ಷೇರು ಮಾರುಕಟ್ಟೆ | ಸ್ಕಾಕ್‌ನಲ್ಲಿ ಹೂಡಿಕೆ ಮಾಡುವಾಗ ಗಮನಿಸಬೇಕಾದ ಅಂಶಗಳು

Date:

Advertisements

ಷೇರು ಮಾರುಕಟ್ಟೆಯಲ್ಲಿ ಕಂಪನಿಗಳ ಷೇರುಗಳನ್ನು ಕೊಂಡುಕೊಂಡರೆ ಒಂದರ್ಥದಲ್ಲಿ ಆ ಕಂಪನಿಗೆ ಷೇರುದಾರರು ಮಾಲೀಕನಾಗುತ್ತಾರೆ. ಅಂದರೆ, ಆ ಕಂಪನಿಯ ಲಾಭ ನಷ್ಟದಲ್ಲಿಯೂ ಪಾಲುದಾರನಾಗಿರುತ್ತಾರೆ. ಹಾಗಾಗಿ ಹೂಡಿಕೆ ಮಾಡುವಾಗ ಅಥವಾ ಷೇರುಗಳನ್ನು ಖರೀದಿಸುವಾಗ ಕಂಪನಿಗಳ ಬಗ್ಗೆ ಹೆಚ್ಚಾದ ಅಧ್ಯಯನ ನಡೆಸಬೇಕಾಗುತ್ತದೆ.

ಮುಖ್ಯವಾಗಿ ನಾವು ಷೇರು ಮಾರುಕಟ್ಟೆಯಲ್ಲಿ ದೀರ್ಘಾವಧಿ ಹೂಡಿಕೆ ಮಾಡುವಾಗ ಟೆಕ್ನಿಕಲ್‌ ಅನಾಲಿಸಿಸ್‌ ಮಾಡದೇ ಇದ್ದರು, ಮುಖ್ಯವಾಗಿ stockಗಳ Fundamental ಅನಾಲಿಸಿಸ್‌ ಮಾಡಬೇಕಾಗುತ್ತದೆ. ಹೂಡಿಕೆ ಮಾಡುವ ಕಂಪನಿಯ ಆದಾಯ, ವ್ಯಾಪ್ತಿ, ಮತ್ತು ಮುಂದಿನ ಯೋಜನೆಗಳನ್ನು ಶೋಧಿಸಬೇಕಾಗುತ್ತದೆ. ಅಂತಹ ಕೆಲವು ನಿರ್ದಿಷ್ಟ ಅಂಶಗಳನ್ನು ಈ ಕೆಳಗಿನಂತೆ ನೋಡಬಹುದು.

  1. ಕಂಪನಿಯ ಚಾರ್ಟ್‌: ಮೊದಲಿಗೆ ಕಂಪನಿಯ ಪಾರ್ಟಿಸಿಪೇಟ್‌ ಚಾರ್ಟ್‌ಅನ್ನು ದೀರ್ಘಾವಧಿ ಅಂಶವಾಗಿ ನೋಡಬೇಕು. ಉದಾಹರಣೆಗೆ: A ಕಂಪನಿಯು ಷೇರು ಮಾರುಕಟ್ಟೆಯ ಪಟ್ಟಿಯಲ್ಲಿ ನೊಂದಾಯಿಸಿಕೊಂಡ ದಿನದಿಂದ ಇಲ್ಲಿಯವೆರೆಗಿನ ಗ್ರಾಫ್‌ ಚಾರ್ಟ್‌ ಅನ್ನು ನೋಡಬೇಕು. ಅದರಲ್ಲಿ ನಿಧಾನಗತಿಯಲ್ಲಿ ಏರುಮುಖವಾಗಿ ಇದ್ದಲ್ಲಿ A ಕಂಪನಿಯು ಕಾಲಕಾಲಕ್ಕೆ ಅಭಿವೃದ್ದಿ ಕಾಣುತ್ತಿದೆ ಎಂದು ಪರಿಗಣಿಸಬೇಕಾಗುತ್ತದೆ.
  2. ಬ್ಯಾಲೆನ್ಸ್‌ ಶೀಟ್‌: ಇದು ಹೆಚ್ಚಾಗಿ ಗಮನಿಸಬೇಕಾಗಿರುವ ಅಂಶಗಳಲ್ಲಿ ಒಂದು. ಯಾವುದೇ ಕಂಪನಿಯ ಆದಾಯ ಮತ್ತು ಸಾಲ ಹಾಗೂ ಚಿರಾಸ್ತಿಗಳನ್ನು ಗಮನಿಸಿಯೇ ಹೂಡಿಕೆ ಮಾಡಬೇಕಾಗುತ್ತದೆ. ಮುಖ್ಯವಾಗಿ ವಾರ್ಷಿಕ ಆದಾಯದಲ್ಲಿ ಹೆಚ್ಚೆಚ್ಚು ಆದಾಯ ಮಾಡದಿದ್ದರೂ, ಸರಾಸರಿ ಆದಾಯವನ್ನು ಹೆಚ್ಚಿಸಿಕೊಂಡ ಕಂಪನಿಯನ್ನೇ ಆಯ್ದುಕೊಳ್ಳಬೇಕು. ಹಾಗೆಯೇ ಕಂಪನಿಯ ಸಾಲ ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬಂದಿರಬೇಕು. ಒಂದು ವೇಳೆ ಕಂಪನಿಯು ಸಾಲ ಪಡೆಯುತ್ತಿದ್ದರೆ ಕಂಪನಿಯ ವಿಸ್ತರಣೆಯನ್ನೇನಾದರು ಮಾಡುವ ಉದ್ದೇಶ ಹೊಂದಿದ್ದಾರೆಯೇ? ಇದಕ್ಕೆ ತಕ್ಕಂತೆ ಕಂಪನಿಯ ಆಸ್ತಿ ಬೆಳವಣಿಗೆ ಹೊಂದಿದೆಯೇ ಎನ್ನುವ ಅಂಶವನ್ನು ನೋಡಬೇಕಾಗುತ್ತದೆ.
  • EPS (Earning per share): ಹೆಸರೇ ಹೇಳುವಂತೆ ನಾವು ಕೊಳ್ಳುವ ಷೇರುಗಳು ಎಷ್ಟು ಲಾಭಗಳಿಸಬಹುದು ಎನ್ನುವ ಲೆಕ್ಕಾಚಾರವಷ್ಟೆ. ಇದು ಕೂಡ ವರ್ಷದಿಂದ ವರ್ಷಕ್ಕೆ ಸರಾಸರಿ ಪ್ರಮಾಣದಲ್ಲಿ ಏರಿಕೆ ಹೊಂದುತ್ತಿರಬೇಕಾಗಿರುತ್ತದೆ. ಕಂಪನಿಯ ಖರ್ಚುವೆಚ್ಚ ಹಾಗೂ ತೆರಿಗೆ ಎಲ್ಲವನ್ನು ಕಳೆದು, ಉಳಿದ ಲಾಭಾಂಶದಲ್ಲಿ ಕಂಪನಿಯ ಶೇರುಗಳನ್ನು ಭಾಗಿಸಿದರೆ EPS ಸಿಗುತ್ತದೆ. (EPS=Earning per share/Number Of share)
  • Market Capitalization: ದೀರ್ಘಾವಧಿ ಹೂಡಿಕೆಗೆ ಮತ್ತೊಂದು ಮುಖ್ಯ ಅಂಶ ಈ ಮಾರುಕಟ್ಟೆ ಬಂಡವಾಳ. ಅಧಿಕವಾದ ಬಂಡವಾಳ ಇರುವ ಕಂಪನಿಗಳು ದೀರ್ಘಾವಧಿ ಹೂಡಿಕೆಗೆ ಹೆಚ್ಚು ಉಪಯುಕ್ತ. ಈ ಮಾರ್ಕೆಟ್‌ ಕ್ಯಾಪ್‌ ಹೇಗೆ ನಿರ್ಧಾರ ಆಗುತ್ತದೆ ಎಂದರೆ, ಕಂಪನಿಯ ಒಟ್ಟು ಶೇರುಗಳಿಂದ ಈಗಿನ ಶೇರು ಬೆಲೆಯಿಂದ ಗುಣಿಸಿದಾಗ ಇದರ ಒಟ್ಟು ಮೊತ್ತ ಸಿಗುತ್ತದೆ. (Market Cap= Total number Of Shares* Share price)
  • PE (Price to Earning): ನಾವು ಯಾವುದೇ ಷೇರುಗಳನ್ನ ತೆಗೆದುಕೊಂಡಾಗ ಆ ಕಂಪನಿಯಿಂದ ನಾವು ಒಂದು ರೂಪಾಯಿಯನ್ನು ದುಡಿಯಬೇಕು ಎಂದಾದರೆ, ಕಂಪನಿಗೆ ನಾವು ಎಷ್ಟು ಹಣ ಕೊಡಬೇಕು ಎಂಬುದನ್ನೇ PE Ratio ಎನ್ನುವುದು. ಇದು ಆದಷ್ಟು ಕಮ್ಮಿ ಇದ್ದರೆ ಒಳಿತು. ಇಂದಿನ ಷೇರು ಬೆಲೆಯನ್ನು EPS ನಿಂದ ಭಾಗಿಸಿದರೆ PE Ratio ಸಿಗುತ್ತದೆ. (PE=Share price/EPS)
  • Book Value: ಒಂದು ವೇಳೆ ಕಂಪನಿಯು ಷೇರು ಮಾರುಕಟ್ಟೆಯ ಪಟ್ಟಿಯಿಂದ ಹೊರಹೋದರೆ ಕಂಪನಿಯ ಶೇರುದಾರರಿಗೆ ಕೊನೆಗೆ ಪ್ರತೀ ಷೇರಿಗೆ ಎಷ್ಟು ಪರಿಹಾರ ಕೊಡಲಾಗುತ್ತದೆ ಎಂದು ತಿಳಿಸುವುದೇ ಬುಕ್‌ ವ್ಯಾಲ್ಯು.
  • ROCE(Return on capital employed): ಈ ಅಂಶವೂ ಕೂಡ ಹೆಚ್ಚು ಪ್ರಮುಖವಾದುದ್ದು. ಕಂಪನಿಯು ತೆರಿಗೆ ಕಟ್ಟುವ ಮುಂಚೆ ಮತ್ತು ಖರ್ಚು ಮಾಡುವ ಮುಂಚೆ ಎಷ್ಟು ಆದಾಯ ಗಳಿಸಿದೆಯೋ ಅದರಿಂದ ಅಸೆಟ್‌ ಉಳಿತಾಯದಿಂದ ಭಾಗಿಸಬೇಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಅಂದರೆ, ಕಂಪನಿಯ ನೆಟ್‌ ಪ್ರಾಫಿಟ್‌ನಿಂದ ಒಟ್ಟು ಅಸೆಟ್‌ಅನ್ನು ಭಾಗಿಸಿದರೆ ROCE ಸಿಗುತ್ತದೆ. (ROCE= Total Earnings/Capital)

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

BREAKING NEWS| ಸತತ ಮೂರನೇ ಬಾರಿಗೆ ರೆಪೋ ದರ ಇಳಿಸಿದ ಆರ್‌ಬಿಐ

ಇಂದು(ಮೇ 6) ನಡೆದ ಹಣಕಾಸು ನೀತಿ ಸಮಿತಿ(MPC) ಸಭೆಯ ಬಳಿಕ ರಿಸರ್ವ್...

1ಲಕ್ಷ ರೂ. ಹೂಡಿಕೆಯಿಂದ 17 ಲಕ್ಷ ರೂ. ಲಾಭ ಪಡೆದ ಹೂಡಿಕೆದಾರರು; ಯಾವುದು ಆ ಕಂಪನಿ?

ಸರಿಯಾದ ಹಣಕಾಸು ಜ್ಞಾನ ಮತ್ತು ನಿರಂತರ ಅನ್ವೇಷಣೆಯೊಂದಿದ್ದರೆ ಅತ್ಯಲ್ಪ ಹೂಡಿಕೆಯಿಂದಲೂ ಲಕ್ಷಾಂತರ...

ಮತ್ತೆ ಬಂತು ಕೊರೋನ; ಷೇರು ಮಾರುಕಟ್ಟೆ ಪತನ?

ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು ಹಾಗೂ ಗುಜರಾತ್‌, ಕೇರಳ,...

ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ ಏಕೆ ಮುಖ್ಯ? ಅನುಸರಿಸಬೇಕಿರುವ ಬಗೆ ಹೇಗೆ?

ಯಾವುದೇ ಕುಟುಂಬವಾಗಲಿ ಅಥವಾ ವ್ಯಕ್ತಿಗಾಗಲಿ ಉತ್ತಮ ಭವಿಷ್ಯಕ್ಕೆ ಹಣದ ಅಗತ್ಯ ಅತ್ಯವಶ್ಯಕ....

Download Eedina App Android / iOS

X