ಕಳ್ಳತನ, ಸುಳ್ಳು ಹೇಳುವುದು, ಸುಲಿಗೆ, ದರೋಡೆ, ಕೊಲೆಗಡುಕತನ, ಭ್ರಷ್ಟಾಚಾರ ಮಾಡುವುದು ಈ ಎಲ್ಲಾ ಕೃತ್ಯಗಳಿಗೆ ಜಾತಿ ಧರ್ಮ ಎನ್ನುವುದು ಇರುವುದಿಲ್ಲ. ಇವು ಮನುಷ್ಯ ಸಹಜ ಗುಣಗಳು. ನೇರವಾಗಿ ಮಾಡುವ ಕೊಲೆ ಕೇವಲ ವ್ಯಕ್ತಿಯನ್ನು ಮಾತ್ರ ಮುಗಿಸಬಲ್ಲುದು. ಆದರೆ ಕುಟಿಲ ಹುನ್ನಾರದಿಂದ ಒಂದಿಡೀ ಜನಾಂಗವನ್ನೆ ಶೋಷಿಸುವುದು ಕೊಲೆಗಿಂತ ಭಯಂಕರ ಕೆಟ್ಟ ಪರಿಣಾಮವನ್ನು ಬೀರಬಲ್ಲುದು. ಸನಾತನಿ ಪುರೋಹಿತಶಾಹಿಗಳು ಈ ಕುಟಿಲ ಹುನ್ನಾರಕ್ಕಾಗಿಯೆ ಕುಖ್ಯಾತರಾಗಿದ್ದಾರೆ.
ಭಾರತದಲ್ಲಿ ಜನರನ್ನು ಜಾತಿಗಳ ಆಧಾರದಲ್ಲಿ ಗುರುತಿಸುವ ಪದ್ದತಿ ಹುಟ್ಟು ಹಾಕಿದವರು ಸನಾತನಿಗಳು. ಭೇದಭಾವ ಸನಾತನ ಧರ್ಮದ ಹೃದಯವಿದ್ದಂತೆ. ಸನಾತನಿಗಳು ಮನುಷ್ಯರಲ್ಲಿ ಮಾತ್ರ ಭೇದಭಾವವನ್ನು ಮಾಡುವುದಿಲ್ಲ. ಬದಲಾಗಿ ಎಲ್ಲದರಲ್ಲೂ ಮಾಡುತ್ತಾರೆ. ಮನುಷ್ಯರಲ್ಲಿ ಜಾತಿಯ ಧರ್ಮದ ಹಾಗೂ ಲಿಂಗದ ಆಧಾರದಲ್ಲಿ ತಾರತಮ್ಯ ಮಾಡುವುದಲ್ಲದೆ ಜೀವಿಯ ದೇಹದಲ್ಲಿನ ಅವಯವಗಳಲ್ಲೂ ಎಡ ಕನಿಷ್ಠ, ಬಲ ಶ್ರೇಷ್ಠ ಮುಂತಾಗಿ ತಾರತಮ್ಯವಿದೆ. ಇನ್ನು ಆಹಾರದಲ್ಲಿ ಗುಣ ಸ್ವಭಾವದಲ್ಲಿ ಹೂವುಗಳಲ್ಲಿ ಹಣ್ಣುಗಳಲ್ಲಿ ಹಾಗೂ ಜೀವಜಗತ್ತಿನ ಎಲ್ಲಾ ಪ್ರಾಣಿಗಳಲ್ಲೂ ತಾರತಮ್ಯ ಮಾಡುವುದು ಸನಾತನಿಗಳ ಮೂಲಭೂತ ಗುಣಧರ್ಮ. ಇಂತಹದೇ ಹೂವು ಹಾಗೂ ಹಣ್ಣು ಶ್ರೇಷ್ಠ. ಅದು ದೇವರ ಪೂಜೆಗೆ ಯೋಗ್ಯವಾದದ್ದು, ಇಂತಹದೇ ಹೂವು ಹಾಗೂ ಹಣ್ಣು ಕನಿಷ್ಠ ˌ ಅದು ಪೂಜೆಗೆ ಯೋಗ್ಯವಾದದ್ದಲ್ಲ ಎನ್ನುವ ತಾರತಮ್ಯಪೂರಿತ ಸ್ಥಾಪಿತ ಹಿತಾಸಕ್ತಿ ಸನಾತನಿಗಳು ಸೃಷ್ಟಿಸಿದ್ದಾರೆ. ಇಂದಿನ ಅಧುನಿಕ ಕಾಲಮಾನದಲ್ಲೂ ಈ ತಾರತಮ್ಯ ಹಿನ್ನೆಲೆಗೆ ಸರಿದಿಲ್ಲ. ಈಗಲೂ ಅದು ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಜೀವಂತವಾಗಿದೆ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಮುಗ್ಧ ಜನಸಾಮಾನ್ಯರಲ್ಲಿ ಭಯವನ್ನು ಬಿತ್ತಿದವರು ಸನಾತನಿಗಳು. ಜನರಲ್ಲಿ ಯಾವುದೇ ಬಗೆಯ ಭಯವನ್ನು ಬಿತ್ತುವವರಿಗೆ ಭಯೋತ್ಪಾದಕರು ಎನ್ನುವುದು ವಾಡಿಕೆ. ಈ ಅಧುನಿಕ ಯುಗದಲ್ಲಿಯೂ ಸಹ ಸನಾತನಿಗಳ ಈ ತಾರತಮ್ಯದ ಹಾಗೂ ಭಯವನ್ನು ಹುಟ್ಟಿಸುವ ಅಭಿಯಾನ ಇನ್ನೂ ನಿಂತಿಲ್ಲ.
ಕಳ್ಳತನ, ಸುಳ್ಳು ಹೇಳುವುದು, ಸುಲಿಗೆ, ದರೋಡೆ, ಕೊಲೆಗಡುಕತನ, ಭ್ರಷ್ಟಾಚಾರ ಮಾಡುವುದು ಈ ಎಲ್ಲಾ ಕೃತ್ಯಗಳಿಗೆ ಜಾತಿ ಧರ್ಮ ಎನ್ನುವುದು ಇರುವುದಿಲ್ಲ. ಇವು ಮನುಷ್ಯ ಸಹಜ ಗುಣಗಳು. ನೇರವಾಗಿ ಮಾಡುವ ಕೊಲೆ ಕೇವಲ ವ್ಯಕ್ತಿಯನ್ನು ಮಾತ್ರ ಮುಗಿಸಬಲ್ಲುದು. ಆದರೆ ಕುಟಿಲ ಹುನ್ನಾರದಿಂದ ಒಂದಿಡೀ ಜನಾಂಗವನ್ನೆ ಶೋಷಿಸುವುದು ಕೊಲೆಗಿಂತ ಭಯಂಕರ ಕೆಟ್ಟ ಪರಿಣಾಮವನ್ನು ಬೀರಬಲ್ಲುದು. ಸನಾತನಿ ಪುರೋಹಿತಶಾಹಿಗಳು ಈ ಕುಟಿಲ ಹುನ್ನಾರಕ್ಕಾಗಿಯೆ ಕುಖ್ಯಾತರಾಗಿದ್ದಾರೆ. ಭಯೋತ್ಪಾದಕರು ಬಾಂಬ್ ಹಾಕಿದಾಗ ಆಗಬಹುದಾದ ಅನಾಹುತಕ್ಕಿಂತ ಹೆಚ್ಚಿನ ಮಟ್ಟದ ದುಷ್ಪರಿಣಾಮ ಸನಾತನಿಗಳ ಕುಟಿಲತೆಯಿಂದ ಆಗಿದೆ. ಜಗತ್ತಿನಲ್ಲಿ ಆಸ್ತಿ, ಹಣ, ಅಧಿಕಾರ, ಹೆಣ್ಣು, ದೇವರು ಹಾಗೂ ಧರ್ಮಗಳ ಹೆಸರಿನಲ್ಲಿ ಕೊಲೆˌ ಸುಲಿಗೆಗಳು ನಡೆದಿವೆ. ಅದರಲ್ಲೂ ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆದಷ್ಟು ಅನಾಚಾರಗಳು ಬೇರೆ ಸಂಗತಿಗಳ ಹೆಸರಲ್ಲಿ ನಡೆದಿಲ್ಲ. ವರ್ಲ್ಡ್ ಆರ್ಡರ್ ಎಕಾನಮಿಯ ಹೆಸರಲ್ಲಿ ಯಹೂದಿಗಳು ಮಾಡುತ್ತಿರುವ ಅನಾಹುತಗಳು ಒಂದೆರಡಲ್ಲ. ಇಡೀ ಜಗತ್ತಿನ ಆರ್ಥಿಕತೆಯನ್ನು ನಿಯಂತ್ರಿಸುವ ಆತುರದಿಂದ ಯಹೂದಿಗಳು ಖಾಸಗೀಕರಣˌ ಜಾಗತೀಕರಣˌ ಉದಾರೀಕರಣಗಳೆಂದ ಪೆಡಂಭೂತವನ್ನು ಹುಟ್ಟುಹಾಕಿದ್ದಾರೆ. ಈಗ ಅದು ಬೃಹದಾಕಾರವಾಗಿ ವಿಶ್ವವನ್ನೆಲ್ಲ ವ್ಯಾಪಿಸಿದೆ. ಶಸ್ತ್ರಾಸ್ತ್ರಗಳ ಉತ್ಪಾದನೆ ಹಾಗೂ ಅವುಗಳ ಮಾರುಕಟ್ಟೆಯ ವಿಸ್ತರಣೆ ಜಗತ್ತಿನಲ್ಲಿ ಮಿಲಿಟರಿ ಪ್ರಾಬಲ್ಯವನ್ನು ಹೆಚ್ಚಿಸಿದೆ.
ಇದರಿಂದ ದೇಶ ದೇಶಗಳ ನಡುವೆ ಯುದ್ಧದ ಭೀತಿ ಎದುರಾಗಿದೆ. ಅನೇಕ ರಾಷ್ಟ್ರಗಳ ಗಡಿಯುದ್ದಕ್ಕೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಾರ್ಪೋರೇಟ್ ಖದೀಮರು ಆಳುವ ಸರಕಾರಗಳನ್ನು ನಿಯಂತ್ರಿಸುವಷ್ಟು ಹಾಗೂ ಬದಲಾಯಿಸುವಷ್ಟು ಶಸಕ್ತರಾಗಿದ್ದಾರೆ. ಖಾಸಗೀಕರಣ, ಜಾಗತೀಕರಣ ಹಾಗೂ ಉದಾರೀಕರಣಕ್ಕೆ ಕಮ್ಯುನಿಷ್ಟ ಆಡಳಿತವಿರುವ ರಾಷ್ಟ್ರಗಳೂ ಸಹ ತೆರೆದುಕೊಂಡಿವೆ. ಆರಂಭದಲ್ಲಿ ಅನೇಕ ಮುಸ್ಲಿಮ್ ರಾಷ್ಟ್ರಗಳು ಇದಕ್ಕೆ ಸ್ಪಂದಿಸಿರಲಿಲ್ಲ. ಮುಸಲ್ಮಾನರೆಂದರೆ ಭಯೋತ್ಪಾದಕರು ಎನ್ನುವ ಭಾವನೆ ಜನಮನದಲ್ಲಿ ಮೂಡಿಸಲು ತೆರೆಮರೆಯಲ್ಲಿ ಈ ಖಾಸಗೀಕರಣ, ಜಾಗತೀಕರಣ ಹಾಗೂ ಉದಾರೀಕರಣದ ಪರವಾಗಿರುವವರು ಪ್ರಯತ್ನಿಸಿದ್ದಾರೆ. ಇದೇ ಉದ್ದೇಶಕ್ಕಾಗಿ ಒಂದಷ್ಟು ಯಹೂದಿಗಳು ಮುಸ್ಲಿಮ್ ಧರ್ಮಕ್ಕೆ ಮತಾಂತರ ಹೊಂದಿ ಅಲ್ಲಿ ಧಾರ್ಮಿಕ ಮೂಲಭೂತವಾದವನ್ನು ಬಲಗೊಳಿಸಿದ್ದಾರೆ. ಇದರಿಂದ ಇಸ್ಲಾಮಿಕ್ ಭಯೋತ್ಪಾದನೆ ಮೊದಲ್ಗೊಂಡಿದೆ. ಅಮೆರಿಕದಂತಹ ಬಂಡವಾಳಶಾಹಿ ದೇಶಗಳು ಭಯೋತ್ಪಾದನೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾರಭಿಸಿವೆ. ಮೇಲ್ನೋಟಕ್ಕೆ ಈ ಎಲ್ಲಾ ಬಗೆಯ ಭಯೋತ್ಪಾದಕ ಚಟುವಟಿಕೆಗಳು ಧಾರ್ಮಿಕ ಮೂಲಭೂತವಾದದ ಕಾರಣದಿಂದ ಹುಟ್ಟುಪಡೆದಿವೆ ಎನ್ನಿಸಿದರೂ ಅವುಗಳ ಹಿಂದೆ ಕಾರ್ಪೋರೇಟ್ ಖದೀಮರ ಹಿತಾಸಕ್ತಿ ಸದ್ದಿಲ್ಲದೆ ಕೆಲಸ ಮಾಡುತ್ತಿರುತ್ತದೆ. ಬಂಡವಾಳಶಾಹಿ ದೇಶಗಳ ಶಸ್ತ್ರಾಸ್ತ್ರ ಮಾರುಕಟ್ಟೆ ವಿಸ್ತರಣೆಯ ಹಪಾಹಪಿತನವೇ ಎಲ್ಲ ಬಗೆಯ ಹಿಂಸಾಚಾರ ಹಾಗೂ ಭಯೋತ್ಪಾದನೆಗೆ ಮೂಲ ಪ್ರೇರಣೆಯಾಗಿದೆ.
ಭಯೋತ್ಪಾದನೆ ಇಂದು ಒಂದು ಜಾಗತಿಕ ಪಿಡುಗಾಗಿ ಬೆಳೆದು ನಿಲ್ಲುವುದರ ಹಿಂದಿನ ಕಾರಣ ಧಾರ್ಮಿಕ ಮೂಲಭೂತವಾದ ಎನ್ನುವುದಕ್ಕಿಂತ ಹೆಚ್ಚಾಗಿ ಕಾರ್ಪೋರೇಟ್ ಲಾಭಿ ಎನ್ನುವುದು ಹೆಚ್ಚು ಸೂಕ್ತವಾಗುತ್ತದೆ. ಭಾರತವು ಅತಿ ಹೆಚ್ಚು ಗಡಿಯಾಚೆಗಿನ ಭಯೋತ್ಪಾದಕ ದಾಳಿಗೆ ಒಳಗಾದ ದೇಶವಾಗಿದೆ. ಆಂತರಿಕವಾಗಿ ಈಶಾನ್ಯ ಭಾರತದಲ್ಲಿ ತಲೆ ಎತ್ತಿರುವ ಅನೇಕ ಬಗೆಯ ಉಗ್ರವಾದಿ ಗುಂಪುಗಳ ಹಿಂದೆ ಕೂಡ ಸಾಂಸ್ಕೃತಿಕ/ಅಧಿಕಾರ ರಾಜಕಾರಣ ಹಾಗೂ ಕಾರ್ಪೋರೇಟ್ ಉದ್ಯಮಿಗಳಿದ್ದಾರೆ ಎನ್ನುವುದು ಸತ್ಯ. ಗಡಿಯಾಚೆಗಿನ ಭಯೋತ್ಪಾದನೆಯ ಹಿಂದೆ ಪಾಕಿಸ್ತಾನದ ಮೂಲಭೂತವಾದಿಗಳಿರುವುದು ಎಷ್ಟು ಸತ್ಯವೊ ಜಾಗತಿಕ ಬಂಡವಾಳಶಾಹಿ ದೇಶಗಳ ಕುಮ್ಮಕ್ಕಿರುವುದು ಅಷ್ಟೇ ಸತ್ಯ. ಆ ಕಾರಣದಿಂದ ಇಡೀ ಮುಸ್ಲಿಮ್ ಸಮುದಾಯವನ್ನೆ ಭಯೋತ್ಪಾದಕರೆಂದು ಹಣೆಪಟ್ಟಿ ಕಟ್ಟುವುದರ ಹಿಂದೆಯೂ ಅದೇ ಬಲಪಂಥೀಯ ರಾಜಕಾರಣ ಹಾಗೂ ಅವರ ಬಂಡವಾಳಶಾಹಿ ಗೆಳೆಯರ ಹುನ್ನಾರವಿರುವುದನ್ನು ನಾವು ಅಲ್ಲಗಳೆಯಲಾಗದು. ಭಾರತವು ಭೌತಿಕ ಭಯೋತ್ಪಾದಕ ದಾಳಿಗಳಿಗಿಂತ ಮಾನಸಿಕ ಭಯೋತ್ಪಾನೆಯಿಂದ ಅತಿ ಹೆಚ್ಚು ನಲುಗಿದೆ. ದೇವರು ಮತ್ತು ಧರ್ಮವನ್ನು ಬಂಡವಾಳ ಮಾಡಿಕೊಂಡಿರುವ ಬಲಪಂಥೀಯ ಸನಾತನವಾದಿಗಳು ಸಾಂಸ್ಕೃತಿಕ ದಬ್ಬಾಳಿಕೆಯ ಮೂಲಕ ಭಾರತದ ಮೂಲ ಬಹುತ್ವ ಸಂಸ್ಕೃತಿಯ ಸ್ವರೂಪವನ್ನೆ ಕುರೂಪಗೊಳಿಸಿದ್ದಾರೆ. ಈಗ ಭಾರತ ಗಡಿಯಾಚೆಗಿನ ಹಾಗೂ ದೇಶದದೊಳಗಿನ ಎರಡೂ ಬಗೆಯ ಭಯೋತ್ಪಾದನೆ ಎದುರಿಸುವಂತಾಗಿದೆ.

2015ರ ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರ ಪೈಶಾಚಿಕ ದಾಳಿ ನಡೆದಿದೆ. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪರಂಪರಾಗತ ವೈಷಮ್ಯದ ಪರಿಣಾಮದಿಂದ ಪಾಕಿಸ್ತಾನ ಬೆಂಬಲಿತ ಉಗ್ರರಿಂದ ಭಾರತ ಭಯೋತ್ಪಾದಕ ದಾಳಿಗೆ ಸತತವಾಗಿ ತುತ್ತಾಗುತ್ತಿದೆ. ಈ ದಾಳಿಗಳಲ್ಲಿ ಸಾಮಾನ್ಯವಾಗಿ ಪ್ರಾಣ ಕಳೆದುಕೊಳ್ಳುವವರು ಮುಗ್ಧ ಜನರು. ಭಾರತದ ವಿರುದ್ಧ ಮಾತನಾಡುವ ಮೂಲಕ ಅಲ್ಲಿನ ಮೂಲಭೂತವಾದಿಗಳನ್ನು ಸಂತುಷ್ಟಪಡಿಸಿ ರಾಜಕೀಯ ಲಾಭ ಮಾಡಿಕೊಳ್ಳುವ ಪಾಕಿಸ್ತಾನದ ರಾಜಕೀಯ ಪಕ್ಷಗಳು ಹಾಗೂ ಪಾಕಿಸ್ತಾನದ ವಿರುದ್ಧ ಮಾತನಾಡುವ ಮೂಲಕ ಇಲ್ಲಿ ಹಿಂದೂ ಮತ ಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳುವ ಭಾರತೀಯ ಜನತಾ ಪಕ್ಷದ ನಡುವೆ ಹೇಳಿಕೊಳ್ಳುವ ವ್ಯತ್ಯಾಸವೇನಿಲ್ಲ. ಅಮಾಯಕ ಜನರ ಪ್ರಾಣ ಎರಡೂ ದೇಶಗಳ ಮೂಲಭೂತವಾದಿ ರಾಜಕೀಯ ಪಕ್ಷಗಳ ಬಂಡವಾಳವಾಗಿದೆ. ಈಗ ಎರಡೂ ದೇಶಗಳು ಅಣ್ವಸ್ತ್ರವನ್ನು ಹೊಂದಿವೆ. ಒಂದು ವೇಳೆ ಯುದ್ಧ ನಡೆದರೆ ಉಭಯ ದೇಶಗಳ ಸಾಮಾನ್ಯ ಜನಜೀವನ ಹಾಗೂ ಆರ್ಥಿಕತೆಯ ಮೇಲೆ ದೀರ್ಘಾವಧಿ ಕೆಟ್ಟ ಪರಿಣಾಮ ಬೀರಬಲ್ಲದು. ಪಾಕಿಸ್ತಾನವಂತೂ ದಿವಾಳಿಯ ಅಂಚಿನಲ್ಲಿದೆˌ ಆದರೆ ಕಳೆದ ಹತ್ತು ವರ್ಷಗಳ ಸುದೀರ್ಘ ಅವಧಿಯ ದುರಾಡಳಿತದಿಂದ ಭಾರತದ ಆರ್ಥಿಚಕೆ ಕೂಡ ಹಳಿ ತಪ್ಪಿದೆ. ಆದರೂ ಭಾರತ ಪಾಕಿಸ್ತಾನಕ್ಕಿಂತ ಸದೃಢವಾಗಿರಲು ಕಳೆದ 70 ವರ್ಷಗಳಿಂದ ಆಡಳಿತ ಮಾಡಿದ ನಾಯಕರ ದೂರದೃಷ್ಠಿಯು ಕಾರಣವಾಗಿದೆ.
ಮೊನ್ನಿನ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಮಾಧ್ಯಮಗಳು ಹಾಗೂ ಬಲಪಂಥೀಯ ಗುಂಪುಗಳು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಮಿತ್ಯಗಳು ಭಾರತದ ಭವಿಷ್ಯವನ್ನೆ ಮಸುಕಾಗಿಸುತ್ತಿವೆ. ಆಡಳಿತ ಪಕ್ಷದ ಗುಪ್ತಚರ ವೈಫಲ್ಯ ಹಾಗೂ ಭಧ್ರತಾ ವೈಫಲ್ಯಗಳ ಕುರಿತು ನಡೆಯ ಬೇಕಾದ ಚರ್ಚೆಗಳು ಈ ದೇಶದ ಮುಸಲ್ಮಾನರ ಸುತ್ತ ನಡೆಯುತ್ತಿವೆ. ಭಯೋತ್ಪಾದಕರಿಗೆ ಧರ್ಮವಿರುವುದಿಲ್ಲ. ಹತ್ತು ಹದಿನೈದು ವರ್ಷಗಳ ಹಿಂದೆ ದೇಶದಲ್ಲಿ ಮಹಾರಾಷ್ಟ್ರದ ನಾಸಿಕ ಮುಂತಾದ ಭಾಗದಲ್ಲಿ ನಡೆದ ಹಿಂದುತ್ವವಾದಿಗಳ ಭಯೋತ್ಪಾದಕ ದಾಳಿಗಳುˌ ಡಾ. ಎಂ ಎಂ ಕಲಬುರಗಿ, ಗೌರಿ ಲಂಕೇಶ್, ದಾಬೋಲ್ಕರ್, ಪಾನ್ಸರೆ ಮುಂತಾದ ಪ್ರಗತಿಪರ ವಿದ್ವಾಂಸರ ದಾರುಣ ಹತ್ಯೆಗಳು ಯಾವ ಭಯೋತ್ಪಾದಕ ದಾಳಿಗಿಂತಲೂ ಕಡಿಮೆಯಲ್ಲ. ಉಗ್ರವಾದಿಗಳು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಭಯೋತ್ಪಾದನೆ ಎನ್ನುವುದು ಪಟ್ಟಭದ್ರ ಹಿತಾಸಕ್ತ ಜನರ ಹೇಡಿ ಪ್ರವೃತ್ತಿ. ಕಳ್ಳರು, ಸುಲಿಗೆಕೋರರುˌ ದರೋಡೆಕೋರರು, ಭಯೋತ್ಪಾದಕರು ಇವರಿಗೆ ಧರ್ಮವಿರುವುದಿಲ್ಲ, ಬದಲಾಗಿ ಸ್ವಹಿತಾಸಕ್ತಿ ಇರುತ್ತದೆ. ಅವರು ಧರ್ಮವನ್ನು ಒಂದು ರಕ್ಷಾ ಕವಚವಾಗಿ ಬಳಸುತ್ತಾರಷ್ಟೆ. ರಾಜಕಾರಣಿಗಳು ಹಾಗೂ ಕಾರ್ಪೋರೇಟ್ ಖದೀಮರ ಸ್ವಹಿತಾಸಕ್ತಿಯ ಪರಿಣಾಮದಿಂದ ಉದ್ಭವಿಸಿರುವ ಜಾಗತಿಕ ಭಯೋತ್ಪಾದನೆಗೆ ಧರ್ಮದ ಮುಖವಾಡ ತೊಡಿಸಿದ್ದು ಕೂಡ ಇದೇ ರಾಜಕಾರಣ ಎನ್ನುವುದನ್ನು ಮರೆಯದಿರೋಣ.

ಇಪ್ಪತ್ತೊಂದನೆ ಶತಮಾನದಲ್ಲಿ ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಭಯೋತ್ಪಾದನೆಯ ಕುರಿತು ಶರಣರು ಹನ್ನೆರಡನೇ ಶತಮಾನದಲ್ಲಿಯೆ ತಿಳಿದಿದ್ದರು. ಪ್ರತಿಯೊಂದರ ಹಿಂದೆ ಧರ್ಮವನ್ನು ಎಳೆದು ತರುವ ಮೂಲಭೂತವಾದಿಗಳಿಗೆ ಅಲ್ಲಮಪ್ರಭುದೇವರ ಈ ಕೆಳಗಿನ ವಚನ ಸರಿಯಾದ ಉತ್ತರವನ್ನು ನೀಡಿದೆ:
“ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೆ ಹೇಳಾ?
ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ?
ದಾಳಿಕಾರಂಗೆ ಧರ್ಮವುಂಟೆ? ಕನ್ನಗಳ್ಳಂಗೆ ಕರುಳುಂಟೆ?
ಗುಹೇಶ್ವರಾ, ನಿಮ್ಮ ಶರಣರು,
ಮೂರು ಲೋಕವರಿಯೆ ನಿಶ್ಚಟರಯ್ಯಾ”
ಭಾವಾರ್ಥ
ಬೆಂಕಿಗೆ ಸುಡುವ ಗುಣವಿರುತ್ತದೆಯೆ ಹೊರತು ಅದು ಎಂದಿಗೂ ತಂಪಾಗಿರುವುದಿಲ್ಲ. ಮನುಷ್ಯ ಜೀವಕ್ಕೆ ಆಪತ್ತು ತರಬಲ್ಲ ಎಲ್ಲಾ ಬಗೆಯ ವಿಷಗಳು ತಮ್ಮ ರುಚಿಯಲ್ಲಿ ಸಿಹಿಯಾಗಿರುವುದಿಲ್ಲ. ಜೀವಿಗಳ ಕಣ್ಣುಗಳಿಗೆ ಮರೆವು ಅಥವಾ ಮರೆ ಇರುವುದಿಲ್ಲ. ಅದೇ ರೀತಿಯಲ್ಲಿ ದಾಳಿಕಾರನಿಗೆ ಧರ್ಮವಿರುವುದಿಲ್ಲ ಮತ್ತು ಕನ್ನ ಹಾಕಿ ಕಳ್ಳತನ ಮಾಡುವ ಕಳ್ಳನಿಗೆ ಕರುಳು ಅಂದರೆ ಕಾಳಜಿˌ ಅನುಕಂಪ ಯಾವುದೂ ಇರುವುದಿಲ್ಲ. ಶರಣರಾದವರು ಈ ಎಲ್ಲಾ ದುರ್ಗುಣಗಳಿಂದ ಅತೀತರು ಹಾಗೂ ಚಟಮುಕ್ತರಾಗಿರುತ್ತಾರೆ. ಮೇಲಿನ ವಚನವು ಬಹಳ ಸ್ಪಷ್ಟವಾಗಿ ಸುಡುವ ಗುಣವುಳ್ಳ ಬೆಂಕಿ, ಕೊಲ್ಲುವ ಗುಣವುಳ್ಳ ವಿಷ, ಧರ್ಮವಿಲ್ಲದ ದಾಳಿಕಾರರು ಹಾಗೂ ಮನುಷ್ಯತ್ವ ಮತ್ತು ಕಾಳಜಿ ಇಲ್ಲದ ಕನ್ನ ಕಳ್ಳರ ಕುರಿತು ಮಾತನಾಡುತ್ತದೆ. ಇವು ಕೆಡುಕನ್ನು ಮಾಡಬಲ್ಲವೇ ಹೊರತು ಒಳ್ಳೆಯದನ್ನು ಮಾಡಲಾರವು ಎನ್ನುವುದು ವಚನದ ಭಾವ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ
,,🙏🙏