ಈ ದಿನ ಸಂಪಾದಕೀಯ | ಈರುಳ್ಳಿ ಬೆಳೆದು ಕಣ್ಣೀರು ಹಾಕುತ್ತಿರುವ ರೈತರು, ನೆರವಿಗೆ ಬಾರದ ಸರ್ಕಾರ

Date:

ಈರುಳ್ಳಿ ದರ ಕುಸಿತವು ಕೇವಲ ಕೃಷಿ ಸಮಸ್ಯೆಯಲ್ಲ, ಅದು ಸಾಮಾಜಿಕ-ಆರ್ಥಿಕ ಸಂಕಷ್ಟದ ಸೂಚಕವಾಗಿದೆ. ರೈತರ ಕಣ್ಣೀರು ಒರೆಸಲು, ಸರ್ಕಾರಗಳ ದೃಢ ನೀತಿ, ಸಮಗ್ರ ಯೋಜನೆ ಮತ್ತು ಸಮಯೋಚಿತ ಹಸ್ತಕ್ಷೇಪ ಅವಶ್ಯಕವಾಗಿದೆ. ಇಲ್ಲವಾದರೆ, 'ಬೆಳೆದಷ್ಟೂ ನಷ್ಟ' ಎಂಬ ನೇಣಿಗೆ ಸಿದ್ಧರಾಗಬೇಕಾಗುತ್ತದೆ.

ಭಾರತದ ಈರುಳ್ಳಿಗೆ ಗಲ್ಫ್ ದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಆದರೆ ಆ ಗಲ್ಫ್ ದೇಶಗಳ ಮೇಲೆ ಈಗ ಯುದ್ಧವೆಂಬ ಕಾರ್ಮೋಡ ಕವಿದಿದೆ. ಯುದ್ಧದಿಂದಾಗಿ ದುಬೈ ಮಾರುಕಟ್ಟೆ ಮುಚ್ಚಿದೆ. ಭಾರತದಿಂದ ದುಬೈಗೆ ರಫ್ತಾಗುತ್ತಿದ್ದ ಈರುಳ್ಳಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ರಫ್ತು ವಹಿವಾಟು ಹೆಚ್ಚೂ ಕಡಿಮೆ ಸ್ಥಗಿತಗೊಂಡಿದೆ.

- Advertisement -

ಇದೇ ಸಂದರ್ಭದಲ್ಲಿ ಕೊಲ್ಲಿ ಯುದ್ಧದಿಂದಾಗಿ ಅಡುಗೆ ಅನಿಲ ಸಿಲಿಂಡರ್ ಸರಬರಾಜು ವ್ಯತ್ಯಯವಾಗಿದೆ. ಅದರಲ್ಲೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಾಗಿದೆ. ಒಂದು ಕಡೆ ಕೊರತೆ, ಮತ್ತೊಂದು ಕಡೆ ಬೆಲೆ ಏರಿಕೆ. ಇದರಿಂದ ಬಹುತೇಕ ಹೋಟೆಲ್, ಡಾಬಾ, ಪಿಜಿಗಳು ಮುಚ್ಚಿವೆ. ಇವು ಮುಚ್ಚಿರುವುದರಿಂದ ಈರುಳ್ಳಿ ಬೇಡಿಕೆ, ಈ ವಲಯದಿಂದಲೂ ಕಡಿಮೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ದುರದೃಷ್ಟಕರ ಸಂಗತಿ ಎಂದರೆ, ಭಾರತದಲ್ಲಿ ಈರುಳ್ಳಿ ಉತ್ಪಾದಿಸುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದ್ದು, ಮುಖ್ಯವಾಗಿ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ, ಸುಮಾರು 2.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಈ ಬಾರಿಯ ಬೇಸಿಗೆ ಬೆಳೆ ಕೈಗೆ ಬಂದಿದೆ. ಉತ್ಪಾದನೆ ಹೆಚ್ಚಾಗಿದೆ. ಹೊಲದ ಬದುವಿನಲ್ಲಿ ರಾಶಿ ರಾಶಿ ಬಿದ್ದಿದೆ.

ಕೈಗೆ ಬಂದ ಬೆಳೆ ತಕ್ಷಣ ವಿಲೇವಾರಿಯಾಗಬೇಕು, ಇಲ್ಲವೇ ಗ್ರಾಮಗಳ ಮಟ್ಟದಲ್ಲಿ ಶೀತಗೃಹಗಳಲ್ಲಿ ಸಂರಕ್ಷಿಸಿಡುವ ವ್ಯವಸ್ಥೆ ಆಗಬೇಕು. ಆದರೆ, ಹೊರದೇಶಕ್ಕೆ ಸರಬರಾಜು ಆಗುತ್ತಿದ್ದ ರಫ್ತು ನಿಂತಿದೆ. ಇನ್ನೊಂದು ಕಡೆ ಸ್ಥಳೀಯವಾಗಿ ಬೇಡಿಕೆಯೂ ಕುಸಿದಿದೆ. ಇದರಿಂದ ಈರುಳ್ಳಿಯನ್ನು ಕೇಳುವವರೇ ಇಲ್ಲವಾಗಿದೆ.

ಇದನ್ನು ಓದಿದ್ದೀರಾ?: ದೇಶಕ್ಕಿಂತ ದೊಡ್ಡವರೇ ಮೋದೀಜೀ?

ಏಪ್ರಿಲ್ ಮೊದಲ ವಾರದಲ್ಲಿ ಕ್ವಿಂಟಲ್‌ಗೆ ಒಂದೂವರೆ ಸಾವಿರದವರೆಗೆ ಇದ್ದ ಬೆಲೆ, ಈಗ ದಿಢೀರ್ ಕುಸಿದಿದೆ. ಕಳೆದ ವರ್ಷದ ಮುಂಗಾರಿನ ಇದೇ ಸಂದರ್ಭದಲ್ಲಿ ಒಂದು ಕ್ವಿಂಟಲ್‌ಗೆ 3ರಿಂದ 4 ಸಾವಿರ ಬೆಲೆ ಇತ್ತು. ಇದರಿಂದ ಉತ್ತೇಜಿತರಾದ ಉತ್ತರ ಕರ್ನಾಟಕ ಭಾಗದ ರೈತರು, ಹಿಂದು ಮುಂದು ನೋಡದೆ ಯಥೇಚ್ಛವಾಗಿ ಈರುಳ್ಳಿ ಬಿತ್ತನೆ ಮಾಡಿದ್ದರು. ಉತ್ತಮ ಇಳುವರಿಯೂ ಬಂದಿದೆ. ಆದರೆ ಈಗ ರೈತರು ಮಾರಲು ಮುಂದಾದರೆ, ಕ್ವಿಂಟಲ್‌ಗೆ ಆರು ನೂರಕ್ಕೂ ಕೇಳುವವರಿಲ್ಲ.

ಒಂದು ಎಕರೆ ಈರುಳ್ಳಿ ಬೆಳೆಯಲು ಬೀಜ, ಸಸಿ ನಾಟಿ, ಗೊಬ್ಬರ, ಔ‍ಷಧಿ, ಕೂಲಿ ಎಲ್ಲಾ ಸೇರಿ ಕಡಿಮೆ ಎಂದರೂ 60 ಸಾವಿರ ರೂಪಾಯಿ ಖರ್ಚಾಗುತ್ತದೆ. ಒಂದು ಎಕರೆಯಲ್ಲಿ ಸುಮಾರು 100ರಿಂದ 120 ಕ್ವಿಂಟಲ್ ಈರುಳ್ಳಿ ಬೆಳೆದರೂ, ಸದ್ಯದ ಮಾರುಕಟ್ಟೆ ಬೆಲೆಯಂತೆ ಕ್ವಿಂಟಲ್‌ಗೆ 600 ರೂಪಾಯಿ ಸಿಕ್ಕರೂ, ಅಸಲು ಕೂಡ ಗಿಟ್ಟುವುದಿಲ್ಲ. ನಷ್ಟ ತಲೆ ಮೇಲೆ ಬೀಳುತ್ತದೆ. ಸಾಲ-ಬಡ್ಡಿಯ ಹೊರೆ ಹೆಚ್ಚಾಗುತ್ತದೆ. ಅದರಲ್ಲೂ, ಉತ್ತಮ ಗುಣಮಟ್ಟದ ಈರುಳ್ಳಿಯಾಗಿದ್ದರೆ ಕ್ವಿಂಟಲ್‌ಗೆ 600. ಕಡಿಮೆ ಗಾತ್ರದ, ಗುಣಮಟ್ಟವಿಲ್ಲದ ಈರುಳ್ಳಿಯನ್ನು ಕೇಳುವವರೂ ಇಲ್ಲ. ಅಕಸ್ಮಾತ್ ಮಳೆ ಬಂದರೆ, ಬೆಳೆ ಕೊಳೆತರೆ ಕೈಗೆ ಬಂದದ್ದು ಬಾಯಿಗಿಲ್ಲ.

ಈ ಸ್ಥಿತಿ ಎದುರಾಗಲು ಹಲವು ಕಾರಣಗಳಿವೆ. ಮೊದಲನೆಯದಾಗಿ, ಅತಿಯಾದ ಉತ್ಪಾದನೆ. ಉತ್ತಮ ಮಳೆಯ ಪರಿಣಾಮವಾಗಿ ಈರುಳ್ಳಿ ಬೆಳೆಯ ಉತ್ಪಾದನೆ ಹೆಚ್ಚಾಗಿದೆ. ಆದರೆ ಅದಕ್ಕೆ ತಕ್ಕಂತೆ ಬೇಡಿಕೆ ಇಲ್ಲವಾಗಿದೆ. ಅದು ಮಾರುಕಟ್ಟೆಯಲ್ಲಿ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಎರಡನೆಯದಾಗಿ, ಶೀತಗೃಹ (ಕೋಲ್ಡ್ ಸ್ಟೋರೇಜ್)ಗಳ ಕೊರತೆ. ರೈತರು, ತಾವು ಬೆಳೆದ ಉತ್ಪನ್ನವನ್ನು ತುಂಬಾ ದಿನಗಳ ಕಾಲ ಸಂಗ್ರಹಿಸಿಟ್ಟುಕೊಳ್ಳಲು ಬೇಕಾದ ಶೀತಗೃಹಗಳ ವ್ಯವಸ್ಥೆ ಇಲ್ಲ. ಜೊತೆಗೆ ರೈತರು ಸಾಲ ಮಾಡಿ ಬೆಳೆ ಬೆಳೆದಿರುತ್ತಾರೆ. ಬೆಳೆ ಬಂದಾಕ್ಷಣ ಸಿಕ್ಕಷ್ಟು ಬೆಲೆಗೆ ಮಾರುವ ಒತ್ತಡಕ್ಕೆ ಒಳಗಾಗುತ್ತಾರೆ. ಮೂರನೆಯದಾಗಿ, ಮಧ್ಯವರ್ತಿಗಳು ಮಾರುಕಟ್ಟೆಯನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ರೈತರಿಗೆ ನ್ಯಾಯಸಮ್ಮತ ಬೆಲೆ ಸಿಗದೆ, ಲಾಭದ ದೊಡ್ಡ ಪಾಲು ಮಧ್ಯವರ್ತಿಗಳ ಪಾಲಾಗುತ್ತದೆ. ನಾಲ್ಕನೆಯದಾಗಿ, ದೇಶದ ವಿದೇಶಾಂಗ ನೀತಿ, ಆಮದು-ರಫ್ತು ವಹಿವಾಟಿನ ಅಸ್ಥಿರತೆ ಮತ್ತು ಸರ್ಕಾರದ ನಿಲುವು- ಉತ್ಪನ್ನಗಳ ಮೇಲೆ ನೇರ ಪರಿಣಾಮ ಬೀರುತ್ತದೆ.

ಜೊತೆಗೆ ಕೇಂದ್ರ-ರಾಜ್ಯ ಸರ್ಕಾರಗಳ ಕೃಷಿ ನೀತಿಗಳು, ಮಾರುಕಟ್ಟೆ ನಿಯಮಗಳು, ತೆರಿಗೆ ಪದ್ಧತಿಗಳು- ಇವತ್ತಿಗೂ ರೈತರನ್ನೇ ಹೊರಗಿಟ್ಟು ರೂಪಿಸಲಾಗುತ್ತಿದೆ. ಉದಾಹರಣೆಗೆ ಈರುಳ್ಳಿ ಮೇಲೆ ಭಾರತ ಸರ್ಕಾರ ಶೇ. 40 ರಫ್ತು ತೆರಿಗೆ ವಿಧಿಸಿದೆ. ಕಬ್ಬು ಬೆಳೆಯುವ ರೈತರಿಗೆ ಬೆಂಬಲ ಬೆಲೆ ಇದೆ. ನಿಧಾನವಾದರೂ ನೆರವಿಗೆ ಧಾವಿಸುವುದಿದೆ. ಆದರೆ ಈರುಳ್ಳಿ ಬೆಳೆಗೆ ಬೆಲೆಯೂ ಇಲ್ಲ, ಧ್ವನಿ ಎತ್ತುವವರೂ ಇಲ್ಲ.

ಇದನ್ನು ಮನಗಂಡ ರೈತರು ಈಗ ಸಂಘಟಿತರಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ಮಾರುಕಟ್ಟೆ ಬೆಲೆ ವ್ಯತ್ಯಾಸ ಪಾವತಿ ಯೋಜನೆ'(ಪಿಡಿಪಿಎಸ್) ಜಾರಿಗೊಳಿಸಿ ರೈತರಿಗೆ ನೆರವಾಗಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯ ಬೆಲೆ ಆಯೋಗಕ್ಕೂ ಮನವಿ ಸಲ್ಲಿಸಿದ್ದಾರೆ. ಆದರೆ ಅದು ಆಗ್ರಹ-ಮನವಿ ಮಟ್ಟದಲ್ಲಿಯೇ ಉಳಿದಿದೆ. ಈರುಳ್ಳಿ ದರ ಕುಸಿತವು ಕೇವಲ ಕೃಷಿ ಸಮಸ್ಯೆಯಲ್ಲ, ಅದು ಸಾಮಾಜಿಕ-ಆರ್ಥಿಕ ಸಂಕಷ್ಟದ ಸೂಚಕವಾಗಿದೆ. ರೈತರ ಕಣ್ಣೀರು ಒರೆಸಲು, ಸರ್ಕಾರಗಳ ದೃಢ ನೀತಿ, ಸಮಗ್ರ ಯೋಜನೆ ಮತ್ತು ಸಮಯೋಚಿತ ಹಸ್ತಕ್ಷೇಪ ಅವಶ್ಯಕವಾಗಿದೆ. ಇಲ್ಲವಾದರೆ, ‘ಬೆಳೆದಷ್ಟೂ ನಷ್ಟ’ ಎಂಬ ನೇಣಿಗೆ ಸಿದ್ಧರಾಗಬೇಕಾಗುತ್ತದೆ.

ಇದನ್ನು ಓದಿದ್ದೀರಾ?: ದೇವೇಗೌಡ ದಕ್ಷಿಣ ಭಾರತದ ದನಿಯಾಗಬೇಕಿತ್ತಲ್ಲವೇ?

‘ದೇಶದ ಬೆನ್ನೆಲುಬು ರೈತ’ ಎಂದು ಭಾಷಣ ಬಿಗಿಯುವ ರಾಜಕೀಯ ನಾಯಕರು, ಅಧಿಕಾರದ ಕುರ್ಚಿ ಮೇಲೆ ಕೂರುತ್ತಿದ್ದಂತೆ ರೈತವಿರೋಧಿಯಾಗಿ ಮಾರ್ಪಾಡಾಗಿರುತ್ತಾರೆ. 2019ರಲ್ಲಿ ಈರುಳ್ಳಿ ಬೆಲೆ ಏರಿಕೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿರುವಾಗ, ‘ನಾನು ಈರುಳ್ಳಿ ತಿನ್ನುವುದಿಲ್ಲ. ಈರುಳ್ಳಿ-ಬೆಳ್ಳುಳ್ಳಿ ತಿನ್ನದ ಕುಟುಂಬ ನನ್ನದು’ ಎಂಬ ಉಡಾಫೆಯ ಮಾತುಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ಬಂದಿದ್ದವು. ಮೊನ್ನೆ ಪಶ್ಚಿಮ ಬಂಗಾಳದ ಚುನಾವಣಾ ಸಂದರ್ಭದಲ್ಲಿ ಬೀದಿ ಬದಿಯ ಝಲ್ಮುರಿ ಖರೀದಿಸಿದ ಪ್ರಧಾನಿ ಮೋದಿಯವರಿಗೆ ವ್ಯಾಪಾರಿ, ‘ಈರುಳ್ಳಿ ಹಾಕಲಾ’ ಎಂದರೆ, ‘ಈರುಳ್ಳಿ ತಿನ್ನುತ್ತೇನೆ, ಮೆದುಳನ್ನಲ್ಲ’ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.

ಒಬ್ಬರು ಈರುಳ್ಳಿ ತಿನ್ನದವರು, ಇನ್ನೊಬ್ಬರು ತಿನ್ನುವವರು. ಇಬ್ಬರಿಗೂ ಈರುಳ್ಳಿ ಬೆಳೆಯುವ ರೈತನ ಕಷ್ಟ ಗೊತ್ತಿಲ್ಲ. ರೈತರು ಬುದ್ಧಿವಂತರಾಗದೇ ಬದುಕಿಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...

ಶಿವಮೊಗ್ಗ | ಗಾಂಜಾ ಮಾರಾಟ ಆರೋಪ: ಐವರು ಅರೆಸ್ಟ್‌, 1.23 ಕೆಜಿ ಮಾದಕ ವಸ್ತು ಜಪ್ತಿ

ಶಿವಮೊಗ್ಗ ನಗರದ ಅನುಪಿನಕಟ್ಟೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ತುಂಗಾನಗರ...