ಯಾವುದೇ ಕುಟುಂಬವಾಗಲಿ ಅಥವಾ ವ್ಯಕ್ತಿಗಾಗಲಿ ಉತ್ತಮ ಭವಿಷ್ಯಕ್ಕೆ ಹಣದ ಅಗತ್ಯ ಅತ್ಯವಶ್ಯಕ. ಆದರೆ, ಭವಿಷ್ಯದಲ್ಲಿ ಎದುರಾಗುವ ತುರ್ತು ಅವಶ್ಯಕತೆಗಳಿಗೆ, ಮದುವೆ, ಕೌಟುಂಬಿಕ ಕಾರ್ಯಕ್ರಮಗಳು, ಉನ್ನತ ವಿದ್ಯಾಭ್ಯಾಸ, ಮನೆ ಖರೀದಿ ಹೀಗೆ ಅನೇಕ ಬಗೆಗಳನ್ನು ಈಡೇರಿಸಿಕೊಳ್ಳಬೇಕಾದರೆ ಉಳಿತಾಯ ಮಾಡುವುದು ಮುಖ್ಯ ಸಂಗತಿ. ಉಳಿತಾಯವನ್ನು ಕೇವಲ ಉಳಿಸದೇ ಹೂಡಿಕೆ ಮಾಡುವುದು ಅತಿ ಮುಖ್ಯ.
ಆರ್ಥಿಕ ಸ್ವಾವಲಂಬಿಯಾಗಲು ಮೊದಲಿಗೆ ತಮ್ಮ ಸಂಪಾದನೆಯಲ್ಲಿ ಒಂದು ಭಾವಗವನ್ನು ಪ್ರಾರಂಭಿಕ ಹಂತದಲ್ಲೇ ಉಳಿತಾಯ ಮಾಡಿ ಒಂದು ಸೀಮಿತಿಯ ಅವಧಿಗೆ ಹೂಡಿಕೆ ಮಾರ್ಗವನ್ನು ಕಂಡುಕೊಳ್ಳಬೇಕು. ಅದು Mutual Fund ಆಗಿರಬಹುದು ಅಥವಾ ಇನ್ನಾವುದೇ ಘಟಕವಾಗಿರಬಹುದು, ಅರಿವಿನೊಂದಿಗೆ ನಿರಂತರ ಹೂಡಿಕೆ ಬಹಳ ಮುಖ್ಯವಾಗಿರುತ್ತದೆ.
ಹೂಡಿಕೆಗೆ Mutual Fund ಸೂಕ್ತ ದಾರಿಯೇ?
ಹೌದು, Mutual Fund ಮುಖಾಂತರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಸುಗಮ ದಾರಿ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಭಾರತದ ಪ್ರಮುಖ ಮತ್ತು ದೈತ್ಯ ಕಂಪೆನಿಗಳಲ್ಲಿ ಪಾಲುದಾರರಾದಂತೆಯೇ ಸರಿ. ಅನೇಕ ಏರಿಳಿತಗಳ ನಡುವೆಯೂ ನಿಮ್ಮ ದೀರ್ಘಕಾಲದ ಹೂಡಿಕೆಯಿಂದಾಗಿ ಹೆಚ್ಚು ಲಾಭ ಪಡೆಯುವ ಸಾಧ್ಯತೆಗಳು ಈ ವಲಯದಲ್ಲಿವೆ.
ವ್ಯಕ್ತಿಗತ ಆಯ್ಕೆಯಿಂದಾಗಿ ಅಥವಾ ಯಾವುದೇ ಅರಿವಿಲ್ಲದೇ ಕಂಪೆನಿಗಳ ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡುವುದರಲ್ಲಿ ಹೆಚ್ಚಿನ ಅಪಾಯವಿದೆ. ಏಕೆಂದರೆ ಯಾವುದೇ ಷೇರಿನ ಬೆಲೆ ತೀವ್ರವಾಗಿ ಕುಸಿಯಬಹುದು ಅಥವಾ ಸಂಪೂರ್ಣವಾಗಿ ಮೌಲ್ಯಹೀನ ಆಗಲೂಬಹುದು. ಅಂತಹ ಸಾಧ್ಯತೆಗಳೂ ಕಂಡುಬಂದಿವೆ. ಆದರೆ, ಮ್ಯೂಚುವಲ್ ಫಂಡ್‌ಗಳು ಇದಕ್ಕೆ ವ್ಯತಿರಿಕ್ತವಾಗಿವೆ ಮತ್ತು ಹೆಚ್ಚು ಸುರಕ್ಷಿತ ಆಯ್ಕೆ. ಈ ಫಂಡ್‌ಗಳು ಹಲವಾರು ಷೇರುಗಳನ್ನು ಒಳಗೊಂಡ ವಿಭಜಿತ ಹೂಡಿಕೆ(diversification) ಆಗಿರುವ ಕಾರಣ, ಒಟ್ಟು ಹೂಡಿಕೆಯಲ್ಲಿ ಅಪಾಯದ ಮಟ್ಟ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಮ್ಯೂಚುವಲ್ ಫಂಡ್‌ಗಳ ಮೌಲ್ಯ ಸಂಪೂರ್ಣವಾಗಿ ಕರಗುವುದು ಅತ್ಯಂತ ಅಪರೂಪ.
ಅಂದಿನ ₹10 ಮೊತ್ತಕ್ಕೆ ನೀಡಲಾಗಿದ್ದ ಅನೇಕ ಮ್ಯೂಚುವಲ್ ಫಂಡ್ ಯೂನಿಟ್‌ಗಳು ಇಂದು ₹5,000ಕ್ಕಿಂತ ಹೆಚ್ಚಿನ ಮೌಲ್ಯವನ್ನು ತಲುಪಿರುವುದನ್ನು ನಾವು ನೋಡಬಹುದು. ಈ ಹಿನ್ನೆಲೆಯಲ್ಲಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್‌ಗಳು ಹೆಚ್ಚು ಸ್ಥಿರ, ಸುರಕ್ಷಿತ ಮತ್ತು ದೀರ್ಘಾವಧಿಗೆ ಲಾಭದಾಯಕವಾದ ಮಾರ್ಗವಾಗಿವೆ.
ದೀರ್ಘಾವಧಿ ಹೂಡಿಕೆಯನ್ನು ಪರಿಗಣಿಸಿದಾಗ ಅನೇಕ ವಲಯಗಳು ಅನೇಕ ಬಗೆಯಲ್ಲಿ ಲಾಭವನ್ನು(RETURNS) ನೀಡಿವೆ. ಉದಾಹರಣೆಗೆ: ಬಂಗಾರವು ಸರಾಸರಿ 7–8% ಲಾಭದಾಯಕವನ್ನ ನೀಡಿದರೆ, ರಿಯಲ್ ಎಸ್ಟೇಟ್ ಕ್ಷೇತ್ರವು ಸುಮಾರು 8–12% ರಷ್ಟು ಲಾಭ ನೀಡಿದೆ. ಆದರೆ ಷೇರು ಮಾರುಕಟ್ಟೆಯು 13–15% ಪ್ರಮಾಣದಲ್ಲಿ ಲಾಭವನ್ನು ನೀಡುತ್ತ ಬಂದಿದೆ.
ಇದನ್ನೂ ಓದಿದ್ದೀರಾ? ಭಾರತ-ಪಾಕ್ ಉದ್ವಿಗ್ನತೆ ತೀವ್ರ; ರಕ್ಷಣಾ ಸಿಬ್ಬಂದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ
ಇನ್ನು, ಕೇವಲ 12–13%ರಷ್ಟು ಮಿತವಾದ ಲಾಭವನ್ನೇ ಷೇರುಗಳ ಮೂಲಕ ಪಡೆಯುತ್ತಿದ್ದರೂ, ಅದು ಹಣದುಬ್ಬರದ ಮೇಲೆ ಜಯ ಸಾಧಿಸಲು ಹಾಗೂ ಗಣನೀಯ ಲಾಭವನ್ನು ದೀರ್ಘಾವಧಿಯಲ್ಲಿ ಗಳಿಸಲು ಉತ್ತಮವಾದ ಉದಾಹರಣೆಯಾಗಿದೆ. ಹೀಗಾಗಿ ಬಂಗಾರ ಮತ್ತು ರಿಯಲ್ ಎಸ್ಟೇಟ್‌ಗಿಂತ ಷೇರು ಮಾರುಕಟ್ಟೆಯು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಆದರೆ ಇದರರ್ಥ ಬಂಗಾರ ಅಥವಾ ರಿಯಲ್ ಎಸ್ಟೇಟ್‌ಗೆ ಹೂಡಿಕೆ ಮಾಡಬಾರದು ಎಂದೇನು ಅಲ್ಲ. ಪ್ರತಿಯೊಂದು ವಲಯಕ್ಕೂ ಹೊಂದುವಂತೆ ತಮ್ಮ ಸಾಮಾರ್ಥ್ಯಕ್ಕೆ ಅನುಗುಣವಾಗಿ ವಿಭಜಿತ ಹೂಡಿಕೆ ಪೋರ್ಟ್‌ಫೋಲಿಯೋದಲ್ಲಿ ನಿರಂತರ ಹೂಡಿಕೆ ಮಾಡುತ್ತ, ಹಣದುಬ್ಬರವನ್ನೂ ಮೀರಿಸಿ ಮೌಲ್ಯಯುತ ಲಾಭವನ್ನು ಗಳಿಸಬಹುದುದಾಗಿದೆ.
ಅನುವಾದ : ರಜನಿಕಾಂತ್ ಚಟ್ಟೇನಹಳ್ಳಿ
