ವಿಜಯ ಮಲ್ಯ ಒಟ್ಟು ಸಾಲ 17,781 ಕೋಟಿ, 6,848 ಕೋಟಿ ಬಾಕಿ: ಹಣಕಾಸು ಸಚಿವಾಲಯ

Date:

ಉದ್ಯಮಿ ವಿಜಯ ಮಲ್ಯ ಅವರು ಇತ್ತೀಚೆಗೆ ಪಾಡ್‌ಕಾಸ್ಟ್‌ ಸಂದರ್ಶನದಲ್ಲಿ ತಾವು ಭಾರತದ ಬ್ಯಾಂಕುಗಳಲ್ಲಿ ಪಡೆದಿದ್ದ ಸಾಲಕ್ಕಿಂತ ಎರಡು ಪಟ್ಟು ಹೆಚ್ಚು ಮರುಪಾವತಿ ಮಾಡಿರುವುದಾಗಿ ಹೇಳಿಕೊಂಡಿದ್ದರು. ಪಡೆದಿದ್ದ 6 ಸಾವಿರ ಕೋಟಿ ರೂ. ಸಾಲಕ್ಕೆ 14,000 ಕೋಟಿ ರೂ. ಮರುಪಾವತಿ ಮಾಡಿದ್ದೇನೆ ಎಂದು ಪ್ರತಿಪಾದಿಸಿದ್ದರು. ಈ ಬೆನ್ನಲ್ಲೇ, ಹಣಕಾಸು ಸಚಿವಾಲಯವು ವಿಜಯ್ ಮಲ್ಯ ಅವರ ಸಾಲದ ಕುರಿತು ಅಂಕಿಅಂಶ ಬಿಡುಗಡೆ ಮಾಡಿದೆ. ವಿಜಯ್ ಮಲ್ಯ ಪಡೆದಿರುವ ಒಟ್ಟು ಸಾಲ 17,781 ಕೋಟಿ ರೂ. ಅದರಲ್ಲಿ, ಇನ್ನೂ 6,848 ಕೋಟಿ ರೂ. ಬಾಕಿ ಇದೆ ಎಂದು ಹೇಳಿದೆ.

- Advertisement -

ಹಣಕಾಸು ಸಚಿವಾಲಯದ ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕಾರ, ಕಿಂಗ್ ಫಿಷರ್ ಏರ್ ಲೈನ್ಸ್ 2013ರ ಜೂನ್‌ನಲ್ಲಿ 6,848 ಕೋಟಿ ರೂ. ಅನುತ್ಪಾದಕ ಸಾಲವನ್ನು ಪಡೆದಿತ್ತು. ಈ ಸಾಲವು 2025ರ ಜೂನ್ 10ರ ವೇಳೆಗೆ ಸಾಲ, ಬಡ್ಡಿ, ಚಕ್ರಬಡ್ಡಿ ಎಲ್ಲವನ್ನೂ ಒಳಗೊಂಡು 17,781 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈ ಮೊತ್ತದಲ್ಲಿ10,815 ಕೋಟಿ ರೂಪಾಯಿ ಹಣವನ್ನು ಬ್ಯಾಂಕುಗಳು ವಸೂಲಿ ಮಾಡಿವೆ. ಇನ್ನೂ, 6,848 ಕೋಟಿ ರೂ. ಸಾಲ ಬಾಕಿ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

“ವಿಜಯ ಮಲ್ಯ ಅವರು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸಿರುವುದಾಗಿ ಹೇಳಿಕೊಂಡಿರುವ ಮೊತ್ತದಲ್ಲಿ ಬಡ್ಡಿ, ಚಕ್ರಬಡ್ಡಿ ಸೇರಿಲ್ಲ. ಸಾಲದ ಮೂಲ ಮೊತ್ತದ ಬಗ್ಗೆ ಮಾತ್ರವೇ ಹೇಳಿದ್ದಾರೆ. ಸಾಲದ ಮೊತ್ತಕ್ಕೆ ವಿಧಿಸಲಾಗಿರುವ ಬಡ್ಡಿ, ಚಕ್ರಬಡ್ಡಿ, ದಂಡದ ಕುರಿತು ಅವರು ಯಾವುದೇ ಮಾತನಾಡಿಲ್ಲ. ಅವರ ಸಾಲಕ್ಕೆ ಬಡ್ಡಿ ಮತ್ತು ಇತರ ಶುಲ್ಕಗಳು ಸೇರಿ 10,933 ಕೋಟಿ ರೂ.ಗಳನ್ನು ವಿಧಿಸಲಾಗಿದೆ. ಒಟ್ಟಾರೆ ವಿಜಯ್ ಮಲ್ಯ ಸಾಲವು ಪ್ರಸ್ತುತ 17,781 ಕೋಟಿ ರೂ. ಆಗಿದೆ” ಎಂದು ತಿಳಿಸಿದೆ.

ಬ್ಯಾಂಕ್‌ವಾರು ವಿಜಯ್ ಮಲ್ಯ ಸಾಲ ಮತ್ತು ವಸೂಲಿಯಾದ ಮೊತ್ತ;

image 56

ವಿಜಯ್ ಮಲ್ಯ ಅವರು ಸಾಲ ಪಡೆಯುವಾಗ ಒತ್ತಿ ಇಟ್ಟಿದ್ದ ಗೋವಾದಲ್ಲಿರುವ ಕಿಂಗ್‌ಫಿಷರ್ ವಿಲ್ಲಾ ಸೇರಿದಂತೆ ಮಲ್ಯ ಅವರ ಆಸ್ತಿಗಳಿಗೆ ಸಂಬಂಧಿಸಿದ 10,815 ಕೋಟಿ ರೂ. ಮೌಲ್ಯದ ಷೇರುಗಳನ್ನು ಬ್ಯಾಂಕ್‌ಗಳು ಮಾರಾಟ ಮಾಡಿ, ಸಾಲವನ್ನು ವಸೂಲಿ ಮಾಡಿವೆ. ಆದಾಗ್ಯೂ, ಇನ್ನೂ 6,848 ಕೋಟಿ ರೂ. ಸಾಲ ಬಾಕಿ ಇದೆ ಎಂದು ಸಚಿವಾಲಯ ವಿವರಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಜಾ, ಕ್ಷಮೆ, ಮರುನೇಮಕ: ಸೋದರಳಿಯ ಆಕಾಶ್ ಆನಂದ್’ಗೆ ಮೂರನೇ ಬಾರಿಗೆ ಮಣೆಹಾಕಿದ ಮಾಯಾವತಿ

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಷ್ಟ್ರೀಯ ಸಂಚಾಲಕ ಹುದ್ದೆಯಿಂದ ಸೋದರಳಿಯ ಆಕಾಶ್...

SIR ನಲ್ಲಿ ದೊಡ್ಡ ಪ್ರಮಾಣದ Form 7 ಅರ್ಜಿಗಳ ಸಲ್ಲಿಕೆ  ಆರೋಪ; ಕ್ರಮಕ್ಕೆ ತೆಲಂಗಾಣ ಚುನಾವಣಾ ಆಯುಕ್ತರ ಆದೇಶ

ಹೈದರಾಬಾದ್: ಪ್ರಸ್ತುತ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ  ದೊಡ್ಡ ಪ್ರಮಾಣದಲ್ಲಿ ನಕಲಿ Form...

Form 6 ಬದಲಾಯಿಸಿದ್ದು ಯಾರು, ದಾಖಲೆ ಕೊಡಿ; ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಹೊಸ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಬಳಸುವ Form 6ನಲ್ಲಿ...

ಬಂಗಾಳ SIR | ನೋಟಿಸ್ ನೀಡಲು, ಹೆಸರು ಮರು ಸೇರಿಸಲು ಸಾಧ್ಯವಿಲ್ಲ: EC ಪೋರ್ಟಲ್ ವಿರುದ್ಧ ನ್ಯಾಯಾಧೀಶರ ದೂರು

ಪಶ್ಚಿಮ ಬಂಗಾಳದಲ್ಲಿ SIR ವೇಳೆ ಮತದಾರರ ಪಟ್ಟಿಯಿಂದ ಹೊರಗಿಡಲಾದವರ ಮೇಲ್ಮನವಿಗಳ ವಿಚಾರಣೆ...