ಅತ್ಯಂತ ಕಡಿಮೆ ಆದಾಯ, ಕಡಿಮೆ ಉಳಿತಾಯ, ತೀರ ಸಣ್ಣ ಸಂಬಳ ತೆಗೆದುಕೊಳ್ಳುವ ಅನೇಕರು ಕೋಟಿ ಹಣ ಗಳಿಸಬಹುದೇ ಎಂಬ ಪ್ರಶ್ನೆಯು ಎಲ್ಲರಲ್ಲೂ ಅಸಾಧ್ಯದ ಮನೋಭಾವವನ್ನು ಉಂಟುಮಾಡಬಹದು. ಆದರೆ ಅದು ಅಸಾಧ್ಯವೇನೂ ಅಲ್ಲ. ಖಂಡಿತವಾಗಿಯೂ ಸಾಧ್ಯ!
Systematic investment plan(SIP) ಮೂಲಕ ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಪ್ರಾರಂಭಿಸಿದ ಸಾವಿರಾರು ಜನರು ಕಂಪೌಂಡ್ ಇಂಟ್ರೆಸ್ಟ್ ಮೂಲಕ ಕೋಟಿಗೂ ಅಧಿಕ ಹಣವನ್ನು ಗಳಿಸಿದ್ದಾರೆ. ಇಂತಹ ಸಣ್ಣ ಉಳಿತಾಯದಾರರೂ ದೀರ್ಘಾವಧಿ ಹೂಡಿಕೆ ಮಾಡಿ ತಮ್ಮ ಗುರಿ ತಲುಪುವ ಉತ್ತಮ ವ್ಯವಸ್ಥೆಯನ್ನು SIPಯಲ್ಲಿ ಕಂಡುಕೊಂಡಿದ್ದಾರೆ.
ತಿಂಗಳಿಗೆ ₹5,000 ಹೂಡಿಕೆ ಮಾಡುತ್ತ ವಾರ್ಷಿಕ 12% ಕನಿಷ್ಟ ರಿಟರ್ನ್ ಗಳಿಸಿದರೂ 27 ವರ್ಷಗಳಲ್ಲಿ 1.08 ಕೋಟಿ ಹಣ ಗಳಿಸಬಹುದಾಗಿದೆ. ಇದೇ ರೀತಿಯಲ್ಲಿ ತಿಂಗಳಿಗೆ ₹10,000 ಹೂಡಿಕೆ ಮಾಡುತ್ತ ಬಂದರೆ 12% ರಿಟರ್ನ್‌ನಂತೆಯೇ ಒಂದು ಕೋಟಿ ಗಳಿಸಲು 21 ವರ್ಷಗಳನ್ನು ತೆಗೆದುಕೊಳ್ಳುತ್ತದೆ.
ಈ ಮಾದರಿಯಲ್ಲೇ ಇನ್ನೂ ಹೆಚ್ಚು ಹೂಡಿಕೆ ಮಾಡುವ ಸಾಮರ್ಥ್ಯವಿರುವವರು ತಿಂಗಳಿಗೆ ₹15,000 ಹೂಡಿಕೆ ಮಾಡುವುದಾದರೇ ಕೇವಲ 18ವರ್ಷಗಳಲ್ಲಿ 1.06 ಕೋಟಿ ರೂ.ಗಳನ್ನು ಗಳಿಸಬಹುದು. ತಿಂಗಳಿಗೆ ₹20,000ದಂತೆ ಹೂಡಿಕೆ ಮಾಡಿದಲ್ಲಿ ಕೇವಲ 16 ವರ್ಷಗಳಲ್ಲಿ 1.09 ಕೋಟಿಯನ್ನು ಗಳಿಸಬಹುದು.
ವರ್ಷಕ್ಕೆ 15% ಗಿಂತಲೂ ಹೆಚ್ಚು ರಿಟರ್ನ್ಸ್ ಕೊಟ್ಟಿರುವ ಮ್ಯೂಚುವಲ್ ಫಂಡ್‌ಗಳು ಇವೆ. ಆದರೆ ಕನಿಷ್ಟ 12%ರಂತೆ ಈ ಕೆಳಗಿನ ಕೋಷ್ಟಕದಲ್ಲಿ ಲೆಕ್ಕಾಚಾರವನ್ನು ನೋಡಬಹುದು.
ಮಾಸಿಕ ಹೂಡಿಕೆ | ಹೂಡಿಕೆ ಮಾಡಿದ ವರ್ಷಗಳು | ಹೂಡಿಕೆ ಮಾಡಿದ ಒಟ್ಟು ಮೊತ್ತ | ಹೂಡಿಕೆಯಿಂದ ಬಂದ ರಿಟರ್ನ್ಸ್ | ಒಟ್ಟು ಮೊತ್ತ |
5,000 | 27 | 16,20,000 | 91,91,565 | 1,08,11,565 |
10,000 | 21 | 25,20,000 | 79,10,067 | 1,04,30,067 |
15,000 | 18 | 32,40,000 | 74,35,929 | 1,06,75,929 |
20,000 | 16 | 38,40,000 | 70,76,193 | 1,09,16,193 |
25,000 | 14 | 42,00,000 | 61,38,502 | 1,03,38,502 |
30,000 | 13 | 46,80,000 | 60,55,007 | 1,07,35,007 |
ಸೂಚನೆ: ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವುದು ಮತ್ತು ಟ್ರೇಡಿಂಗ್ ಮಾಡುವುದನ್ನು ಹಣಕಾಸು ತಜ್ಞರ ಸಲಹೆಯಂತೆ ಮಾಡಿದರೆ ಉತ್ತಮ. ಇಲ್ಲಿನ ಮಾಹಿತಿಯು ಹೂಡಿಕೆಗೆ ಸಂಬಂಧಿಸಿದ ಮಾಹಿತಿಗಾಗಿ ಮಾತ್ರ.

ರಜನಿಕಾಂತ ಚಟ್ಟೇನಹಳ್ಳಿ
ಮಂಡ್ಯ ಜಿಲ್ಲೆಯ ಚಟ್ಟೇನಹಳ್ಳಿಯವರಾದ ರಜನಿಕಾಂತ ಅವರು ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡವರು.