ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ ಏಕೆ ಮುಖ್ಯ? ಅನುಸರಿಸಬೇಕಿರುವ ಬಗೆ ಹೇಗೆ?

Date:

ಯಾವುದೇ ಕುಟುಂಬವಾಗಲಿ ಅಥವಾ ವ್ಯಕ್ತಿಗಾಗಲಿ ಉತ್ತಮ ಭವಿಷ್ಯಕ್ಕೆ ಹಣದ ಅಗತ್ಯ ಅತ್ಯವಶ್ಯಕ. ಆದರೆ, ಭವಿಷ್ಯದಲ್ಲಿ ಎದುರಾಗುವ ತುರ್ತು ಅವಶ್ಯಕತೆಗಳಿಗೆ, ಮದುವೆ, ಕೌಟುಂಬಿಕ ಕಾರ್ಯಕ್ರಮಗಳು, ಉನ್ನತ ವಿದ್ಯಾಭ್ಯಾಸ, ಮನೆ ಖರೀದಿ ಹೀಗೆ ಅನೇಕ ಬಗೆಗಳನ್ನು ಈಡೇರಿಸಿಕೊಳ್ಳಬೇಕಾದರೆ ಉಳಿತಾಯ ಮಾಡುವುದು ಮುಖ್ಯ ಸಂಗತಿ. ಉಳಿತಾಯವನ್ನು ಕೇವಲ ಉಳಿಸದೇ ಹೂಡಿಕೆ ಮಾಡುವುದು ಅತಿ ಮುಖ್ಯ.

- Advertisement -

ಆರ್ಥಿಕ ಸ್ವಾವಲಂಬಿಯಾಗಲು ಮೊದಲಿಗೆ ತಮ್ಮ ಸಂಪಾದನೆಯಲ್ಲಿ ಒಂದು ಭಾವಗವನ್ನು ಪ್ರಾರಂಭಿಕ ಹಂತದಲ್ಲೇ ಉಳಿತಾಯ ಮಾಡಿ ಒಂದು ಸೀಮಿತಿಯ ಅವಧಿಗೆ ಹೂಡಿಕೆ ಮಾರ್ಗವನ್ನು ಕಂಡುಕೊಳ್ಳಬೇಕು. ಅದು Mutual Fund ಆಗಿರಬಹುದು ಅಥವಾ ಇನ್ನಾವುದೇ ಘಟಕವಾಗಿರಬಹುದು, ಅರಿವಿನೊಂದಿಗೆ ನಿರಂತರ ಹೂಡಿಕೆ ಬಹಳ ಮುಖ್ಯವಾಗಿರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಹೂಡಿಕೆಗೆ Mutual Fund ಸೂಕ್ತ ದಾರಿಯೇ?

ಹೌದು, Mutual Fund ಮುಖಾಂತರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಸುಗಮ ದಾರಿ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಭಾರತದ ಪ್ರಮುಖ ಮತ್ತು ದೈತ್ಯ ಕಂಪೆನಿಗಳಲ್ಲಿ ಪಾಲುದಾರರಾದಂತೆಯೇ ಸರಿ. ಅನೇಕ ಏರಿಳಿತಗಳ ನಡುವೆಯೂ ನಿಮ್ಮ ದೀರ್ಘಕಾಲದ ಹೂಡಿಕೆಯಿಂದಾಗಿ ಹೆಚ್ಚು ಲಾಭ ಪಡೆಯುವ ಸಾಧ್ಯತೆಗಳು ಈ ವಲಯದಲ್ಲಿವೆ.

ವ್ಯಕ್ತಿಗತ ಆಯ್ಕೆಯಿಂದಾಗಿ ಅಥವಾ ಯಾವುದೇ ಅರಿವಿಲ್ಲದೇ ಕಂಪೆನಿಗಳ ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡುವುದರಲ್ಲಿ ಹೆಚ್ಚಿನ ಅಪಾಯವಿದೆ. ಏಕೆಂದರೆ ಯಾವುದೇ ಷೇರಿನ ಬೆಲೆ ತೀವ್ರವಾಗಿ ಕುಸಿಯಬಹುದು ಅಥವಾ ಸಂಪೂರ್ಣವಾಗಿ ಮೌಲ್ಯಹೀನ ಆಗಲೂಬಹುದು. ಅಂತಹ ಸಾಧ್ಯತೆಗಳೂ ಕಂಡುಬಂದಿವೆ. ಆದರೆ, ಮ್ಯೂಚುವಲ್ ಫಂಡ್‌ಗಳು ಇದಕ್ಕೆ ವ್ಯತಿರಿಕ್ತವಾಗಿವೆ ಮತ್ತು ಹೆಚ್ಚು ಸುರಕ್ಷಿತ ಆಯ್ಕೆ. ಈ ಫಂಡ್‌ಗಳು ಹಲವಾರು ಷೇರುಗಳನ್ನು ಒಳಗೊಂಡ ವಿಭಜಿತ ಹೂಡಿಕೆ(diversification) ಆಗಿರುವ ಕಾರಣ, ಒಟ್ಟು ಹೂಡಿಕೆಯಲ್ಲಿ ಅಪಾಯದ ಮಟ್ಟ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಮ್ಯೂಚುವಲ್ ಫಂಡ್‌ಗಳ ಮೌಲ್ಯ ಸಂಪೂರ್ಣವಾಗಿ ಕರಗುವುದು ಅತ್ಯಂತ ಅಪರೂಪ.

ಅಂದಿನ ₹10 ಮೊತ್ತಕ್ಕೆ ನೀಡಲಾಗಿದ್ದ ಅನೇಕ ಮ್ಯೂಚುವಲ್ ಫಂಡ್ ಯೂನಿಟ್‌ಗಳು ಇಂದು ₹5,000ಕ್ಕಿಂತ ಹೆಚ್ಚಿನ ಮೌಲ್ಯವನ್ನು ತಲುಪಿರುವುದನ್ನು ನಾವು ನೋಡಬಹುದು. ಈ ಹಿನ್ನೆಲೆಯಲ್ಲಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್‌ಗಳು ಹೆಚ್ಚು ಸ್ಥಿರ, ಸುರಕ್ಷಿತ ಮತ್ತು ದೀರ್ಘಾವಧಿಗೆ ಲಾಭದಾಯಕವಾದ ಮಾರ್ಗವಾಗಿವೆ.

ದೀರ್ಘಾವಧಿ ಹೂಡಿಕೆಯನ್ನು ಪರಿಗಣಿಸಿದಾಗ ಅನೇಕ ವಲಯಗಳು ಅನೇಕ ಬಗೆಯಲ್ಲಿ ಲಾಭವನ್ನು(RETURNS) ನೀಡಿವೆ. ಉದಾಹರಣೆಗೆ: ಬಂಗಾರವು ಸರಾಸರಿ 7–8% ಲಾಭದಾಯಕವನ್ನ ನೀಡಿದರೆ, ರಿಯಲ್ ಎಸ್ಟೇಟ್ ಕ್ಷೇತ್ರವು ಸುಮಾರು 8–12% ರಷ್ಟು ಲಾಭ ನೀಡಿದೆ. ಆದರೆ ಷೇರು ಮಾರುಕಟ್ಟೆಯು 13–15% ಪ್ರಮಾಣದಲ್ಲಿ ಲಾಭವನ್ನು ನೀಡುತ್ತ ಬಂದಿದೆ.

ಇದನ್ನೂ ಓದಿದ್ದೀರಾ? ಭಾರತ-ಪಾಕ್‌ ಉದ್ವಿಗ್ನತೆ ತೀವ್ರ; ರಕ್ಷಣಾ ಸಿಬ್ಬಂದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ

ಇನ್ನು, ಕೇವಲ 12–13%ರಷ್ಟು ಮಿತವಾದ ಲಾಭವನ್ನೇ ಷೇರುಗಳ ಮೂಲಕ ಪಡೆಯುತ್ತಿದ್ದರೂ, ಅದು ಹಣದುಬ್ಬರದ ಮೇಲೆ ಜಯ ಸಾಧಿಸಲು ಹಾಗೂ ಗಣನೀಯ ಲಾಭವನ್ನು ದೀರ್ಘಾವಧಿಯಲ್ಲಿ ಗಳಿಸಲು ಉತ್ತಮವಾದ ಉದಾಹರಣೆಯಾಗಿದೆ. ಹೀಗಾಗಿ ಬಂಗಾರ ಮತ್ತು ರಿಯಲ್ ಎಸ್ಟೇಟ್‌ಗಿಂತ ಷೇರು ಮಾರುಕಟ್ಟೆಯು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಆದರೆ ಇದರರ್ಥ ಬಂಗಾರ ಅಥವಾ ರಿಯಲ್ ಎಸ್ಟೇಟ್‌ಗೆ ಹೂಡಿಕೆ ಮಾಡಬಾರದು ಎಂದೇನು ಅಲ್ಲ. ಪ್ರತಿಯೊಂದು ವಲಯಕ್ಕೂ ಹೊಂದುವಂತೆ ತಮ್ಮ ಸಾಮಾರ್ಥ್ಯಕ್ಕೆ ಅನುಗುಣವಾಗಿ ವಿಭಜಿತ ಹೂಡಿಕೆ ಪೋರ್ಟ್‌ಫೋಲಿಯೋದಲ್ಲಿ ನಿರಂತರ ಹೂಡಿಕೆ ಮಾಡುತ್ತ, ಹಣದುಬ್ಬರವನ್ನೂ ಮೀರಿಸಿ ಮೌಲ್ಯಯುತ ಲಾಭವನ್ನು ಗಳಿಸಬಹುದುದಾಗಿದೆ.

ಅನುವಾದ : ರಜನಿಕಾಂತ್‌ ಚಟ್ಟೇನಹಳ್ಳಿ

WhatsApp Image 2025 05 10 at 16.58.18
ಸಲಾಹುದ್ದೀನ್ ಕುದ್ರೋಳಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕ-ಇರಾನ್ ಯುದ್ಧ ನಿಂತರೂ ಹಣದುಬ್ಬರ, ಬೆಲೆ ಏರಿಕೆ ತಗ್ಗದು; ಯಾಕೆ?

ಅಮೆರಿಕ ಮತ್ತು ಇರಾನ್ ನಡುವಿನ ಸುಮಾರು 107 ದಿನಗಳ ಸುದೀರ್ಘ ಯುದ್ಧವನ್ನು...

ಡಾಲರ್ ಎದುರು ರೂಪಾಯಿ ಮೌಲ್ಯ 84 ಪೈಸೆ ಹೆಚ್ಚಳ!

ಡಾಲರ್‌ ಎದುರು ನಿರಂತರವಾಗಿ ಕುಸಿಯುತ್ತಲೇ ಇದ್ದ ರೂಪಾಯಿ ಮೌಲ್ಯ, ಇದೀಗ ಚೇತರಿಕೆ...

ಅರ್ಜೆಂಟೀನಾದ LNG ಮೋದಿ ಮಿತ್ರ ಅದಾನಿ ಪಾಲು; 10 ವರ್ಷಗಳ ಸಾಗರ ಒಪ್ಪಂದಕ್ಕೆ ಮುದ್ರೆ!

ಅರ್ಜೆಂಟೀನಾದ ಮೊದಲ ದ್ರವೀಕೃತ ನೈಸರ್ಗಿಕ ಅನಿಲ (LNG) ರಫ್ತು ಯೋಜನೆಗಾಗಿ 10...

ಭಾರತದ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವೇನು?

ಭಾರತೀಯ ರೂಪಾಯಿಯ ಮೌಲ್ಯದ ಗ್ರಾಫ್ ಅತ್ಯಂತ ತೀವ್ರವಾಗಿ ಕೆಳಮುಖವಾಗಿ ಸಾಗುತ್ತಿದೆ. ಕಳೆದ...