ಚಿನ್ನದ ದರ ಶೇ.35ರಷ್ಟು ಜಿಗಿದ ಬಳಿಕ ತಾತ್ಕಾಲಿಕ ಕುಸಿತ ಕಾಣುವ ಸಮಯ ಬಂದಿತೇ?

Date:

Advertisements

ಕಳೆದ ನಾಲ್ಕೈದು ತಿಂಗಳಿನಲ್ಲಿ ಚಿನ್ನದ ದರವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಬಂಗಾರದ ಬೆಲೆಯಲ್ಲಿ ಸರಾಸರಿ 35%ರಷ್ಟು ಏರಿಕೆ ಕಂಡು, 10 ಗ್ರಾಂ ಚಿನ್ನದ ಬೆಲೆ ಒಂದು ಲಕ್ಷದ ಗಡಿಯನ್ನೂ ಮೀರಿಸಿ, ಸಾರ್ವಜನಿಕರಲ್ಲಿ ಆತಂಕ ಮತ್ತು ಆಶ್ಚರ್ಯ ಮೂಡಿಸಿದೆ.

2019ರಿಂದ 2025ರ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಚಿನ್ನದ ಏರಿಕೆ 110% ಆಗಿದ್ದರೆ(1500 to 3300 USD /OZ ), ಭಾರತದಲ್ಲಿ ರೂಪಾಯಿ ಮೌಲ್ಯ ಕುಸಿತದಿಂದ 200% ಅಧಿಕ ಲಾಭವನ್ನು ಚಿನ್ನ ನೀಡಿದೆ. ಅತಿ ಕಡಿಮೆ ದಿನಗಳಲ್ಲಿ ಚಿನ್ನವು ಈ ಪರಿ ಬೇಡಿಕೆ ಕಾಣಲು ಕಾರಣ ಏನಿರಬಹುದು? ಜಾಗತಿಕವಾಗಿ ಆರ್ಥಿಕತೆಯಲ್ಲೇನಾದರು ಅಸ್ಥಿರತೆ ಜರುಗಿದೆಯೇ? ಎಂಬಿತ್ಯಾದಿ ಗೊಂದಲಗಳು ಮೂಡಿಬರುವುದು ಸಹಜ. ಹಾಗಾಗಿ ಈ ದಿಢೀರ್‌ ಜಿಗಿತಕ್ಕೆ ಮುಖ್ಯವಾದ ಐದು ಕಾರಣಗಳನ್ನು ನೋಡಬಹುದು.

  1. ಟ್ರಂಪ್ ಟ್ಯಾರಿಫ್‌ನಿಂದ ಅಮೆರಿಕದಲ್ಲಿ ಹಣದುಬ್ಬರದ ಅನಿಶ್ಚಿತತೆ: ಪ್ರಪಂಚದಾದ್ಯಂತ ತನ್ನ ಆರ್ಥಿಕ ಚಟುವಟಿಕೆಗಳಲ್ಲಿ ಪ್ರಾಬಲ್ಯ ಸಾಧಿಸುತ್ತ ಬಂದಿರುವ ಅಮೆರಿಕ ದೇಶವು, ಈಗ ತನ್ನ ಡಾಲರ್‌ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ತೀರ್ಮಾನಕ್ಕೆ ಬಂದಂತಿದೆ. ಅದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವ ಟ್ರಂಪ್‌ ತನ್ನ ದೇಶಕ್ಕೆ ರಫ್ತು ಮಾಡುವ ಎಲ್ಲ ದೇಶಗಳ ಮೇಲೆ ಸುಂಕ ಹೇರುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಆರ್ಥಿಕ ಚಟುವಟಿಕೆಗಳಲ್ಲಿ ಏರುಪೇರುಗಳು ಉಂಟಾಗಿ ಕುಂಠಿತದ ಮಾರ್ಗ ಹಿಡಿದಿರುವ ಹಿನ್ನೆಲೆಯಲ್ಲಿ ಅಮೆರಿಕದ ಡಾಲರ್‌ನಲ್ಲಿಯೂ ಕುಂಠಿತ ಕಾಣುವ ಸಂಭವ ಎದ್ದುಕಾಣುತ್ತಿದೆ. ಇದರಿಂದ ಅನೇಕ ದೇಶಗಳು ಮುಂದಾಲೋಚಿಸಿ ಚಿನ್ನವನ್ನು ಕೂಡಿಡುವತ್ತ ಮುಖ ಮಾಡುತ್ತಿವೆ. ಅನೇಕ ದೇಶಗಳು ಕಳೆದ ಎರಡು ತಿಂಗಳಲ್ಲಿ ಸಾವಿರ ಟನ್‌ಗಳಷ್ಟು ಚಿನ್ನವನ್ನು ರಿಸರ್ವ್‌ ಮಾಡುತ್ತ ಬಂದಿವೆ. ಹಾಗಾಗಿ ಚಿನ್ನದ ಮೇಲಿನ ಹೂಡಿಕೆಗಳು ಹೆಚ್ಚಾಗಿ ಅದರ ಬೇಡಿಕೆಯೂ ಹೆಚ್ಚಿದೆ.
  2. ಅಮೆರಿಕ ದೇಶದ ಜಾಗತಿಕ ಪ್ರಾಬಲ್ಯ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಮಂದಗತಿ: ಜಾಗತಿಕವಾಗಿ ಮುನ್ನಲೆಗೆ ದಾಪುಗಾಲಿಡುತ್ತಿರುವ ಅನೇಕ ದೇಶಗಳ ಪಟ್ಟಿಯಲ್ಲಿ ಚೀನಾ ದೇಶವು ವೇಗವಾಗಿ ಬೆಳೆಯುತ್ತಿದೆ. ಇದರಿಂದಾಗಿ ಅಮೆರಿಕದ ಆರ್ಥಿಕತೆಗೆ ಪೈಪೋಟಿ ಏರ್ಪಡುವ ಸಂಭವವಿರುದರಿಂದ ಈ ಟ್ಯಾರಿಫ್‌ನಂತಹ ನಿಲುವಿನತ್ತ ಅಧ್ಯಕ್ಷ ಟ್ರಂಪ್‌ ವಾಲಿದ್ದಾರೆ. ಆದರೆ ಇದನ್ನು ವಿಧಿಸಿಕೊಳ್ಳುವ ಅನೇಕ ದೇಶಗಳ ನಡುವೆ ಅಮೆರಿಕವು ವ್ಯಾಪಾರ ಯುದ್ಧ ನಡೆಸುವ ವಾತಾವರಣ ಏರ್ಪಡುತ್ತಿದೆ. ಆದ್ದರಿಂದ ಭಾರತ ಸೇರಿದಂತೆ ಅನೇಕ ದೇಶಗಳು ಚಿನ್ನ ಖರೀದಿಯತ್ತ ಮುಖಮಾಡಿ ಬಂಗಾರದ ಬೆಲೆಯನ್ನು ಏರುವಂತೆ ಮಾಡಿವೆ.
  3. ಜಿಯೋಪೊಲಿಟಿಕಲ್ ಅನಿಶ್ಚಿತತೆ: ಮೇಲೆ ತಿಳಿಸಲಾದ ಕಾರಣಗಳಿಂದಾಗಿ ಅಮೆರಿಕ ದೇಶದೊಟ್ಟಿಗಿನ ರಫ್ತು ಮತ್ತು ಆಮದುವಿನಲ್ಲಿ ಕುಂಠಿತ ದಾಖಲಾಗುತ್ತದೆ ಎಂಬುದು ವಾಸ್ತವ. ಇದರಿಂದಾಗಿ ಆರ್ಥಿಕ ಹಿಂಜರಿತಗಳು ಉಂಟಾಗಿ ಸರ್ಕಾರಗಳು ಮಧ್ಯ ಪ್ರವೇಶಿಸಬೇಕಾಗುತ್ತದೆ. ಸರ್ಕಾರಿ ವಲಯದಲ್ಲೂ ಅನಿಶ್ಚಿತತೆ ಏರ್ಪಟ್ಟರೆ ಕೆಲವು ಆರ್ಥಿಕ ಒಪ್ಪಂದಗಳ ಮಾರ್ಪಾಡುಗಳು ಜಾರಿಯಾಗುತ್ತವೆ. ಇಂತಹ ನಿರ್ಧಾರಗಳಿಂದಾಗಿ ಎಕಾನಮಿಗಳಲ್ಲಿ ಏರುಪೇರು ಉಂಟಾಗಬಹುದೆಂದು ಅಂದಾಜಿಸಿ ಬಂಗಾರದ ಕ್ರೋಢೀಕರಣಕ್ಕೆ ಮುಂದಾಗಲೇಬೇಕಾಗುತ್ತದೆ.
  4. ಜಾಗತಿಕ ಬಡ್ಡಿದರ ಕಡಿತದ ನಿರೀಕ್ಷೆಗಳು: ಟ್ಯಾರಿಫ್‌ ಕಾರಣಕ್ಕೆ, ಹಾಗೂ ಜಿಯೋಪೊಲಿಟಿಕಲ್‌ ವ್ಯಾಪಾರ ಕೊರತೆ ಕಾರಣಗಳಿಗೆ ಅತಿಯಾಗಿ ಸ್ಪಂದಿಸಿದ ದೇಶಗಳು ಸರ್ಕಾರಿ ಬಾಂಡ್‌ಗಳನ್ನು ವಿತರಿಸಿ ಸಾರ್ವಜನಿಕರನ್ನು ಕೊಳ್ಳಲು ಆಹ್ವಾನಿಸುತ್ತದೆ. ಇಲ್ಲವೇ ಕೆಲವು ಸಾಂಸ್ಥಿಕ ಘಟಕಗಳ ಮೇಲೆ ಬಡ್ಡಿ ದರಗಳನ್ನು ಕಡಿಮೆ ಮಾಡಿ ಸಡಿಲಗೊಳಿಸುತ್ತವೆ. ಇದರಿಂದ ಚಿನ್ನದ ಮೇಲಿನ ಹರಿವಿನ ಪ್ರಮಾಣ ಹೆಚ್ಚುತ್ತದೆ.

    ಈ ಎಲ್ಲ ಪ್ರಮುಖ ಕಾರಣಗಳಿಂದ ಏಕಕಾಲದಲ್ಲಿ ಚಿನ್ನದ ಬೆಲೆಯ ಭಾರೀ ಏರಿಕೆಗೆ ಕಾರಣವಾಗಿವೆ. ಆದರೆ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ, ಇತಿಹಾಸದುದ್ದಕ್ಕೂ ಚಿನ್ನದ ಬೆಲೆ ಶಾಶ್ವತವಾಗಿ ಏರಿಕೆಯಾಗುವುದಿಲ್ಲ ಎಂಬುದು. ಅದೊಂದು ಸ್ಪಷ್ಟ ಚಲನೆಗಳಲ್ಲೇ ಸಾಗುತ್ತದೆ. ಹಠಾತ್ ಏರಿಕೆಯ ನಂತರ ದೀರ್ಘಕಾಲಿಕ, ನಿಧಾನಗತಿಯಲ್ಲಿ ಏರಿಕೆಯಾಗುತ್ತಲಿರುತ್ತದೆ.

ಉದಾ:

  • 2002–2012: ₹5,000 ರಿಂದ ₹30,000 ಪ್ರತಿ 10 ಗ್ರಾಂ ಗೆ(6 ಪಟ್ಟು ಜಿಗಿತ)
  • 2012–2018: ಶೂನ್ಯ ಏರಿಕೆ
  • 2019–2025: ₹30,000 ರಿಂದ ₹90,000 10 ಗ್ರಾಂ ಗೆ (3ಪಟ್ಟು ಜಿಗಿತ)
  • 2025 – 2030 ಮತ್ತೆ ಶೂನ್ಯ ರಿಟರ್ನ್ಸ್ ಆಗುವ ಸಂಭವವಿದೆ. ಕಾದು ನೋಡಬೇಕಾಗಿದೆ.

ಹೀಗಿದ್ದಾಗ, ಹೂಡಿಕೆದಾರರು ಈಗ ಏನು ಮಾಡಬೇಕು?

ಭವಿಷ್ಯದ ಹೂಡಿಕೆಗಳಲ್ಲಿ 5% ನಿಂದ 15% ಹಣವನ್ನು ಚಿನ್ನಕ್ಕೆ ಹಂಚಿಕೆ ಮಾಡುವುದು ಆರೋಗ್ಯಕರವಾಗಿ ಪರಿಗಣಿಸಲಾಗಿದೆ. ಸದ್ಯ ಚಿನ್ನದ ಬೆಲೆಗಳು ಅತ್ಯಧಿಕ ಮಟ್ಟದಲ್ಲಿರುವುದರಿಂದ ಮುಂದೆ ತಟಸ್ಥ ಸ್ಥತಿಯಲ್ಲಿರಬಹುದು. ಹಾಗಾಗಿ ಪ್ರಸ್ತುತ 5% ಹಂಚಿಕೆಯಾಗಿ ಹೂಡಿಕೆ ಮಾಡಿದರೆ ಒಳ್ಳೆಯದು.‌

ಅನುವಾದ : ರಜನಿಕಾಂತ್‌ ಚಟ್ಟೇನಹಳ್ಳಿ

WhatsApp Image 2025 05 10 at 16.58.18
ಸಲಾಹುದ್ದೀನ್ ಕುದ್ರೋಳಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಿಎಸ್‌ಟಿ – ಜನರ ರಕ್ತ ಹೀರುವ ಕ್ರೂರ ತೆರಿಗೆ

ಹೋಟೆಲಿನ ಊಟದ ಮೇಲಿನ ಜಿಎಸ್‌ಟಿ ಶೇ.10 ರಷ್ಟಿದ್ದರೆ ಅದನ್ನು ಕೋಟ್ಯಾಧೀಶರು ನೀಡುತ್ತಾರೆ...

ಸಣ್ಣ ವ್ಯಾಪಾರಿಗಳ ಮೇಲೆ ಜಿಎಸ್‌ಟಿ: ಆತಂಕ ಬೇಡ ಎನ್ನುತ್ತಾರೆ ತಜ್ಞರು

ಜಿಎಸ್‌ಟಿ ಬಗ್ಗೆ ವರ್ತಕರಲ್ಲಿ ಜಾಗೃತಿ ಮೂಡಿಸಲು 'NO GST' ಎನ್ನುತ್ತಿದ್ದಾರೆ. ಈ...

1 ಡಾಲರ್ = 86.16 ರೂ.: ಡಾಲರ್ ಎದುರು ಮತ್ತೆ ಕುಸಿದ ರೂಪಾಯಿ

ಜಾಗತಿಕ ಮಾರುಕಟ್ಟೆಯಲ್ಲಿ ಭಾರತವು ತನ್ನ ವಹಿವಾಟುಗಳನ್ನು ಶುಕ್ರವಾರ ದುರ್ಬಲವಾಗಿ ಮುಗಿಸಿದೆ. ಅಮೆರಿಕದ...

ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು: ಇಟಲಿಯ ಕಂಪನಿ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಲಿಡ್ಕರ್

ಪಾರಂಪರಿಕ ಕೊಲ್ಹಾಪುರಿ ಚಪ್ಪಲಿಗಳ ವಿನ್ಯಾಸ ನಕಲು ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಇಟಲಿ...

Download Eedina App Android / iOS

X