ಲಡಾಖ್​ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟ ಪ್ರಕಾಶ್ ರಾಜ್; ವಾಂಗ್​ಚುಕ್ ಹೋರಾಟಕ್ಕೆ ಬೆಂಬಲ

Date:

ಲಡಾಖಿನ ನಾಜೂಕು ಪರಿಸರದ ಉಳಿವು ಮತ್ತು 6ನೇ ಶೆಡ್ಯೂಲಿನೊಂದಿಗೆ ರಾಜ್ಯದ ಸ್ಥಾನಮಾನಕ್ಕೆ ಒತ್ತಾಯಿಸಿ ಇಂಜಿನಿಯರ್ ಮತ್ತು ಶಿಕ್ಷಣ ಸುಧಾರಕ ಸೋನಮ್ ವಾಂಗ್​ಚುಕ್ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮಾರ್ಚ್ 6ರಂದು ‘ಕ್ಲೈಮೇಟ್ ಫಾಸ್ಟ್’ ಹೆಸರಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅವರ ಆಂದೋಲನಕ್ಕೆ ಪರಿಸರವಾದಿಗಳು, ಸ್ಥಳೀಯ ಜನರು, ಹಲವಾರು ಸೆಲೆಬ್ರಿಟಿಗಳು, ವಿವಿಧ ಸಮುದಾಯಗಳು ಬೆಂಬಲ ನೀಡುತ್ತಿವೆ. ಆದರೆ, ಕೇಂದ್ರ ಸರ್ಕಾರ ಅವರ ಹೋರಾಟಕ್ಕೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ನಡುವೆ ಇಂದು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಲಡಾಖ್‌ಗೆ ತೆರಳಿರುವ ಖ್ಯಾತ ನಟ ಪ್ರಕಾಶ್ ರಾಜ್, ಹೋರಾಟದಲ್ಲಿ ಭಾಗವಹಿಸುವ ಮೂಲಕ ಸೋನಮ್ ವಾಂಗ್​ಚುಕ್ ಅವರನ್ನು ಬೆಂಬಲಿಸಿದ್ದಾರೆ. ಈ ಕುರಿತು ಅವರು ಟ್ವಿಟರ್​ನಲ್ಲಿ ಪೋಸ್ಟ್ ಕೂಡ ಹಂಚಿಕೊಂಡಿದ್ದಾರೆ.

“ಸೋನಮ್ ವಾಂಗ್​ಚುಕ್ ಅವರನ್ನು ಬೆಂಬಲಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇನೆ” ಎಂದು ಅವರು ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಇಂದು ನನ್ನ ಬರ್ತ್​ಡೇ. ಹೀಗಾಗಿ ನಾನು ಈ ದಿನವನ್ನು ಲೇಹ್ ಲಡಾಖ್‌ನಲ್ಲಿ ಕಳೆಯಲು ನಿರ್ಧರಿಸಿದೆ. ಈ ಜನ ತಮಗಾಗಿ ಹೋರಾಡುತ್ತಿಲ್ಲ. ಇಲ್ಲಿನ ಜನರು ನಮ್ಮ ದೇಶ, ನಮ್ಮ ಪರಿಸರ ಮತ್ತು ನಮ್ಮ ಭವಿಷ್ಯಕ್ಕಾಗಿ ಹೋರಾಡುತ್ತಿದ್ದಾರೆ. ಅವರ ಬೆಂಬಲಕ್ಕೆ ನಿಲ್ಲೋಣ” ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಇದರಲ್ಲಿ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ಕಂಡು ಬಂದಿದೆ.

“ಲಡಾಖ್ ಮತ್ತು ಹಿಮಾಲಯವನ್ನು ಉಳಿಸಿ” ಎಂಬ ವಾಂಗ್‌ಚುಕ್ ಅವರ ಉಪವಾಸ 21 ದಿನಗಳನ್ನು ತಲುಪಿದೆ. ಪ್ರತಿಭಟನೆಗೆ ರಾಜಕೀಯ ನಾಯಕರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಾಂಗ್​ಚುಕ್ ಟ್ವೀಟ್ ಮಾಡಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಅವರು ಅಪ್‌ಡೇಟ್‌ ನೀಡುತ್ತಾ ಬರುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಶೀಘ್ರವೇ ಸ್ಪಂದನೆ ಸಿಗುವ ಭರವಸೆಯಲ್ಲಿ ಅವರಿದ್ದಾರೆ.

ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್​ಚುಕ್, ಬಾಲಿವುಡ್ ನಟ ಅಮೀರ್ ಖಾನ್, ಕರೀನಾ ಕಪೂರ್, ಬೊಮನ್ ಇರಾನಿ ನಟನೆಯ, ರಾಜ್‌ಕುಮಾರ್ ಹಿರಾನಿ ನಿರ್ದೇರ್ಶನದ ‘ತ್ರೀ ಈಡಿಯಟ್ಸ್(3 idiots) ಸಿನಿಮಾಕ್ಕೆ ಪ್ರೇರಣೆಯಾಗಿದ್ದರು.

ಪ್ರಕಾಶ್ ರೈ ಅವರು ಸಿನಿಮಾ ಜೊತೆಗೆ ಅನೇಕ ಸಾಮಾಜಿಕ ಕೆಲಸ ಮಾಡುವ ಮೂಲಕವೂ ಗುರುತಿಸಿಕೊಂಡಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರದ ಜನವಿರೋಧಿ ನಡೆಗಳ ಟೀಕಾಕಾರರಾಗಿ ಗುರುತಿಸಿಕೊಂಡಿದ್ದಾರೆ. ಇದರಿಂದ ಬಿಜೆಪಿ ಹಾಗೂ ಸಂಘಪರಿವಾರದ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿ ಸೋಲಿಸುವ ಅಭ್ಯರ್ಥಿಗಳಿಗೆ ಮತ ನೀಡಿ: ರೈತ ನಾಯಕ ರಾಕೇಶ್ ಟಿಕಾಯತ್ ಮನವಿ

ಲೋಕಸಭಾ ಚುನಾವಣೆಯಲ್ಲಿ ಮೇ.25 ಹಾಗೂ ಜೂನ್‌ 1ರ  ಕೊನೆಯ ಎರಡು ಹಂತದ...

ಹರಿಯಾಣದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ 7 ಜನರ ಸಾವು, 25 ಮಂದಿಗೆ ಗಾಯ

ಹರಿಯಾಣ ದ ಅಂಬಾಲದಲ್ಲಿ ಇಂದು ಬೆಳಗಿನ ಜಾವ ಟ್ರಕ್‌ವೊಂದು ಮಿನಿ ಬಸ್‌ಗೆ...

5ನೇ ಹಂತದ ಲೋಕಸಭೆ ಚುನಾವಣೆ: ಶೇ. 62.2 ರಷ್ಟು ಮತದಾನ

ಮೇ 20 ರಂದು ನಡೆದ 5ನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಶೇ....

ಲೋಕಸಭೆ ಚುನಾವಣೆ 6ನೇಹಂತ: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

ಲೋಕಸಭಾ ಚುನಾವಣೆ 6ನೇ ಹಂತದ ಮತದಾನ ಇದೇ ಮೇ 25 ರಂದು...