ದೇಶ

ಇಡಿ ಬಂಧನದ ವಿರುದ್ಧದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಿಂದ ವಾಪಸ್ ಪಡೆದ ದೆಹಲಿ ಸಿಎಂ ಕೇಜ್ರಿವಾಲ್

ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಪಸ್‌ ಪಡೆದಿದ್ದಾರೆ. ಮಾಧ್ಯಮಗಳ ವರದಿಯಂತೆ ಬಂಧನದ ವಿರುದ್ಧದ ತಮ್ಮ ಅರ್ಜಿಯನ್ನು ಕೆಳ ಹಂತದ ರೋಸ್‌ ಅವಿನ್ಯೂ ನ್ಯಾಯಾಲಯದಲ್ಲಿ...

ಚುನಾವಣಾ ಬಾಂಡ್ | ಅದಾನಿ ಗ್ರೂಪ್‌ ಜೊತೆ ನಂಟು; 4 ಕಂಪನಿಗಳಿಂದ ₹55 ಕೋಟಿ ಮೌಲ್ಯದ ಬಾಂಡ್‌ ಖರೀದಿ; ಬಿಜೆಪಿಗೆ ಸಿಂಹಪಾಲು

ಅದಾನಿ ಗ್ರೂಪ್‌ ಜೊತೆ ಸಂಬಂಧ ಹೊಂದಿರುವ ನಾಲ್ಕು ಕಂಪನಿಗಳು 2019ರ ಏಪ್ರಿಲ್‌ನಿಂದ 2023ರ ನವೆಂಬರ್‌ವರೆಗೆ ಒಟ್ಟು 55.4 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ. ಅವುಗಳಲ್ಲಿ 42.4 ಕೋಟಿ ರೂ.ಗಳನ್ನು ಬಿಜೆಪಿ...

ಸುಪ್ರೀಂ ಕೋರ್ಟ್ ತಪರಾಕಿ ನಂತರ ಡಿಎಂಕೆ ಸಚಿವರ ಸಂಪುಟ ಸೇರ್ಪಡೆಗೆ ಅನುಮತಿಸಿದ ತಮಿಳುನಾಡು ರಾಜ್ಯಪಾಲ

ತಮ್ಮ ಆದೇಶವನ್ನು ಉಲ್ಲಂಘಿಸಿದ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ವಿರುದ್ಧ ಸುಪ್ರೀಂ ಕೋರ್ಟ್ ತಪರಾಕಿ ಹಾಕಿದ ಬೆನ್ನಲ್ಲೆ ರಾಜ್ಯಪಾಲರು ಡಿಎಂಕೆ ನಾಯಕ ಕೆ ಪೊನ್ಮುಡಿ ಅವರನ್ನು ಸರ್ಕಾರದ ಸಂಪುಟಕ್ಕೆ ಸೇರಿಸಿಕೊಳ್ಳಲು ಅನುಮತಿ...

ದೆಹಲಿ ಅಬಕಾರಿ ನೀತಿ ಪ್ರಕರಣ: ಬಿಆರ್‌ಎಸ್ ನಾಯಕಿ ಕವಿತಾ ಜಾಮೀನು ಅರ್ಜಿ ವಜಾ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ, ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂಎಲ್‌ಸಿ ಕಲ್ವಕುಂಟ್ಲ ಕವಿತಾ ಅವರ ಜಾಮೀನು ಅರ್ಜಿಯನ್ನು...

ಲೋಕಸಭಾ ಚುನಾವಣೆ | ಸುದೀರ್ಘ ಚುನಾವಣೆ ವಿಪಕ್ಷಗಳಿಗೆ ಅನನುಕೂಲ: ಯೆಚೂರಿ

2024ರ ಲೋಕಸಭಾ ಚುನಾವಣೆಯು ಭಾರತದಲ್ಲಿ ಇದುವರೆಗೆ ನಡೆದ ಎರಡನೇ ಅತಿ ದೀರ್ಘಾವಧಿಯ ಚುನಾವಣೆಯಾಗಿದೆ. ಇದು ವಿರೋಧ ಪಕ್ಷಗಳಿಗೆ ಅನನುಕೂಲಕರವಾಗಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ...

ಕೇಜ್ರಿವಾಲ್ ಬಂಧನ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ಅಬಕಾರಿ ನೀತಿ ಯೋಜನೆಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ(ಮಾ.22) ಜಾರಿ ನಿರ್ದೇಶನಾಲಯದಿಂದ ಬಂಧನವಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ...

ವೀಸಾಗಾಗಿ ₹50 ಲಕ್ಷ ಲಂಚ: ಕಾರ್ತಿ ಚಿದಂಬರಂ ವಿರುದ್ಧ ಇಡಿ ದೂರು

2010 ಮತ್ತು 2014ರ ನಡುವೆ ಪಂಜಾಬ್‌ನ ಮಾನ್ಸಾದಲ್ಲಿ 1,980 ಮೆಗಾವ್ಯಾಟ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಕಾಮಗಾರಿಗಾಗಿ ಚೀನೀ ಪ್ರಜೆಗಳನ್ನು ಕರೆತರಲು ವೀಸಾಗಳನ್ನು ವಿತರಿಸುವುದಕ್ಕಾಗಿ ಲಂಚ ಪಡೆದಿದ್ದಾರೆ ಎಂದು ಕಾರ್ತಿ ಪಿ ಚಿದಂಬರಂ ಮತ್ತು...

ಬಿಹಾರ| ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ, ಓರ್ವ ಸಾವು, 30 ಮಂದಿ ಸಿಲುಕಿರುವ ಶಂಕೆ

ಬಿಹಾರದ ಸುಪೌಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯೊಂದು ಕುಸಿತವಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಇನ್ನೂ 30 ಮಂದಿ ಈ ಸೇತುವೆಯ ಅಡಿಯಲ್ಲಿ ಸಿಲುಕಿರುವ ಶಂಕೆಯಿದೆ. ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ....

ಇಡಿ ಕಸ್ಟಡಿಯಲ್ಲಿರುವ ದೆಹಲಿ ಸಿಎಂ ಕೇಜ್ರಿವಾಲ್ ಭದ್ರತೆ ಬಗ್ಗೆ ಎಎಪಿ ಆತಂಕಗೊಂಡಿದೆ: ಅತಿಶಿ

ಇಡಿ ಕಸ್ಟಡಿಯಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಭದ್ರತೆಯ ಬಗ್ಗೆ ಆಮ್ ಆದ್ಮಿ ಪಕ್ಷ (ಎಎಪಿ) ಆತಂಕಗೊಂಡಿದೆ ಎಂದು ದೆಹಲಿ ಸಚಿವ ಅತಿಶಿ ಶುಕ್ರವಾರ ಹೇಳಿದ್ದಾರೆ. ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣಕ್ಕೆ...

ದೆಹಲಿ ಅಬಕಾರಿ ನೀತಿ ಪ್ರಕರಣ: ನಿರ್ದೇಶಕರ ಬಂಧನದ ಬಳಿಕ ಬಿಜೆಪಿಗೆ 30 ಕೋಟಿ ರೂ. ಚುನಾವಣಾ ಬಾಂಡ್‌ ನೀಡಿದ್ದ ಅರಬಿಂದೋ ಫಾರ್ಮಾ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯವು ಗುರುವಾರ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಿದೆ. ಇದಕ್ಕೂ ಕೆಲವೇ ಗಂಟೆಗಳ ಮುನ್ನ ಚುನಾವಣಾ ಬಾಂಡ್ ಮಾಹಿತಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದು,...

ಚುನಾವಣಾ ಬಾಂಡ್ | ಬಿಜೆಪಿಗೂ ಕೋಟ್ಯಂತರ ದಾನ ನೀಡಿದ್ದ ‘ಲಾಟರಿ ಕಿಂಗ್’

'ಲಾಟರಿ ಕಿಂಗ್‌' ಎಂದೆ ಹೆಸರಾಗಿರುವ ಸಾಂಟಿಯಾಗೊ ಮಾರ್ಟಿನ್ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಉದ್ಯಮಿಯಾಗಿದ್ದಾನೆ. ನಿನ್ನೆಯಷ್ಟೆ(ಮಾ.21) ಚುನಾವಣಾ ಆಯೋಗಕ್ಕೆ ಎಸ್‌ಬಿಐ ಸಲ್ಲಿಸಿದ ಸಂಪೂರ್ಣ ಮಾಹಿತಿಯಲ್ಲಿ ಇದು ಬಹಿರಂಗಗೊಂಡಿದೆ. ಲಾಟರಿ...

ಅರವಿಂದ್ ಕೇಜ್ರಿವಾಲ್ ಮನೆಯಲ್ಲಿ ಇಡಿಗೆ ಸಿಕ್ಕಿದು ಬರೀ 70,000 ರೂಪಾಯಿ: ಎಎಪಿ

ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಿದೆ. ಈ ಬೆನ್ನಲ್ಲೇ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್, "ಜಾರಿ...

ಈ ಹೊತ್ತಿನ ಪ್ರಮುಖ ಸುದ್ದಿ