ಈ ದಿನ ಸಂಪಾದಕೀಯ | ಜಮ್ಮು-ಕಾಶ್ಮೀರದಲ್ಲಿ ಮೋದಿ-ಶಾ ವಿರುದ್ಧ ಪ್ರತಿಪಕ್ಷಗಳು ಒಂದಾಗುವವೇ?

Date:

Advertisements
ಕಾಂಗ್ರೆಸ್‌, ಎನ್‌ಸಿ, ಪಿಡಿಪಿ – ಈ ಮೂರು ಪಕ್ಷಗಳು ಒಗ್ಗೂಡಬೇಕು. ಜೊತೆಗೆ, ಅವಾಮಿ ಇತ್ತೆಹಾದ್ ಪಾರ್ಟಿ ಮತ್ತು ಜಮಾತ್-ಇ-ಇಸ್ಲಾಮಿಗಳನ್ನು ಒಳಗೆಳೆದುಕೊಳ್ಳಬೇಕು. ಆಗ ಮಾತ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಿರ ಸರ್ಕಾರ ರಚನೆಯಾಗುತ್ತದೆ. ಕಾಶ್ಮೀರದ ಆಡಳಿತ ಕಾಶ್ಮೀರಗಳಲ್ಲೇ ಉಳಿಯುತ್ತದೆ.

ತನಗಿದ್ದ ವಿಶೇಷ ಸ್ಥಾನವನ್ನು 2019ರಲ್ಲಿ ಕಳೆದುಕೊಂಡ ಬಳಿಕ, ಜಮ್ಮು ಮತ್ತು ಕಾಶ್ಮೀರವು ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುತ್ತಿದೆ. ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 270ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ಮರಳಿ ಕೊಡಬೇಕು. ಜೊತೆಗೆ ಪೂರ್ಣಪ್ರಮಾಣದ ರಾಜ್ಯತ್ಯವನ್ನು ಪುನಃ ಸ್ಥಾಪಿಸಬೇಕೆಂದು ಅಲ್ಲಿನ ಮತದಾರರು ಒತ್ತಾಯಿಸುತ್ತಿದ್ದಾರೆ. ಇದು ಚುನಾವಣೆಯ ಪ್ರಮುಖ ವಿಷಯವೂ ಆಗಿದೆ. ಸದ್ಯ, ಜಮ್ಮು-ಕಾಶ್ಮೀರದಲ್ಲಿ ಮೊದಲ ಹಂತದ ಮತದಾನ ಮುಗಿದಿದ್ದು, ಇನ್ನೂ ಎರಡು ಹಂತದ ಮತದಾನ ಬಾಕಿ ಇವೆ. ಮೊದಲ ಹಂತದ ಮತದಾನವು ಬಿಜೆಪಿಗೆ ಹೆಚ್ಚಿನ ಅವಕಾಶ ಇಲ್ಲ ಎಂಬುದನ್ನು ಸೂಚಿಸಿದೆ. ಬಿಜೆಪಿ ಬಹುಮತ ಗಳಿಸಲು ಸಾಧ್ಯವಿಲ್ಲ ಎಂಬುದು ಮೋದಿ-ಶಾ ಜೋಡಿಗೂ ಗೊತ್ತಾಗಿದೆ.

90 ಸ್ಥಾನಗಳ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರದ ಯಾವುದೇ ಪ್ರದೇಶದಲ್ಲಿ ಒಂದೇ ಒಂದು ಸ್ಥಾನವೂ ತಮಗೆ ದೊರೆಯುವುದಿಲ್ಲ ಮತ್ತು ಜಮ್ಮುವಿನ ಒಂದು ಭಾಗದಲ್ಲಿ ಮಾತ್ರ ಪಕ್ಷಕ್ಕೆ ಬೆಂಬಲವಿದೆ ಎಂಬುದನ್ನು ಬಿಜೆಪಿ ನಾಯಕರು ಅರಿತಿದ್ದಾರೆ. ಹೀಗಾಗಿ, ತಮ್ಮ ವಿರೋಧಿ ಪಕ್ಷಗಳ ಮತಗಳನ್ನು ಒಡೆಯಲು, ಅತಂತ್ರ ವಿಧಾನಸಭೆ ಸೃಷ್ಟಿಸಿ, ಆ ಆಮೂಲಕ ಹೇಗಾದರೂ ಸರ್ಕಾರ ರಚಿಸಲು ಬಿಜೆಪಿ ಭಾರೀ ತಂತ್ರ ಹೆಣೆಯುತ್ತಿದೆ.

ಚುನಾವಣೆ ಘೋಷಣೆಯಾದಾಗಿನಿಂದಲೂ ಮೋದಿ-ಶಾ ಜೋಡಿ ಕಾಶ್ಮೀರಿಗಳ ಮತಗಳನ್ನು ವಿಭಜಿಸಲು ಮತ್ತು ಜಮ್ಮು ಪ್ರದೇಶದಲ್ಲಿ 25 ಸ್ಥಾನಗಳನ್ನು ಗೆದ್ದು, ರಾಜ್ಯದಲ್ಲಿ ಅತಿ ದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಲು ಹವಣಿಸುತ್ತಿದೆ. ಅಷ್ಟೇ ಅಲ್ಲ, ಸಾರ್ವಜನಿಕ ಸುರಕ್ಷತಾ ಕಾಯಿದೆ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಕಾಯಿದೆಗಳ ದಾಳ ಬಳಸಿ ಕಾಶ್ಮೀರದ ಸ್ವತಂತ್ರರು ಮತ್ತು ಸಣ್ಣ ಪಕ್ಷಗಳನ್ನು ಸೆಳೆಯುವುದು, ಖರೀದಿಸುವುದು ಹಾಗೂ ಒತ್ತಾಯಿಸುವ ಮೂಲಕ ಸರ್ಕಾರ ರಚಿಸಬೇಕೆಂಬ ಉದ್ದೇಶವನ್ನೂ ಬಿಜೆಪಿ ಹಾಕಿಕೊಂಡಿದೆ.

Advertisements

ಬಿಜೆಪಿಯ ಈ ತಂತ್ರ ಯಶಸ್ವಿಯಾದರೆ, ಹಿಂದು (ಪಂಡಿತರು)-ಮುಸ್ಲಿಂ, ಪಾಕಿಸ್ತಾನ, ಶೇಖ್ ಅಬ್ದುಲ್ಲಾ ವಿಚಾರಗಳನ್ನು ಬಳಸಿಕೊಂಡು ರಾಜ್ಯವನ್ನು ಸದಾ ವಿವಾದದಲ್ಲಿ ಇರಿಸಿ, ಅಧಿಕಾರ ನಡೆಸಬೇಕೆಂಬುದು ಬಿಜೆಪಿಯ ಹಿಡನ್ ಅಜೆಂಡಾಗಳಲ್ಲಿ ಒಂದಾಗಿದೆ. ಇದರ ಸಂಪೂರ್ಣ ಅರಿವು ಕಾಶ್ಮೀರಿ ಚಿಂತರಿಗಿದೆ. ಆದರೆ, ಕಾಶ್ಮೀರದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ಗಳಿಗಿಲ್ಲ. ಅವುಗಳ ಬೇಜವಾಬ್ದಾರಿ ನಡವಳಿಕೆಯು ಬಿಜೆಪಿ ಅಜೆಂಡಾಗಳನ್ನು ಮಣಿಸಲು ಶಕ್ತವಾಗಿಲ್ಲ.

ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆಯನ್ನು ರಕ್ಷಿಸಲು ಈ ಪಕ್ಷಗಳು ಬಯಸಿದ್ದರೆ, ಜಮ್ಮು-ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವ ಮರಳಿ ನೀಡಬೇಕೆಂದು ಸುಪ್ರೀಂ ಕೋರ್ಟ್‌ ಹೇಳಿದ ಕ್ಷಣದಿಂದಲೇ ಒಂದಾಗಬೇಕಿತ್ತು. ಒಂದೇ ವೇದಿಕೆಯಲ್ಲಿ ಜಂಟಿಯಾಗಿ ಚುನಾವಣಾ ಹೋರಾಟ ನಡೆಸಬೇಕೆಂಬ ಸ್ಪಷ್ಟತೆ ಇರುತ್ತಿತ್ತು. ವಿಚಾರಣೆಯೇ ಇಲ್ಲದೆ, ಭಾರತದಾದ್ಯಂತ ಜೈಲಿನಲ್ಲಿರುವ ಎಲ್ಲ ಕಾಶ್ಮೀರಿಗಳ ಬಿಡುಗಡೆಗಾಗಿ ಒಗ್ಗಟ್ಟಿನ ಹೋರಾಟ ನಡೆಸುವ ಅರಿವಿರುತ್ತಿತ್ತು. ಕಾಶ್ಮೀರದ ಸ್ವಾಯತ್ತತೆಗಾಗಿ ಎನ್‌ಸಿ ಮತ್ತು ಕಾಂಗ್ರೆಸ್‌ ಜೊತೆ ಪಿಡಿಪಿ ಕೂಡ ಕೈಜೋಡಿಸಬೇಕಿತ್ತು. ಆದರೆ, ಈ ಪಕ್ಷಗಳು ಚುನಾವಣೆ ಘೋಷಣೆ ಆಗುವವರೆಗೂ ಅಂತಹ ಯಾವುದೇ ಮಾತುಕತೆಗೂ ಮುಂದಾಗಲಿಲ್ಲ.

ಮೂರೂ ಪಕ್ಷಗಳ ಒಗ್ಗಟ್ಟಿನ ಅಗತ್ಯದ ಬಗ್ಗೆ ಅರಿವಿದ್ದ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರನ್ನೇ ಎನ್‌ಸಿ ತಮ್ಮ ಪ್ರಮುಖ ವಿರೋಧಿಯಾಗಿಸಿಕೊಂಡಿದೆ. ಅವರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದೆ. ಒಗ್ಗಟ್ಟು ಪ್ರದರ್ಶಿಸಬೇಕಿದ್ದ ಪಕ್ಷಗಳೇ ಕಚ್ಚಾಡುತ್ತಿದ್ದು, ಇದರ ಲಾಭವನ್ನು ಬಿಜೆಪಿ ಪಡೆದುಕೊಳ್ಳಲು ಹವಣಿಸುತ್ತಿದೆ.

ಚುನಾವಣಾ ಸಮಯದಲ್ಲಿ ಸೆಪ್ಟೆಂಬರ್ 7-16ರವರೆಗೆ 10 ನಿರ್ಣಾಯಕ ದಿನಗಳಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾರತದಲ್ಲೇ ಇರಲಿಲ್ಲ. ಅವರು ಭಾರತೀಯ ವಲಸಿಗರಿಗೆ ಉಪನ್ಯಾಸ ನೀಡಲು ಅಮೆರಿಕಾಗೆ ತೆರಳಿದ್ದರು. ಅದಕ್ಕೂ ಮುಂಚೆ, ಅವರು ಕಾಶ್ಮೀರದ ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರವೇ ಪ್ರಚಾರ ನಡೆಸಿದ್ದರು. ಕಾಶ್ಮೀರಿ ಮತಗಳನ್ನು ಬಿಜೆಪಿ ವಿಭಜಿಸಲು ಯತ್ನಿಸುತ್ತಿರುವ ಸಮಯದಲ್ಲಿ, ಅವರ ಆದ್ಯತೆ ಕಾಶ್ಮೀರದ ಚುನಾವಣೆ ಆಗಬೇಕಿತ್ತು. ಅದಾಗಲಿಲ್ಲ. ಇದು ಕಾಶ್ಮೀರದಲ್ಲಿ ಅವರು ವಹಿಸಬೇಕಿದ್ದ ಪಾತ್ರದ ಬಗ್ಗೆ ಅವರಿಗಿದ್ದ ಅವಿರಿನ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಇನ್ನು, 370ನೇ ವಿಧಿ ರದ್ದಾದಾಗ ಕಾಶ್ಮೀರದಲ್ಲಿ ಬಿಜೆಪಿ ಎಸಗಿದ ಕ್ರೌರ್ಯದ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಫಾರೂಖ್ ಅಬ್ದುಲ್ಲಾ ಮತ್ತು ಉಮರ್ ಅಬ್ದುಲ್ಲಾ ಆರಂಭದ ನಾಲ್ಕು ತಿಂಗಳು ಮಾತನಾಡಲಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದು ಕಾಶ್ಮೀರಿಗಳನ್ನು ದೀರ್ಘಾವಧಿಗೆ ಜೈಲಿನಲ್ಲಿರಿಸಿದ ಧೋರಣೆಯ ಬಗ್ಗೆ ಪ್ರತಿಭಟಿಸಲಿಲ್ಲ. ರಾಷ್ಟ್ರಪತಿ ಆಳ್ವಿಕೆ ಹೇರಿದ ಕೇಂದ್ರ ಸರ್ಕಾರದ ಕ್ರಮಗಳನ್ನು ಖಂಡಿಸಲಿಲ್ಲ.

ಈ ವರದಿ ಓದಿದ್ದೀರಾ?: ವಿಮೆ ಮೇಲಿನ GST ತೆಗೆದರೆ ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂತಹ ಸಂದರ್ಭದಲ್ಲಿ, ಬಿಜೆಪಿ ಕಾಶ್ಮೀರದಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದಿದೆ. ತಿಳಿದೇ ಕಾಶ್ಮೀರಿ ಮತಗಳನ್ನು ಸಾಧ್ಯವಾದಷ್ಟು ವಿಭಜಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಜೊತೆಗೆ, ಕಾಶ್ಮೀರಿ ತೀವ್ರಗಾಮಿ ನಾಯಕರನ್ನು ಬಿಡುಗಡೆ ಮಾಡಿ, ಅವರನ್ನು ಚುನಾವಣೆಗೆ ನಿಲ್ಲಲು ಅವಕಾಶ ನೀಡುತ್ತಿದೆ. ಆ ಮೂಲಕ, ಕಾಶ್ಮೀರಿ ಮತಗಳನ್ನು ಊಹಿಸಲಾಗದ ರೀತಿಯಲ್ಲಿ ವಿಭಜಿಸಿ, ಎನ್‌ಸಿ-ಕಾಂಗ್ರೆಸ್ ಮೈತ್ರಿ ಮತಗಳನ್ನು ಕಡಿಮೆ ಮಾಡಲು ಕಸರತ್ತು ನಡೆಸುತ್ತಿದೆ.

ಅದಕ್ಕಾಗಿ, ಇಂಜಿನಿಯರ್ ಅಬ್ದುಲ್ ರಶೀದ್ ಅವರನ್ನು ಲೋಕಸಭಾ ಚುನಾವಣೆಯ ಸಮಯದಲ್ಲಿಯೇ ಬಿಡುಗಡೆ ಮಾಡಿದೆ. ಅವರು ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಅವರ ‘ಅವಾಮಿ ಇತ್ತೆಹಾದ್ ಪಕ್ಷ’ವು ವಿಧಾನಸಭಾ ಚುನಾವಣೆಯಲ್ಲಿ ಬಾರಾಮುಲ್ಲಾದ 18 ಕ್ಷೇತ್ರಗಳ ಪೈಕಿ 12 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರ 12 ಅಭ್ಯರ್ಥಿಗಳು ಗೆದ್ದರೆ, ಅವರ ಬೆಂಬಲವಿಲ್ಲದೆ, ಕಾಂಗ್ರೆಸ್ ಅಥವಾ ಎನ್‌ಸಿ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂಬ ಲೆಕ್ಕಾಚಾರವೂ ಬಿಜೆಪಿಯಲ್ಲಿದೆ.

ಈ ಸಮಯದಲ್ಲಿ, ಕಾಶ್ಮೀರ ಸರ್ಕಾರವು ಕಾಶ್ಮೀರಿಗಳ ಕೈಯಲ್ಲಿ ಉಳಿಯುವುದನ್ನು ಖಚಿತಪಡಿಸಲು ಕಾಂಗ್ರೆಸ್-ಎನ್‌ಸಿ ಮೈತ್ರಿಗೆ ಇರುವ ಏಕೈಕ ಮಾರ್ಗವೆಂದರೆ ಪ್ರತಿ ಸಣ್ಣ ಪಕ್ಷ ಮತ್ತು ಅಭ್ಯರ್ಥಿಗಳನ್ನು ಸಂಪರ್ಕಿಸುವುದು, ಕಾಶ್ಮೀರದಲ್ಲಿ ಯಾರು ಹೆಚ್ಚು ಸ್ಥಾನಗಳಲ್ಲಿ ಗೆದ್ದರೂ ಅವರೆಲ್ಲರಿಗೂ ಮುಂದಿನ ಸರ್ಕಾರದಲ್ಲಿ ಪಾಲುದಾರಿಕೆ ನೀಡುವ ಭರವಸೆ ನೀಡುವುದು. ಎಲ್ಲರ ವಿಶ್ವಾಸ ಗಳಿಸುವುದು, ರಾಜ್ಯಕ್ಕಾಗಿ ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳು ಒಗ್ಗೂಡಬೇಕೆಂಬ ಸಂದೇಶವನ್ನು ಬಿತ್ತುವುದು. ಅದಕ್ಕಾಗಿ, ಕಾಂಗ್ರೆಸ್‌, ಎನ್‌ಸಿ, ಪಿಡಿಪಿ – ಈ ಮೂರು ಪಕ್ಷಗಳು ಒಗ್ಗೂಡಬೇಕು. ಜೊತೆಗೆ, ಅವಾಮಿ ಇತ್ತೆಹಾದ್ ಪಾರ್ಟಿ ಮತ್ತು ಜಮಾತ್-ಇ-ಇಸ್ಲಾಮಿಗಳನ್ನು ಒಳಗೆಳೆದುಕೊಳ್ಳಬೇಕು. ಆಗ ಮಾತ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಿರ ಸರ್ಕಾರ ರಚನೆಯಾಗುತ್ತದೆ. ಕಾಶ್ಮೀರದ ಆಡಳಿತ ಕಾಶ್ಮೀರಗಳಲ್ಲೇ ಉಳಿಯುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X