ಕೆಲವರು ಮಾಡಿದ ಕಾರ್ಯಕ್ಕೆ ಇಡೀ ಸಮುದಾಯವನ್ನೆ ದೂಷಿಸಬಾರದು ಎನ್ನುವ ಸಲಹೆಗಳಿಗೇನು ನಮ್ಮಲ್ಲಿ ಕೊರತೆಯಿಲ್ಲ. ಬ್ರಾಹ್ಮಣ್ಯ ಎನ್ನುವುದು ಒಂದು ಸಮುದಾಯಕ್ಕೆ ಸಂಬಂಧಿಸಿದ ಜಾಡ್ಯವಲ್ಲ. ಅದು ಎಲ್ಲಾ ಕಡೆಗಳಲ್ಲೂ ಇದೆ. ಆದರೆ ಅದನ್ನು ಹುಟ್ಟಿಸಿದವರು ರಕ್ಷಿಸಿಕೊಂಡು ಬಂದವರು ಯಾರು ಎನ್ನುವ ಸತ್ಯ ನಮಗೆ ತಿಳಿದಾಗ ಬ್ರಾಹ್ಮಣ್ಯದ ನಿಜವಾದ ವಾರಸುದಾರರು ಯಾರು ಎನ್ನುವುದು ಸ್ಪಷ್ಟವಾಗುತ್ತದೆ.
ವಿಪ್ರರ ಅನಾಚಾರಗಳು ಕಾಲಕಾಲಕ್ಕೆ ಪರಿಷ್ಕೃತಗೊಳ್ಳುತ್ತಿರುತ್ತವೆ. ತುರ್ಕರು, ಪರ್ಶಿಯನ್ನರು, ಅರಬ್ಬರು, ಮೊಘಲರು ಈ ದೇಶದ ಮೇಲೆ ದಂಡೆತ್ತಿ ಬಂದಾಗ ಅವರೊಡನೆ ಯಾವ ಅಳುಕು, ಅಂಜಿಕೆ ಇಲ್ಲದೆ ವಿಪ್ರರು ಕೈಜೋಡಿಸಿದ್ದಾರೆ. ಕಾರಣ ಭಾರತದಲ್ಲಿ ಆ ಕಾಲಘಟ್ಟದಲ್ಲಿ ಅಕ್ಷರಸ್ಥರಾಗಿದ್ದವರು ಇವರು ಮಾತ್ರ. ಉಳಿದ ಶೇ. 95% ಜನರಿಗೆ ಸಮಾಜದಲ್ಲಿ ಏನು ನಡೆಯುತ್ತಿದೆ ಎನ್ನುವುದರ ಪರಿವೆಯೆ ಇರಲಿಲ್ಲ. ಮೊಘಲರ ಆಳ್ವಿಕೆಯನ್ನು ಈ ದೇಶದಲ್ಲಿ ಗಟ್ಟಿಗೊಳಿಸಿ ಅವರ ದಿವಾನಗಿರಿ, ಜವಾನಗಿರಿ ಹಾಗೂ ಚಮಚಾಗಿರಿ ಮಾಡಿ ಚಾತುರ್ವರ್ಣವನ್ನು ರಕ್ಷಿಸಿಕೊಂಡ ವಿಪ್ರರು ಈಗ ಮೊಘಲರನ್ನು ಹೆಜ್ಜೆ ಹೆಜ್ಜೆಗೂ ದೂಷಿಸುತ್ತಿದ್ದಾರೆ. ಬುದ್ದನನ್ನು ಇನ್ನಿಲ್ಲದಂತೆ ಕಾಡಿ, ಬೌದ್ದ ಧರ್ಮವನ್ನು ಭಾರತದ ಗಡಿಯಾಚೆ ದಾಟಿಸಿದವರು ಆಮೇಲೆ ಬುದ್ದನನ್ನು ಶ್ರೀಹರಿಯ ದಶಾವತಾರದ ಭಾಗವಾಗಿಸಿ ಪುರಾಣವನ್ನು ಸೃಷ್ಟಿಸುತ್ತಾರೆ. ಈಗ ಬುದ್ದ ಉಪನಿಷತ್ತಿನ ಋಷಿ ಎಂದು ಯಾವ ನಾಚಿಕೆಯೂ ಇಲ್ಲದೆ ವ್ಯಾಖ್ಯಾನಿಸುತ್ತಿದ್ದಾರೆ. ಬಸವಣ್ಣನವರನ್ನು ಗಡಿಪಾರು ಮಾಡಿ, ಬಸವಾದಿ ಶರಣರನ್ನು ಕಲ್ಯಾಣದ ಬೀದಿಗಳಲ್ಲಿ ಹತ್ಯೆ ಮಾಡಿ, ಅವರು ಬರೆದ ವಚನಗಳಿಗೆ ಬೆಂಕಿ ಹಚ್ಚಿ ಸುಟ್ಟವರು ಇಂದು ಬಸವಣ್ಣ ಹಿಂದೂ ಧರ್ಮದ ಸುಧಾರಕ ವಚನಗಳು ವೇದ ಉಪನಿಷತ್ತಿನ ಕನ್ನಡ ಅವತರಣಿಕೆ ಎಂದು ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ.
ಛತ್ರಪತಿ ಶಿವಾಜಿಯ ಶೂದ್ರ ಎನ್ನುವ ಕಾರಣಕ್ಕೆ ಆತನ ಪಟ್ಟಾಭಿಷೇಕ ನಿರಾಕರಿಸಿ, ಆಮೇಲೆ ಹಣ ಪಡೆದು ಆತನನ್ನು ಸಿಷೋಡಿಯಾದ ಕಾಯಸ್ಥ ಕ್ಷತ್ರೀಯನೆಂದು ನಕಲಿ ಜಾತಿ ಪ್ರಮಾಣಪತ್ರ ನೀಡಿ ಪಟ್ಟಾಭಿಷೇಕ ಮಾಡುತ್ತಾರೆ. ಔರಂಗಜೇಬನೊಂದಿಗೆ ಸೇರಿ ಶಿವಾಜಿಯನ್ನು ಮುಗಿಸಲು ಪ್ರಯತ್ನಿಸಿ ವಿಫಲರಾದಾಗ ಶಿವಾಜಿಯ ಸೋಲು ಹಾಗೂ ಸಾವಿಗಾಗಿ ಮಹಾಯಜ್ಞ ಆಯೋಜಿಸುತ್ತಾರೆ. ಶಿವಾಜಿಯನ್ನು ನೇರವಾಗಿ ಮುಗಿಸುವುದು ಅಸಾಧ್ಯ ಎಂದು ತಿಳಿದಾಗ ಆತನ ಕೊನೆಯ ಚಿತ್ಪಾವನ ಹೆಂಡತಿಯ ಮೂಲಕವೆ ಹಣಿದವರು ಇಂದು ಶಿವಾಜಿಯನ್ನು “ಗೋಬ್ರಾಹ್ಮಣ ರಕ್ಷಣ, ಹಿಂದುವೀ ಸಾಮ್ರಾಟ”ನೆಂದು ಜಯಘೋಷ ಮಾಡುತ್ತಿದ್ದಾರೆ. ಶಿವಾಜಿಯ ಮಗ ಸಂಭಾಜಿಯನ್ನು ಹೇಗೆ ಮುಗಿಸಿ ಹಾಕಿದರು ಎನ್ನುವ ಸಂಗತಿ ನಮಗೆಲ್ಲ ತಿಳಿದೆಯಿದೆ. ಅಫಜಲಖಾನ್ ನೊಂದಿಗೆ ಕೈಜೋಡಿಸಿದ ಕೃಷ್ಣಾಜಿ ಭಾಸ್ಕರ್ ಕುಲಕರ್ಣಿ ಶಿವಾಜಿಯ ಕೊಲೆಗೆ ಪ್ರಯತ್ನಿಸಿ ಹತನಾಗುತ್ತಾನೆ. ಆದರೆ ಇಂದಿಗೂ ಈ ಕುಲಕರ್ಣಿ ಹಿಂದೂ ಸಾಮ್ರಾಟನಿಗೆ ಮಾಡಿದ ದ್ರೋಹ ಎಲ್ಲಿಯೂ ಚರ್ಚೆಯಾಗುವುದಿಲ್ಲ. ಕಾಂಗ್ರೆಸ್ಸಿಗರು ಬ್ರಿಟಿಷರ ವಿರುದ್ದ ಸ್ವಾತಂತ್ರಕ್ಕಾಗಿ ಹೋರಾಟ ಮಾಡುತ್ತಿದ್ದಾಗ ಬ್ರಿಟಿಷರ ಪರವಾಗಿ ನಿಂತವರು ಇಂದು ಕಾಂಗ್ರೆಸ್ ದೇಶದ್ರೋಹಿ ಎಂದು ಆರೋಪಿಸುತ್ತಿದ್ದಾರೆ.
ಹೈದರಾಲಿ, ಟಿಪ್ಪು, ಮೈಸೂರು ಅರಸರು ಮತ್ತು ಬ್ರಿಟಿಷರು ಈ ನಾಲ್ಕೂ ಜನರ ಆಡಳಿತ ಕಾಲದಲ್ಲಿ ದಿವಾನಗಿರಿ ಮಾಡುತ್ತಾ ಗೋದಾನ, ಭೂದಾನ, ಜಹಗಿರಿ ಪಡೆದವರು ಇಂದು ಟಿಪ್ಪು ಹಿಂದೂ ದ್ರೋಹಿ ಎಂದು ಹೇಳುತ್ತಿದ್ದಾರೆ. ಚಿತ್ರದುರ್ಗದ ಮದಕರಿ ನಾಯಕನನ್ನು ಸೋಲಿಸಲು ಹೈದರಾಲಿಗೆ ಸಲಹೆ ನೀಡಿದ ಪೂರ್ಣಯ್ಯನ ಹಿಂದೂ ಧರ್ಮದ್ರೋಹ ಇಲ್ಲಿ ಚರ್ಚೆಯಾಗುವುದೇ ಇಲ್ಲ. ಕಿತ್ತೂರು ಸಂಸ್ಥಾನವನ್ನು ಮುಗಿಸಲು ಪುಣೆಯ ಪೇಶ್ವೆಗಳು ಮತ್ತು ಪಟವರ್ಧನರು ಮಾಡಿದ ದ್ರೋಹ ಇತಿಹಾಸದಲ್ಲಿ ಮುನ್ನೆಲೆಗೆ ಬರಲಿಲ್ಲ. ಕಿತ್ತೂರು ಸಂಸ್ಥಾನ ನಾಶ ಮಾಡುವಲ್ಲಿ ಧಾರವಾಡದ ಥಾಕರೆ ಕಚೇರಿಯಲ್ಲಿ ಅಧಿಕಾರಿಯಾಗಿದ್ದ ವೆಂಕಟರಾವ್ ಹಾವೇರಿಯ ಹಿಂದೂ ಧರ್ಮದ್ರೋಹ ನಮ್ಮ ಗಮನಕ್ಕೆ ಬರದಂತೆ ಇರಿಸಲಾಗಿದೆ. ಇಂದು ಇದೇ ವಿಪ್ರರು ಈ ದೇಶದ ಬಡ ಮುಸ್ಲಿಮರನ್ನು ಉಗ್ರವಾಗಿ ದ್ವೇಷಿಸುವ ಮಾತನಾಡುತ್ತಾ ಶ್ರೀಮಂತ ಮುಸ್ಲಿಮ್ ಸೆಲೆಬ್ರಿಟಿಗಳು, ಉದ್ಯಮಿಗಳ ಮಕ್ಕಳಿಗೆ ಹೆಣ್ಣನ್ನು ಕೊಟ್ಟು ಅಳಿಯರನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಬುದ್ದಪೂರ್ವದಲ್ಲಿ ಹಸು, ಎತ್ತುಗಳನ್ನು ಹೋಮ-ಹವನಗಳಿಗೆ ಬಲಿಕೊಟ್ಟು ಅವುಗಳ ಮಾಂಸವನ್ನು ಮೇಯುತ್ತಿದ್ದವರು ಇಂದು ಅದೆ ಹಸುವನ್ನು ಗೋಮಾತಾ ಎಂದು ದೈವತ್ವಕ್ಕೇರಿಸಿದ್ದಾರೆ.
ಗೋಮಾಂಸ ರಫ್ತು ದಂಧೆಯಲ್ಲಿ ಈಗಲೂ ಇದೇ ಮೇಲ್ವರ್ಗದ ಜನರು ಮುಂಚೂಣಿಯಲ್ಲಿರುವುದು ಗಮನಾರ್ಹ ಸಂಗತಿ. ವೇದಕಾಲದಿಂದ ಅಂದರೆ ಸುಮಾರು 3500 ವರ್ಷಗಳಿಂದ ವಿಪ್ರರ ನಡವಳಿಕೆ ಹಾಗೂ ಸ್ವಭಾವದಲ್ಲಿ ಯಾವುದೇ ಗುಣಾತ್ಮಕವಾದ ಬದಲಾವಣೆಗಳು ಆದಂತೆ ಕಂಡುಬರುವುದಿಲ್ಲ. ಅಪಾರ ತಾಳ್ಮೆ, ಅನನ್ಯ ಸಮಯ ಸಾಧಕತನ, ಅಪೂರ್ವವಾದ ಅವಕಾಶವಾದಿ ಹೊಂದಾಣಿಕೆ, ನಂಬಿಕೆ, ದ್ರೋಹ, ತಣ್ಣನೆಯ ಕ್ರೌರ್ಯ, ಹುಸಿ ಸ್ನೇಹ-ಪ್ರೀತಿ ಇವು ವಿಪ್ರರ ರಕ್ತಗತ ಗುಣಗಳು. ಈ ಗುಣಗಳು ಕಾಲಕಾಲಕ್ಕೆ ಪ್ರದರ್ಶನವಾಗುತ್ತಲೇ ಬಂದಿದ್ದಾವೆ. ಶಿವಾಜಿಯ ಆಡಳಿತಪೂರ್ವದಲ್ಲಿ ಮಹಾರಾಷ್ಟ್ರದಲ್ಲಿ ಯಾರಿಗೂ ಪರಿಚಯವಿರದ ಚಿತ್ಪಾವನರು ಶಿವಾಜಿಯ ಸಹಾಯದಿಂದ ಪೇಶ್ವೆ ಹುದ್ದೆಯನ್ನು ಗಿಟ್ಟಿಸಿಕೊಂಡು ಕೊನೆಗೆ ಶಿವಾಜಿಯ ಮರಾಠಾ ಸಾಮ್ರಾಜ್ಯವನ್ನೆ ಹುಡಿಗೊಳಿಸಿದ ಸಂಗತಿ ಇದಕ್ಕೆ ಸಾಕ್ಷಿಯಾಗಿದೆ. ಅದಕ್ಕೆಂದೆ ವಿಪ್ರರ ಕುರಿತು ಹದಿನೇಳನೇ ಶತಮಾನದಲ್ಲಿ ಆಗಿ ಹೋದ ಅನುಭಾವ ಕವಿ ಸರ್ವಜ್ಞ ಹೀಗೆ ಹೇಳುತ್ತಾನೆ:
1. ಹಾರವರ ನಂಬಿದವರಿನ್ನಾರು ಉಳಿದಿಹರು? ಹಾರವರ ನಂಬಿ ಭೂಪರು ಕೆಟ್ಟರು, ಇನ್ನಾರು ನಂಬುವರು ಸರ್ವಜ್ಞ?||
2. ಒಳಗೊಂದು ಕೋರುವನು, ಹೊರಗೊಂದು ತೋರುವನು ಕೆಳಗೆಂದು ಬೀಳ, ಹಾರವನ, ಸರ್ಪನ ಸುಳುಹು ಬೇಡೆಂದ ಸರ್ವಜ್ಞ||
3. ಅರ್ಥ ಸಿಕ್ಕರೆ ಬಿಡರು, ವ್ಯರ್ಥದಿ ಶ್ರಮ ಪಡ, ಅನರ್ಥಕ್ಕೆ ಪರರ ನುಂಕಿಪರು, ವಿಪ್ರರಿಂ ಸ್ವಾರ್ಥರಿನ್ನಿಲ್ಲ ಸರ್ವಜ್ಞ||
4. ಕೊಟ್ಟವರ ತಲೆ ಬೆನ್ನ ತಟ್ಟುವರು ಹಾರವರುˌ ಬಿಟ್ಟರೆ ಕುಟ್ಟಿ ಕೆಡವುವವರು ಹಾರವರ ಬಟ್ಟೆ ಬೇಡೆಂದ ಸರ್ವಜ್ಞ||
5. ಬಂಡುಣಿಗಳಂತಿಹರು, ಬಂಡ ನೆರೆಯಾಡುವರು, ಕಂಡುದನ್ನು ಹೊರಳಿ ನುಡಿವರು ಹಾರವರು ಭಂಡರೆಂದರಿಗು ಸರ್ವಜ್ಞ||
6. ಕೆಟ್ಟ ಹಾಲಿಂದ ಹುಳಿಯಿಟ್ಟರ್ದ ತಿಳಿ ಲೇಸು, ಕೆಟ್ಟ ಹಾರವಿನ ಬದುಕಿಂದ ಹೊಲೆಯನು ನೆಟ್ಟನೇ ಲೇಸು ಸರ್ವಜ್ಞ||
ಇದು ವಿಪ್ರರ ಕುರಿತಾದ ಸಂಕ್ಷಿಪ್ತವಾದ ಪರಿಚಯ. ಕೆಲವರು ಮಾಡಿದ ಕಾರ್ಯಕ್ಕೆ ಇಡೀ ಸಮುದಾಯವನ್ನೆ ದೂಷಿಸಬಾರದು ಎನ್ನುವ ಪುಕ್ಕಟ್ಟೆ ಸಲಹೆಗಳಿಗೇನು ನಮ್ಮಲ್ಲಿ ಕೊರತೆಯಿಲ್ಲ. ಬ್ರಾಹ್ಮಣ್ಯ ಎನ್ನುವುದು ಒಂದು ಸಮುದಾಯಕ್ಕೆ ಸಂಬಂಧಿಸಿದ ಜಾಡ್ಯವಲ್ಲ. ಅದು ಎಲ್ಲಾ ಕಡೆಗಳಲ್ಲೂ ಇದೆ. ಆದರೆ ಅದನ್ನು ಹುಟ್ಟಿಸಿದವರು ರಕ್ಷಿಸಿಕೊಂಡು ಬಂದವರು ಯಾರು ಎನ್ನುವ ಸತ್ಯ ನಮಗೆ ತಿಳಿದಾಗ ಬ್ರಾಹ್ಮಣ್ಯದ ನಿಜವಾದ ವಾರಸುದಾರರು ಯಾರು ಎನ್ನುವುದು ಸ್ಪಷ್ಟವಾಗುತ್ತದೆ.
ಯಾವುದೊ ಕಾಲದಲ್ಲಿ ಶಿವ ದ್ರಾವಿಡ ಸಂಸ್ಕೃತಿಯ ಧರ್ಮದಿಂದ ಆರ್ಯ ಬ್ರಾಹ್ಮಣ ಧರ್ಮಕ್ಕೆ ಬಸವಣ್ಣನವರ ಪೂರ್ವಜರು ವಲಸೆ ಹೋಗಿರಬೇಕು. ಆ ಕಾರಣದಿಂದ ಬಸವಣ್ಣನವರು ಬ್ರಾಹ್ಮಣರ ಮನೆಯಲ್ಲಿ ಹುಟ್ಟಿಯೂ ಬ್ರಾಹ್ಮಣ್ಯದ ವಿರುದ್ಧ ತೊಡೆತಟ್ಟಿ ಒಂದು ಹೊಸ ಅವೈದಿಕ ಚಳವಳಿಯನ್ನೆ ಹುಟ್ಟುಹಾಕುತ್ತಾರೆ ಅದಕ್ಕೆಂದೆ ಅವರು “ಹರನು ಮೂಲಿಗನಾಗಿ, ಪುರಾತನರೊಳಗಾಗಿ, ಬಳಿಬಳಿಯಲು ಬಂದ ಮಾದಾರನ ಮಗ ನಾನಯ್ಯಾ…” ಎಂದು ನುಡಿದಿದ್ದಾರೆ. ಬ್ರಾಹ್ಮಣ್ಯದ ಅಪಾಯಗಳನ್ನು ಹಾಗೂ ಅವಕಾಶವಾದಿತನವನ್ನು ಅತ್ಯಂತ ಹತ್ತಿರದಿಂದ ನೋಡಿದ್ದ ಬಸವಣ್ಣನವರು ಬ್ರಾಹ್ಮಣರ ಅನಾಚಾರಗಳನ್ನು ಉದ್ದಕ್ಕೂ ಅತ್ಯಂತ ಮೊನಚಾಗಿ ಅನಾವರಣಗೊಳಿಸಿದ್ದಾರೆ. ಮೇಲ್ವರ್ಗದ ಅಗ್ರಹಾರದಲ್ಲಿ ಹುಟ್ಟಿದರೂ ಅಲ್ಲಿನ ಅನಾಚಾರಗಳನ್ನು ದಿಕ್ಕರಿಸಿˌ ಜನಿವಾರವನ್ನು ಕಿತ್ತೆಸೆದು ಹೊರಗೆ ಬರುತ್ತಾರೆ. ಸನಾತನಿ ವೈದಿಕರು ತಾವು ಇತರಿಗೆ ಹೇಳುವುದೆ ಒಂದುˌ ಹಾಗೂ ತಾವು ನಡೆಯುವುದೆ ಬೇರೊಂದು. ಶಾಸ್ತ್ರಗಳನ್ನು ಸೃಷ್ಟಿಸಿ ಜನರಿಗೆ ಶಾಸ್ತ್ರಗಳಂತೆ ನಡೆಯಲು ಭೋದಿಸುತ್ತಾರೆ. ಆದರೆ ತಾವು ಮಾತ್ರ ತಮಗೆ ಅನುಕೂಲ ಆಗುವಂತೆ ಬದುಕುತ್ತಾರೆ. ವಿಪ್ರರ ಈ ದ್ವಿಮುಖ ನೀತಿಯನ್ನು ಬಸವಣ್ಣನವರು ಅತ್ಯುಗ್ರವಾಗಿ ಖಂಡಿಸುವ ವಚನ:
“ಏನಯ್ಯಾ ವಿಪ್ರರು ನುಡಿದಂತೆ ನಡೆಯರು, ಇವೆಂತಯ್ಯಾ?
ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ.
ಕೂಡಲಸಂಗಮದೇವಯ್ಯ, ಹೊಲೆಯರ ಬಸುರಲ್ಲಿ ವಿಪ್ರರು ಹುಟ್ಟಿ ಗೋಮಾಂಸ ತಿಂದರೆಂಬುದಕ್ಕೆ ಇದೇ ದೃಷ್ಟ”
ಭಾವಾರ್ಥ
“ಏನಯ್ಯಾ ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ…? ಎಂಬ ಪ್ರಶ್ನೆಯ ಮೂಲಕ ಆರಂಭವಾಗುವ ಈ ವಚನ ವಿಪ್ರರ ಕುಟಿಲ ಬುದ್ಧಿಯನ್ನು ತೀಕ್ಷ್ಣವಾಗಿ ಬಹಿರಂಗಗೊಳಿಸುತ್ತದೆ. ಸನಾತನಿ ವಿಪ್ರರು ಬದುಕಿನಲ್ಲಿ ಬೇರೆಯವರಿಗೆ ಭೋದಿಸುವುದು ಒಂದು ನೀತಿಯಾದರೆ, ತಾವು ನಡೆಯುವುದೇ ಮತ್ತೊಂದು ನೀತಿ. ಶಾಸ್ತ್ರ ಹೇಳಿ ಬದನೆಕಾಯಿ ತಿಂದರು ಅನ್ನುವಂತೆ ಅವರ ನಡೆ. ಅವರೆಂದೂ ನುಡಿದಂತೆ ನಡೆಯುವುದಿಲ್ಲ. ನುಡಿಯುವುದೇ ಒಂದು ಹಾಗೂ ನಡೆಯುವುದೇ ಬೇರೆ.
ಮನುಷ್ಯ ಮನುಷ್ಯರ ನಡುವೆ ಉಚ್ಚ ನೀಚ ಎಂದು ಅಸಮಾನತೆಯ ಭೇದಭಾವವನ್ನು ಹುಟ್ಟುಹಾಕಿರುವ ಹಾರವರೆ ನಿಜವಾದ ಹೊಲೆಯರು. ಹೀಗೆ ನುಡಿದಂತೆ ನಡೆಯದ ಹಾರವರು ಅತ್ಯಂತ ನೀಚರು. ಸಾಮಾನ್ಯವಾಗಿ ವಿಪ್ರರು ಯಜ್ಞ ಯಾಗಗಳನ್ನು ಮಾಡುತ್ತಾರೆ. ಹೋಮ ಹವನಗಳಲ್ಲಿ ಹವಿಸ್ಸನ್ನು ಅರ್ಪಿಸಿˌ ಗೋವನ್ನು ಕೊಂದು ಅದರ ಮಾಂಸ ತಿನ್ನುತ್ತಾರೆ. ವಿಪ್ರರು ಗೋಮಾಂಸ ಭಕ್ಷಕರಾಗಿದ್ದರು ಎನ್ನುವ ಸಂಗತಿ ಅವರ ಧರ್ಮ ಗ್ರಂಥಗಳಲ್ಲಿ ದಾಖಲಾಗಿದೆ. ಇಂದು ವಿಪ್ರರು ಮಾಂಸಾಹಾರಿಗಳನ್ನು ಹೊಲೆ ಮಾದಿಗರೆಂದು ಕರೆಯುತ್ತಾರೆ. ವಿಪ್ರರನ್ನು “ಹೊಲೆಯರ ಬಸುರಲ್ಲಿ ಹುಟ್ಟಿ ಗೋಮಾಂಸ ತಿಂದರು….” ಎಂದು ಬಸವಣ್ಣನವರು ತೀಕ್ಷ್ಣವಾಗಿ ಟೀಕಿಸುತ್ತಾರೆ. ಬುದ್ದಪೂರ್ವದಲ್ಲಿ ಹೋಮವನಿಕ್ಕಿ ಗೋವನ್ನು ಕೊಂದು ಅವರ ಮಾಂಸವನ್ನು ತಿನ್ನುತ್ತಿದ್ದ ವಿಪ್ರರೆ ಅತ್ಯಂತ ನೀಚ ಜಾತಿಯವರು ಎನ್ನುವುದು ವಚನದ ಭಾವಾರ್ಥವಾಗಿದೆ.
ಟಿಪ್ಪಣಿ
ದಾನ ಧರ್ಮಗಳು ಮಾಡಬೇಕು ಎನ್ನುವ ಶಾಸ್ತ್ರವನ್ನು ರೂಪಿಸಿದ ವಿಪ್ರರು ತಾವು ಮಾತ್ರ ದಾನವನ್ನು ನೀಡುವುದಿಲ್ಲ. ಸಮಾಜದಲ್ಲಿ ಹದಿನಾರು ಬಗೆಯ ದಾನಗಳನ್ನು ಶಾಸ್ತ್ರಗಳ ಹೆಸರಿನಲ್ಲಿ ಹುಟ್ಟುಹಾಕಿದ ವಿಪ್ರರು ಅವನ್ನು ಷೋಡಶ ದಾನಗಳೆಂದು ಕರೆಯುತ್ತಾರೆ. ಸಾಮಾನ್ಯ ಜನರು ತಮ್ಮ ಮನೆಯಲ್ಲಿ ಶುಭ ಅಥವಾ ಅಶುಭ ಕರ್ಮಗಳನ್ನು ಮಾಡಿಸಲು ಪುರೋಹಿತರ ಹತ್ತಿರ ಹೋದರೆ ಅವರಿಗೆ ದಾನ ಮಾಡಿ ಪರಿಹಾರ ಪಡೆಯಲು ಸೂಚಿಸುತ್ತಾರೆ. ಆದರೆ ದಾನವು ಬಡವರಿಗೆ ಅಥವಾ ನಿರ್ಗತಿಕರಿಗೆ ಮಾಡದೆ ಅದನ್ನು ಪುರೋಹಿತರಿಗೇ ಮಾಡಬೇಕೆನ್ನುವ ಕಟ್ಟಳೆಯನ್ನು ವಿಧಿಸುತ್ತಾರೆ. ಧನ, ಧಾನ್ಯ, ಕನಕ, ವಸ್ತ್ರ, ಘೃತ, ಛತ್ರ, ಚಾಮರ, ಶಯನ, ಪಾದುಕೆಯಿಂದ ಹಿಡಿದು ಕೊನೆಗೆ ಗೋದಾನ, ಭೂದಾನ, ಕನ್ಯಾದಾನದ ವರೆಗೆ ಒಟ್ಟು ಹದಿನಾರು ಬಗೆಯ ದಾನಗಳನ್ನು ರೂಪಿಸಿ ಜನಸಾಮಾನ್ಯರ ಸುಲಿಗೆ ಮಾಡುತ್ತಿದ್ದ ಪುರೋಹಿತಶಾಹಿಗಳು ತಾವು ಮಾತ್ರ ಈ ಎಲ್ಲಾ ಬಗೆಯ ದಾನಗಳನ್ನು ನೀಡುವ ಕ್ರಿಯೆಯಿಂದ ವಿನಾಯತಿ ತೆಗೆದುಕೊಂಡು ದಾನ ಸ್ವೀಕರಿಸಲು ಮಾತ್ರ ತಾವು ಅರ್ಹರು ಎನ್ನುವಂತಣ ವಾತಾವರಣವನ್ನು ಸೃಷ್ಟಿಸಿದ್ದಾರೆ. ಶಾಸ್ತ್ರಗಳು ಕೇವಲ ಜನರ ಸುಲಿಗೆಗೆ ಬಳಸಿ ತಾವು ಅವುಗಳಿಂದ ವಿನಾಯತಿ ಪಡೆದು ಬದುಕುವುದು ವಿಪ್ರರ ನಡೆಯಾಗಿದೆ.
ಈ ದಿನ ಸಂಪಾದಕೀಯ | ಉರ್ದು ನಮ್ಮ ಸಂಸ್ಕೃತಿಯ ಭಾಗ; ಅನ್ಯಭಾಷೆಯಲ್ಲ- ಸುಪ್ರೀಮ್ ತೀರ್ಪು ಚೇತೋಹಾರಿ
ದೇವಸ್ಥಾನಕ್ಕೆ ಹೋಗಿ ತಮ್ಮ ತಲೆಯ ಮೇಲಿನ ಮುಡಿಯನ್ನು ದೇವರಿಗೆ ಸಮರ್ಪಿಸಬೇಕು ಎನ್ನುವ ಧಾರ್ಮಿಕ ಅಂಧಶ್ರದ್ಧೆಯನ್ನು ಹುಟ್ಟುಹಾಕಿರುವ ವಿಪ್ರರು ತಾವು ಮಾತ್ರ ಎಂದೂ ತಮ್ಮ ಮುಡಿಯನ್ನು ದೇವರಿಗೆ ಕೊಡುವುದಿಲ್ಲ. ದೇವಸ್ಥಾನಗಳಿಗೆ ಪಾದಯಾತ್ರೆ ಮಾಡಬೇಕು, ಉರುಳು ಸೇವೆ, ಎಡೆ ಸ್ನಾನ, ಮಡೆ ಸ್ನಾನ ಮುಂತಾದ ಅನಿಷ್ಟ ಮೌಢ್ಯಗಳುಳ್ಳ ಹರಕೆ, ಕಟ್ಟಳೆಗಳು ಹಾಗೂ ಧಾರ್ಮಿಕ ನಿಯಮಗಳನ್ನು ರೂಪಿಸಿದವರು ವಿಪ್ರರು. ಆದರೆ ತಾವು ಮಾತ್ರ ಎಂದಿಗೂ ಇಂತಹ ಹರಕೆಗಳನ್ನು ಸಂಕಲ್ಪಿಸಿ ನಡೆಸುವುದಿಲ್ಲ. ದೇವಸ್ಥಾನಗಳಲ್ಲಿ ಇಟ್ಟಿರುವ ಹುಂಡಿಗೆ ಹಣ ಹಾಕಬೇಕೆಂದು ಹೇಳುವ ವಿಪ್ರರು ತಾವೆಂದೂ ಹಾಗೆ ಮಾಡುವುದಿಲ್ಲ. ಚೀಟಿ, ತಾಯತ, ಬಣ್ಣದ ದಾರ ಮುಂತಾದವುಗಳನ್ನು ಧರಿಸಬೇಕೆಂದು ಹೇಳುವ ವಿಪ್ರರು ತಾವು ಮಾತ್ರ ಅಂತವುಗಳನ್ನು ಅನುಸರಿಸುವುದಿಲ್ಲ. ಅದಕ್ಕೆಂದೆ ಬಸವಣ್ಣನವರು “ಏನಯ್ಯಾ ವಿಪ್ರರು ನುಡಿದಂತೆ ನಡೆಯರು, ತಮಗೊಂದು ಬಟ್ಟೆ (ಹಾದಿ)ˌ ಶಾಸ್ತ್ರಕ್ಕೊಂದು ಬಟ್ಟೆ (ಹಾದಿ)” ಎನ್ನುತ್ತಾರೆ. ವೈದಿಕರ ಹುನ್ನಾರಗಳನ್ನು ಅರಿಯದ ಮುಗ್ಧ ಜನರು ಅವರು ಹೇಳಿದಂತೆ ಅನೇಕ ಮೌಢ್ಯಾಚಾರಣೆಗಳಲ್ಲಿ ತೊಡಗುತ್ತಾರೆ. ಮನುಷ್ಯರನ್ನು ಜಾತಿಗಳಲ್ಲಿ ಒಡೆದು ಮೇಲು-ಕೀಳುಗಳನ್ನು ಸೃಷ್ಠಿಸಿರುವ ವೈದಿಕರನ್ನು ಬಸವಣ್ಣನವರು ಹೊಲೆಯರ ಬಸುರಲ್ಲಿ ಹುಟ್ಟಿ ಗೋಮಾಂಸ ತಿನ್ನುವವರು ಎಂದು ತೀಕ್ಷ್ಣವಾಗಿ ವಿಢಂಬಿಸುವ ಭಾವ ಮೇಲಿನ ವಚನದಲ್ಲಿ ಸ್ಪಷ್ಟವಾಗಿ ಬಿಂಬಿತವಾಗಿದೆ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ