜನವರಿ 29ರಂದು ದಕ್ಷಿಣ ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 2017 ರಲ್ಲಿ...

ಬಿಹಾರ| ವಿಶೇಷ ಹೋಳಿ ರೈಲಿನ ಎಸಿ ಕೋಚ್‌ನಲ್ಲಿ ಅಗ್ನಿ ಅವಘಡ

ಬಿಹಾರದ ಅರಾ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಹೋಳಿ ವಿಶೇಷ ರೈಲಿನ ಎಸಿ ಕೋಚ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ರೈಲು ದಾನಪುರದಿಂದ ಮುಂಬೈಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಪ್ರಾಣಪಾಯದ ಬಗ್ಗೆ...

ಅಮೆರಿಕದ ಗಾಜಾ ನಡೆ ವಿರೋಧಿಸಿ ಪಿ.ಹೆಚ್‌ಡಿ, ಎಂಎಸ್‌ಸಿ ಪದವಿಗಳನ್ನು ಮರಳಿಸಿದ ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ

ಇಸ್ರೇಲ್ – ಪ್ಯಾಲಿಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಗಾಜಾ ವಿರೋಧಿ ನೀತಿ ಅನುಸರಿಸುತ್ತಿರುವ ಅಮೆರಿಕದ ನಡೆ ಖಂಡಿಸಿ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಚಳುವಳಿಗಾರ ಸಂದೀಪ್ ಪಾಂಡೆ ಕ್ಯಾಲಿಫೋರ್ನಿಯ ವಿವಿಯ ಪಿ.ಹೆಚ್‌ಡಿ ಪದವಿಯನ್ನು...

21 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಲಡಾಖ್ ಹೋರಾಟಗಾರ ಸೋನಮ್ ವಾಂಗ್​ಚುಕ್

ಲಡಾಖಿನ ನಾಜೂಕು ಪರಿಸರದ ಉಳಿವು ಮತ್ತು 6ನೇ ಶೆಡ್ಯೂಲಿನೊಂದಿಗೆ ರಾಜ್ಯದ ಸ್ಥಾನಮಾನಕ್ಕೆ ಒತ್ತಾಯಿಸಿ ಇಂಜಿನಿಯರ್ ಮತ್ತು ಶಿಕ್ಷಣ ಸುಧಾರಕ ಸೋನಮ್ ವಾಂಗ್​ಚುಕ್ ಕಳೆದ 21 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಮಾ.26ರಂದು ಕೊನೆಗೊಳಿಸಿರುವುದಾಗಿ...

ಲೋಕಸಭೆ ಚುನಾವಣೆ | ಜಮ್ಮುವಿನಲ್ಲಿ ಕಾಂಗ್ರೆಸ್‌ಗೆ ಶಿವಸೇನೆ ಸಾಥ್

ಶಿವಸೇನೆ (ಯುಬಿಟಿ) ಜಮ್ಮು ಮತ್ತು ಕಾಶ್ಮೀರ ಘಟಕವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉಧಮ್‌ಪುರ ಮತ್ತು ಜಮ್ಮು ಕ್ಷೇತ್ರದಿಂದ ಕಣಕ್ಕಿಳಿದ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಬೆಂಬೆಲ ವ್ಯಕ್ತಪಡಿಸಿದೆ. ಉಧಮ್‌ಪುರದಲ್ಲಿ ಏಪ್ರಿಲ್ 19ರಂದು, ಜಮ್ಮುವಿನಲ್ಲಿ ಏಪ್ರಿಲ್ 26ರಂದು...

ಲಡಾಖ್​ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟ ಪ್ರಕಾಶ್ ರಾಜ್; ವಾಂಗ್​ಚುಕ್ ಹೋರಾಟಕ್ಕೆ ಬೆಂಬಲ

ಲಡಾಖಿನ ನಾಜೂಕು ಪರಿಸರದ ಉಳಿವು ಮತ್ತು 6ನೇ ಶೆಡ್ಯೂಲಿನೊಂದಿಗೆ ರಾಜ್ಯದ ಸ್ಥಾನಮಾನಕ್ಕೆ ಒತ್ತಾಯಿಸಿ ಇಂಜಿನಿಯರ್ ಮತ್ತು ಶಿಕ್ಷಣ ಸುಧಾರಕ ಸೋನಮ್ ವಾಂಗ್​ಚುಕ್ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮಾರ್ಚ್ 6ರಂದು...

ಕೇಜ್ರಿವಾಲ್ ಬಂಧನದ ಬಗ್ಗೆ ಅಮೆರಿಕ-ಜರ್ಮನಿ ಹೇಳಿದ್ದೇನು? ಕೇಂದ್ರ ಸರ್ಕಾರ ಸಿಟ್ಟಾಗಿದ್ದೇಕೆ?

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಬಂಧನದ ವರದಿಗಳನ್ನು ಅಮೆರಿಕ ನಿಕಟವಾಗಿ ಗಮನಿಸುತ್ತಿದ್ದು, ನಾವು ನ್ಯಾಯೋಚಿತ ಹಾಗೂ ಪಾರದರ್ಶಕ ಪ್ರಕ್ರಿಯೆಯನ್ನು ಪ್ರೋತ್ಸಾಹಿಸುತ್ತೇವೆ ಎಂದು ಅಮೆರಿಕದ ವಕ್ತಾರರು ಹೇಳಿಕೆ ನೀಡಿದ್ದಾರೆ. ಕೇಜ್ರಿವಾಲ್‌ ಬಂಧನದ ನಂತರ ರಾಷ್ಟ್ರ ರಾಜಧಾನಿಯಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ