ಈ ದಿನ ಸಂಪಾದಕೀಯ | ಪ್ರವಾಹಕ್ಕೆದುರು ದಶಕ ಕಾಲದ ಈಜು-  Scroll.in ಗೆ ಅಭಿನಂದನೆ!

Date:

Advertisements

ತಲಸ್ಪರ್ಶಿ ವರದಿಗಾರಿಕೆ ಮತ್ತು ಸುದ್ದಿ ವಿಶ್ಲೇಷಣೆ scroll.in ಜಾಲತಾಣದ ವಿಶೇಷ ಹೂರಣ. ಆರ್ಥಿಕ ಸಂಕಟಗಳನ್ನು ಎದುರಿಸಿಯೂ ಪತ್ರಿಕಾವೃತ್ತಿಯ ಆದರ್ಶಗಳನ್ನು ಪಾಲಿಸಿದೆ. ಅಬ್ಬರದ ಅಲೆಗಳ ಹೊಡೆತಗಳನ್ನು ತಡೆದುಕೊಂಡು ನಿಂತಿದೆ. ಪ್ರವಾಹಕ್ಕೆದುರು ಈಜಾಡಿಯೂ ಹತ್ತು ವರ್ಷಗಳ ಕಾಲ ಉಳಿದುಕೊಂಡಿದೆ.

Scroll ಎಂಬ ಇಂಗ್ಲಿಷ್ ಪದಕ್ಕೆ ಎರಡು ಅರ್ಥಗಳುಂಟು. ಬರವಣಿಗೆಯಿರುವ ಉದ್ದನೆಯ ಕಾಗದದ ಸುರುಳಿ. ಕಂಪ್ಯೂಟರ್ ಪರದೆಯ ಮೇಲೆ ಬರೆದದ್ದು ಅಥವಾ ಚಿತ್ರಿಸಿದ್ದನ್ನು ನೋಡಲು ಎಡ-ಬಲಕ್ಕೆ ಅಥವಾ ಮೇಲೆ-ಕೆಳಗೆ ಚಲಿಸುವ ಕ್ರಿಯೆಯನ್ನೂ ಸ್ಕ್ರೋಲ್ ಎಂದು ಬಣ್ಣಿಸುವುದುಂಟು.

ಡಿಜಿಟಲ್ ಮಾಧ್ಯಮದ ಉದಯವು ಬಂಡವಾಳದ ಸಂಕೋಲೆಯಿಂದ ಸಮೂಹ ಮಾಧ್ಯಮದ ಬಿಡುಗಡೆಯ ಹಾದಿಯನ್ನು ತೆರೆಯಿತು. ಅರ್ಥಪೂರ್ಣ ಮೀಡಿಯಾಗೆ ಅವಕಾಶ ಕಲ್ಪಿಸಿತು. Scroll.in ಎಂಬ ಭಾರತೀಯ ಅಂತರ್ಜಾಲ ಇಂಗ್ಲಿಷ್ ಸುದ್ದಿತಾಣಕ್ಕೆ ಜನವರಿ 26 ಗಣರಾಜ್ಯೋತ್ಸವದಂದು ಹತ್ತು ವರ್ಷಗಳು ತುಂಬಿದವು. ಅರ್ಥಪೂರ್ಣ ಅಸ್ತಿತ್ವದ ಒಂದು ದಶಕವನ್ನು ಪೂರೈಸಿರುವ ಈ ಸುದ್ದಿ ಸಂಸ್ಥೆಗೆ ಹಾರ್ದಿಕ ಅಭಿನಂದನೆಗಳು ಸಲ್ಲಬೇಕಿವೆ. ದೇಶದ ಪರ್ಯಾಯ ಪತ್ರಿಕೋದ್ಯಮದಲ್ಲಿ ಬೆರಳೆಣಿಕೆಯ ಸುದ್ದಿ ಸಂಸ್ಥೆಗಳಲ್ಲಿ ‘ಸ್ಕ್ರೋಲ್’ ಕೂಡ ಒಂದು.

Advertisements

ಜನತಂತ್ರದ ಸ್ವತಂತ್ರ ಮಾಧ್ಯಮವೆಂಬುದು ಮುಕ್ತ ಸಮಾಜಗಳ ಅಡಿಗಲ್ಲು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾಂಗ ಸದಾ ರಚನಾತ್ಮಕ ಪ್ರತಿಪಕ್ಷದಂತೆ ಕೆಲಸ ಮಾಡಬೇಕು, ವ್ಯವಸ್ಥೆ ಮತ್ತು ಆಡಳಿತ ವಿರೋಧಿಯಾಗಿರಬೇಕು. ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ಹದ್ದಿನ ಕಣ್ಣಿಟ್ಟು ಕಾದು ಜನತಂತ್ರವನ್ನು ಪೊರೆಯಬೇಕು. ಮುಖ್ಯಧಾರೆಯ ಬಹುತೇಕ ಮಾಧ್ಯಮಗಳು ಈ ಆದರ್ಶವನ್ನು ಗಾಳಿಗೆ ತೂರಿವೆ. ಸತ್ಯ ಮತ್ತು ವಾಸ್ತವತೆಗೆ ಬೆನ್ನು ತಿರುಗಿಸಿವೆ. ಲಾಭದ ಮೇಲೆ ಕಣ್ಣಿಟ್ಟು ಜನಪರ ನಿಲುವನ್ನು ತ್ಯಾಗ ಮಾಡಿವೆ. ಆಳುವವರ ಅಡಿಯಾಳುಗಳಾಗಿ ಹೋಗಿವೆ. ಓದುಗರು ಮತ್ತು ಜನತಂತ್ರ ಈ ಮಾಧ್ಯಮ ಗುಲಾಮಗಿರಿಯ ಮೊದಲ ಬಲಿ.

ಆದರೆ ‘ಸ್ಕ್ರೋಲ್’ ಈ ಪ್ರವೃತ್ತಿಗೊಂದು ಅಪವಾದ. ತಲಸ್ಪರ್ಶಿ ವರದಿಗಾರಿಕೆ ಮತ್ತು ಸುದ್ದಿ ವಿಶ್ಲೇಷಣೆ ಈ ಜಾಲತಾಣದ ವಿಶೇಷ ಹೂರಣ. ಆರ್ಥಿಕ ಸಂಕಟಗಳನ್ನು ಎದುರಿಸಿಯೂ ಪತ್ರಿಕಾವೃತ್ತಿಯ ಆದರ್ಶಗಳನ್ನು ಪಾಲಿಸಿದೆ. ಅಬ್ಬರದ ಅಲೆಗಳ ಹೊಡೆತಗಳನ್ನು ತಡೆದುಕೊಂಡು ನಿಂತಿದೆ. ಪ್ರವಾಹಕ್ಕೆದುರು ಈಜಾಡಿಯೂ ಹತ್ತು ವರ್ಷಗಳ ಕಾಲ ಉಳಿದುಕೊಂಡಿದೆ. ಶ್ರೇಷ್ಠ ಪತ್ರಿಕೋದ್ಯಮಕ್ಕೆ ನೀಡಲಾಗುವ ರಾಮನಾಥ ಗೋಯೆಂಕಾ ಪ್ರಶಸ್ತಿಗಳು ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ 50ಕ್ಕೂ ಹೆಚ್ಚು ರಾಷ್ಟ್ರೀಯ- ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ. ಪ್ರತಿಕೂಲ ವಾತಾವರಣದಲ್ಲಿ ಮಾಡಿದ ಅದ್ವಿತೀಯ ಸಾಧನೆಯಿದು. ಈ ಜಾಲತಾಣದ ಹಿಂದೀ ಆವೃತ್ತಿ ಸತ್ಯಾಗ್ರಹ್.ಕಾಂ ಕದವಿಕ್ಕಬೇಕಾಗಿ ಬಂದದ್ದು ದುರಂತ.

ಪ್ರತಿಷ್ಠಿತ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಓದಿದ ಸಮೀರ್ ಪಾಟೀಲ್ ಎಂಬವರು ಅಮರ ಚಿತ್ರಕಥಾ ಮತ್ತು ಟಿಂಕಲ್ ಪ್ರಕಾಶಕರು. ಈ ಪ್ರಕಾಶನ ಸಂಸ್ಥೆಯನ್ನು ಮಾರಾಟ ಮಾಡಿ ಅಮೆರಿಕೆಯಲ್ಲೇ ಸ್ಕ್ರೋಲ್ ಮೀಡಿಯಾ ಇನ್ಕಾರ್ಪೊರೇಷನ್ ಸ್ಥಾಪಿಸಿದರು. ನರೇಶ್ ಫರ್ನಾಂಡಿಸ್ ಎಂಬ ಹಿರಿಯ ಪತ್ರಕರ್ತರೊಂದಿಗೆ ಕೈ ಜೋಡಿಸಿ 2014ರ ಜನವರಿಯಲ್ಲಿ Scroll.in ಎಂಬ ಭಾರತೀಯ ಸುದ್ದಿಜಾಲ ತಾಣವನ್ನು ಹುಟ್ಟಿ ಹಾಕಿದರು. (ಸ್ವತಂತ್ರ ಮತ್ತು ಸಾರ್ವಜನಿಕ ಆಶಯಗಳ ಮಾಧ್ಯಮ ಪ್ರತಿಷ್ಠಾನ (The Independent and Public Spirited Media Foundation-IPSMF), ಮೀಡಿಯಾ ಅಭಿವೃದ್ಧಿ ಹೂಡಿಕೆ ನಿಧಿ, ಒಮಿಡಿಯಾರ್ ನೆಟ್ವರ್ಕ್ ಹಾಗೂ ಖೇತಾನ್ ಅಂಡ್ ಕೋ ಸಂಸ್ಥೆಗಳು ಈ ಸಾಹಸವನ್ನು ಆರಂಭಿಕ ಹಂತದಲ್ಲಿ ಪೋಷಿಸಿದ್ದವು.

ಮುಖ್ಯಧಾರೆಯ ಮೀಡಿಯಾ ಕುರುಡುಗಣ್ಣು ಹರಿಸಿರುವ ಭೌಗೋಳಿಕ ಮತ್ತು ವಿಷಯವಸ್ತುಗಳ ಮೇಲೆ scroll ತನ್ನ ನೋಟ ನೆಟ್ಟಿದೆ. ಕಾಶ್ಮೀರ, ವಿಶಾಲ ಈಶಾನ್ಯ ಸೀಮೆಗಳ ಜೊತೆಗೆ ಲಿಂಗತಾರತಮ್ಯ, ಪರಿಸರ, ಆರೋಗ್ಯ, ಶ್ರಮಿಕರ ಹಕ್ಕುಗಳು, ಜಾತಿ ಹಾಗೂ ಶಿಕ್ಷಣದ ವಿಷಯಗಳನ್ನು ವರದಿ ಮಾಡಿದ್ದೇವೆ. ಬದುಕನ್ನು ನಿಜಕ್ಕೂ ಸಹನೀಯಗೊಳಿಸುವ ಪುಸ್ತಕಗಳು, ಸಿನೆಮಾ, ಕಲೆ ಇನ್ನಿತರ ಸಾಂಸ್ಕೃತಿಕ ಮಗ್ಗುಲುಗಳ ಮೇಲೆಯೂ ಬೆಳಕು ಚೆಲ್ಲಲು ಪ್ರಯತ್ನಿಸಿದ್ದೇವೆ. ನಮ್ಮ ಈ ವಿಷಯ ವೈವಿಧ್ಯಕ್ಕೆ ಹಲವು ಹತ್ತು ಲಕ್ಷ ಓದುಗರಿದ್ದಾರೆಂಬುದೇ ಹರ್ಷದ ಸಂಗತಿ” ಎಂಬುದು ಈ ಜಾಲತಾಣದ ವಿನಮ್ರ ನಿವೇದನೆ.
ಜಾಹೀರಾತು ಬೆಂಬಲವಿಲ್ಲದ ಮತ್ತು ಪ್ರಭುತ್ವದ ಕೃಪಾಪೋಷಣೆಯಿಲ್ಲದೆ ಜನಪರ ಮಾಧ್ಯಮಗಳು ಬದುಕುವುದು ದುಸ್ಸಾಧ್ಯ. ಈದಿನ.ಕಾಂ ಕೂಡ ಇದೇ ಸಾಲಿಗೆ ಸೇರುವ ಸುದ್ದಿಸಂಸ್ಥೆ. ಜನಸಾಮಾನ್ಯರ ಆರ್ಥಿಕ ಬೆಂಬಲವೇ ಇಂತಹ ಸಂಸ್ಥೆಗಳ ಪ್ರಾಣವಾಯು.
ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X